ಸ್ಯಾಂಡಲ್ ವುಡ್ ಕ್ರಶ್ ರಶ್ಮಿಕಾ ಮಂದಣ್ಣ ಸ್ಯಾಂಡವುಡ್ ಆಯ್ತು, ಟಾಲಿವುಡ್ ಆಯ್ತು ಈಗ ಬಾಲಿವುಡ್ ನಲ್ಲಿ ಹವಾ ಎಬ್ಬಿಸಲು ಹೊರಟಿದ್ದಾರೆ ರಶ್ಮಿಕಾ ಮಂದಣ್ಣ.  ಬಾಲಿವುಡ್ ಚಾಕಲೇಟ್ ಬಾಯ್ ಶಾಹಿದ್ ಕಪೂರ್ ಜೊತೆ ರಶ್ಮಿಕಾ ನಟಿಸುತ್ತಾರೆ ಎನ್ನುವ ಮಾತು ಕೇಳಿ ಬಂದಿದೆ. 

ಇನ್ನೆರಡು ವರ್ಷ ರಶ್ಮಿಕಾ ಬೇಡ; ದೇವರಕೊಂಡ ನಿರ್ಧಾರ! ರಶ್ಮಿಕಾ ಉತ್ತರ ಶಾಕಿಂಗ್

ತೆಲುಗಿನಲ್ಲಿ ನಾನು ನಟಿಸಿದ ‘ಜೆರ್ಸಿ’ ಸಿನಿಮಾದ ರಿಮೇಕ್ ನಲ್ಲಿ ರಶ್ಮಿಕಾ- ಶಾಹಿದ್ ಕಪೂರ್ ನಟಿಸುತ್ತಾರೆ ಎಂಬ ಮಾತು ಕೇಳಿ ಬಂದಿದೆ. ಆದರೆ ಇದಿನ್ನೂ ಅಧಿಕೃತವಾಗಿಲ್ಲ. ಶಾಹೀದ್ ನಾಯಕನಾಗಿ ನಟಿಸುವುದು ಪಕ್ಕಾ ಆಗಿದೆ. ಆದರೆ ನಾಯಕಿ ಇನ್ನೂ ಪಕ್ಕಾ ಆಗಿಲ್ಲ. ಚಿತ್ರತಂಡ ರಶ್ಮಿಕಾರನ್ನು ಅಪ್ರೋಚ್ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. 

ಕನ್ನಡಿಗರ ಬಗ್ಗೆ ಒಂದೇ ಪದದಲ್ಲಿ ವರ್ಣಿಸಿ; ರಶ್ಮಿಕಾ ಉತ್ತರಕ್ಕೆ ಫ್ಯಾನ್ಸ್ ಬೋಲ್ಡ್!

ರಶ್ಮಿಕಾ ಮಂದಣ್ಣ ಒಪ್ಪಿದರೆ ಬಾಲಿವುಡ್ ಮೊದಲ ಸಿನಿಮಾ ಇದಾಗಲಿದೆ. ರಶ್ಮಿಕಾ ಈಗಾಗಲೇ ಜೆರ್ಸಿ ಸಿನಿಮಾವನ್ನು ನೋಡಿದ್ದಾರೆ. ಹಿಂದಿ ರಿಮೇಕ್ ಸಿನಿಮಾದಲ್ಲಿ ನಟಿಸುವ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ. 

ಈಗಾಗಲೇ ತೆಲುಗಿನಲ್ಲಿ ವಿಜಯ್ ದೇವರಕೊಂಡ ಜೊತೆ ಗೀತಾ ಗೋವಿಂದಂ, ಡಿಯರ್ ಕಾಮ್ರೆಡ್ ಸಿನಿಮಾಗಳಲ್ಲಿ ಭಾರೀ ಹೆಸರು ಮಾಡಿದ್ದಾರೆ. 

ಸೆ.04ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ