Asianet Suvarna News Asianet Suvarna News

ಕಿಂಗ್ ಖಾನ್‌ರನ್ನು ಇತಿಹಾಸ ಪುಟ ಸೇರಿಸಿದ ಡಂಕಿ; ಶಾರುಖ್ ಫ್ಯಾನ್ಸ್‌ಗೆ ಆಯ್ತು ಅನಿರೀಕ್ಷಿತ ಶಾಕ್!

ಜೂನ್ ನಲ್ಲಿ ತೆರೆಕಂಡ ಜವಾನ್, ಹಿಂದಿ ಚಿತ್ರರಂಗದಲ್ಲಿ 643 ಕೋಟಿ ಕಲೆಕ್ಷನ್ ಮಾಡಿದರೆ, ವಿಶ್ವಾದ್ಯಂತ 580 ಕೋಟಿ ಲೂಟಿ ಮಾಡಿತ್ತು. ಡಿಸೆಂಬರ್ ನಲ್ಲಿ ಬಿಡುಗಡೆಯಾದ ಡಂಕಿ ಕೇವಲ 13 ದಿನದಲ್ಲಿ 410 ಕೋಟಿ ಗಳಿಕೆ ಮಾಡಿತ್ತು.

Bollywood king khan Shah Rukh Khan lead Dunki movie makes new record srb
Author
First Published Jan 11, 2024, 11:35 AM IST

'ಕಿಂಗ್ ಈಸ್ ಆಲ್ವೇಸ್ ಕಿಂಗ್' ಅನ್ನೋ ಮಾತಿದೆ. ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ (Shah Rukh Khan) ಅಭಿಮಾನಿಗಳು ಹೆಮ್ಮೆಯಿಂದ ಇದೇ ಮಾತನ್ನು ಹೇಳುತ್ತಿದ್ದಾರೆ. ಕೂಗುತ್ತಿದ್ದಾರೆ. ಅದಕ್ಕೆ ಕಾರಣ ಕಿಂಗ್ ಖಾನ್ ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. 2023ರಲ್ಲಿ ಬಾಕ್ಸಾಫೀಸ್ ಧೂಳಿಪಟ ಮಾಡಿದ ಕೀರ್ತಿ ಶಾರುಖ್ ಗೆ ಸಲ್ಲುತ್ತದೆ. ಡಂಕಿ, ಜವಾನ್ ಹಾಗೂ ಪಠಾಣ್ ಸಿನಿಮಾಗಳ ಮೂಲಕ ಒಂದೇ ವರ್ಷದಲ್ಲಿ ಹ್ಯಾಟ್ರಿಕ್ ಹಿಟ್ ಬಾರಿಸಿದ ರೆಕಾರ್ಡ್ ಬಾದ್ ಷಾಗೆ ಸೇರಿದೆ. ಬರೀ ಕಲೆಕ್ಷನ್ ಅಷ್ಟೇ ಅಲ್ಲ ಈ ಮೂರು ಚಿತ್ರಗಳನ್ನು ವೀಕ್ಷಿಸಿದ್ದು, ಎಂಟು ಕೋಟಿ ಮಂದಿ. 

ಒಂದು ವರ್ಷದಲ್ಲಿಯೇ ಇಷ್ಟು ಮಂದಿ ಸಿನಿಮಾ ವೀಕ್ಷಿಸಿರುವುದು ದಾಖಲೆಯೇ ಸರಿ..ಜವಾನ್ ಚಿತ್ರದ 3.93 ಕೋಟಿ ಟಿಕೆಟ್ ಮಾರಾಟವಾಗಿದ್ದು, ಪಠಾಣ್ 3.20 ಕೋಟಿ, ಡಂಕಿ 1 ಕೋಟಿ..ಈ ಸಾಧನೆ ಮಾಡಿದ ಮೊದಲ ಬಾಲಿವುಡ್ ತಾರೆ ಶಾರುಖ್. 2023ರಲ್ಲಿ ಜವಾನ್ ಹಾಗೂ‌ ಪಠಾಣ್ ‌ಗಳಿಕೆಯಲ್ಲಿ ದಾಖಲೆ ಬರೆದಿದ್ದು, ಅದಕ್ಕೆ ಡಂಕಿ ಕೂಡ ಸೇರ್ಪಡೆಯಾಯಿತು. 2023ರ ಆರಂಭದಲ್ಲಿ ಪಠಾಣ್ ಬಾಕ್ಸ್ ಆಫೀಸ್ ಬ್ಯಾಂಗ್ ಮಾಡಿತು. ಈ ಚಿತ್ರ ಹಿಂದಿ ಬೆಲ್ಟ್ ನಲ್ಲಿಯೇ 524 ಕೋಟಿ ಬಾಚಿತ್ತು. ಭಾರತಾದ್ಯಂತ 545 ಕೋಟಿ‌ ಲೂಟಿ ಮಾಡಿದ್ದ ಪಠಾಣ್ ಒಟ್ಟಾರೆ ವಿಶ್ವಾದ್ಯಂತ 1055 ಕೋಟಿ ಗಳಿಕೆ ಕಂಡಿತ್ತು. 

ತುಳುನಾಡು ಟೀಮ್‌ 'ಕ್ಲಾಂತಾ' ಟ್ರೈಲರ್ ರಿಲೀಸ್; ಸಿನಿಮಾಗೆ ಸಾಥ್ ಕೊಟ್ಟ ಅಜಯ್ ರಾವ್

ಆ ನಂತರ  ಜೂನ್ ನಲ್ಲಿ ತೆರೆಕಂಡ ಜವಾನ್, ಹಿಂದಿ ಚಿತ್ರರಂಗದಲ್ಲಿ 643 ಕೋಟಿ ಕಲೆಕ್ಷನ್ ಮಾಡಿದರೆ, ವಿಶ್ವಾದ್ಯಂತ 580 ಕೋಟಿ ಲೂಟಿ ಮಾಡಿತ್ತು. ಡಿಸೆಂಬರ್ ನಲ್ಲಿ ಬಿಡುಗಡೆಯಾದ ಡಂಕಿ ಕೇವಲ 13 ದಿನದಲ್ಲಿ 410 ಕೋಟಿ ಗಳಿಕೆ ಮಾಡಿತ್ತು. ಡಂಕಿ ಸಿನಿಮಾಗೆ ರಾಜ್ ಕುಮಾರ್ ಹಿರಾನಿ ಆಕ್ಷನ್ ಕಟ್ ಹೇಳಿದ್ದು, ಚಿತ್ರದಲ್ಲಿ ಶಾರುಖ್ ಖಾನ್, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮನ್ ಇರಾನಿ, ವಿಕ್ರಂ ಕೊಚ್ಚರ್, ಅನಿಲ್ ಗ್ರೋವರ್ ಮುಂತಾದವರು ನಟಿಸಿದ್ದಾರೆ. ಕತೆಯ ಆಯ್ಕೆಯಲ್ಲಿ ಪ್ರತಿಬಾರಿ ನಿರ್ದೇಶಕ ರಾಜ್ಕುಮಾರ್ ಹಿರಾನಿ ಒಂದು ಗಟ್ಟಿಯಾದ ಕಥಾವಸ್ತು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಸಿನಿಪ್ರೇಮಿಗಳಿಗೆ ಗೊತ್ತಿರುವ ಸಂಗತಿ. 

ಎಸ್ ನಾರಾಯಣ್-ಆದಿತ್ಯ ಜುಗಲ್ಬಂದಿ ಟೀಸರ್ ಔಟ್; ಲೇಟ್ ಆದ್ರೂ ಲೇಟೆಸ್ಟ್‌ ಅಂತಿದೆ ಟೀಮ್!

ಅದೇ ರೀತಿ ಈ ಚಿತ್ರದಲ್ಲಿ ಕೆಲಸ ಅರಸಿ ಅಕ್ರಮವಾಗಿ ದೇಶಗಳ ಗಡಿ ದಾಟುವವರ ಕಥೆಯನ್ನು ಡಂಕಿ (Dunki Movie) ಮೂಲಕ ತೋರಿಸಿದ್ದಾರೆ. 'ಡಂಕಿ’ ಸಿನಿಮಾವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ. ಒಟ್ಟಿನಲ್ಲಿ 15 ದಿನಗಳೊಳಗೆ 410 ಕೋಟಿ ಗಳಿಕೆ ಕಾಣುವ ಮೂಲಕ ಡಂಕಿ ಕೂಡ ಹಿಟ್ ಎನಿಸಿಕೊಂಡಿದ. ಆದರೆ, ಜವಾನ್ ಮತ್ತು ಪಠಾಣ್ ಕಲೆಕ್ಷನ್‌ಗೆ ಹೋಲಿಸಿದರೆ ಡಂಕಿ ಸ್ಲೋ ಗಳಿಕೆ ಮಾಡಿದೆ ಎನ್ನಬಹುದು. 

Follow Us:
Download App:
  • android
  • ios