Asianet Suvarna News Asianet Suvarna News

ಹಲ್ಲೆ: ನಟಿ Poonam Pandey ಆಸ್ಪತ್ರೆಗೆ ದಾಖಲು, ಪತಿ ಬಂಧನ

ಪತ್ನಿ ಮೇಲೆ ಹಲ್ಲೆ ಮಾಡಿದ ಸ್ಯಾಮ್ ಬಾಂಬೆ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 

Bollywood Poonam Pandey husband Sam Bombay arrested vcs
Author
Bangalore, First Published Nov 9, 2021, 1:04 PM IST

ಬಾಲಿವುಡ್ (Bollywood) ಮಾದಕ ನಟಿ, ಸೆನ್ಸೇಷನ್‌ ಕ್ರಿಯೇಟರ್ ಪೂನಂ ಪಾಂಡೆ (Poonam Pandey) ವೈವಾಹಿಕ ಜೀವನಕ್ಕೆ ಕಾಲಿಟ್ಟ ದಿನದಿಂದಲೂ ಸಣ್ಣ ಪುಟ್ಟ ಕಾರಣಕ್ಕೆ ಜಗಳವಾಡುತ್ತಾರೆ. ಪೊಲೀಸರಿಗೆ ದೂರು ನೀಡಿ, ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ (Breaking news) ಆಗುವವರೆಗೂ ಇವರಿಬ್ಬರು ಜಗಳ ನಿಲ್ಲಿಸುವುದಿಲ್ಲ. ಈ ಹಿಂದೆಯೂ ಇಬ್ಬರು ಕಿತ್ತಾಡಿಕೊಂಡಿದ್ದರು. ಮಧ್ಯದಲ್ಲಿ ಸುಮ್ಮನಾಗಿದ್ದಾರೆ ಎಂದು ಕೊಂಡರೆ, ಮತ್ತೆ ಗಂಡ ಹೆಂಡಿರ ಜಗಳ ಬೀದಿಗೆ ಬಂದಿದೆ. 

ಬ್ಲೂಫಿಲಂ ಕೂಪಕ್ಕೆ ತಳ್ಳಿದ್ದು ಕುಂದ್ರಾ: ಪೂನಂ, ಶೆರ್ಲಿನ್‌ ಆರೋಪ!

ಪತಿ ಸ್ಯಾಮ್ ಬಾಂಬೆ (Sam Bombay) ಹಲ್ಲೆ, ಲೈಂಗಿಕ ದೌರ್ಜನ್ಯ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು, ಪೂನಂ ಮುಂಬೈ ಠಾಣೆಯಲ್ಲಿ (Mumbai Police Station) ದಾಖಲಿಸಿದ್ದಾರೆ. ನವೆಂಬರ್ 8ರಂದು ಬೆಳಗ್ಗೆ ದೂರು ದಾಖಲು ಮಾಡಲಾಗಿತ್ತು ಸಂಜೆಯೊಳಗೆ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.  ದೂರು ದಾಖಲಿಸಿದ ನಂತರ ಪೂನಂ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Bollywood Poonam Pandey husband Sam Bombay arrested vcs

ಕಳೆದ ವರ್ಷ ಇಬ್ಬರೂ ಗೋವಾಗೆಂದು (Goa) ಜಾಲಿ ಟ್ರಿಪ್‌ಗೆ ಹೋಗಿದ್ದರು ಅಲ್ಲಿ ಅವರಿಬ್ಬರು ಜಗಳವಾಡಿದ್ದು, ದೊಡ್ಡ ಸುದ್ದಿಯಾಗಿತ್ತು. ಸೌತ್ ಗೋವಾದಲ್ಲಿರುವ ಕ್ಯಾನ್‌ಕೋಣ (Canacona) ಹಳ್ಳಿಯಲ್ಲಿ ಇಬ್ಬರು ಸಣ್ಣ ವಿಡಿಯೋಗಳ ಚಿತ್ರೀಕರಣ ಮಾಡುತ್ತಿದ್ದರು. ಈ ವೇಲೆ ಇಬ್ಬರ ನಡುವೆ ಮನಸ್ಥಾಪವಾಗಿ ಜಗಳವಾಡಿದ್ದಾರೆ. ಆಗ ಗೋವಾದಲ್ಲಿ ಸೆಕ್ಷನ್ 353 (causing hurt), 356 (insult), 506 (Criminal intimidation) ಹಾಗೂ  354 (outraging modesty) ಪ್ರಕರಣಗಳನ್ನು ಹಾಕಿದ್ದರು. ಆಗಲೂ ಸ್ಯಾಮ್‌ ಅವರನ್ನು ಬಂಧಿಸಲಾಗಿತ್ತು, ಪೂನಂ ಪಾಂಡೆ ದೂರು ಹಿಂಪಡೆದ ಕಾರಣ ನ್ಯಾಯಾಲಯವು ಷರತ್ತುವದ್ಧ ಜಾಮೀನು ನೀಡಿ, ಸ್ಯಾಮ್‌ರನ್ನು ಬಿಡುಗಡೆ ಮಾಡಿದ್ದರು. ಆದರೆ ಈ ಸಲ ಯಾವ ಕಾರಣಕ್ಕೂ ಸ್ಯಾಮ್‌ಗೆ ಸಹಾಯ ಮಾಡುವುದಿಲ್ಲ. ಆತ ನರಳಲಿ ಎಂದಿದ್ದಾರಂತೆ ನಟಿ.

ಪೂನಂ ಪಾಂಡೆ ಪ್ರೆಗ್ನೆಂಟಾ? ಏನು ಹೇಳಿದ್ದಾರೆ ನಟಿ ಗೊತ್ತಾ!

ಅಶ್ಲೀಲ ವಿಡಿಯೋ ಚಿತ್ರೀಕರಣ ವಿಚಾರಕ್ಕೆ ರಾಜ್‌ ಕುಂದ್ರಾರನ್ನು (Raj Kundra) ಬಂಧಿಸಿದ್ದರು. ಆಗ ಶಿಲ್ಪಾ ಶೆಟ್ಟಿ (Shilpa Shetty) ಪರ ಇಡೀ ಚಿತ್ರರಂಗ ನಿಂತರೂ, ಪೂನಂ ಪಾಂಡೆ  ವಿರೋಧಿಸಿದ್ದರು.  'ನನ್ನನ್ನು ನೀಲಿ ಚಿತ್ರಗಳ (Blue film) ಲೋಕಕ್ಕೆ ತಳ್ಳದ್ದೇ ರಾಜ್‌ ಕುಂದ್ರಾ. ರಾಜ್‌ ನನ್ನ ಖಾಸಗಿ ಮೊಬೈಲ್ ನಂಬರ್ (Mobile number) ಲೀಕ್ ಮಾಡಿದ್ದ. ನಾನು ಅವರ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ತಪ್ಪು ಮಾಡಿದೆ. ಅವರ ವೃತ್ತಿಪರರಲ್ಲ. ಅವರು ಮೋಸಗಾರರು. ಸ್ವತಃ ರಾಜ್‌ ಕುಂದ್ರಾ ಬಹಳ ದೊಡ್ಡ ಮೋಸಗಾರ, ' ಎಂದು ಆರೋಪ ಮಾಡಿದ್ದರು.

ಹಾಟ್‌ ಲುಕ್‌ನಲ್ಲಿ ಮಿಂಚಿದ ಪೂನಂ..! ಬಿಕಿನಿ ಫೋಟೋ ಶೂಟ್ ವೈರಲ್

ಪೂನಂ ಮತ್ತು ಪತಿ ಸ್ಯಾಮ ಆಗಾಗ ಜಗಳವಾಡಲು ಕಾರಣ ಏನು ಈಗ ಅವರಿಬ್ಬರ ಸಂಬಂಧ ಹೇಗಿದೆ ಎಂದು ಡಿಜಿಟಲ್ ಮಾಧ್ಯಮವೊಂದು ಪ್ರಶ್ನೆ ಮಾಡಿತ್ತು.  'ನಮ್ಮ ನಡುವೆ ಈಗ ಎಲ್ಲವೂ ಸರಿ ಇದೆ. ನನ್ನ ವೈವಾಹಿಕ (Married Life) ಜೀವನವನ್ನು ನಾನು ಸೇವ್ ಮಾಡಿದ್ದೀನಿ.  ಒಬ್ಬರನ್ನು ನೀವು ತುಂಬಾ ಇಷ್ಟ ಪಟ್ಟರೆ, ಅವರನ್ನು ದೂರ ಮಾಡಲು ಕಷ್ಟವಾಗುತ್ತದೆ. ನನಗೆ ಗೊತ್ತು, ಮದುವೆಯಲ್ಲಿ ಸಮಸ್ಯೆಗಳು ಬರುತ್ತೆ ಅಂತ. ಆದರೂ ಒಂದು ಅವಕಾಶ ಕೊಡಬೇಕು,' ಎಂದಿದ್ದರು.

ಖಾಸಗಿ ಆ್ಯಪ್ ಹೊಂದಿರುವ ಪೂನಂ ಈಗ ಯುಟ್ಯೂಬ್ ಚಾನೆಲ್ (Youtube Channel) ತೆರೆಯಲು ನಿರ್ಧಾರಿಸಿದ್ದಾರೆ. ಹಣ ಕೊಟ್ಟು ಮೆಂಬರ್ ಆಗುವುದು ಕಷ್ಟ ಮೇಡಂ, ಬೇರೆ ಸೈಟ್‌ಗೆ ಬನ್ನಿ ಎಂದು ನೆಟ್ಟಿಗರು ಒತ್ತಾಯ ಮಾಡುತ್ತಿದ್ದಾರೆ. ಬರುವುದಾಗಿ ಖಚಿತ ಪಡಿಸಿದ  ಪೂನಂ, ಕೊನೆಯಲ್ಲಿ ಒಂದು ಟ್ವಿಸ್ಟ್‌ ನೀಡಿದ್ದಾರೆ. ಹೌದು! ಯುಟ್ಯೂಬ್ ಚಾನೆಲ್‌ನಲ್ಲಿ ಪೂನಂ ಅಡುಗೆ ವಿಡಿಯೋಗಳನ್ನು (Cooking video) ಹಂಚಿಕೊಳ್ಳುತ್ತಾರಂತೆ. ತಮ್ಮ ಪತಿ ಚೆಫ್ ಆಗಿರುವ ಕಾರಣ ಅವರಿಂದ ಕಲಿತಿರುವ ರೆಸಿಪಿಗಳನ್ನು ಫಾಲೋವರ್ಸ್‌ಗೆ ಹೇಳಿಕೊಡುತ್ತಾರಂತೆ. ಆದರೆ, ಇದೀಗ ಇವರಿಬ್ಬ ಸಂಬಂಧದಲ್ಲಿ ಬಿರುಕು ಬಿಟ್ಟಂತೆ ಕಾಣುತ್ತಿದ್ದು, ಇನ್ನೇನು ಮಾಡುತ್ತಾರೋ ಎಂಬ ಕುತೂಹಲ ಪೂನಮ್ ಅಭಿಮಾನಿಗಳಿಗೆ.

Follow Us:
Download App:
  • android
  • ios