ಅಮಿತಾಭ್ ಬಚ್ಚನ್ ಅವರ ಅಳಿಯ ನಿಖಿಲ್ ನಂದಾ ಸೇರಿದಂತೆ 9 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸರು ನಿಖಿಲ್ ನಂದಾ ಸೇರಿದಂತೆ 9 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.

ಮುಂಬೈ: ಬಾಲಿವುಡ್ ಮಹಾನಾಯಕ ಅಮಿತಾಭ್ ಬಚ್ಚನ್ ಅಳಿಯನ ನಿಖಿಲ್ ನಂದಾ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಎಫ್‌ಐಆರ್ ಸಹ ದಾಖಲಾಗಿದೆ. ಅಮಿತಾಭ್ ಬಚ್ಚನ್ ಅಳಿಯ ಟ್ರ್ಯಾಕ್ಟರ್ ಕಂಪನಿಯೊಂದರ ಮಾಲೀಕರಾಗಿದ್ದು, ನಿಖಿಲ್ ನಂದಾ ಸೇರಿದಂತೆ 9 ಜನರ ವಿರುದ್ದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ದಾತಾಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೃಷಿ ಟ್ರ್ಯಾಕ್ಟರ್ ಕಂಪನಿಯ ಡೀಲರ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಕಂಪನಿಯ ಸೇಲ್ ಹೆಚ್ಚಳ ಮಾಡಲು ಈ 9 ಜನರು ಮಾನಸಿಕ ಕಿರುಕುಳ ನೀಡಿದ್ದರು ಎಂಬ ಆರೋಪ ಕೇಳಿ ಬಂದಿದೆ. 

ನಿಖಿಲ್ ನಂದಾ ಸೇರಿದಂತೆ 9 ಜನರ ಮಾನಸಿಕ ಕಿರುಕುಳದಿಂದ ನೊಂದ ಏಜೆನ್ಸಿ ಸಂಚಾಲಕ ಜೀತೇಂದ್ರ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಜಿತೇಂದ್ರ ಸಾವಿನ ಬಳಿಕ ಅವರ ಸೋದರ ಸ್ಥಳೀಯ ಮ್ಯಾನೇಜರ್ ಸೇರಿದಂತೆ 9 ಜನರ ಹೆಸರು ಉಲ್ಲೇಖಿಸಿ ದೂರು ದಾಖಲಿಸಿದ್ದರು. ಸೋದರ ಜಿತೇಂದ್ರ ಸಾವಿಗೆ ಈ 9 ಜನರು ನೀಡಿದ ಮಾನಸಿಕ ಕಿರುಕುಳ ಎಂದು ಆರೋಪಿಸಿದ್ದಾರೆ. ನ್ಯಾಯಾಲಯದ ಆದೇಶದ ಮೇರೆಗೆ ದಾತಾಗಂಜ್ ಠಾಣೆಯ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಉತ್ತರ ಪ್ರದೇಶದ ಟ್ರ್ಯಾಕ್ಟರ್ ಏಜೆನ್ಸಿ ಹೆಡ್, ಏರಿಯಾ ಮ್ಯಾನೇಜರ್, ಸೇಲ್ಸ್ ಮ್ಯಾನೇಜರ್, ಶಾಹಜಹಾಂಪುರ ಡೀಲರ್, ಕಂಪನಿಯ ಮಾಲೀಕ ನಿಖಿಲ್ ನಂದಾ ಸೇರಿದಂತೆ 9 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. 

ನ್ಯಾಯಾಲಯದ ಮೊರೆ ಹೋಗಿದ್ದ ಜಿತೇಂದ್ರ ಸೋದರ
ದಾತಾಗಂಜ್ ಕೋತವಾಲಿ ಕ್ಷೇತ್ರದ ಪಾಪಡ್ ಹಮಜಾಪುರ ನಿವಾಸಿ ಈ ಪ್ರಕರಣ ಸಂಬಂಧ ನ್ಯಾಯಾಲಯದ ಮೊರೆ ಹೋಗಿದ್ದರು. ನನ್ನ ಸೋದರ ಜಿತೇಂದ್ರ ದಾತಾಗಂಜ್‌ನಲ್ಲಿರುವ ಜೈ ಕಿಸಾನ್ ಟ್ರೇಸರ್ಡ್ ಫಾರ್ಮಾಟ್ರ್ಯಾಕ್ ಟ್ರ್ಯಾಕ್ಟರ್ (Jai Kisan Traders Farmtrac Tractor) ಏಜೆನ್ಸಿಯನನ್ನು ಸಹ ಪಾಲುದಾರರ ಜೊತೆಯಲ್ಲಿ ನಡೆಸಿಕೊಂಡು ಹೋಗುತ್ತಿದ್ದರು. ಕೌಟುಂಬಿಕ ಕಲಹದಿಂದ ಸಹ ಪಾಲುದಾರ ಲಲ್ಲಾ ಬಾಬು ಜೈಲಿಗೆ ಹೋಗಿದ್ದರು. ಇದಾದ ನಂತರ ಅವರ ಸಹೋದರ ಜಿತೇಂದ್ರ ಒಬ್ಬರೇ ಏಜೆನ್ಸಿಯನ್ನು ನೋಡಿಕೊಳ್ಳುತ್ತಿದ್ದರು. ನಂತರ ಕಂಪನಿಯ ಏರಿಯಾ ಮ್ಯಾನೇಜರ್ ಆಶಿಶ್ ಬಲ್ಯಾನ್, ಸೇಲ್ಸ್ ಮ್ಯಾನೇಜರ್ ಸುಮಿತ್ ರಾಘವ್, ಹೆಡ್ ದಿನೇಶ್ ಪಂತ್ ಬರೇಲಿ, ಫೈನಾನ್ಸಿಯರ್ ಕಲೆಕ್ಷನ್ ಪಂಕಜ್ ಭಾಸ್ಕರ್, ಸೇಲ್ಸ್ ಮ್ಯಾನೇಜರ್ ಅಮಿತ್ ಪಂತ್, ಸೇಲ್ಸ್ ಹೆಡ್ ನೀರಜ್ ಮೆಹ್ರಾ, ಕಾಮ್ ನಿಖಿಲ್ ನಂದಾ, ಶಹಜಾನ್‌ಪುರ ಡೀಲರ್ ಶಿಶಾಂತ್ ಗುಪ್ತಾ ಮತ್ತು ಓರ್ವ ಅಪರಿಚಿ ಬಂದು ನನ್ನ ಸೋದರ ಜಿತೇಂದ್ರೆಗೆ ಬೆದರಿಕೆ ಹಾಕಲಾರಂಭಿಸಿದ್ದರು. 

ಇದನ್ನೂ ಓದಿ: ಅಮಿತಾಬ್ ಬಚ್ಚನ್ ಮನೆಯಲ್ಲಿ ಏನಾಗ್ತಿದೆ? ಮುಂಬೈನಲ್ಲಿದ್ದ ಐಷಾರಾಮಿ ಮನೆ ಭಾರೀ ಮೊತ್ತಕ್ಕೆ ಸೇಲ್‌!

ನಿಮ್ಮ ಏಜೆನ್ಸಿಯಿಂದ ಕಂಪನಿಯ ಉತ್ಪನ್ನ ಮಾರಾಟವಾಗುತ್ತಿಲ್ಲ. ಹಾಗಾಗಿ ನಿಮ್ಮ ಲೈಸೆನ್ಸ್ ರದ್ದು ಮಾಡಲಾಗುತ್ತದೆ ಎಂದು ಬೆದರಿಕೆ ಹಾಕಿದ್ದರು. ಅಷ್ಟೇ ಅಲ್ಲ ನಿಮ್ಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳೋದಾಗಿ ಬೆದರಿಸಿದ್ದರು. ಇದರಿಂದ ಜಿತೇಂದ್ರ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದರು. ಈ ವಿಷಯವನ್ನು ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರೊಂದಿಗೆ ಜಿತೇಂದ್ರ ಹಂಚಿಕೊಂಡಿದ್ದರು.

ಈ ಹಿನ್ನೆಲೆ ಸೋದರ 2024 ನವೆಂಬರ್ 22ರಂದು ಜಿತೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಜಿತೇಂದ್ರ ಸೋದರ ಆ ಸಮಯದಲ್ಲಿಯೇ ದೂರು ದಾಖಲಿಸಿದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಈ ಹಿನ್ನೆಲೆ ಜಿತೇಂದ್ರ ಸೋದರ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸರು ನಿಖಿಲ್ ನಂದಾ ಸೇರಿದಂತೆ 9 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಕೆಬಿಸಿ ಶೋದಲ್ಲಿ ಸೊಸೆ ಐಶ್ವರ್ಯಾ ರೈಯನ್ನು ಹೊಗಳಿದ ಸ್ಪರ್ಧಿಗೆ ಅಮಿತಾಬ್ ಬಚ್ಚನ್ ಹೇಳಿದ್ದೇನು?