Asianet Suvarna News Asianet Suvarna News

ಭಾರತೀಯ ಸಿನಿಮಾದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯೋ ಡೈರೆಕ್ಟರ್‌ ಇವ್ರೇ ನೋಡಿ

ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯೋ ನಿರ್ದೇಶಕ ಯಾರು ಅಂದ್ರೆ ಮೊದಲು ಬರೋ ಹೆಸರು ರಾಜಮೌಳಿ. ಆಮೇಲೆ ಒಂದಿಷ್ಟು ನಿರ್ದೇಶಕರ ಹೆಸರು ಮನಸ್ಸಿಗೆ ಬರುತ್ತೆ. ಆದರೆ ಅತೀ ಹೆಚ್ಚು ಸಂಭಾವನೆ ಪಡೆಯೋ ನಿರ್ದೇಶಕರು ಅವರ್ಯಾರೂ ಅಲ್ಲ. ಮತ್ಯಾರು?

 

who is the highest paid director of the bollywood?
Author
First Published Jun 8, 2023, 5:31 PM IST

ಭಾರತೀಯ ಸಿನಿಮಾ ರಂಗದಲ್ಲಿ (bollywood) ಹೀರೋಗಳ ಸಂಭಾವನೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಸಿನಿಮಾಗಳು ಹಿಟ್ ಆದರೆ ಸಂಭಾವನೆ ಗಗನಕ್ಕೇರುತ್ತದೆ. ಅದೇ ಫ್ಲಾಪ್ ಆದ್ರೆ ಅದು ನಿರ್ಮಾಪಕರಿಗೆ ಬಿಟ್ಟ ಸಂಗತಿ ಅಂತ ಸುಮ್ಮನಾಗೋ ನಟರಿಗೇನೂ ಕಡಿಮೆ ಇಲ್ಲ. ಆದರೆ ಈಗ ಚರ್ಚೆ ಅದಲ್ಲ. ಇಂಡಿಯನ್‌ ಸಿನಿಮಾ ಇಂಡಸ್ಟ್ರಿಯಲ್ಲಿ ಅತ್ಯಧಿಕ ಸಂಭಾವನೆ ಪಡೆಯೋ ನಿರ್ದೇಶಕ ಯಾರು ಅನ್ನೋದು. ಈ ಥರ ಮಾತು ಶುರುವಾದ್ರೆ ಸಾಕು ನಮ್ಮ ಮನಸ್ಸಿಗೆ ಮೊದಲು ಬರೋ ಹೆಸರೇ ರಾಜಮೌಳಿ(rajamouli). ಆರ್‌ಆರ್‌ಆರ್‌ (RRR) ಸಿನಿಮಾ ವಿಶ್ವಮಟ್ಟದಲ್ಲಿ ಹೆಸರು ಮಾಡಿದ್ದು, ಈ ಸಿನಿಮಾದ ನಾಟು ನಾಟು ಹಾಡಿಗೆ ಜಗತ್ತಿನ ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿ ಬಂದದ್ದು, ಇದಕ್ಕೂ ಮೊದಲಿಗೆ ಕೋಟಿ ಕೋಟಿ ಬಾಚಿದ್ದ ಎರಡು ಭಾಗಗಳಲ್ಲಿ ಬಂದ ಬಾಹುಬಲಿ. ಹೀಗೆ ರಾಜಮೌಳಿ ಅತ್ಯಧಿಕ ಸಂಭಾವನೆ ಪಡೆಯಲು ಯೋಗ್ಯರು ಅನ್ನೋದನ್ನು ಸಾಬೀತು ಮಾಡಲು ಸಾಕಷ್ಟು ಅಂಶಗಳಿವೆ. ಆದರೆ ವಾಸ್ತವದಲ್ಲಿ ಅವರು ಉತ್ತಮ ಸಂಭಾವನೆಯನ್ನೇ ಪಡೆಯುತ್ತಿದ್ದರೂ, ರಾಷ್ಟ್ರಮಟ್ಟದಲ್ಲಿ ಅತ್ಯಧಿಕ ಸಂಭಾವನೆಯನ್ನಂತೂ ಅವರು ಪಡೀತಿಲ್ಲ. 

ಕ್ಷಣದಲ್ಲಿ ನೆನಪಾಗೋ ಇನ್ನೊಬ್ಬ ಕ್ರಿಯೇಟಿವ್‌ ಸಕ್ಸಸ್‌ಫುಲ್ ನಿರ್ದೇಶಕ ಮಣಿರತ್ನಂ (maniratnam). ಸಿನಿಮಾವನ್ನು ಕಾವ್ಯದಂತೆ ಕಟ್ಟಿಕೊಡುವ ಅವರ ಶೈಲಿ ಬೆಲೆ ಕಟ್ಟಲಾಗದ್ದು. ಹಾಗಂತ ಅತೀ ಹೆಚ್ಚು ಸಂಭಾವನೆ ಪಡೆಯೋ ನಿರ್ದೇಶಕರಂತೂ ಇವರಲ್ಲ. ಸೋಲೇ ಕಾಣದ ನಿರ್ದೇಶಕ ಅಂತ ಫೇಮಸ್ ಆಗಿರೋ ರಾಜ್‌ ಕುಮಾರ್ ಹಿರಾನಿನೂ ಅಲ್ಲ. ಬನ್ಸಾಲಿಯಂತೂ ಅಲ್ಲವೇ ಅಲ್ಲ. ಮತ್ಯಾರು, ಬಾಲಿವುಡ್‌ನ ಹೆಸರಾಂತ ನಿರ್ದೇಶಕ ರೋಹಿತ್‌ ಶೆಟ್ಟಿನ ಅಂದರೆ ಅದಕ್ಕೂ ನೋ ಅಂತಲೇ ಉತ್ತರಿಸಬೇಕಾಗುತ್ತೆ. 

ಅತೀ ಹೆಚ್ಚು ಸಂಭಾವನೆ ಪಡೆಯುವ ಈ ನಿರ್ದೇಶಕ ವಯಸ್ಸಲ್ಲಿ ಇವರಿಗಿಂತ ಚಿಕ್ಕವ. ಕೇವಲ 44 ವರ್ಷ ವಯಸ್ಸಿನ ಭಾರತೀಯ ಚಿತ್ರರಂಗದ ದಿಗ್ಗಜರನ್ನೆಲ್ಲಾ ಹಿಂದಿಕ್ಕಿರೋ ಆ ನಿರ್ದೇಶಕ ಮತ್ಯಾರೂ ಅಲ್ಲ ಸಿದ್ಧಾರ್ಥ್ ಆನಂದ್ (Siddarth Anand). ಇತ್ತೀಚೆಗೆ ಬಾಲಿವುಡ್‌ನ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿದ್ದ 'ಪಠಾಣ್' (pathan) ಸಿನಿಮಾದ ನಿರ್ದೇಶಕ. ಶಾರುಖ್ ಖಾನ್‌ಗೆ ಮರುಜೀವ ಕೊಟ್ಟ ನಿರ್ದೇಶಕ. ಸಿದ್ಧಾರ್ಥ್ ಆನಂದ್ ತಮ್ಮ ಮುಂದಿನ ಸಿನಿಮಾ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. 

ಒಬ್ರು ಸೇಲಲ್ಲಿ ಬಟ್ಟೆ ಖರೀಸಿದ್ರೆ, ಇನ್ನೊಬ್ರು ಡಾಟಾ ಹಾಕಿಸಲ್ಲ, ಮತ್ತೊಬ್ರು... ಬಾಲಿವುಡ್​ನ 7 ಜಿಪುಣಾಗ್ರೇಸರು!

ಇದುವರೆಗೂ ಸಿದ್ಧಾರ್ಥ್ ಆನಂದ್ ಸುಮಾರು 7 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. 'ಸಲಾಂ ನಮಸ್ತೆ', 'ತ ರ ರಂ ಪಂ','ಬಚ್ನಾ ಏ ಹಸಿನೋ', ಅಂಜಾನಾ ಅಂಜಾನಿ, 'ಬ್ಯಾಂಗ್ ಬ್ಯಾಂಗ್', 'ವಾರ್' ಹಾಗೂ 'ಪಠಾಣ್'. ಇವುಗಳಲ್ಲಿ ಎರಡು ಸಿನಿಮಾಗಳು ಮೆಗಾ ಬ್ಲಾಕ್‌ಬಸ್ಟರ್ ಆಗಿದೆ. ಅದಕ್ಕೆ ನಿರ್ದೇಶಕನಿಗೆ ಬೇಡಿಕೆ ಹೆಚ್ಚಾಗಿದೆ. 'ಪಠಾಣ್' ಬಳಿಕ ಸಿದ್ಧಾರ್ಥ್ ಆನಂದ್ 'ಟೈಗರ್ Vs ಪಠಾಣ್' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ಬರೊಬ್ಬರಿ 40 ಕೋಟಿ ರೂ. ಸಂಭಾವನೆ ರೂಪದಲ್ಲಿ ಪಡೆಯುತ್ತಿದ್ದಾರೆ. ಇಲ್ಲಿವರೆಗೂ ಅತೀ ಹೆಚ್ಚು ಸಂಭಾವನೆ ಪಡೆದ ನಿರ್ದೇಶಕ ಎಂದು ವರದಿಯಾಗಿದೆ. ಈ ಮೂಲಕ ಬಾಲಿವುಡ್‌ನಲ್ಲಿ ಹೆಚ್ಚು ಸಂಭಾವನೆ ಪಡೆದಿದ್ದ 'ಬ್ರಹ್ಮಾಸ್ತ್ರ' ನಿರ್ದೇಶಕ ಆಯನ್ ಮುಖರ್ಜಿಯನ್ನು ಹಿಂದಿಕ್ಕಿದ್ದಾರೆ. 

ಸಿನಿಮಾ ಇಂಡಸ್ಟ್ರಿಯಲ್ಲಿ ಶಾರುಕ್‌ ಎರಾ ಮುಗಿದೇ ಹೋಯ್ತು ಅನ್ನೋ ಹೊತ್ತಿಗೆ ದೇವರಂತೆ ಬಂದು ಸ್ಟಾರ್‌ ನಟನನ್ನು ಮತ್ತೊಮ್ಮೆ ಸ್ಟಾರ್‌ ಲೆವೆಲ್‌ಗೆ ಏರಿಸಿದವರು ಸಿದ್ಧಾರ್ಥ್‌ ಆನಂದ್‌. ದಿಗ್ಗಜ ನಟನೊಬ್ಬನಿಗೆ ಮರುಜೀವ ಕೊಟ್ಟ ಈ ಕಿರಿಯ ನಿರ್ದೇಶಕ ಸದ್ಯಕ್ಕಂತೂ ಅತೀ ಹೆಚ್ಚು ಸಂಭಾವನೆ ಪಡೀತಿದ್ದಾರೆ. ಮುಂದಿನ ಕಥೆ ಏನು ಅಂತ ಗೊತ್ತಾಗಬೇಕಾದ್ರೆ ಅವರ ಮುಂದಿನ ಸಿನಿಮಾ ರಿಲೀಸ್ ಆಗ್ಬೇಕು. 

Follow Us:
Download App:
  • android
  • ios