ಬಾಲಿವುಡ್ ಬೆಬೋ ಕರೀನಾ ಕಪೂರ್ ನಡೆಸಿಕೊಡುವ ರೆಡಿಯೋ ಶೋ  ನಲ್ಲಿ ಕಲ್ಕಿ ಕೊಚ್ಚಿನ್ ಭಾಗಿಯಾಗಿದ್ದರು. ಆಗ ಆರು ತಿಂಗಳ ಗರ್ಭಿಣಿ ಕಲ್ಕಿ ಕೊಚ್ಚಿನ್ ನೋಡಿ ಕರೀನಾ ಆಶ್ಚರ್ಯಚಕಿತರಾಗಿದ್ದಾರೆ. 

ಕಲ್ಕಿ ಕೊಚ್ಚಿನ್ ಗೆ 6 ತಿಂಗಳ ಗರ್ಭಿಣಿ. ಆದರೂ ಅವರ ಹೊಟ್ಟೆ ಚಿಕ್ಕದಾಗಿ ಕಾಣುತ್ತಿರುವುದಕ್ಕೆ ಕರೀನಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. 'ಏನಿದು ನಿನ್ನ ಹೊಟ್ಟೆ ಚಿಕ್ಕದಿದೆ' ಎಂದಿದ್ದಾರೆ. ನಾನು ಆರು ತಿಂಗಳ ಗರ್ಭಿಣಿ ಇದ್ದಾಗ ತುಂಬಿದ ಹಸುವಿನಂತೆ ಇದ್ದೆ ಎಂದು ಹೋಲಿಕೆ ಮಾಡಿದ್ದಾರೆ. 

 

ಕಲ್ಕಿ ಇತ್ತೀಚಿಗೆ ತಾವು ಗರ್ಭಿಣಿ ಎನ್ನುವ  ವಿಚಾರವನ್ನು ರಿವೀಲ್ ಮಾಡಿದ್ದಾರೆ. ಇವರು ಯೇ ಜಿಂದಗಿ ನಾ ಮಿಲೇಂಗಿ ದುಬಾರಾ, ಯೇ ಜವಾನಿ ಯೇ ದಿವಾನಿ ಸಿನಿಮಾಗಳಲ್ಲಿ ಹೆಸರು ಮಾಡಿದ್ದಾರೆ.