ಅಮಿತಾಬ್ ಬಚ್ಚನ್ ಜೊತೆಗಿನ ರೊಮ್ಯಾಂಟಿಕ್ ಸೀನ್‌ಗಾಗಿ ಹೇಮಾ ಮಾಲಿನಿ ಬ್ಲೌಸ್ ಟೈಟ್ ಮಾಡಿಸಿಕೊಂಡಿದ್ದರು. ಬಾಗ್ಬಾನ್ ಸಿನಿಮಾದಲ್ಲಿ ಈ ವಿಷಯ ರಿವೀಲ್ ಆಗಿದೆ. 

ಅವರ ಟಚ್ ನನಗೆ..! ಬಚ್ಚನ್ ಜೊತೆಗಿನ ರೊಮ್ಯಾಂಟಿಕ್ ಸೀನ್‌ಗಾಗಿ ಬ್ಲೌಸ್ ಟೈಟ್ ಮಾಡಿಸಿಕೊಂಡಿದ್ರು ಡ್ರೀಮ್ ಗರ್ಲ್!

ಮುಂಬೈ: ಶೋಲೆ, ನಸೀಬ್, ಅಂಧಾ ಕಾನೂನ್, ಛೋಟಿ ಸೀ ಬಾತ್, ಸತ್ತೆ ಪರ್ ಸತ್ತಾ, ವೀರ್ ಜಾರಾ ನಿಂದಿ ಬಾಗ್ಬಾನ್ ಸಿನಿಮಾವರೆಗೆ ಅಮಿತಾಬ್ ಬಚ್ಚನ್ ಮತ್ತು ಹೇಮಾ ಮಾಲಿನಿ ಜೊತೆಯಾಗಿ ನಟಿಸಿದ್ದಾರೆ. ಇಬ್ಬರ ಜೋಡಿ ಜನರಿಗೆ ತುಂಬಾ ಇಷ್ಟವಾಗಿತ್ತು. 2003ರಲ್ಲಿ ಕೊನೆಯ ಬಾರಿಗೆ ಅಮಿತಾಬ್ ಬಚ್ವನ್ ಮತ್ತು ಹೇಮಾ ಮಾಲಿನಿ ಬಾಗ್ಬಾನ್ ಸಿನಿಮಾದಲ್ಲಿ ನಟಿಸಿದ್ದರು. ಕೌಟುಂಬಿಕ ಕಥಾ ಹಂದರವುಳ್ಳಈ ಸಿನಿಮಾ ನೋಡುಗರ ಕಣ್ಣಂಚಲ್ಲಿ ನೀರು ತರಿಸುತ್ತದೆ. ಬಾಗ್ಬಾನ್ ಸಿನಿಮಾ ಸಹ ಬಾಕ್ಸ್ ಆಫಿಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಸಿನಿಮಾದಲ್ಲಿ ಅಮಿತಾಬ್ ಬಚ್ಬನ್ ಜೊತೆಗಿನ ರೊಮ್ಯಾಂಟಿಕ್ ಚಿತ್ರೀಕರಣದ ವೇಳೆ ಹೇಮಾ ಮಾಲಿನಿ ಕೆಲವೊಂದು ವಿಶೇಷ ಮನವಿ ಮಾಡಿಕೊಂಡಿದ್ದರು. ರೊಮ್ಯಾಂಟಿಕ್ ಸೀನ್‌ ವೇಳೆ ತಮ್ಮ ಬ್ಲೌಸ್ ಸ್ವಲ್ಪ ಟೈಟ್ ಮಾಡಿಸಿಕೊಂಡಿದ್ದರು ಎಂಬ ವಿಷಯ ಈಗ ರಿವೀಲ್ ಆಗಿದೆ. 

ರವಿ ಚೋಪ್ರಾ ಅವರ ಬಗ್ಬಾನ್ ಚಿತ್ರದಲ್ಲಿ ರಾಜ್ ಮತ್ತು ಪೂಜಾ ಪಾತ್ರದಲ್ಲಿ ಅಮಿತಾಬ್ ಬಚ್ಚನ್-ಹೇಮಾ ಮಾಲಿನಿ ನಟಿಸಿದ್ದರು. ವಿಶೇಷ ಪಾತ್ರವೊಂದರಲ್ಲಿ ಸಲ್ಮಾನ್ ಖಾನ್ ಸಹ ನಟಿಸಿದ್ದರು. ಈ ಸಿನಿಮಾದಲ್ಲಿ ಹೇಮಾ ಮಾಲಿನಿ ಕನ್ನಡಿ ಮುಂದೆ ನಿಂತು ರೆಡಿಯಾಗುತ್ತಿರುತ್ತಾರೆ. ಹಿಂದಿನಿಂದ ಬರುವ ಅಮಿತಾಬ್ ಬಚ್ಚನ್ ವಾವ್ ಎಂದು ಮಡದಿಯ ಸೌಂದರ್ಯದ ಗುಣಗಾನ ಮಾಡುತ್ತಾರೆ. ನಂತರ ಹಿಂದಿನಿಂದ ಬ್ಲೌಸ್‌ ದಾರವನ್ನು ಕಟ್ಟುತ್ತಾರೆ. 

ಬಾಗ್ಬಾನ್ ಸಿನಿಮಾದ ನಿರ್ಮಾಪಕ ರವಿ ಚೋಪ್ರಾ ಪತ್ನಿ ರೇಣು ಚೋಪ್ರಾ ಪಾಡ್‌ಕಾಸ್ಟ್‌ ಸಿನಿಮಾದ ಕುರಿತ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದ ಪ್ರತಿಯೊಂದು ದೃಶ್ಯಗಳನ್ನು ಬೆಸ್ಟ್ ಮಾಡಲು ಹೇಮಾ ಮಾಲಿನಿ ಸಹ ಪ್ರಯತ್ನಿಸುತ್ತಿದ್ದರು. ಕನ್ನಡಿ ಮುಂದೆ ನಿಂತು ಅಮಿತಾಬ್ ಜೊತೆಗೆ ರೊಮ್ಯಾಂಟಿಕ್ ಸೀನ್ ಮಾಡುವ ಮುನ್ನ ಹೇಮಾ ಮಾಲಿನಿ ತಮ್ಮ ಡಿಸೈನರ್ಸ್‌ಗಳಿಂದ ಬ್ಲೌಸ್ ಸ್ವಲ್ಪ ಟೈಟ್ ಮಾಡಿಸಿಕೊಂಡಿದ್ದರು. ಹಿಂದಿನಿಂದ ಅಮಿತಾಬ್ ದಾರ ಬಿಗಿ ಮಾಡುವ ದೃಶ್ಯ ಪರ್ಫೆಕ್ಟ್ ಆಗಿ ಕಾಣಿಸಬೇಕು ಎಂಬುವುದು ಅವರ ಉದ್ದೇಶವಾಗಿತ್ತು ಎಂದು ರೇಣು ಚೋಪ್ರಾ ಹೇಳಿದ್ದಾರೆ. 

ಇದನ್ನೂ ಓದಿ: ನಿಮ್ಮ ಪೂರ್ವಜರು ಬ್ರಿಟಿಷರ ಬೂಟುಗಳನ್ನು ನೆಕ್ಕುತ್ತಿದ್ದರೆ, ನನ್ನ ಪೂರ್ವಜರು ಜೈಲಿನಲ್ಲಿದ್ದರು; ಜಾವೇದ್ ಅಖ್ತರ್

ಇಳಿ ವಯಸ್ಸಿನಲ್ಲಿಯೂ ದಂಪತಿ ನಡುವೆ ಪ್ರೀತಿ ಇರುತ್ತೆ ಎಂಬುದನ್ನು ತೋರಿಸುವ ದೃಶ್ಯ ಅದಾಗಿತ್ತು. ಅಮಿತಾಬ್ ಬಚ್ಚನ್ ಅವರ ಆ ಸ್ಪರ್ಶ ಆ ಸಮಯದಲ್ಲಿ ನನಗೆ ಬೇಕಾದ ಲುಕ್ ನೀಡುತ್ತದೆ ಎಂದು ಹೇಮಾ ಮಾಲಿನಿ ಹೇಳಿದ್ದರು. ಮದುವೆಯಾಗಿ ಬಹಳ ವರ್ಷಗಳ ಬಳಿಕ ಕಾಣಿಸಿಕೊಳ್ಳುವ ಪ್ರೀತಿಯನ್ನು ತೆರೆ ಮೇಲೆ ತೆಗೆದುಕೊಂಡು ಬರಲಾಗಿತ್ತು. ಇದೇ ರೀತಿ ಬಾಗ್ಬಾನ್ ಚಿತ್ರದಲ್ಲಿ ಸಲ್ಮಾನ್ ಖಾನ್ ಪಾತ್ರದ ಬಗ್ಗೆಯ ರೇಣು ಚೋಪ್ರಾ ಮಾತನಾಡಿದ್ದಾರೆ. 

ಲೀಡ್‌ ರೋಲ್‌ನಲ್ಲಿ ಅಮಿತಾಬ್ ಬಚ್ಬನ್ ಮತ್ತು ಹೇಮಾ ಮಾಲಿನಿ ಇರೋದರಿಂದ ಇದೊಂದು ಸಪ್ಪೆ ಸಿನಿಮಾ ಅಂತ ವಿತರಕರು ಚಿತ್ರ ತೆಗೆದುಕೊಳ್ಳಲು ಮುಂದೆ ಬರಲಿಲ್ಲ. ಆ ಸಮಯದಲ್ಲಿ ಸಲ್ಮಾನ್ ಖಾನ್ ಅವರನ್ನು ಅಪ್ರೋಚ್ ಮಾಡಲಾಯ್ತು. ಬಾಂದ್ರಾದಲ್ಲಿರುವ ಸಲ್ಮಾನ್ ಮನೆಗೆ ತೆರಳಿ ಕಥೆ ಹೇಳಾಯ್ತು. ಕಥೆ ಇಷ್ಟವಾಗಿದ್ದರಿಂದ ಸಲ್ಮಾನ್ ಒಪ್ಪಿಕೊಂಡರು. ಆದ್ರೆ ಇಷ್ಟೇ ಸಂಭಾವನೆ ಬೇಕೆಂದು ಕೇಳಲಿಲ್ಲ. ಚಿತ್ರದಲ್ಲಿ ರಾಜ್ ಮತ್ತು ಪೂಜಾ ದಂಪತಿಯ ದತ್ತು ಪುತ್ರನಾಗಿ ಸಲ್ಮಾನ್ ಖಾನ್ ನಟಿಸಿದ್ದಾರೆ.

ಇದನ್ನೂ ಓದಿ: ಕೇವಲ 70 ಕೋಟಿ ಸಿನಿಮಾ ಮಾಡಿದ್ದು 2,070 ಕೋಟಿ ಕಲೆಕ್ಷನ್; ಸಿನಿಮಾದಲ್ಲಿರೋ ಅಪ್ಪ ತುಂಬಾನೇ ಡೇಂಜರ್!

View post on Instagram