Asianet Suvarna News Asianet Suvarna News

ಈ ಬಾಲಿವುಡ್ ಜೋಡಿಗಳಲ್ಲಿ ಹೆಂಡತಿ ಗಂಡನಿಗಿಂತ ಎಷ್ಟು ದೊಡ್ಡವಳು ನೋಡಿ!

ಹೆಂಡತಿ ಪ್ರಾಯದಲ್ಲಿ ಗಂಡನಿಗಿಂತ ಚಿಕ್ಕವಳಾಗಿರಬೇಕು ಎಂಬ ಕಾಲ ಹೊರಟುಹೋಗಿದೆ. ಬಾಲಿವುಡ್‌ನಲ್ಲೂ ಇದು ನಿಜ. ಎಷ್ಟೋ ಸೆಲೆಬ್ರಿಟಿ ಜೋಡಿಗಳಲ್ಲಿ ಹೆಂಡತಿಯೇ ಗಂಡನಿಗಿಂತ ದೊಡ್ಡವಳು.

 

 

Bollywood starts elder than their husband in Bollywood
Author
Bengaluru, First Published Oct 29, 2021, 5:22 PM IST
  • Facebook
  • Twitter
  • Whatsapp

ಪ್ರೀತಿ- ಪ್ರೇಮ- ದಾಂಪತ್ಯದ (Love marriage) ವಿಷಯಕ್ಕೆ ಬಂದರೆ, ವಯಸ್ಸು ಎಂಬುದು ಬರಿಯ ಸಂಖ್ಯೆ ಅಷ್ಟೇ. ತಮಗಿಂತ ಚಿಕ್ಕವರನ್ನು ಮದುವೆಯಾಗಿ ಡೈವೋರ್ಸ್ (Divorce) ಮಾಡಿದ ಗಂಡಸರು ಇರುವಂತೆ, ತಮಗಿಂತ ಚಿಕ್ಕವರಾದ ಗಂಡಸರನ್ನು ಮದುವೆಯಾಗಿ ಸುಖವಾಗಿ ದಾಂಪತ್ಯ ಸಾಗಿಸುತ್ತಿರುವ ಸ್ತ್ರೀಯರೂ ಬಾಲಿವುಡ್‌ ಲೋಕದಲ್ಲಿ ಇದ್ದಾರೆ. ಇದು ದಂಪತಿಗಳ ನಡುವಿನ ಪ್ರೀತಿಯ ಸುಂದರ ಬಂಧಕ್ಕೆ ವಯಸ್ಸು ಅಡ್ಡಿಯಾಗದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಗಳು. ಅಂಥ ಟಾಪ್ ಟೆನ್ ಬಾಲಿವುಡ್ ಜೋಡಿಗಳ ಪಟ್ಟಿ ಇಲ್ಲಿದೆ.

1. ಪ್ರಿಯಾಂಕ ಚೋಪ್ರಾ- ನಿಕ್ ಜೊನಾಸ್ (Priyanka chopra)
2018ರಲ್ಲಿ ಈ ಜೋಡಿ ಮದುವೆಯಾದಾಗ ಅದೇ ದೊಡ್ಡ ಸುದ್ದಿ. ಯಾಕೆಂದರೆ ಇವರಿಬ್ಬರ ಪ್ರತ್ಯೇಕ ಸಾಂಸ್ಕೃತಿಕ- ಧಾರ್ಮಿಕ- ದೇಶಿ ಹಿನ್ನೆಲೆ ಹಾಗೂ ದೊಡ್ಡ ವಯಸ್ಸಿನ ಅಂತರ. ಇವರಿಬ್ಬರ ವಯಸ್ಸಿನ ಅಂತರ 10 ವರ್ಷ! ಮದುವೆಯಾದಾಗ ಪ್ರಿಯಾಂಕಗೆ 38 ವರ್ಷ, ನಿಕ್‌ಗೆ 28 ವರ್ಷ ವಯಸ್ಸು. ಆದರೆ ಇಬ್ಬರೂ ಇದುವರೆಗೂ ಚೆನ್ನಾಗಿಯೇ ಇದ್ದಾರೆ.
 

Bollywood starts elder than their husband in Bollywood

2. ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ (Aishwarya rai bachchan)
ಈ ಜೋಡಿಯು 2007ರ ಏಪ್ರಿಲ್ 20ರಂದು ಮದುವೆಯಾಯಿತು. ಐಶ್ವರ್ಯಾ ರೈ ಬಚ್ಚನ್ ತನ್ನ ಪತಿ ಅಭಿಷೇಕ್ ಬಚ್ಚನ್‌ಗಿಂತ ಎರಡು ವರ್ಷ ದೊಡ್ಡವಳು. ಆದರೆ ಅದು ಎಲ್ಲೂ ಗೊತ್ತಾಗುವುದಿಲ್ಲ. ಈ ಅದ್ಭುತ ದಂಪತಿಗಳ ಮದುವೆಯ ಬಗ್ಗೆ ಸಾಕಷ್ಟು ಊಹಾಪೋಹಗಳು ಇದ್ದವು. ಮದುವೆಯಾಗುವಾಗ ಐಶ್ವರ್ಯಾ ವಯಸ್ಸು 34 ಮತ್ತು ಅಭಿಷೇಕ್ ವಯಸ್ಸು 31. ಅವರಿಬ್ಬರ ವಯಸ್ಸಿನ ಅಂತರ 3 ವರ್ಷ. ಐಶ್ವರ್ಯಾ ತನಗಿಂತ ವಯಸ್ಸಿನಲ್ಲಿ ದೊಡ್ಡವನಾದ ಸಲ್ಮಾನ್ ಖಾನ್ ಜೊತೆ ಸಾಕಷ್ಟು ಕಾಲ ಸುತ್ತಾಡಿ, ಆತನಿಂದ ರೋಸಿ ಹೋದ ಬಳಿಕ ಅಭಿಷೇಕ್ ಜೊತೆಯಾಗಿದ್ದಳು.
 

Bollywood starts elder than their husband in Bollywood

3. ಜರೀನಾ ವಹಾಬ್ ಮತ್ತು ಆದಿತ್ಯ ಪಾಂಚೋಲಿ
ಬಾಲಿವುಡ್‌ನ ಈ ಪವರ್ ಜೋಡಿ ಮದುವೆಯಾಗಿ ಸುಮಾರು ಮೂರು ದಶಕಗಳೇ ಕಳೆದಿವೆ! ದಂಪತಿಗಳ ನಡುವಿನ ಪ್ರೀತಿ ಬೇರೆ ಯಾವುದನ್ನೂ ಲೆಕ್ಕಿಸುವುದಿಲ್ಲ ಎಂದು ದಂಪತಿಗಳು ನಂಬುತ್ತಾರೆ. ಇಬ್ಬರಲ್ಲಿ ಜರೀನಾ, ಆದಿತ್ಯನಿಗಿಂತ 6 ವರ್ಷ ದೊಡ್ಡವಳು. ಪ್ರೀತಿಗೆ ವಯಸ್ಸಿನ ವ್ಯತ್ಯಾಸವಿಲ್ಲ ಎಂದು ಇವರು ನಂಬುತ್ತಾರೆ.

4. ಪರ್ಮೀತ್ ಸೇಥಿ ಮತ್ತು ಅರ್ಚನಾ ಪುರಾನ್ ಸಿಂಗ್
ವಯೋಮಾನದ ಹೇರಿಕೆ ಯಶಸ್ವಿ ದಾಂಪತ್ಯಕ್ಕೆ ಖಾತರಿ ನೀಡುವುದಿಲ್ಲ ಎಂದು ಅರ್ಚನಾ ನಂಬುತ್ತಾರೆ. ಒಮ್ಮೆ ವಿಫಲವಾದ ಮದುವೆಯ ನಂತರ ಈ ಅಭಿಪ್ರಾಯವನ್ನು ಆಕೆ ಹೊಂದಿದ್ದಳು. ಆದರೆ ಶೀಘ್ರದಲ್ಲೇ ಅವಳು ಪರ್ಮೀತ್ ಅನ್ನು ಕಂಡುಕೊಂಡಳು ಮತ್ತು ಅವರ ಪ್ರೀತಿ ಅರಳಿತು. ಪರ್ಮೀತ್ ಅರ್ಚನಾ ಅವರಿಗಿಂತ 7 ವರ್ಷ ಚಿಕ್ಕವರಾಗಿದ್ದಾರೆ. ಈ ದಂಪತಿಗಳು ಇನ್ನೂ ಹೊಸ ಪ್ರೇಮಿಗಳಂತಿದ್ದಾರೆ. ಆದರೆ ಮದುವೆಯಾಗಿ ಎರಡು ದಶಕಗಳು ಕಳೆದಿವೆ.

5. ಕುನಾಲ್ ಖೇಮು ಮತ್ತು ಸೋಹಾ ಅಲಿ ಖಾನ್ (Soha ali khan)
ಬಾಲಿವುಡ್‌ನ ರಾಜಮನೆತನದ ಜನರಿಗೆ ವಯಸ್ಸಿನ ಅಂಶವು ಎಂದಿಗೂ ಮುಖ್ಯವಲ್ಲ! ಅದು ಸೈಫ್- ಅಮೃತಾ ಸಿಂಗ್ ಅವರ ಮದುವೆಯಲ್ಲಾಗಲಿ ಅಥವಾ ಸೋಹಾ- ಕುನಾಲ್‌ರ ಮದುವೆಯಲ್ಲಾಗಲಿ. 'ಧೂಂಡ್ತೆ ರೆಹ್ ಜಾವೋಗೆ' ಎಂಬ ಚಿತ್ರದಲ್ಲಿ ಸಹನಟರಾಗಿದ್ದಾಗ ಅವರ ಪ್ರೀತಿ ಅರಳಿತು. ಅಂದಿನಿಂದ ಅವರಿಬ್ಬರೂ ಯಾವಾಗಲೂ ಜೊತೆಯಲ್ಲಿ. ಸೋಹಾ ತನ್ನ ಪತಿ ಕುನಾಲ್ ಖೇಮು ಅವರಿಗಿಂತ ಐದು ವರ್ಷ ಹಿರಿಯಳು. ಈ ವಯಸ್ಸಿನ ಅಂತರವು ಅವರನ್ನು ದೂರವಿಡಲಿಲ್ಲ. ಅವರು 2015ರ ಜನವರಿಯಲ್ಲಿ ಮದುವೆಯಾದರು.

6. ಫರಾ ಖಾನ್ ಮತ್ತು ಶಿರೀಷ್ ಕುಂದರ್
ಈ ದಂಪತಿಗಳು ತ್ರಿವಳಿ ಮಕ್ಕಳು, ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನನ್ನು ಹೊಂದಿದ್ದಾರೆ. ಆದರೆ, ಅವರ ಕಥೆ ಅಂದುಕೊಂಡಷ್ಟು ಸರಳವಾಗಿಲ್ಲ. ‘ಮೈ ಹೂ ನಾ’ ಚಿತ್ರಕ್ಕಾಗಿ ಒಟ್ಟಿಗೆ ಕೆಲಸ ಮಾಡಿದ ನಂತರ ಅವರು ಪ್ರೀತಿಯಲ್ಲಿ ಸಿಲುಕಿದರು. ಫರಾ ಶಿರೀಶ್‌ಗಿಂತ ಎಂಟು ವರ್ಷ ದೊಡ್ಡವಳು! ಅಲ್ಲದೇ ಇಬ್ಬರೂ ಒಂದೇ ಧರ್ಮಕ್ಕೆ ಸೇರಿದವರೂ ಅಲ್ಲ. ಹಾಗೆಂದು ಅವರು ತಮ್ಮ ಪ್ರೀತಿಗಾಗಿ ಹೋರಾಡುವುದನ್ನು ಬಿಟ್ಟುಬಿಡಲಿಲ್ಲ.

ಪತ್ನಿಯರಿಗಾಗಿ ಕರ್ವಾ ಚೌತ್‌ ಉಪವಾಸ ಮಾಡೋ ಬಾಲಿವುಡ್‌ ಸೆಲೆಬ್ರೆಟೀಸ್!

7. ಫರ್ಹಾನ್ ಅಖ್ತರ್ ಮತ್ತು ಅಧುನಾ ಭವಾನಿ (Farhan akhtar)
ಈ ಅದ್ಭುತ ದಂಪತಿಗಳು ಈಗ ಬೇರೆಯಾಗಲು ನಿರ್ಧರಿಸಿದ್ದಾರೆ. ಆದರೆ ಅವರ ಪ್ರೇಮಕಥೆಯು ನಿಜವಾಗಿಯೂ ಸುಂದರ ಮತ್ತು ಸ್ಪೂರ್ತಿದಾಯಕವಾಗಿದೆ. ಫರ್ಹಾನ್ 'ದಿಲ್ ಚಾಹ್ತಾ ಹೈ'ಗಾಗಿ ತಯಾರಿ ನಡೆಸುತ್ತಿದ್ದಾಗ ಅವರು ಭೇಟಿಯಾದರು. ಅಧುನಾ, ಫರ್ಹಾನ್‌ಗಿಂತ ಏಳು ವರ್ಷ ದೊಡ್ಡವರು. ಆದರೆ ಎರಡು ದಶಕ ಕಾಲ ದಾಂಪತ್ಯ ನಡೆಸಿದ ಅವರಿಗೆ ಅದು ಎಂದಿಗೂ ಸಮಸ್ಯೆಯಾಗಿರಲಿಲ್ಲ.

8. ಅರ್ಜುನ್ ರಾಂಪಾಲ್ ಮತ್ತು ಮೆಹರ್ ಜೆಸಿಯಾ (Arjun Rampal)
ಮಾಜಿ ಸೂಪರ್ ಮಾಡೆಲ್ ಮೆಹರ್ ಜೆಸಿಯಾ ತನ್ನ ಪತಿ ಅರ್ಜುನ್ ರಾಮ್‌ಪಾಲ್‌ಗಿಂತ ಎರಡು ವರ್ಷ ದೊಡ್ಡವಳು. ಆದರೆ ಇದು ದಂಪತಿಗಳ ನಡುವೆ ಎಂದಿಗೂ ಯಾವುದೇ ಸಮಸ್ಯೆಗಳನ್ನು ಉಂಟುಮಾಡಲಿಲ್ಲ. ದಂಪತಿಗಳು 1998ರಲ್ಲಿ ವಿವಾಹವಾದರು. ಮತ್ತು ಅವರು ಹಂಚಿಕೊಳ್ಳುವ ಪ್ರೀತಿಯ ಅಂತ್ಯವಿಲ್ಲದ ಬಂಧಕ್ಕೆ ದಾಂಪತ್ಯ ಇಂದಿಗೂ ಪುರಾವೆಯಾಗಿದೆ.

9. ಶಿಲ್ಪಾ ಶೆಟ್ಟಿ ಕುಂದ್ರಾ ಮತ್ತು ರಾಜ್ ಕುಂದ್ರಾ (Shilpa shetty- Raj Kundra)
ಈ ಜೋಡಿಯು 2009ರ ನವೆಂಬರ್‌ನಲ್ಲಿ ಮದುವೆಯಾದರು. ಈ ದಾಂಪತ್ಯಕ್ಕೆ ಈಗ ಹನ್ನೆರಡು ವರ್ಷಗಳು ಕಳೆದಿವೆ ಮತ್ತು ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ. ರಾಜ್ ಕುಂದ್ರಾ ಶಿಲ್ಪಾ ಶೆಟ್ಟಿಗಿಂತ ಕೇವಲ ಮೂರು ವರ್ಷ ಚಿಕ್ಕವರು. ಇದು ಸಮಸ್ಯೆಯಾಗಲಿಲ್ಲ. ಈಗ ಪೋರ್ನ್ ಚಿತ್ರಗಳ ವಿಷಯ ಯಾವ ಸಮಸ್ಯೆಯಾಗಲಿದೆಯೋ ಗೊತ್ತಿಲ್ಲ.

ರಣವೀರ್ ಸಿಂಗ್ ವರ್ಲ್ಡ್‌ ಬೆಸ್ಟ್ ಹಸ್ಬೆಂಡ್‌ ಎಂದ ದೀಪಿಕಾ ಪಡುಕೋಣೆ!

10. ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ (Bipasha basu)
2016ರ ಏಪ್ರಿಲ್ 30ರಂದು ಮದುವೆಯಾದ ಇವರಿಬ್ಬರು ಅದಕ್ಕೂ ಮೊದಲೇ ಪ್ರೀತಿಸುತ್ತಿದ್ದರು. ಒಬ್ಬರಿಗೊಬ್ಬರು ತಮ್ಮ ಹುಚ್ಚುತನವನ್ನು 'ಮಂಕಿ ಲವ್' ಎಂದು ಕರೆದುಕೊಂಡಿದ್ದಾರೆ. ಕರಣ್ ಅವರು ಬಿಪಾಶಾ ಅವರಿಗಿಂತ ನಾಲ್ಕು ವರ್ಷ ಚಿಕ್ಕವರು, ಮತ್ತು ಇಬ್ಬರು ತಮ್ಮ ಕೋತಿ ಪ್ರೀತಿಯನ್ನು ಇನ್ನೂ ಆನಂದಿಸುತ್ತಾರೆ!

11. ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ (Saif ali Khan)
ಇವರಿಬ್ಬರು ಈಗ ಜೊತೆಯಾಗಿ ಇಲ್ಲದಿದ್ದರೂ, ಅವರ ಮದುವೆ ಒಂದು ರೀತಿಯ ವಿಶೇಷವಾಗಿತ್ತು. ಅಮೃತಾ ಸಿಂಗ್ ಅವರು ತುಂಬಾ ಚಿಕ್ಕ ವಯಸ್ಸಿನ ಸೈಫ್ ಅಲಿ ಖಾನ್ ಅವರನ್ನು ಮದುವೆಯಾಗಲು ನಿರ್ಧರಿಸಿದಾಗ ಬಾಲಿವುಡ್‌ನಲ್ಲಿ ದೊಡ್ಡ ಗದ್ದಲ. ಮದುವೆಯಾದಾಗ ಅಮೃತಾಗೆ 33 ವರ್ಷ ಮತ್ತು ಸೈಫ್ ಗೆ ಕೇವಲ 21 ವರ್ಷ! ಹೌದು, ಅವರಿಗೆ 12 ವರ್ಷಗಳಷ್ಟು ದೊಡ್ಡ ವಯಸ್ಸಿನ ಅಂತರವಿತ್ತು! ಆದರೆ ಅದು ಅವರ ಮದುವೆಯನ್ನು ತಡೆಯಲಿಲ್ಲ.

6 ಮಕ್ಕಳ ತಾಯಿಯಾದ್ರೂ ನಾನು ಪರ್ಫೆಕ್ಟ್ ಅಮ್ಮನಲ್ಲ ಎಂದ ನಟಿ ಏಂಜಲೀನಾ

Follow Us:
Download App:
  • android
  • ios