ಬಾಲಿವುಡ್ ಗಲ್ಲಿ ಬಾಯ್ ರಣವೀರ್ ಸಿಂಗ್ ಹಾಗೂ ಚಾಕಲೇಟ್ ಬಾಯ್ ಶಾಹಿದ್ ಕಪೂರ್ ನಡುವೆ ಕೋಲ್ಡ್ ವಾರ್ ನಡಿತಾ ಇದೆ ಎನ್ನಲಾಗುತ್ತಿತ್ತು. ಇದಕ್ಕೆ ರಣವೀರ್ ಕೊಟ್ಟ ಉತ್ತರ ತುಸು ಡಿಫರೆಂಟ್. 

ಸ್ಟಾರ್ ಸ್ಕ್ರೀನ್ ಅವಾರ್ಡ್ಸ್ 2019 ಸಮಾರಂಭದ ವೇದಿಕೆಯಲ್ಲಿ  ರಣವೀರ್- ಶಾಹಿದ್ ಮುಖಾಮುಖಿಯಾದರು.  ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಎಲ್ಲರೂ ಕೈ ಕುಲುಕಿದರೆ ರಣವೀರ್ ತುಸು ಡಿಫರೆಂಟ್. ವೇದಿಕೆ ಮೇಲೆ ಶಾಹಿದ್‌ಗೆ ಕಿಸ್ ಕೊಟ್ಟೇ ಬಿಟ್ಟರು. 

 

 
 
 
 
 
 
 
 
 
 
 
 
 

Kabeer Singh and Simba 🤪😋

A post shared by Viral Bhayani (@viralbhayani) on Dec 8, 2019 at 1:22pm PST

 

ಸಂಜಯ್ ಲೀಲಾ ಬನ್ಸಾಲಿಯವರ 'ಪದ್ಮಾವತ್'ಸಿನಿಮಾದಲ್ಲಿ ಇವರಿಬ್ಬರೂ ಅಲ್ಲಾವುದ್ದೀನ್ ಖಿಲ್ಜಿ, ಹಾಗೂ ಮಹಾರಾವಲ್ ರತನ್ ಸಿಂಗ್ ಪಾತ್ರ ಮಾಡಿದ ಬಳಿಕ  ಇಬ್ಬರ ನಡುವೆ ಅಷ್ಟಕ್ಕಷ್ಟೇ  ಎನ್ನಲಾಗಿತ್ತು. 

ಇದ್ದಕ್ಕಿದ್ದಂತೆ ಪತ್ನಿಗೆ 'ನನ್ನನ್ನು ಕೊಂದು ಬಿಡು' ಎಂದ ರಣವೀರ್!

ನಮ್ಮಿಬ್ಬರ ನಡುವೆ ಕೋಲ್ಡ್ ವಾರ್ ಇಲ್ಲ ಎಂದು ಇಬ್ಬರೂ ಬೇರೆ ಬೇರೆ ವೇದಿಕೆಗಳಲ್ಲಿ ಸಮಜಾಯಿಷಿ ನೀಡಿದ್ದರು. ಒಟ್ಟಿಗೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ ಎಂದು ಒಬ್ಬರನ್ನೊಬ್ಬರು ಬಿಟ್ಟು ಕೊಡುತ್ತಿರಲಿಲ್ಲ. 

ಸದ್ಯ ರಣವೀರ್ ಸಿಂಗ್ ಕಪಿಲ್ ದೇವ್ ಜೀವನಾಧಾರಿತ '83' ಯಲ್ಲಿ ಬ್ಯುಸಿಯಾಗಿದ್ದರೆ, ಶಾಹಿದ್ ಕಪೂರ್ 'ಜೆರ್ಸಿ'ಯಲ್ಲಿ ಬ್ಯುಸಿಯಾಗಿದ್ದಾರೆ.