ಬಾಲಿವುಡ್‌ ನ  ಖ್ಯಾತ ಗಾಯಕಿಯ ಬಾಯಿಂದ ಕೇಳಿಬಂತು ಸಂಭಾವನೆ ವಿಚಾರವಾಗಿ  ಹೊಸ ಆರೋಪ. ನಿರ್ಮಾಪಕರು ಮಾಡುತ್ತಿರುವುದು ಸರಿನಾ? 

ಬಾಲಿವುಡ್‌ ಸ್ಮೂತ್ ವಾಯ್ಸ್ ವಿತ್ ಹಂಬಲ್ ಕ್ಯಾರೆಕ್ಟರ್‌ ಅಂದ್ರೆ ಅದು ನೇಹಾ ಕಕ್ಕರ್.ಬಾಲಿವುಡ್ ನ ಅನೇಕ ಚಿತ್ರಗಳಲ್ಲಿ ಹಾಡಿರುವ ನೇಹಾ ಈಗ ಸಿಂಗಿಂಗ್ ರಿಯಾಲಿಟಿ ಶೋಗಳಲ್ಲಿ ಜಡ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್‌ ಸಿನಿಮಾಗಳಲ್ಲಿ ಹಾಡಿದರೆ ಹಣ ಕೊಡುವುದಿಲ್ವಾ? ಇದನ್ನು ಹೇಳಿರುವುದು ಸ್ವತಃ ಗಾಯಕಿ ನೆಹಾ ಕಕ್ಕರ್‌ . ಹೌದು! ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿರುವ ಗಾಯಕಿ ನೇಹಾ ಇದೇ ಮೊದಲ ಬಾರಿಗೆ ಸಂಭಾವನೆ ವಿಚಾರವನ್ನು ಮಾತನಾಡಿದ್ದಾರೆ. 

Valentines day ಸ್ಪೆಷಲ್; ನಿರೂಪಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಖ್ಯಾತ ಗಾಯಕಿ!

'ಗಾಯಕರು ರಿಯಾಲಿಟಿ ಶೋನಲ್ಲಿ ಹಣ ಮಾಡುತ್ತೇವೆ, ಲೈವ್ ಕಾನ್ಸರ್ಟ್‌ಗಳಲ್ಲಿ ಹಣ ಮಾಡುತ್ತೇವೆ ಆದರೆ ಸಿನಿಮಾಗಳಲ್ಲಿ ನಾವು ಹಾಡಿದ ಹಾಡಿಗೆ ಸಂಭಾವನೆ ಕೊಡುವುದಿಲ್ಲ' ಎಂದು ನೇಹಾ ಕೊಟ್ಟಿರುವ ಹೇಳಿಕೆ ಈಗ ಬಾಲಿವುಡ್‌ನಲ್ಲಿ ಟಾಕ್‌ ಆಫ್‌ ದಿ ಟೌನ್‌ ಆಗಿದೆ.

ವೇದಿಕೆಯಲ್ಲೇ ತೀರ್ಪುಗಾರ್ತಿಗೆ ಮುತ್ತಿಟ್ಟ ಸ್ಪರ್ಧಿ, ಕಣ್ಣೀರಿಟ್ಟ ಗಾಯಕಿ

ಗಾಯಕರು ಹಾಡಿದ ಹಾಡು ಹಿಟ್‌ ಆದರೆ ಕಾನ್ಸರ್ಟ್‌ಗಳಲ್ಲಿ ಹಾಡಿ ಹಣ ಸಂಪಾದಿಸಬೇಕು ಹೊರತು ನಿರ್ಮಾಪಕರು ಹಣ ನೀಡುವುದಿಲ್ಲವಂತೆ ಅಷ್ಟೇ ಏಕೆ ಹಿಟ್‌ ಆಗದಿದ್ದರೆ ನಮ್ಮ ಕಡೆ ತಿರುಗಿಯೂ ನೋಡುವುದಿಲ್ಲ ಎಂದಿದ್ದಾರೆ. ಕೋಟಿ ಕೋಟಿ ಸಂಪಾದಿಸುತ್ತಿರುವ ನಿರ್ಮಾಪಕರು ಹೀಗೆ ಮಾಡುತ್ತಿರುವುದು ತಪ್ಪು ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.