BREAKING: ಕೊನೆಗೂ ಆರ್ಯನ್ ಖಾನ್‌ಗೆ ಸಿಕ್ತು ಜಾಮೀನು; ಇಂದು ಜೈಲಿನಿಂದ ಬಿಡುಗಡೆ ಇಲ್ಲ!
- ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ಗೆ ಕೊನೆಗೂ ಸಿಕ್ಕಿತು ಬೇಲ್
- ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ಆರ್ಯನ್ ಖಾನ್
- ಶಾರುಖ್ ಕುಟುಂಬ ಹಾಗೂ ಬೆಂಬಲಿಗರಲ್ಲಿ ಸಂತಸ
ಮುಂಬೈ(ಅ.28): ಬರೋಬ್ಬರಿ 26 ದಿನ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಕಳೆದ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್(shah rukh khan) ಪುತ್ರ ಆರ್ಯನ್ ಖಾನ್‌ಗೆ(Aryan Khan) ಕೊನೆಗೂ ಜಾಮೀನು(Bail) ಸಿಕ್ಕಿದೆ. ಕ್ರ್ಯೂಸ್ ಡ್ರಗ್ಸ್ ಪ್ರಕರಣದಲ್ಲಿ NCB ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ಆರ್ಯನ್ ಖಾನ್‌ಗೆ ಬಾಂಬೆ ಹೈಕೋರ್ಟ್ ಕೋರ್ಟ್(bombay high Court) ಜಾಮೀನು ಮಂಜೂರು ಮಾಡಿದೆ.
Drugs Case: ಆರ್ಯನ್ ಜೊತೆ ಸೆಲ್ಫೀ ತೆಗೆದಿದ್ದ ಕೆಪಿ ಗೋಸಾವಿ ಅರೆಸ್ಟ್
ಆರ್ಯನ್ ಖಾನ್ ಜೊತೆ ಬಂಧಿತರಾಗಿದ್ದ ಆರ್ಭಾಜ್ ಮರ್ಚೆಂಚ್ ಹಾಗೂ ಮನ್ಮುನ್ ದಮೇಚಾಗೂ ಬಾಂಬೆ ಹೈಕೋರ್ಟ್ ಕೋರ್ಟ್ ಎಕಸದಸ್ಯ ಪೀಠದ ಜಸ್ಟೀಸ್ ನಿತಿನ್ ಸಾಂಬ್ರೆ ಜಾಮೀನು ಮಂಜೂರು ಮಾಡಿದ್ದಾರೆ.ಈ ಮೂಲಕ ಭಾರಿ ಕಳೆದ ಒಂದು ತಿಂಗಳನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಶಾರುಖ್ ಖಾನ್ ಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಇತ್ತ ಶಾರುಖ್ ಅಭಿಮಾನಿಗಳು ಆರ್ಯನ್ ಖಾನ್ ಸ್ವಾಗತಕ್ಕೆ ತಯಾರಿ ಆರಂಭಿಸಿದ್ದಾರೆ.
ಕಳೆದ 3 ದಿನಗಳ ಸತತ ವಿಚಾರಣೆ ನಡೆಸಿದ ಬಾಂಬೆ ಕೋರ್ಟ್ ಇಂದು(ಅ.28) ಜಾಮೀನು ನೀಡಿದೆ. ಜಾಮೀನು ಆದೇಶ ನಾಳೆ ಜೈಲು ತಲುಪಲಿದೆ. ಹೀಗಾಗಿ ಆರ್ಯನ್ ಖಾನ್ ಸೇರಿದಂತೆ ಮೂವರು ನಾಳೆ ಆರ್ಥರ್ ರೋಡ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಆರ್ಯನ್ ಖಾನ್ ಪರ ವಾದಿಸಿದ್ದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಹೇಳಿದ್ದಾರೆ.
Drugs Case: ಆರ್ಯನ್ ಜಾಮೀನು ವಿಚಾರಣೆ ಮಧ್ಯೆ ಕೋರ್ಟ್ ಖಾಲಿ ಮಾಡಿಸಿದ ಜಡ್ಜ್
ಆರ್ಯನ್ ಖಾನ್ ಹಾಗೂ ಆತನ ಗೆಳೆಯರು ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಜೊತೆ ಸಂಪರ್ಕ ಹೊಂದಿದ್ದಾರೆ. ಡ್ರಗ್ಸ್ ಸೇವನೆ ಜೊತೆ ಡ್ರಗ್ಸ್ ಪೂರೈಕೆ ಮಾಡಿದ್ದಾರೆ. ಭಾರತದಲ್ಲಿ ಬೇರುಬಿಟ್ಟಿರುವ ಬಹುದೊಡ್ಡ ಡ್ರಗ್ಸ್ ಜಾಲ ಪತ್ತೆ ಹಚ್ಚಬೇಕಾಗಿದೆ. ಆರೋಪಿಗಳಿಗೆ ಜಾಮೀನು ನೀಡಿದರೆ ಸಾಕ್ಷ್ಯ ನಾಶ ಪಡಿಸವು ಆತಂಕ ಇದೆ ಎಂದು NCB ಪರ ಹಾಜರಾಗಿದ್ದ ಆಡಿಶನಲ್ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ವಾದಿಸಿದ್ದರು.
ಅಕ್ಟೋಬರ್ 26 ಹಾಗೂ 27 ರಂದು ಆರ್ಯನ್ ಖಾನ್ ಪರ ವಾದ ಮಂಡಿಸಿದ್ದ ಮುಕುಲ್ ರೋಹ್ಟಗಿ, ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ನ್ನು ಸಿಲುಕಿಲಾಗಿದೆ. ಆರ್ಯನ್ ಖಾನ್ ಗೆಳೆಯನ ಆಹ್ವಾನದ ಮೇರೆಗೆ ಕ್ರ್ಯೂಸ್ ಹಡಗಿನಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಆದರೆ ಆರ್ಯನ್ ಖಾನ್ ಡ್ರಗ್ಸ್ ಸೇವಿಸಿಲ್ಲ. ಈ ಕುರಿತು NCB ಅಧಿಕಾರಿಗಳು ಆರ್ಯನ್ ಖಾನ್ ಪರೀಕ್ಷೆ ಮಾಡಿಸಿಲ್ಲ. ಬಂಧನಕ್ಕೂ ಮೊದಲು ಪ್ರತಿ ವ್ಯಕ್ತಿ ಕಾರಣ ತಿಳಿದುಕೊಳ್ಳುವ ಹಕ್ಕಿದೆ. ಆದರೆ ಇಲ್ಲಿ ಯಾವ ಕಾರಣಕ್ಕೆ ಆರ್ಯನ್ ಖಾನ್ ಬಂಧವಾಗಿದೆ ಅನ್ನೋದು ಸ್ಪಷ್ಟವಾಗಿಲ್ಲ. ಹೀಗಾಗಿ NCB ಅಧಿಕಾರಿಗಳ ಬಂಧನ ಕಾನೂನು ಬಾಹಿರ ಎಂದು ಮುಕುಲ್ ರೋಹ್ಟಗಿ ವಾದಿಸಿದ್ದರು.
ಈ ಕುರಿತು ವಾದ ಮಂಡಿಸಿದ NCB ವಕೀಲ ಅನಿಲ್ ಸಿಂಗ್, ಈ ಪ್ರಕರಣ ಡ್ರಗ್ಸ್ ಸ್ವಾಧೀನ ಪಡಿಸಿಕೊಂಡ ಕುರಿತು ಸುತ್ತಿಕೊಂಡಿದೆ. ಕ್ರ್ಯೂಸ್ ಪಾರ್ಟಿಯಲ್ಲಿ ಆರ್ಯನ್ ಪಾಲ್ಗೊಂಡಿದ್ದಾರೆ. ಆದರೆ ಆರ್ಯನ್ ಖಾನ್ ಡ್ರಗ್ಸ್ ಸೇವನ ಇದೇ ಮೊದಲಲ್ಲ. ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಜೊತೆ ಸಂಪರ್ಕ ಹೊಂದಿರುವ ಆರ್ಯನ್ ಖಾನ್, ಹಲವು ಬಾರಿ ಡ್ರಗ್ಸ್ ಸ್ವಾಧೀನ ಪಡಿಸಿಕೊಂಡು ಪೂರೈಕೆ ಮಾಡಿದ್ದಾರೆ ಎಂದು ಅನಿಲ್ ಸಿಂಗ್ ವಾದಿಸಿದ್ದಾರೆ.
ಡ್ರಗ್ಸ್ ವ್ಯಕ್ತಿಯ ಸ್ವಾಧೀನದಲ್ಲಿರಬೇಕು ಎಂದುಸೆಕ್ಷನ್ 29 ಹೇಳುವುದಿಲ್ಲ. ಇಲ್ಲಿ ಆರೋಪಿಗಳು ಡ್ರಗ್ಸ್ ಮೂಲಕ ವಾಣಿಜ್ಯ ವ್ಯವಹಾರಕ್ಕೆ ಯತ್ನಿಸಿದ್ದರು ಎಂದು ಅನಿಲ್ ಸಿಂಗ್ ವಾದಿಸಿದರು. NCB ಪತ್ತೆ ಹಚ್ಚಿರುವ ಆರ್ಯನ್ ಖಾನ್ ವ್ಯಾಟ್ಸ್ಆ್ಯಪ್ ಚಾಟ್ ಕುರಿತು ಆಡಿಶನಲ್ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಮಾಹಿತಿ ನೀಡಿದರು. ಕ್ರ್ಯೂಸ್ ಪಾರ್ಟಿಯಲ್ಲಿ ಆರ್ಯನ್ ಖಾನ್ ಹಾಗೂ 8 ಸಹ ಆರೋಪಿಗಳಿಂದ ಡ್ರಗ್ಸ್ ಪಡೆಯುವಿಕೆಯನ್ನು ವ್ಯಾಟ್ಸ್ಆ್ಯಪ್ ಚಾಟ್ ಹೇಳತ್ತಿದೆ. ಆರ್ಯನ್ ಖಾನ್ ಹಾಗೂ ಅರ್ಬಾಝ್ ಮರ್ಚೆಂಟ್ ಕ್ರ್ಯೂಸ್ ಪಾರ್ಟಿಯಲ್ಲಿ ಸೇವಿಸಲು ತಂದಿದ್ದ ಡ್ರಗ್ಸ್‌ನ್ನು ದಾಳಿ ವೇಳೆ ಅರ್ಬಾಜ್‌ನಿಂದ ವಶಕ್ಕೆ ಪಡೆಯಲಾಗಿದೆ ಎಂದು ಅನಿಲ್ ಸಿಂಗ್ ಕೋರ್ಟ್ ಮುಂದೆ NCB ಪರ ವಾದ ಮಂಡಿಸಿದರು.