Kriti Sanon: ಸೋಷಿಯಲ್‌ ಮೀಡಿಯಾದಲ್ಲಿ ನಟಿಯ ಮೂಗಿನದ್ದೇ ಚರ್ಚೆ- ಅಂಥದ್ದೇನಿದೆ?

ನಟಿ ಕೃತಿ ಸನೋನ್‌ ಅವರ ಹಳೆಯ ಮತ್ತು ಹೊಸ ಫೋಟೋ ವೈರಲ್‌ ಆಗಿದ್ದು, ಮೂಗಿನ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಏನಿದೆ ಮೂಗಿನಲ್ಲಿ? 
 

There is a discussion about the Kriti Sanons nose on social media What is it?

ಗ್ಲಾಮರ್ ಲೋಕದಲ್ಲಿ ಸುಂದರವಾಗಿ ಕಾಣಲು ನಟಿಯರು ಬೇಕಾದ ಪ್ರತಿ ಹೆಜ್ಜೆಯನ್ನೂ ಇಡುತ್ತಾರೆ. ಪ್ಲಾಸ್ಟಿಕ್ ಸರ್ಜರಿ (Plastic Surgery) ಮಾಡಿಕೊಳ್ಳಲೂ ಹಿಂಜರಿಯುವುದಿಲ್ಲ. ಸುಂದರವಾಗಿ ಕಾಣಲು ನಟಿ ಶ್ರೀದೇವಿಯಿಂದ ಹಿಡಿದು ಹಲವರು ಇದಾಗಲೇ ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗಿದ್ದಾರೆ. ಕಣ್ಣು, ಮೂಗು, ತುಟಿ ಅಷ್ಟೇ ಅಲ್ಲದೇ, ಹಲವು ನಟಿಯರು ತಮ್ಮ ಸ್ತನದ ಗಾತ್ರವನ್ನು ಹೆಚ್ಚಿಸಿಕೊಳ್ಳಲು ಸರ್ಜರಿ ಮಾಡಿಸಿಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ. ಈಗ ಈ ವಿಷಯ ಮುನ್ನೆಲೆಗೆ ಬಂದಿರುವುದು ನಟಿ ಕೃತಿ ಸನೋನ್‌  (Kriti Sanon) ಅವರಿಂದ.  'ಶಹಜಾದಾ' ಚಿತ್ರದಲ್ಲಿ ಕಾಣಿಸಿಕೊಂಡಿರುವ ಕೃತಿ ಸನೋನ್ ಅವರ ಹಳೆಯ ಮತ್ತು ಹೊಸ ಫೋಟೋ ವೈರಲ್‌ ಆಗಿದ್ದು, ಕೃತಿ ಮೂಗಿನ ಕುರಿತು ಭಾರಿ ಚರ್ಚೆ ಶುರುವಾಗಿದೆ. ಕೃತಿ ಅವರ ಹಳೆಯ ಮೂಗನ್ನು ಹೊಸ ಮೂಗಿಗೆ ಹೋಲಿಸಿ ನೆಟ್ಟಿಗರು ವಿಭಿನ್ನ ರೀತಿಯ ಕಮೆಂಟ್‌ ಮಾಡುತ್ತಿದ್ದಾರೆ. ಎರಡೂ ಚಿತ್ರಗಳನ್ನು ಹೋಲಿಸಿ ನೋಡಿದರೆ, ಮೂಗಿನ ಭಾರಿ ವ್ಯತ್ಯಾಸ ಇರುವುದು ತಿಳಿಯುತ್ತದೆ. ಮೂಗು ವಿಭಿನ್ನ ಆಗಿರುವ ಕಾರಣದಿಂದ  ಕೃತಿ ಪ್ಲಾಸ್ಟಿಕ್ ಸರ್ಜರಿ (Plastic Surgery) ಮಾಡಿಸಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. 

 ’ಇವರ ಮೂಗಿನ ಹೊಳ್ಳೆಗಳ  ಕ್ಲೋಸ್-ಅಪ್ (Close Up) ನೋಡಿದರೆ ಚೆನ್ನಾಗಿ ತಿಳಿಯುತ್ತದೆ, ಈಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ’ ಎಂದು ಹಲವರು ಹೇಳುತ್ತಿದ್ದಾರೆ.  ಕೃತಿ ಚೆನ್ನಾಗಿ ಮೂಗಿನ ಕೆಲಸವನ್ನು ಮಾಡಿದ್ದಾರೆ, ಇದು ಆಕೆಯ  ಸೌಂದರ್ಯವನ್ನು ಹೆಚ್ಚಿಸಿದೆ. ಅಂದರೆ ಇವರ ಅಂದ ಒರಿಜಿನಲ್‌ ಅಲ್ಲ ಎಂದಾಯ್ತು ಎಂದು ಇನ್ನು ಕೆಲವರು ಹೇಳಿದ್ದಾರೆ. ಆದರೆ ಕೃತಿಯ ಕೆಲವು ಅಭಿಮಾನಿಗಳು, ಇದು ಪ್ಲಾಸ್ಟಿಕ್‌ ಸರ್ಜರಿ ಅಲ್ಲ,  ಕ್ಯಾಮೆರಾದ ಒಂದೊಂದು ಆ್ಯಂಗಲ್‌ನಲ್ಲಿ ಮುಖ ಒಂದೊಂದು ರೀತಿಯಲ್ಲಿ ಕಾಣಿಸುತ್ತದೆ, ಕೆಲವೊಮ್ಮೆ  ಲೈಟಿಂಗ್‌ನಿಂದಾಗಿಯೂ  ಲುಕ್ ವಿಭಿನ್ನವಾಗಿ ಕಾಣುತ್ತದೆ. ವಯಸ್ಸು ಹೆಚ್ಚುತ್ತಿರುವ ಕಾರಣ ಮತ್ತು ವ್ಯಾಯಾಮದಿಂದ ಅವರ ನೋಟದಲ್ಲಿ ಬದಲಾವಣೆಯಾಗಿದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಕೃತಿ ಇನ್ನೂ ಬಾಯಿ ಬಿಟ್ಟಿಲ್ಲ. ಆದರೆ ಕಮೆಂಟಿಗರು ಮಾತ್ರ ವಾದ-ಪ್ರತಿವಾದ ಮುಂದುವರೆಸಿದ್ದಾರೆ.

Kriti Sanon: ಹೀರೊಯಿನ್ ಜೊತೆ ಮದ್ವೆ ಎಂದ್ರೆ ಮೂಗು ಮುರೀತಾರೆ ಎಂದ ನಟಿ
 

ಕೆಲಸದ ವಿಷಯದಲ್ಲಿ ಹೇಳುವುದಾದರೆ,  ಮೊದಲ ಬಾರಿಗೆ ರ‍್ಯಾಂಪ್ ವಾಕ್ ಮಾಡಿದ ನಂತರ ಕೃತಿ ತುಂಬಾ ಅಳುತ್ತಿದ್ದರು ಎಂದು ಸ್ವತಃ ಅವರೇ ಬಹಿರಂಗಪಡಿಸಸಿದ್ದರು. ಸಂದರ್ಶನವೊಂದರಲ್ಲಿ, ಅವರು  ತುಂಬಾ ಹೆದರುತ್ತಿದ್ದರು. ಅವರು ಎತ್ತರದ ಹಿಮ್ಮಡಿಯ ಬೂಟುಗಳನ್ನು ಧರಿಸಿದ್ದರು, ಇದರಿಂದಾಗಿ ಅವರು ನಡೆಯಲು ಆರಾಮದಾಯಕವಾಗಲಿಲ್ಲ. ವಾಕ್ ಮುಗಿಸಿ ವಾಪಸ್ ಮನೆಗೆ ಹೋಗುವಾಗ ಆಟೋದಲ್ಲಿ ಆಕೆ ಅಳುತ್ತಿದ್ದರು ಎಂದು ಹೇಳಿದ್ದಾರೆ. ಈಗ 32 ವರ್ಷದವರಾಗಿರುವ  ನಟಿ ಕೃತಿ ಸನೋನ್ 2014 ರಲ್ಲಿ 'ಹೀರೋಪಂತಿ' ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಅದರ ನಂತರ ಅವರು 'ದಿಲ್‌ವಾಲೆ' (Dilwale), 'ಬರೇಲಿ ಕಿ ಬರ್ಫಿ', 'ಲುಕಾ ಚುಪ್ಪಿ', 'ಹೌಸ್‌ಫುಲ್ 4', 'ಬಚ್ಚನ್ ಪಾಂಡೆ' ಮತ್ತು 'ಭೇದಿಯಾ' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆ ಕೊನೆಯದಾಗಿ ಕಾರ್ತಿಕ್ ಆರ್ಯನ್ ಅಭಿನಯದ 'ಶೆಹಜಾದಾ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಕೃತಿ ಅವರ ಮುಂಬರುವ ಚಿತ್ರಗಳಲ್ಲಿ 'ಆದಿಪುರುಷ' ಮತ್ತು 'ಗಣಪತ್' ಸೇರಿವೆ.

ಅಂದಹಾಗೆ, ಇಂಜಿನಿಯರಿಂಗ್‌ನಿಂದ ಮಾಡೆಲಿಂಗ್‌ಗೆ (Modelling) ಬಂದು ನಂತರ ನಟನೆಗೆ ಬಂದ ಕೃತಿಗೆ ಚಿತ್ರರಂಗದ ಯಾವುದೇ ಹಿನ್ನೆಲೆ ಹೊಂದಿರಲಿಲ್ಲ.  2014 ರಲ್ಲಿ, ಅವರು ಸೂಪರ್‌ಸ್ಟಾರ್ ಮಹೇಶ್ ಬಾಬು ಅವರೊಂದಿಗೆ ತೆಲುಗು ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ 'ನೆನೊಕ್ಕಡಿನೆ' ಮೂಲಕ ಸಿನಿಮಾಕ್ಕೆ ಕಾಲಿಟ್ಟರು.  ಅದೇ ಸಮಯದಲ್ಲಿ, ಅವರ ಮೊದಲ ಚಿತ್ರ 'ಹೀರೋಪಂತಿ' ಅದೇ ವರ್ಷ ಬಾಲಿವುಡ್‌ನಲ್ಲಿ ಬಿಡುಗಡೆಯಾಯಿತು,  ಟೈಗರ್ ಶ್ರಾಫ್ ಎದುರು ಕಾಣಿಸಿಕೊಂಡ ಕೃತಿ  ಈ ಚಿತ್ರಕ್ಕಾಗಿ  ಅತ್ಯುತ್ತಮ ಮಹಿಳಾ ಚೊಚ್ಚಲ ಚಿತ್ರಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು. ಇಂದು ಕೃತಿ ಬಾಲಿವುಡ್‌ನ ಟಾಪ್ ಲೀಡ್ ನಟಿಯರಲ್ಲಿ ಒಬ್ಬರು.

Koffee with Karan: ರೊಮ್ಯಾನ್ಸ್‌ ಬಗ್ಗೆ ಬಹಿರಂಗಪಡಿಸಿದ ಟೈಗರ್ ಶ್ರಾಫ್‌, ಕೃತಿ ಸನೋನ್‌

 

Kriti Sanon's then and now pictures convince fans she's got a nose job, netizens love the transformation. TOI openly ripping off from this sub and not even giving credit! I should pe paid lol
by u/Scary_Giraffe_4996 in BollyBlindsNGossip
Latest Videos
Follow Us:
Download App:
  • android
  • ios