ವಾಸ್ತವವಾಗಿ ಜುಲೈ 24ರಂದು ಈ ಸಿನಿಮಾದ ಟ್ರೇಲರ್ ಬರಬೇಕಿತ್ತು. ಆದರೆ ಅದರ ಹಿಂದೆ ಒಂದು ಬಲವಾದ ಕಾರಣವಿದೆ. ಜಾಗತಿಕ ಮಟ್ಟದ ಪ್ರೇಕ್ಷಕರನ್ನು ಸೆಳೆಯಲು ಸೋನಿ ಪಿಕ್ಚರ್ಸ್ ಜೊತೆಗೂಡಿರುವ ಚಿತ್ರತಂಡ, ಹಾಲಿವುಡ್ ಸಿನಿಮಾಗಳ ರೇಂಜ್‌ನಲ್ಲಿ ಈ ಪ್ರಾಜೆಕ್ಟ್ ಅನ್ನು ಲಾಂಚ್ ಮಾಡಲು ಪ್ಲ್ಯಾನ್ ಮಾಡಿದೆ.

ಬರೀ ಪ್ರಚಾರಕ್ಕೇ ಇಷ್ಟೊಂದು ಕೋಟಿ!? ಯಶ್ 'ರಾಮಾಯಣ' ತಂಡದಿಂದ ಭರ್ಜರಿ ಪ್ಲ್ಯಾನ್: ಭಾರತೀಯ ಸಿನಿಮಾದ ಇತಿಹಾಸದಲ್ಲೇ ಇದು ಮೊದಲು!

ಈಗ ಕಾಲ ಬದಲಾಗಿದೆ. ಭಾರತೀಯ ಸಿನಿಮಾಗಳು ಕೇವಲ ಗಲ್ಲಿಯಿಂದ ದಿಲ್ಲಿಗೆ ಮಾತ್ರವಲ್ಲ, ದಿಲ್ಲಿಯಿಂದ ಲಾಸ್ ಏಂಜಲೀಸ್‌ವರೆಗೂ ಅಬ್ಬರಿಸುತ್ತಿವೆ. ಅದಕ್ಕೆ ತಾಜಾ ಉದಾಹರಣೆ ಅಂದ್ರೆ ನಿರ್ದೇಶಕ ನಿತೇಶ್ ತಿವಾರಿ ಕನಸಿನ ಕೂಸು 'ರಾಮಾಯಣ'. ಈ ಸಿನಿಮಾದ ಬಗ್ಗೆ ಕೇಳಿಬರುತ್ತಿರುವ ಒಂದೊಂದು ಸುದ್ದಿಯೂ ಚಿತ್ರಪ್ರೇಮಿಗಳ ಹುಬ್ಬೇರಿಸುವಂತೆ ಮಾಡುತ್ತಿದೆ. ಈಗಂತೂ ಈ ರಾಮಾಯಣ (Ramayana) ಸಿನಿಮಾ ಮಾಡಿರುವ 'ಪ್ರಚಾರದ ಬಜೆಟ್' ಪ್ಲ್ಯಾನ್ ಕೇಳಿದ್ರೆ ಯಾರಾದ್ರೂ ದಂಗಾಗೋದು ಗ್ಯಾರಂಟಿ!

ಬಜೆಟ್ ಕೇಳಿದ್ರೆ ತಲೆ ಸುತ್ತೋದು ಪಕ್ಕಾ!

ಸಾಮಾನ್ಯವಾಗಿ ಒಂದು ದೊಡ್ಡ ಮಟ್ಟದ ಸಿನಿಮಾದ ಒಟ್ಟು ಬಜೆಟ್ 100 ಅಥವಾ 200 ಕೋಟಿ ಇರುತ್ತದೆ. ಆದರೆ, ನಮ್ಮ 'ರಾಕಿಂಗ್ ಸ್ಟಾರ್' ಯಶ್ (Yash) ಮತ್ತು ನಮಿತ್ ಮಲ್ಹೋತ್ರಾ (Namith Malhotra) ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಈ 'ರಾಮಾಯಣ' ಸಿನಿಮಾದ ಕೇವಲ ಪ್ರಚಾರಕ್ಕಾಗಿ (Promotions) ಖರ್ಚು ಮಾಡುತ್ತಿರುವ ಹಣ ಎಷ್ಟು ಗೊತ್ತಾ? ಅಕ್ಷರಶಃ 375 ಕೋಟಿ ರೂಪಾಯಿಗಳು!

ಹೌದು, ಒಂದು ಬೃಹತ್ ಸಿನಿಮಾವನ್ನೇ ನಿರ್ಮಾಣ ಮಾಡಬಹುದಾದ ಮೊತ್ತವನ್ನು ಚಿತ್ರತಂಡ ಕೇವಲ ಜನರಿಗೆ ಸಿನಿಮಾ ತಲುಪಿಸಲು ಮೀಸಲಿಟ್ಟಿದೆ. ಇದರಲ್ಲಿ ಭಾರತೀಯ ಮಾರುಕಟ್ಟೆಗೆ 140 ಕೋಟಿ ಹಾಗೂ ವಿದೇಶಿ ಮಾರುಕಟ್ಟೆಗಾಗಿ ಸೋನಿ ಪಿಕ್ಚರ್ಸ್ ಸಹಯೋಗದೊಂದಿಗೆ 235 ಕೋಟಿ ರೂಪಾಯಿಗಳನ್ನು ಸುರಿಯಲಾಗುತ್ತಿದೆ. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ!

ಟ್ರೇಲರ್ ಮುಂದೂಡಿಕೆಯ ಹಿಂದಿದೆ ಅಂತರರಾಷ್ಟ್ರೀಯ 'ಗೇಮ್ ಪ್ಲ್ಯಾನ್'

ವಾಸ್ತವವಾಗಿ ಜುಲೈ 24ರಂದು ಈ ಸಿನಿಮಾದ ಟ್ರೇಲರ್ ಬರಬೇಕಿತ್ತು. ಆದರೆ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆಯಾದರೂ, ಅದರ ಹಿಂದೆ ಒಂದು ಬಲವಾದ ಕಾರಣವಿದೆ. ಜಾಗತಿಕ ಮಟ್ಟದ ಪ್ರೇಕ್ಷಕರನ್ನು ಸೆಳೆಯಲು ಸೋನಿ ಪಿಕ್ಚರ್ಸ್ ಜೊತೆಗೂಡಿರುವ ಚಿತ್ರತಂಡ, ಹಾಲಿವುಡ್ ಸಿನಿಮಾಗಳ ರೇಂಜ್‌ನಲ್ಲಿ ಈ ಪ್ರಾಜೆಕ್ಟ್ ಅನ್ನು ಲಾಂಚ್ ಮಾಡಲು ಪ್ಲ್ಯಾನ್ ಮಾಡಿದೆ. ಹೀಗಾಗಿಯೇ ಟ್ರೇಲರ್ ಬಿಡುಗಡೆಯನ್ನು ಸ್ವಲ್ಪ ಮುಂದೂಡಿ, ಅದ್ದೂರಿ ವೇದಿಕೆಯನ್ನು ಸಿದ್ಧಪಡಿಸುತ್ತಿದೆ. ಆದರೆ, ಅದಕ್ಕೆ ಹೇಳಿರೋ ಕಾರಣ ಬೇರೆ!

ಯಾರೆಲ್ಲಾ ಇದ್ದಾರೆ ಈ ಬಿಗ್ ಬಜೆಟ್ ಸಿನಿಮಾದಲ್ಲಿ?

ಈ ಸಿನಿಮಾದ ಕಾಸ್ಟಿಂಗ್ ಕೇಳಿದ್ರೆ ಯಾರಿಗೆ ತಾನೇ ಕುತೂಹಲ ಬರಲ್ಲ ಹೇಳಿ? ಮರ್ಯಾದಾ ಪುರುಷೋತ್ತಮ ಶ್ರೀರಾಮನಾಗಿ ರಣಬೀರ್ ಕಪೂರ್ ಕಾಣಿಸಿಕೊಂಡರೆ, ಸೌಮ್ಯ ಸೀತೆಯಾಗಿ ಸಾಯಿ ಪಲ್ಲವಿ ಮಿಂಚಲಿದ್ದಾರೆ. ಇನ್ನು ಎಲ್ಲರಿಗಿಂತ ಹೆಚ್ಚಾಗಿ ನಮ್ಮ 'ಮಾನ್ಸ್ಟರ್' ಯಶ್ ಇಲ್ಲಿ ರಾವಣಾಸುರನಾಗಿ ಅಬ್ಬರಿಸಲು ಸಜ್ಜಾಗುತ್ತಿದ್ದಾರೆ. ಇವರ ಜೊತೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತಗಾರರಾದ ಹ್ಯಾನ್ಸ್ ಜಿಮ್ಮರ್ ಮತ್ತು ಎ. ಆರ್. ರೆಹಮಾನ್ ಅವರ ಜುಗಲ್ಬಂದಿ ಸಿನಿಮಾಗೆ ಮತ್ತಷ್ಟು ಮೆರುಗು ನೀಡಲಿದೆ.

ದೀಪಾವಳಿಗೆ ಬರ್ತಿದ್ದಾನೆ ಈ ದಶಕದ ಮಹಾ ನಾಯಕ!

ಇಡೀ ಸಿನಿಮಾವನ್ನು ಐಮ್ಯಾಕ್ಸ್ (IMAX) ಫಾರ್ಮ್ಯಾಟ್‌ನಲ್ಲಿ ಅತ್ಯಾಧುನಿಕ ವಿಎಫ್‌ಎಕ್ಸ್ ಬಳಸಿ ಚಿತ್ರೀಕರಿಸಲಾಗುತ್ತಿದೆ. ಈ ವರ್ಷದ ದೀಪಾವಳಿಗೆ ಚಿತ್ರದ ಮೊದಲ ಭಾಗ ಬಿಡುಗಡೆಯಾಗುವ ನಿರೀಕ್ಷೆಯಿದೆ. ಒಟ್ಟಿನಲ್ಲಿ 'ರಾಮಾಯಣ' ಬರೀ ಸಿನಿಮಾ ಆಗಿ ಉಳಿಯದೆ, ಭಾರತೀಯ ಚಿತ್ರರಂಗದ ಹೆಮ್ಮೆಯಾಗಿ ವಿಶ್ವದಾದ್ಯಂತ ಸದ್ದು ಮಾಡುವುದು ಖಚಿತವಾಗಿದೆ. 4 ಸಾವಿರ ಕೋಟಿ ಬಜೆಟ್, ಮುನ್ನೂರ ಎಪ್ಪತ್ತೈದು ಕೋಟಿ ಪ್ರಚಾರ.. ಅಬ್ಬಬ್ಬಾ! ಈ ರೇಂಜ್ ಅಬ್ಬರ ನೋಡಿದ್ರೆ ಬಾಕ್ಸ್ ಆಫೀಸ್ ಸುನಾಮಿ ಫಿಕ್ಸ್ ಅನ್ಸುತ್ತೆ ಅಲ್ವಾ? ಇನ್ನೇನು ಕೆಲವೇ ತಿಂಗಳು ಬಾಕಿ ಇದೆ ಬಿಡುಗಡೆಗೆ.. ಅಷ್ಟರಲ್ಲಿ ಸಿನಿಮಾ ಪ್ರಚಾರದ ಹವಾ ಅದೆಲ್ಲಿಗೆ ಮುಟ್ಟುತ್ತೋ ಏನೋ!