ಗುಡ್ ಮಾರ್ನಿಂಗ್ ಅಮೆರಿಕದಲ್ಲಿ RRR: ಹುಚ್ಚೆದ್ದು ಸಂಭ್ರಮಿಸ್ತಿದ್ದಾರೆ ಫ್ಯಾನ್ಸ್!

ಹಲವಾರು ಪ್ರಶಸ್ತಿಗಳನ್ನು ಗೆದ್ದು ಬೀಗಿದ ಆರ್​ಆರ್​ಆರ್​ ಚಿತ್ರ ಅಮೆರಿಕದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಚಿತ್ರವೀಗ ಜನಪ್ರಿಯ ಚಾಟ್ ಶೋ ಗುಡ್ ಮಾರ್ನಿಂಗ್ ಅಮೆರಿಕದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರತಂಡ ಅಮೆರಿಕ ತಲುಪಿದೆ. 
 

RRR star Ram Charan to appear on Good Morning America fans say he makes India proud

ಪಶ್ಚಿಮದಲ್ಲಿ ಆರ್‌ಆರ್‌ಆರ್‌ನ (RRR) ಜನಪ್ರಿಯತೆಯಿಂದಾಗಿ, ಅದರ ನಿರ್ದೇಶಕ ಎಸ್‌ಎಸ್ ರಾಜಮೌಳಿ (SS Rajamouli) ಮತ್ತು ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ (Jr NTR) ನಾಯಕರಾಗಿ ಅಮೆರಿಕದಲ್ಲಿ  ಬಹುತೇಕ ಮನೆಮಾತಾಗಿದ್ದಾರೆ. ಇದೀಗ, ಜನಪ್ರಿಯ ಚಾಟ್ ಶೋ ಗುಡ್ ಮಾರ್ನಿಂಗ್ ಅಮೆರಿಕದಲ್ಲಿ ಕಾಣಿಸಿಕೊಳ್ಳುವ ಮೂಲಕ ಚರಣ್ ತಮ್ಮ ಮುಡಿಗೆ ಮತ್ತೊಂದು ಗರಿಯನ್ನು ಸೇರಿಸಲು ಸಜ್ಜಾಗಿದ್ದಾರೆ. ಆಸ್ಕರ್‌ಗೆ ಪೂರ್ವಭಾವಿಯಾಗಿ, ಚರಣ್ RRR ಮತ್ತು ಅದರ ನಾಟು ನಾಟು ಹಾಡಿನ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ, ರಾಮ್ ಚರಣ್ ಇಂದು (ಫೆಬ್ರವರಿ 23) ಗುಡ್ ಮಾರ್ನಿಂಗ್ ಅಮೆರಿಕದಲ್ಲಿ (Good Morning America)  ಕಾಣಿಸಿಕೊಳ್ಳಲಿದ್ದಾರೆ. ಅಮೆರಿಕದಲ್ಲಿ ಬೆಳಗ್ಗೆ ಎಂದರೆ  ಭಾರತದ ಸಮಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಾದರೆ  ಇಂದು ಸಂಜೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಕಾರ್ಯಕ್ರಮವನ್ನು ಎಬಿಸಿಯಲ್ಲಿ (ABC) ಪ್ರಸಾರ ಮಾಡಲಾಗುತ್ತದೆ. RRR ನ ಹಿಟ್ ಹಾಡು ನಾಟು ನಾಟು ಈ ವರ್ಷದ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಎಂಎಂ ಕೀರವಾಣಿ ಸಂಗೀತ ಸಂಯೋಜನೆಯ ಈ ಹಾಡನ್ನು ರಾಮ್ ಚರಣ್ ಮತ್ತು ಎನ್​ಟಿಆರ್​ ಮೇಲೆ ಚಿತ್ರಿಸಲಾಗಿದೆ. ಅಮೆರಿಕದಲ್ಲಿ  ನೆಟ್‌ಫ್ಲಿಕ್ಸ್‌ನಲ್ಲಿ ಚಿತ್ರ ಬಿಡುಗಡೆಯಾದಾಗಿನಿಂದ ಈ ಹಾಡು ಪಶ್ಚಿಮದಲ್ಲಿ ವೈರಲ್ ಹಿಟ್ ಆಗಿದೆ. ನಾಟು ನಾಟು ಕಳೆದ ತಿಂಗಳು ಗೋಲ್ಡನ್ ಗ್ಲೋಬ್ಸ್‌ನಲ್ಲಿ ಅತ್ಯುತ್ತಮ ಮೂಲ ಗೀತೆಯ ಬಹುಮಾನವನ್ನು ಗೆದ್ದುಕೊಂಡಿತು ಮತ್ತು ಆಸ್ಕರ್‌ನಲ್ಲೂ ಗೆದ್ದು ಬೀಗಿದ ಹಾಡು. 

Urfi Javed ವಸ್ತುಗಳೆಲ್ಲಾ ಡ್ರೈವರ್​ ಕೈಯಲ್ಲಿ! ನೋವು ತೋಡಿಕೊಂಡ ನಟಿ...

ಈ ಸುದ್ದಿಗೆ ಅಭಿಮಾನಿಗಳು ನಟನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  'ವಿಶ್ವದ ಅತ್ಯಂತ ಪ್ರಸಿದ್ಧ ಕಾರ್ಯಕ್ರಮಗಳಲ್ಲಿ ನಮ್ಮ ತಾರೆಯನ್ನು ನೋಡಲು ನಿಜವಾಗಿಯೂ ಹೆಮ್ಮೆಯ ಕ್ಷಣ' ಎಂದು ಅಭಿಮಾನಿಗಳು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ವಿಶ್ವ ಭೂಪಟದಲ್ಲಿ ಭಾರತವನ್ನು ಹೆಮ್ಮೆಪಡುವಂತೆ ಮಾಡಲಾಗಿದೆ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. ಫೆಬ್ರವರಿ 24 ರ ಸಂಜೆ ನಡೆಯಲಿರುವ 6 ನೇ ವಾರ್ಷಿಕ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ (HCA) ಪ್ರಶಸ್ತಿಗಳಲ್ಲಿ ರಾಮ್ ಚರಣ್ ಪ್ರಶಸ್ತಿಯನ್ನು ನೀಡಲಿದ್ದಾರೆ. ಈ ಎರಡು ಬದ್ಧತೆಗಳಿಗಾಗಿ ನಟ ಈ ವಾರದ ಆರಂಭದಲ್ಲಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇನ್ನು ಅಮೆರಿಕದಲ್ಲಿರುವ ರಾಮ್ ಚರಣ್ (Ramcharan) ಅಭಿಮಾನಿಗಳು ನೆಚ್ಚಿನ ನಟನ ಜೊತೆ ಫೋಟೋಗಳನ್ನು ತೆಗೆಯಲು ಮುಗಿಬಿದ್ದರು. ವಿಶೇಷವಾಗಿ ವಿದೇಶಿಗರು ನೆಟ್​ಫಿಕ್ಸ್​ನಲ್ಲಿ RRR ಚಲನಚಿತ್ರವನ್ನು ವೀಕ್ಷಿಸಿದ್ದಾರೆ. HCA ಪ್ರಶಸ್ತಿಗಳು ಟೆರ್ರಿ ಕ್ರ್ಯೂಸ್, ಸೋಫಿ ಥ್ಯಾಚರ್, ಜೋಸೆಫ್ ಗಾರ್ಡನ್-ಲೆವಿಟ್ ಮತ್ತು ಬ್ರಿಟಾನಿ ಸ್ನೋ ಅವರಂತಹ ಪ್ರಸಿದ್ಧ ವ್ಯಕ್ತಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
 
ಎಸ್‌ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್, ಇಬ್ಬರು ನಿಜ ಜೀವನದ ಕ್ರಾಂತಿಕಾರಿಗಳ ಕಾಲ್ಪನಿಕ ಕಥೆಯಾಗಿದೆ. ಅವರೆಂದರೆ ಅಲ್ಲೂರಿ ಸೀತಾರಾಮನ್ ರಾಜು ಮತ್ತು ಕೊಮಾರನ್ ಭೀಮ್. ಈ ಚಿತ್ರವು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿದೆ, ಭಾರತ ಮತ್ತು ಪಶ್ಚಿಮ ಎರಡರಲ್ಲೂ ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ. ಇದು ವಾಣಿಜ್ಯಿಕವಾಗಿಯೂ ಸಹ ಭಾರೀ ಯಶಸ್ಸನ್ನು ಕಂಡಿದೆ. ಪ್ರಪಂಚದಾದ್ಯಂತ ಸುಮಾರು 1170 ಕೋಟಿ ರೂಪಾಯಿಗಳನ್ನು ಗಳಿಸಿದೆ. ಜಪಾನ್ ಮತ್ತು ಅಮೆರಿಕದ (USA) ನಂತಹ ಹಲವಾರು ಸ್ಥಳಗಳಲ್ಲಿ ದಾಖಲೆಗಳನ್ನು ಗಳಿಸಿದೆ. ಫೆಬ್ರವರಿ 22 ರ ಹೊತ್ತಿಗೆ, RRR ಸಾರ್ವಕಾಲಿಕ ನಾಲ್ಕನೇ ಅತಿ ಹೆಚ್ಚು ಗಳಿಕೆಯ ಭಾರತೀಯ ಚಲನಚಿತ್ರವಾಗಿದೆ ಮತ್ತು ಇದುವರೆಗೆ ಎರಡನೇ ಅತಿ ಹೆಚ್ಚು ಗಳಿಕೆಯ ತೆಲುಗು ಚಲನಚಿತ್ರವಾಗಿದೆ.

ಗಂಡ ಬದುಕಿರುವಾಗ್ಲೇ ಇದೆಂಥ ವೇಷನಮ್ಮಾ? ಭಾರಿ ಟ್ರೋಲ್​ ಆಗ್ತಿರೋ Kiara Advani

RRR ಸಿನಿಮಾ HCA ಅವಾರ್ಡ್ಸ್​ನಲ್ಲಿ 4 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ಇದು ಹಾಲಿವುಡ್ ಚಿತ್ರಗಳೊಂದಿಗೆ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅಂತರಾಷ್ಟ್ರೀಯ ಚಲನಚಿತ್ರ ಮತ್ತು ಆಕ್ಷನ್ ಫಿಲ್ಮ್ ವಿಭಾಗಗಳಲ್ಲಿ ಸ್ಪರ್ಧಿಸುತ್ತಿದೆ. ಈ ಕಾರ್ಯಕ್ರಮದಲ್ಲಿ RRR ಎಷ್ಟು ಪ್ರಶಸ್ತಿಗಳನ್ನು ಗೆಲ್ಲುತ್ತದೆ ಎಂಬುದನ್ನು ತಿಳಿಯಲು, ನಾವು ನಾಳೆಯವರೆಗೆ (ಭಾರತದ ಸಮಯದ ಪ್ರಕಾರ ಫೆ.25ರ ಬೆಳಗ್ಗೆ) ಕಾಯಬೇಕು. 
 

Latest Videos
Follow Us:
Download App:
  • android
  • ios