ಬಾಲಿವುಡ್‌ನಲ್ಲಿ ಅರ್ಜುನ್ ರೆಡ್ಡಿ ಎಂದೇ ಫೇಮಸ್ ಶಾಹಿದ್‌ ಕಪೂರ್. 35ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಶಾಹಿದ್‌ಗೆ ವೃತ್ತಿ ಜೀವನದಲ್ಲಿ ಎಂದೂ ಮರೆಯಲಾಗದ ಕಹಿ ಘಟನೆಯೊಂದು ನಡೆದಿದೆ. 

ಕೆಲವು ದಿನಗಳ ಹಿಂದೆ ಮುಂಬೈನಲ್ಲಿ 'ಜರ್ಸಿ' ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಕ್ರಿಕೆಟ್‌ ಸನ್ನಿವೇಶ ಚಿತ್ರೀಕರಿಸುವಾಗ ವೇಗವಾಗಿ ಬಂದ ಬಾಲ್ ಮುಖಕ್ಕೆ ತಾಗಿದೆ. ತುಟಿಗೆ ಬಿದ್ದ ಚೆಂಡಿನ ರಭಸಕ್ಕೆ ಬಾಯಿಯಿಂದ ರಕ್ತ ಸುರಿದಿತ್ತು. ಶಾಹೀದ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಶಾಹಿದ್ ಕಪೂರ್ ಪತ್ನಿ ಮೀರಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. 'ಶಾಹಿದ್ ದೊಡ್ಡ ತೊಂದರೆಯಿಂದ ಪಾರಾಗಿದ್ದಾರೆ. ಹಲ್ಲಿಗೆ ಯಾವ ತೊಂದರೆಯೂ ಆಗಿಲ್ಲ. 13 ಹೊಲಿಗೆ ಹಾಕಿದ್ದಾರೆ' ಎಂದು ವೈದ್ಯರು ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.

ರಣವೀರ್ ಸಿಂಗ್‌ಗೇನಾಗಿದೆ? ವೇದಿಕೆ ಮೇಲೆ ನಟನಿಗೆ ಕಿಸ್‌ ಕೊಟ್ಟ ಗಲ್ಲಿಬಾಯ್!

ಚಿಕಿತ್ಸೆ ನಡೆದು, ಕೆಲವೇ ಗಂಟೆಗಳಲ್ಲಿ ಶಾಹಿದ್‌ ತಮ್ಮ ನಿವಾಸಕ್ಕೆ ಹಿಂದಿರುಗಿದ್ದಾರೆ. ಯಾರಿಗೂ ತಿಳಿಯದಂತೆ ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಪತ್ನಿ ಮೀರಾ ಜೊತೆ ಏರ್‌ಪೂರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಜರ್ಸಿ ಚಿತ್ರವು ತಲಗುವಿನ ರಿಮೇಕ್‌ ಚಿತ್ರವಾಗಿದ್ದು, ಶಾಹಿದ್‌ ಕ್ರಿಕೆಟರ್ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

ಬಾಲಿವುಡ್ ಚಾಕಲೇಟ್ ಬಾಯ್ ಜೊತೆ ರಶ್ಮಿಕಾ ಮಂದಣ್ಣ?