ಈ ಉದ್ಯಮಿಗಳು ಹಾಗೂ ಸಿನಿ ಸ್ಟಾರ್ಸ್ ತಮ್ಮ ಬಾಡಿ ಗಾರ್ಡ್ ಹಾಗೂ ನೀಡುವ ವೇತನ ಕೇಳಿದರೆ ಮೈ ಜುಮ್ಮನ್ನುತ್ತೆ. ಒಳ್ಳೆ ಕಂಪನಿಯ ಸಿಇಒ ಪಡೆಯುವಷ್ಟೇ ವೇತನ ಪಡೆಯುತ್ತಾರೆ ಇವರು. 

ನವದೆಹಲಿ (ಜು.11): ಬಾಲಿವುಡ್‌ನ ಸ್ಟಾರ್‌ ನಟರು ಎಲ್ಲೇ ಪ್ರಯಾಣಿಸಿದರೂ ಅವರ ಜೊತೆ ಇದ್ದು, ರಕ್ಷಣೆ ಮಾಡುವ ಅಂಗರಕ್ಷಕರ ಬಗ್ಗೆ ಮೂಗು ಮುರಿ​ಯ​ಬೇಡಿ. ಅವ​ರಿಗೆ ಒಂದಲ್ಲ. ಎರ​ಡ​ಲ್ಲ... ವಾರ್ಷಿಕವಾಗಿ ಕೊಟ್ಯಂತರ ರು. ವೇತನ ನೀಡಲಾಗುತ್ತದೆ ಎಂಬ ಕುತೂ​ಹ​ಲದ ವಿಷಯ ಬೆಳ​ಕಿಗೆ ಬಂದಿ​ದೆ.

ಇವರಲ್ಲಿ ಶಾರುಖ್‌ ಖಾನ್‌ ಬಾಡಿಗಾರ್ಡ್‌ ವರ್ಷಕ್ಕೆ 2.7 ಕೋಟಿ ರು. ವೇತನ ಪಡೆದುಕೊಳ್ಳುತ್ತಿದ್ದು, ಅತಿ ಹೆಚ್ಚು ವೇತನ ಪಡೆದುಕೊಳ್ಳುವ ಬಾಡಿಗಾರ್ಡ್‌ ಎನಿಸಿಕೊಂಡಿದ್ದಾರೆ ಎಂದು ಮಾಧ್ಯಮ ವರ​ದಿ​ಯೊಂದು ಹೇಳಿ​ದೆ. ಶಾರುಖ್‌ ಖಾನ್‌ರ ವಿದೇಶ ಪ್ರಯಾಣದ ವೇಳೆಯಲ್ಲೂ ಅವರ ಜೊತೆ ಸಾಗುವ ಅಂಗರಕ್ಷಕ ರವಿ ಸಿಂಗ್‌ ವರ್ಷಕ್ಕೆ 2.7 ಕೋಟಿ ರು. ವೇತನ ಪಡೆದುಕೊಳ್ಳುತ್ತಿದ್ದಾರೆ.

ಭಾರತೀಯ ಸಿನಿಮಾದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯೋ ಡೈರೆಕ್ಟರ್‌ ಇವ್ರೇ ನೋಡಿ

ಸಲ್ಮಾನ್‌ ಖಾನ್‌ ಅವರ ಬಾಡಿಗಾರ್ಡ್‌ ಶೇರಾ ಹಾಗೂ ಅಮೀರ್‌ ಖಾನ್‌ ಅವರ ಬಾಡಿಗಾರ್ಡ್‌ ಯುವರಾಜ್‌ ಘೋರ್ಪಡೆ ತಲಾ 2 ಕೋಟಿ ರು. ಪಡೆದುಕೊಳ್ಳುತ್ತಿದ್ದಾರೆ. ಉಳಿದಂತೆ ದೀಪಿಕಾ ಪಡುಕೋಣೆ ಅವರ ಅಂಗರಕ್ಷಕ ಜಲಾಲ್‌ ಹಾಗೂ ಅನುಷ್ಕಾ ಶರ್ಮಾ ಅವರ ಬಾಡಿಗಾರ್ಡ್‌ ಪ್ರಕಾಶ್‌ ಸಿಂಗ್‌, ಅಕ್ಷಯ್‌ ಕುಮಾರ್‌ ಅವರ ಬಾಡಿಗಾರ್ಡ್‌ ಶ್ರೇಯಸ್‌ ಥೇಲೆ ತಲಾ 1.2 ಕೋಟಿ ರು. ವೇತನ ಪಡೆದುಕೊಳ್ಳುತ್ತಿದ್ದಾರೆ.

ಯಾರಿಗೆ ಸಂಬಳ ಎಷ್ಟು?
ರವಿ ಸಿಂಗ್‌ (ಶಾ​ರುಖ್‌ ಅಂಗ​ರ​ಕ್ಷ​ಕ​) 2.7 ಕೋಟಿ ರು.
ಶೇರಾ (ಸ​ಲ್ಮಾನ್‌ ಅಂಗ​ರ​ಕ್ಷ​ಕ​​) 2 ಕೋಟಿ ರು.
ಯುವ​ರಾಜ್‌ ಘೋರ್ಪಡೆ (ಅ​ಮೀರ್‌ ಅಂಗ​ರ​ಕ್ಷ​ಕ) 2 ಕೋಟಿ ರು.
ಜಲಾಲ್‌ (ದೀ​ಪಿಕಾ ಅಂಗ​ರ​ಕ್ಷ​ಕ) 1.2 ಕೋಟಿ ರು.

ಯಾರೋ ಕೈ ಕತ್ತರಿಸ್ತಾರೆ ಅನ್ನೋ ವಿಚಿತ್ರ ಭಯದಲ್ಲಿ ಒದ್ದಾಡುತ್ತಿರುವ ಶಾರುಖ್‌ ಖಾನ್! ಇದ್ಯಾಕೆ?

ಬಾಲಿವುಡ್ ನಟರ ಬಾಡಿಗಾರ್ಡ್ಸ್ ವೇತನವಿಷ್ಟು:

ಸಲ್ಮಾನ್​ ಖಾನ್​ ಅವರ ಅಂಗರಕ್ಷಕ ರವಿ ಸಿಂಗ್ ಬಾಲಿವುಡ್ ಅಂಗರಕ್ಷಕರ ಪೈಕಿ ಹೆಚ್ಚು ವೇತನ ಪಡೆಯುತ್ತಾರೆ. ಇವರ ವಾರ್ಷಿಕ ವೇತನ ಸುಮಾರು 2.5 ಕೋಟಿ ರೂಪಾಯಿಗಳು. ಮಾಸಿಕದ ಲೆಕ್ಕಾಚಾರದಲ್ಲಿ 20 ಲಕ್ಷಕ್ಕೂ ಹೆಚ್ಚು ಬಿಡಿ. ಶೇರಾ ಎಂದು ಕರೆಯಲ್ಪಡುವ ಗುರ್ಮೀತ್ ಸಿಂಗ್ ಜಾಲಿ ಸಲ್ಮಾನ್ ಖಾನ್ ಅಭಿಮಾನಿಗಳಲ್ಲಿ ಬಹಳ ಜನಪ್ರಿಯರು. ಅವರೇ ಯಾವುದೇ ಸೆಲೆಬ್ರಿಟಿಗಳಿಗಿಂತಲೂ ಕಡಿಮೆ ಇಲ್ಲ. ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್​ ಖಾನ್​ (Salman Khan) ಅಂಗರಕ್ಷಕರಾದ ಇವರ ಮಾಸಿಕ ವೇತನವು 15 ಲಕ್ಷ ರೂ. 

ಆಮೀರ್ ಖಾನ್ (Aamir Khan), ಅಮಿತಾಭ್​ ಬಚ್ಚನ್
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್​ ಖಾನ್​ ತಮ್ಮ ಬಾಡಿಗಾರ್ಡ್‌ ಯುವರಾಜ್ ಘೋರ್ಪಡೆಗೆ ನೀಡುವ ವಾರ್ಷಿಕ ವೇತನ 2 ಕೋಟಿ ರೂ. ತಿಂಗಳ ಲೆಕ್ಕಾಚಾರದಲ್ಲಿ ಸುಮಾರು 15 ಲಕ್ಷ ರೂಪಾಯಿ. ಇನ್ನು ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್ ಅಂಗರಕ್ಷಕ ಜಿತೇಂದ್ರ ಶಿಂಧೆ ಪಡೆಯುತ್ತಿರುವುದು ವಾರ್ಷಿಕ ವೇತನ 1.2 ಕೋಟಿ ರೂ. 

Kriti Sanon: ಸೋಷಿಯಲ್‌ ಮೀಡಿಯಾದಲ್ಲಿ ನಟಿಯ ಮೂಗಿನದ್ದೇ ಚರ್ಚೆ- ಅಂಥದ್ದೇನಿದೆ?

ದೀಪಿಕಾ ಪಡುಕೋಣೆ, ಅಕ್ಷಯ್ ಕುಮಾರ್ 
ಬಾಲಿವುಡ್ ಬ್ಯೂಟಿ, ಕನ್ನಡತಿ ದೀಪಿಕಾ ಪಡುಕೋಣೆ ಅವರು ಅಂಗರಕ್ಷಕ ಜಲಾಲ್ ಅವರಿಗೆ ವಾರ್ಷಿಕ 80 ಲಕ್ಷ ರೂ. ವೇತನ ಕೊಡುತ್ತಾರೆ. ಬಾಡಿಗಾರ್ಡ್ ಜಲಾಲ್​ ಅವರನ್ನು ತಮ್ಮ ರಾಖಿ ಸಹೋದರನನ್ನಾಗಿಯೂ ಮಾಡಿಕೊಂಡಿದ್ದಾರೆ. ಅಕ್ಷಯ್ ಕುಮಾರ್ (Akshay Kumar) ಅವರು ಬಾಲಿವುಡ್‌ನ ಫಿಟೆಸ್ಟ್ ನಟರಲ್ಲಿ ಒಬ್ಬರು. ಇವರನ್ನು ಜನಸಂದಣಿಯಿಂದ ಸುರಕ್ಷಿತವಾಗಿರಿಸುವ ಅಂಗರಕ್ಷಕ ಶ್ರೇಯ್ಸೆ ಥೆಲೆಗೆ ವಾರ್ಷಿಕ 1.2 ಕೋಟಿ ರೂ. ವೇತನ ನೀಡುತ್ತಾರೆ.