Bollywood Day: ಪಾಕಿಸ್ತಾನದ ಲಾಹೋರ್​ ವಿವಿಯಲ್ಲಿ ಶಾರುಖ್​, ಸಲ್ಮಾನ್​, ಸುಶ್ಮಿತಾ!

ಪಾಕಿಸ್ತಾನದ ಲಾಹೋರ್​ನ ವಿದ್ಯಾರ್ಥಿಗಳು ಬಾಲಿವುಡ್​ ಡೇ ಆಚರಿಸಿದ್ದಾರೆ. ಇದರಲ್ಲಿ ನಡೆದ ವಿಶೇಷತೆಗಳೇನು? 
 

Bollywood Day celebrated in Pakistan university Students dress up as actors

ಶಾರುಖ್ ಖಾನ್ (Shahrukh Khan), ಸಲ್ಮಾನ್ ಖಾನ್, ಸುಶ್ಮಿತಾ ಸೇನ್​, ಪರೇಶ್ ರಾವಲ್ (Paresh Rawal) ಸೇರಿದಂತೆ ಪಾಕಿಸ್ತಾನದ ಲಾಹೋರ್​ನಲ್ಲಿ ಬಾಲಿವುಡ್​ ತಾರೆಯರ ದೊಡ್ಡ ದಂಡೇ ನೆರೆದಿತ್ತು. ಏಕೆಂದರೆ ಅಲ್ಲಿ ನಡೆದಿದ್ದು ಬಾಲಿವುಡ್​ ಡೇ! ಹೌದು ಪಾಕಿಸ್ತಾನ ಲಾಹೋರ್ ಯೂನಿವರ್ಸಿಟಿ ಆಫ್ ಮ್ಯಾನೇಜ್‌ಮೆಂಟ್ ಸೈನ್ಸಸ್ (LUMS) 'ಬಾಲಿವುಡ್ ದಿನ'ವನ್ನು ಆಚರಿಸಲಾಗಿತ್ತು. ಅಲ್ಲಿ ಬಾಲಿವುಡ್​ನ ಕೆಲ ನಟ-ನಟಿಯರು ಕಾಣಿಸಿಕೊಂಡರು. ಅಷ್ಟಕ್ಕೂ ಹೀಗೆ ಕಾಣಿಸಿಕೊಂಡವರು ನಿಜವಾಗಿಯೂ ಈ ಹೀರೋ, ಹೀರೊಯಿನ್​ಗಳು ಅಲ್ಲ, ಬದಲಿಗೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಗೆಟಪ್​ನಲ್ಲಿ ಕಾಣಿಸಿಕೊಂಡು ವಿಜೃಂಭಣೆಯಿಂದ ಬಾಲಿವುಡ್​ ಡೇ (Bollywood Day) ಆಚರಿಸಿದರು.

ಶಾರುಖ್​ ಖಾನ್​ ಅವರ ದೇವದಾಸ್,  ಸಲ್ಮಾನ್ ಖಾನ್ ಅವರ ದಬಾಂಗ್‌ (Dabang) ಚಿತ್ರದ ಚುಲ್ಬುಲ್ ಪಾಂಡೆ,  ಸುಶ್ಮಿತಾ ಸೇನ್‌ ಅವರ ಮೈ ಹೂನಾ ಚಿತ್ರದ ಚಾಂದಿನಿ, ಹೇರಾ ಫೇರಿ ಸರಣಿಯಲ್ಲಿನ ಪರೇಶ್ ರಾವಲ್ ಅವರ ಬಾಬುರಾವ್... ಹೀಗೆ ಕೆಲ ನಟ-ನಟಿಯರಂತೆ ವೇಷ ತೊಟ್ಟು ವಿದ್ಯಾರ್ಥಿಗಳು ಸಂಭ್ರಮಿಸಿದರು. ಪಾಕಿಸ್ತಾನಿ ವಿದ್ಯಾರ್ಥಿಗಳು ಡ್ರೆಸ್ ಅಪ್ ಮಾಡಿ 'ಬಾಲಿವುಡ್ ಡೇ' ಆಚರಿಸುವ ವಿಡಿಯೋ ಆನ್​ಲೈನ್​ನಲ್ಲಿ ಭಾರಿ ವೈರಲ್​ ಆಗುತ್ತಿದೆ.  ಲಾಹೋರ್ ಯೂನಿವರ್ಸಿಟಿ ಆಫ್ ಮ್ಯಾನೇಜ್‌ಮೆಂಟ್ ಸೈನ್ಸಸ್  'ಬಾಲಿವುಡ್ ದಿನ'ವನ್ನು ಅತ್ಯಂತ ಸಡಗರದಿಂದ ಆಚರಿಸಿದೆ ಎಂದು ಅದರಲ್ಲಿ ಬರೆಯಲಾಗಿದೆ.

Video Viral: ಝೂಂ ದೇ ಪಠಾಣ್​ಗೆ ಸೀರೆಯುಟ್ಟು ಚಿಂದಿ ಉಡಾಯಿಸಿದ ಉಪನ್ಯಾಸಕಿಯರು!

 ಫೋಟೋಗ್ರಫಿ ಕ್ಲಬ್ ಆಫ್ LUMS (ಫೋಟೋಲಮ್ಸ್) ಇತ್ತೀಚೆಗೆ ಟಿಕ್‌ಟಾಕ್‌ನಲ್ಲಿ ಈವೆಂಟ್‌ನ ವೀಡಿಯೊವನ್ನು ಹಂಚಿಕೊಂಡಿದೆ, ಅದನ್ನು ಈಗ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವ್ಯಾಪಕವಾಗಿ ಪೋಸ್ಟ್ ಮಾಡಲಾಗುತ್ತಿದೆ. ಪಾಕಿಸ್ತಾನದ ವಿಶ್ವವಿದ್ಯಾನಿಲಯದಲ್ಲಿ ನಡೆದ ಬೀಳ್ಕೊಡುಗೆ  ಕಾರ್ಯಕ್ರಮದಲ್ಲಿ ಈ ಸಂಭ್ರಮಾಚರಣೆ ನಡೆದಿದೆ ಎನ್ನಲಾಗಿದೆ. ಹೇರಾ ಫೇರಿ ಸರಣಿಯಲ್ಲಿನ ಪರೇಶ್ ರಾವಲ್ ಅವರ ಬಾಬುರಾವ್ ಮತ್ತು ಶಾರುಖ್ ಖಾನ್ ಅವರ ದೇವದಾಸ್ ಎಲ್ಲರ ಗಮನ ಸೆಳೆದಿದೆ.  ವಿದ್ಯಾರ್ಥಿಗಳು ಈ ರೀತಿಯ  ವೇಷಭೂಷಣ ತೊಟ್ಟದ್ದು ಮಾತ್ರವಲ್ಲದೇ ಸಂಬಂಧಿತ ಚಿತ್ರಗಳ ಡೈಲಾಗ್​ ಹೇಳುವ ಮೂಲಕ ಗಮನ ಸೆಳೆದರು.  ವಿದ್ಯಾರ್ಥಿನಿಯರು ಹಸಿರು ಸೀರೆಯನ್ನು ಧರಿಸಿ ಸಂಭ್ರಮಿಸಿದ್ದಾರೆ. ಅವರು ಮೈ ಹೂನ್ ನಾ ಚಿತ್ರದ ಸುಶ್ಮಿತಾ ಸೇನ್ (Sushmita Sen) ಅವರ ಚಾಂದಿನಿ ಚೋಪ್ರಾ ಪಾತ್ರವನ್ನು ಮಾಡಿದ್ದಾರೆ.  ದಬಾಂಗ್ (2010) ಚಿತ್ರದ ಸಲ್ಮಾನ್ ಖಾನ್ ಅವರ ಚುಲ್ಬುಲ್ ಪಾಂಡೆಯ ಪಾತ್ರಕ್ಕೆ ಇನ್ನೋರ್ವ ವಿದ್ಯಾರ್ಥಿ ಪೋಲೀಸ್ ವೇಷ ಧರಿಸಿದ್ದಾನೆ.  ಆತ ದಬಾಂಗ್​ನ ಫೇಮಸ್​ ಡೈಲಾಗ್​ "ಹಮ್ ತುಮ್ ಮೇ ಇತ್ನೆ ಚೇಡ್ ಕರೇಂಗೆ ಕಿ ಕನ್ಫ್ಯೂಸ್ ಹೋ ಜಾವೋಗೆ ಕೆ ಸಾನ್ಸ್ ಕಹಾನ್ ಸೆ ಲೆ ಔರ್ (ನಾನು ನಿಮ್ಮ ದೇಹಕ್ಕೆ ಹಲವಾರು ಗುಂಡುಗಳನ್ನು ಹಾಕುತ್ತೇನೆ, ನೀವು ಎಲ್ಲಿಂದ ಉಸಿರಾಡಬೇಕು ಮತ್ತು ಎಲ್ಲಿಗೆ ಹೋಗಬೇಕು ಎಂದು ಗೊಂದಲಕ್ಕೊಳಗಾಗುತ್ತೀರಿ) ಎಂಬ ಡೈಲಾಗ್​ ಹೇಳುವುದನ್ನು ಕೇಳಬಹುದು. 

ಇದನ್ನು ಹೊರತುಪಡಿಸಿದರೆ, ಮೊಹಬ್ಬತ್ತೇನ್​ನ​  ರಾಜ್ ಮಲ್ಹೋತ್ರಾ (ಶಾರುಖ್ ಖಾನ್), ಬಾಜಿರಾವ್ ಸಿಂಘಮ್ ಫ್ರಾಂಚೈಸ್‌ನಿಂದ ಅಜಯ್ ದೇವಗನ್‌ನ ಐಕಾನಿಕ್ ಪೋಲೀಸ್, ಸ್ಟುಡೆಂಟ್​ ಆಫ್​ ದಿ ಇಯರ್​ನ (Student of the year) ಶನಯಾ ಸಿಂಘಾನಿಯಾ (ಆಲಿಯಾ ಭಟ್) ಸೇರಿದಂತೆ ಹಲವು ತಾರೆಯರ ನಟನೆಯನ್ನೂ ವಿದ್ಯಾರ್ಥಿಯರು ಮಾಡಿದ್ದಾರೆ.  ಆಲಿಯಾ ಭಟ್​ ಅವರ 2012 ರ ಚೊಚ್ಚಲ ಚಿತ್ರ ಸ್ಟುಡೆಂಟ್​ ಆಫ್​ ದಿ ಇಯರ್​ನಲ್ಲಿನ ಪ್ರಸಿದ್ಧ ಡೈಲಾಗ್​,  "ಹಾಥ್ ಮೇ ಪೋಂ ಪೋಂ ಲೆಕೆ ಲಡ್ಕೋ ಕೆ ಲಿಯೇ ಚಿಲ್ಲಾನಾ ಮೇರಾ ಸ್ಟೈಲ್ ನಹೀ ಹೈ (ಕೈಯಲ್ಲಿ ಪೋಂ ಪೋಂ ಹಿಡಿದು ಹುಡುಗರ ಮೇಲೆ ರೇಗಾಡುವುದು  ನನ್ನ ಶೈಲಿಯಲ್ಲ)" ಎಂಬ ಡೈಲಾಗ್​ ಹೇಳಲಾಗಿದೆ.  ವಿದ್ಯಾರ್ಥಿಗಳಲ್ಲಿ ಒಬ್ಬರು ಬರ್ಫಿ (2012) ಚಿತ್ರದ ಪ್ರಿಯಾಂಕಾ ಚೋಪ್ರಾ ಅವರ ಪಾತ್ರಕ್ಕೆ ತಕ್ಕಂತೆ ವೇಷ ತೊಟ್ಟಿದ್ದರು. 

ಗುಡ್ ಮಾರ್ನಿಂಗ್ ಅಮೆರಿಕದಲ್ಲಿ RRR: ಹುಚ್ಚೆದ್ದು ಸಂಭ್ರಮಿಸ್ತಿದ್ದಾರೆ ಫ್ಯಾನ್ಸ್!

ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಇದು ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ.  ಪಾಕಿಸ್ತಾನದ ಟ್ವಿಟರ್ ಬಳಕೆದಾರರೊಬ್ಬರು, "ಅವರನ್ನು ಈ ರೀತಿ ನೋಡಲು ಅಸಹ್ಯವಾಗಿದೆ" ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳನ್ನು ಬೆಂಬಲಿಸಿ ಟ್ವೀಟ್ ಮಾಡಿರುವ ಒಬ್ಬರು, "ಯಾಕೆ? ಅವರು ಹಾಗೆ ಮಾಡುವ ಮೂಲಕ ಏನಾದರೂ ಅಪರಾಧ ಮಾಡಿದ್ದಾರೆಯೇ? ಅವರು ಅದನ್ನು ತಮಾಷೆಗಾಗಿ ಮಾಡಿದ್ದಾರೆ" ಎಂದು ಪ್ರಶ್ನಿಸಿದ್ದಾರೆ. ಬಾಲಿವುಡ್​ನ ಬಹುಪಾಲು ಭೂಗತಪಾತಕಿಯಲ್ಲಿ ಕೈಯಲ್ಲಿ ಇರುವಾಗ ಪಾಕಿಸ್ತಾನದಲ್ಲಿ ಈ ರೀತಿ ಬಾಲಿವುಡ್​ ಡೇ ಆಚರಿಸುವುದು ವಿಶೇಷವೇನಲ್ಲ ಎಂದು ಕೆಲವರು ಹೇಳಿದ್ದಾರೆ. 

 

Latest Videos
Follow Us:
Download App:
  • android
  • ios