ಈ ರಿಯಾಲಿಟಿ ಶೋಗಳು ಒಂದೊಂದು ಸಂದರ್ಭದಲ್ಲಿ ಕಾರ್ಯಕ್ರಮದ ನಿರೂಪಕರು ಮತ್ತು ತೀರ್ಪುಗಾರರಿಗೆ ಸಂಕಷ್ಟ ತಂದಿಟ್ಟುಬಿಡುತ್ತವೆ. ಒಂದು ಇಂಥದ್ದೆ ಎಡವಟ್ಟು  ಇಂಡಿಯನ್ ಐಡಲ್ 11ರ ಆಡಿಶನ್ ವೇಳೆ ನಡೆದಿದೆ.

ತೀರ್ಪುಗಾರ್ತಿ ನೇಹಾ ಕಕ್ಕರ್ ಗೆ ಸ್ಪರ್ಧಿಯೊಬ್ಬ ಬಲವಂತವಾಗಿ ಕಿಸ್ ಮಾಡಿದ್ದಾನೆ. ಇದಾದ ಮೇಲೆ ನೇಹಾ ಕಕ್ಕರ್ ವೇದಿಕೆಯಲ್ಲೇ ಕಣ್ಣೀರಿಟ್ಟಿರುವ ವಿಡಿಯೋ ಸಹ ವೈರಲ್ ಆಗಿದೆ. ಆದರೆ ಕಿಸ್ ಗೂ ನೇಹಾ ಕಣ್ಣೀರು ಇಟ್ಟಿರುವುದಕ್ಕೂ ಸಂಬಂಧವೇ ಇಲ್ಲ.

ಇಂಡಿಯನ್ ಐಡಲ್ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಗಾಯಕಿ ನೇಹಾ ಕಕ್ಕರ್ ತೀರ್ಪುಗಾರ್ತಿಯಾಗಿದ್ದಾರೆ. ಉತ್ತಮವಾಗಿ ಹಾಡಿದ್ದ ಸ್ಪರ್ಧಿಯೊಬ್ಬನನ್ನು ಅಭಿನಂದಿಸಲು ವೇದಿಕೆ ಮೇಲೆ ಬಂದ ನೇಹಾಗೆ ಮತ್ತು ಇಡೀ ವೀಕ್ಷಕರಿಗೆ ಸ್ಪರ್ಧಿ ಶಾಕ್ ನೀಡಿದ್ದಾನೆ.

ನೇಹಾರಿಗೆ ಸ್ಪರ್ಧಿ ಉಡುಗೊರೆಯೊಂದನ್ನು ತಂದಿದ್ದ.  ಅದನ್ನು ನೇಹಾರಿಗೆ ನೀಡಿದಾಗ ನೇಹಾ ಅಭಿನಂದನೆ ರೀತಿ ಒಂದು ಅಪ್ಪುಗೆ ನೀಡಿದ್ದಾರೆ. ಇದೇ ಕ್ಷಣದಲ್ಲಿ ಏನಾಯಿತೋ ಏನೋ ಸ್ಪರ್ಧಿ ನೇಹಾರ ಕೆನ್ನೆಗೆ ಒಂದು ಮುತ್ತು ನೀಡಿದ್ದಾರೆ.

ಇದೇ ಕಾರ್ಯಕ್ರಮದ ಮತ್ತೊಬ್ಬ ಸ್ಪರ್ಧಿ ಹಾಡಿಗೆ ನೇಹಾ ಎಮೋಶನಲ್ ಆಗಿದ್ದಾರೆ. ನೇಹಾ ಕಣ್ಣೀರು ಹಾಕುತ್ತಿರುವ ವಿಡಿಯೋ ಫುಲ್ ವೈರಲ್ ಆಗುತ್ತಲೇ ಇದೆ.