ಬಾಲಿವುಡ್ ಬೇಬೋ ಕರೀನಾ ಕಪೂರ್‌ ಏನೇ ಮಾಡಿದರೂ ಟ್ರೋಲಿಗರಿಗೆ ಆಹಾರವಾಗುತ್ತಿದ್ದಾರೆ. ಇತ್ತೀಚಿಗೆ ಬಾಲಿವುಡ್ ಖ್ಯಾತ ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರ ತಂದೆ 90 ವಯಸ್ಸಿನವರಾಗಿದ್ದು ಅನಾರೋಗ್ಯದಿಂದ ಕೊನೆ ಉಸಿರು ಎಳೆದಿದ್ದಾರೆ.

ಆಂಟಿ ಕರೀನಾ ಕಪೂರ್ ಎಂದವರಿಗೆ ಅಭಿಮಾನಿಗಳ ಚಾಟಿ

ಈ ಸಮಯದಲ್ಲಿ ಬಾಲಿವುಡ್‌ ಗಣ್ಯರು ಸಂತಾಪ ಸೂಚಿಸಲು ಹೋದಾಗ ನಟಿ ಕರೀನಾ ಕಪೂರ್ ಜಯಾ ಬಚ್ಚನ್ ಎದುರಾದಾಗ ನಗು ಮುಖದಿಂದ ಮಾತನಾಡಿಸಿದ್ದಾರೆ. ಮನೀಶ್ ಮನೆ ಹೊರಭಾಗದಿಂದ ಮಾಧ್ಯಮಗಳು ಕ್ಯಾಮೆರಾದಲ್ಲಿ ಚಿತ್ರಿಸುತ್ತಿದ್ದಾಗ ಇದು ಗಮನಕ್ಕೆ ಬಂದಿದೆ.

ಕಲ್ಕಿ ಕೊಚ್ಚಿನ್ 6 ತಿಂಗಳ ಹೊಟ್ಟೆ ನೋಡಿ ಕರೀನಾ ಹಿಂಗಾ ಕಮೆಂಟ್ ಮಾಡೋದು!

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರು ಕರೀನಾಳನ್ನುತರಾಟೆಗೆ ತೆಗೆದುಕೊಂಡಿದ್ದಾರೆ. 'ಬೆಸ್ಟ್‌ ಫ್ರೆಂಡ್ ತಂದೆ ತೀರಿ ಹೋಗಿದ್ರೂ ಕ್ಯಾಮೆರಾ ಎದುರು ನಗುತ್ತಾ ಹೊರ ಬಂದಿದ್ದಾರೆ' ಹಾಗೂ 'ಇಲ್ಲಿಗೂ ಮೇಕಪ್ ಹಾಕಿಕೊಂಡು ಬರುವ ಅವಶ್ಯಕತೆ ಇದ್ಯಾ?' ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.