Video Viral: ಝೂಂ ದೇ ಪಠಾಣ್ಗೆ ಸೀರೆಯುಟ್ಟು ಚಿಂದಿ ಉಡಾಯಿಸಿದ ಉಪನ್ಯಾಸಕಿಯರು!
ಪಠಾಣ್ ಚಿತ್ರದ ಝೂಂ ದೇ ಪಠಾಣ್ ಹಾಡಿಗೆ ಈಗ ಸೀರೆಯುಟ್ಟ ಉಪನ್ಯಾಸಕಿಯರು ನೃತ್ಯ ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಹವಾ ಸೃಷ್ಟಿಸಿದೆ. ಹೇಗಿದೆ ನೃತ್ಯ?
ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯದ ಪಠಾಣ್ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಬಿರುಗಾಳಿ ಎಬ್ಬಿಸಿದೆ! ಚಿತ್ರವು ಹಲವಾರು ಗಲ್ಲಾಪೆಟ್ಟಿಗೆ ದಾಖಲೆಗಳನ್ನು ಮುರಿದಿದೆ. ಮಾತ್ರವಲ್ಲದೆ, ಚಿತ್ರದ ಹಾಡುಗಳಾದ ಬೇಶರಂ ರಂಗ್ ಮತ್ತು ಜೂಮ್ ಜೋ ಪಠಾನ್ಗೆ ನೃತ್ಯ ಪ್ರಿಯರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದಿದೆ. ಸಿನಿಮಾ ರಿಲೀಸ್ ಆಗಿ 27ನೇ ದಿನಕ್ಕೆ ಸಾವಿರ ಕೋಟಿ (Thousand Crore) ಕ್ಲಬ್ ಸೇರಿದೆ. ಈ ವರ್ಷದಲ್ಲಿ ರಿಲೀಸ್ ಆದ ಬಾಲಿವುಡ್ ಸಿನಿಮಾಗಳಲ್ಲಿ ಅತೀ ಹೆಚ್ಚು ಹಣ ಮಾಡಿದ ಚಿತ್ರ ಎನ್ನುವ ಹೆಗ್ಗಳಿಕೆಗೂ ಈ ಸಿನಿಮಾ ಪಾತ್ರವಾಗಿದೆ. ಶಾರುಖ್ ಖಾನ್ (Shah Rukh Khan) ಮತ್ತು ದೀಪಿಕಾ ಪಡುಕೋಣೆ (Deepika Padukone) ಕೆಮೆಸ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ದೆಹಲಿ ವಿಶ್ವವಿದ್ಯಾನಿಲಯದ ಕಾಲೇಜೊಂದರ ಪ್ರಾಧ್ಯಾಪಕರು (Lectureres) ಜೂಮ್ ಜೋ ಪಠಾಣ್ ಹಾಡಿಗೆ ಸೀರೆಯುಟ್ಟು ನೃತ್ಯ ಮಾಡಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೀಸಸ್ ಮತ್ತು ಮೇರಿ ಕಾಲೇಜಿನ ವಾಣಿಜ್ಯ ವಿಭಾಗವು ಈ ಟ್ವೀಟರ್ ಶೇರ್ ಮಾಡಿದೆ. ಕಾಲೇಜಿನ ಆವರಣದಲ್ಲಿ ಮೊದಲು ವಿದ್ಯಾರ್ಥಿಗಳು ಜೂಮ್ ಜೋ ಪಠಾಣ್ಗೆ ನೃತ್ಯ ಮಾಡುತ್ತಿದ್ದರು. ಕೆಲವು ಕ್ಷಣಗಳ ನಂತರ, ಅವರೊಂದಿಗೆ ನಾಲ್ವರು ಸೀರೆಯುಟ್ಟ ಮಹಿಳಾ ಪ್ರಾಧ್ಯಾಪಕರು ಸೇರಿಕೊಂಡರು, ಸೀರೆಯುಟ್ಟು, ಅವರು ಅತ್ಯಂತ ಉತ್ಸಾಹದಿಂದ ಹಾಡಿಗೆ ನೃತ್ಯ (Dance) ಮಾಡಿದ್ದು, ಇದನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.
Pathaan: ಸುಳ್ಳು ಹೇಳ್ತೀರಾ? ಕೇಸ್ ದಾಖಲಿಸ್ತೇನೆ ಎಂದು ಶಾರುಖ್ ಖಾನ್ಗೆ ಬೆದರಿಕೆ!
ಕುತೂಹಲದ ಸಂಗತಿ ಎಂದರೆ ಈ ವಿಡಿಯೋಗೆ ಖುದ್ದು ಶಾರುಖ್ ಖಾನ್ ಅವರೂ ಕಮೆಂಟ್ ಮಾಡಿದ್ದಾರೆ. 'ಶೈಕ್ಷಣಿಕ ರಾಕ್‌ಸ್ಟಾರ್‌ಗಳು' ಎಂದು ಇವರನ್ನು ಶಾರುಖ್ ಕರೆದಿದ್ದಾರೆ. 'ನಮಗೆ ಕಲಿಸುವ ಮತ್ತು ನಮ್ಮೊಂದಿಗೆ ಮೋಜು ಮಾಡುವ ಶಿಕ್ಷಕರು ಮತ್ತು ಪ್ರಾಧ್ಯಾಪಕರನ್ನು ಹೊಂದಿರುವುದು ಎಷ್ಟು ಅದೃಷ್ಟ. ಅವರೆಲ್ಲರೂ ಶೈಕ್ಷಣಿಕ ರಾಕ್‌ಸ್ಟಾರ್‌ಗಳು' ಎಂದು ಶಾರುಖ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ದಿನಗಳ ಹಿಂದೆ, ಕ್ರಿಕೆಟಿಗರಾದ ವಿರಾಟ್ ಕೊಹ್ಲಿ (Virat Kohli) ಮತ್ತು ರವೀಂದ್ರ ಜಡೇಜಾ ಅವರು ಟೆಸ್ಟ್ ಪಂದ್ಯದ ವೇಳೆ ಜೂಮ್ ಜೋ ಪಠಾಣ್ಗೆ ನೃತ್ಯ ಮಾಡಿದ್ದರು. ಇದು ವೈರಲ್ ಆಗುತ್ತಲೇ ಶಾರುಖ್ ಖಾನ್ ಪ್ರತಿಕ್ರಿಯೆ ನೀಡಿದ್ದರು. ಇವರಿಬ್ಬರೂ ತಮಗಿಂತ ಚೆನ್ನಾಗಿ ನೃತ್ಯ ಮಾಡಿದ್ದಾರೆ ಎಂದಿದ್ದರು.
ಪಠಾಣ್ ಸಿನಿಮಾದ ಹಾಡೊಂದು ವಿವಾದಕ್ಕೀಡಾದಾಗ ಈ ಸಿನಿಮಾವನ್ನು ಗೆಲ್ಲಿಸಲೇಬಾರದು ಎಂದು ಹಲವರು ಕರೆ ನೀಡಿದರು. ಪ್ರತಿಭಟನೆಗಳು ನಡೆದವು, ಬಾಯ್ಕಾಟ್ ಪಠಾಣ್ ಅಭಿಯಾನ ಶುರುವಾಯಿತು. ಚಿತ್ರಮಂದಿರಗಳ ಮೇಲೆ ದಾಳಿ ನಡೆದವು. ಸಿನಿಮಾದ ಪೋಸ್ಟರ್ ಹರಿದು ಹಾಕಲಾಯಿತು. ಪೋಸ್ಟರ್ ಸುಡಲಾಯಿತು. ಏನೆಲ್ಲ ಸಂಕಷ್ಟಗಳು ಎದುರಾದರೂ, ಪಠಾಣ್ ಮಾತ್ರ ಗೆಲುವು ಸಾಧಿಸಿದೆ. ಸಿನಿಮಾ ಅಂದುಕೊಂಡಿದ್ದಕ್ಕಿಂತ ಹೆಚ್ಚು ಅಬ್ಬರಿಸುತ್ತಿದೆ. ದಿನದಿಂದ ದಿನಕ್ಕೆ ಕಲೆಕ್ಷನ್ ಕೂಡ ಹೆಚ್ಚಾಗುತ್ತಿದೆ. ಎಲ್ಲಾ ದಾಖಲೆಗಳನ್ನು ಹಿಂದಿಕ್ಕುತ್ತಿದೆ. ಶಾರುಖ್ ಖಾನ್ ಅವರ ನೃತ್ಯ, ಆ್ಯಕ್ಟಿಂಗ್ಗಂತೂ ಅಭಿಮಾನಿಗಳು ಫಿದಾ ಆಗಿದ್ದಾರೆ. ಶಾರುಖ್ ಖಾನ್ ವಿರುದ್ಧ ಪಠಾಣ್ಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲು ಮಾಡುವುದಾಗಿ ಹೇಳಿದ್ದಾರೆ! ಇದನ್ನು ಖುದ್ದು ಅವರು #AskSRK ನಲ್ಲಿಯೇ ಹೇಳಿದ್ದಾರೆ! “ಖಾನ್ ಸಾಹಬ್ ಎಫ್‌ಐಆರ್ ಫೈಲ್ ಕರ್ ರಹಾ ಹುನ್ ಆಪ್ ಕೆ ವಿರುದ್ಧ (ಖಾನ್ ಸಾಹಬ್ ನಿಮ್ಮ ವಿರುದ್ಧ ಎಫ್‌ಐಆರ್ ದಾಖಲು ಮಾಡುತ್ತಿದ್ದೇನೆ) ಎಂದಿದ್ದಾರೆ. ಅಷ್ಟಕ್ಕೂ ಹೀಗೆ ಹೇಳಲು ಕಾರಣ ತಮಾಷೆಯದ್ದಾಗಿದೆ. ಆ ಅಭಿಮಾನಿ ಹೇಳಿದ್ದೇನೆಂದರೆ, ಪದೇ ಪದೇ ತಮಗೆ 57 ವರ್ಷ ಎಂದು ನೀವು ಹೇಳುತ್ತಿದ್ದೀರಿ. ಹೀಗೆ ಸುಳ್ಳು ಹೇಳಬೇಡಿ. ನಿಮ್ಮ ಆ್ಯಕ್ಟಿಂಗ್, ನಿಮ್ಮ ವೇಷ-ಭೂಷಣ ನೋಡಿದರೆ ನಿಮಗೆ 57 ಎಂದು ಯಾರೂ ಹೇಳುವುದಿಲ್ಲ. ಹೀಗೆ ಪದೇ ಪದೇ 57 ವರ್ಷ ಎಂದು ಹೇಳುತ್ತಾ ಸುಳ್ಳು ನುಡಿಯುತ್ತಿದ್ದೀರಿ. ಹೀಗೆ ಸುಳ್ಳು ಹೇಳಿದರೆ ನಿಮ್ಮ ವಿರುದ್ಧ ಎಫ್‌ಐಆರ್ (FIR) ದಾಖಲಿಸುತ್ತೇನೆ ಎಂದಿದ್ದಾರೆ.
ಖಾಸಗಿ ವಿಡಿಯೋ ವೈರಲ್: ನೋವು ತೋಡಿಕೊಂಡ ಖ್ಯಾತ ನಟಿ Priyanka