ಸೋನಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ರಿಯಾಲಿಟಿ ಶೋ 'Indian Idol 11' ನಿರೂಪಕ ಆದಿತ್ಯ ನಾರಾಯಣ್ ಹಾಗೂ ಕಾರ್ಯಕ್ರಮ ತೀರ್ಪುಗಾರ್ತಿ ನೆಹಾ ಕಕ್ಕರ್‌ ನಡುವೆ ಕುಚ್ ಕುಚ್ ಲವ್ ಸ್ಟೋರಿ ಕೇಳಿ ಬರುತ್ತಿತ್ತು. ಇದರ ಬಗ್ಗೆ ಎಲ್ಲಿಯೋ ಸ್ಪಷ್ಟನೆ ನೀಡದ ಜೋಡಿ ಸಂದರ್ಶನವೊಂದರಲ್ಲಿ ಮದುವೆ ವಿಚಾರವನ್ನು ರಿವೀಲ್‌ ಮಾಡಿದ್ದಾರೆ.

ರಿಯಾಲಿಟಿ ಶೋನಲ್ಲಿ ಜಡ್ಜ್‌ಗೇ ಚುಂಬಿಸಿದ ಸ್ಪರ್ಧಿ, ಅತ್ತ ಗಾಯಕಿ!

ಈ ವಿಚಾರದ ಬಗ್ಗೆ ಸೋನಿ ವಾಹಿನಿ ಟ್ಟೀಟ್‌ ಮೂಲಕ ಖಚಿತ ಪಡಿಸಿದೆ. '14th Feb - ದಿನಾಂಕ ಸೇವ್‌ ಮಾಡಿಕೊಳ್ಳಿ #NehaAditya ಮದುವೆ ಆಗುತ್ತಿದ್ದಾರೆ. ' ಎಂದಿದೆ. ನೇಹಾಗೆ ವಿಭಿನ್ನವಾಗಿ ಪ್ರಪೋಸ್‌ ಮಾಡಿದ ಆದಿತ್ಯ, ಅವರ ಕುಟುಂಬದವರನ್ನೂ ಮೆಚ್ಚಿಸಿದ್ದಾರೆ. 

ಕೆಲ ದಿನಗಳ ಹಿಂದೆ ಕಾರ್ಯಕ್ರಮದಲ್ಲಿ ಆದಿತ್ಯ ಪೋಷಕರೂ ಪಾಲ್ಗೊಂಡಿದ್ದರು. ಈ ವೇಳೆ ಉದಿತ್ ನಾರಾಯಣ್‌ 'ನೇಹಾ ನನ್ನ ಸೊಸೆ' ಎಂದು ಹೇಳಿದಾಗ ನೇಹಾ ವೇದಿಕೆಯ ಮೇಲೆಯೇ ಗಾಯಕಿ ನಾಚಿ ನೀರಾಗಿದ್ದಳು.

ಯೂಟ್ಯೂಬ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ ಈ ಹಾಟ್ ವಿಡಿಯೋ!

ಆದಿತ್ಯ ಹಾಗೂ ನೇಹಾ ಕಾಂಬಿನೇಷನ್‌ ಸೋಷಿಯಲ್‌ ಮೀಡಿಯಾ ಗಮನ ಸೆಳೆದಿದೆ. ಅದರಲ್ಲೂ ಸ್ಪರ್ಧಿಗಳು ಮನ ಮುಟ್ಟುವಂತೆ ಹಾಡಿದಾಗ, ನೇಹಾ ಭಾವುಕರಾಗುತ್ತಾರೆ. ಅಗ ಆದಿತ್ಯ ಸಮಾಧಾನ ಪಡಿಸುತ್ತಾರೆ.