1979ರಲ್ಲಿ ಕನ್ನಡ ಸಿನಿಮಾ ನಟನ ಜೊತೆ ಹೋಟೆಲ್‌ನಲ್ಲಿದ್ದಾಗಲೇ ತಗ್ಲಾಕೊಂಡಿದ್ರಾ ನಟಿ ರೇಖಾ?
ಈ ಘಟನೆಯ ನಂತರ ರೇಖಾ ಅವರನ್ನು 'ಮಿಂಡಮ್' ಚಿತ್ರದಿಂದ ಕೈಬಿಡಲಾಯಿತು ಎಂದು ವರದಿಯಾಗಿದೆ. ಆದರೆ, ಈ ಘಟನೆ ಮತ್ತು ವರದಿಗಳ ಬಗ್ಗೆ ರೇಖಾ ಮತ್ತು ಆ ನಟ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮುಂಬೈ: ಬಾಲಿವುಡ್ ಅಂಗಳ ಸಿನಿಮಾಗಳ ಜೊತೆ ಗಾಸಿಪ್‌ಗಳಿಗೂ ಹೆಚ್ಚು ಫೇಮಸ್. ಇಲ್ಲಿಯ ಬಣ್ಣದ ಲೋಕದಿಂದ ಪ್ರತಿದಿನ ಸಾವಿರಾರು ಗಾಸಿಪ್‌ಗಳು ಬರುತ್ತಿರುತ್ತವೆ. ಹಾಗೆ ಬಾಲಿವುಡ್ ಮತ್ತು ದಕ್ಷಿಣದ ಸಿನಿಮಾಗಳಿಗೆ ಒಂದು ರೀತಿಯ ವಿಶೇಷ ಕನೆಕ್ಷನ್ ಹೊಂದಿವೆ. ತಮಿಳು ಪತ್ರಕರ್ತರೊಬ್ಬರ ಲೇಖನ ಬಾಲಿವುಡ್ ಅಂಗಳದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಈ ಲೇಖನ ಸೌಥ್ ಅಂಗಳದ ಸೂಪರ್ ಸ್ಟಾರ್ ಮತ್ತು ಬಾಲಿವುಡ್‌ನ ಖ್ಯಾತ ನಟಿಯ ಕುರಿತಾಗಿತ್ತು.
ಬಾಲಿವುಡ್ ನಟಿ ರೇಖಾ ಅವರ ಖಾಸಗಿ ಜೀವನ ಇಂದಿಗೂ ಕುತೂಹಲಕಾರಿಯಾಗಿದೆ. ಪ್ರೇಮ ವೈಫಲ್ಯ ಹಿನ್ನೆಲೆ ರೇಖಾ ಮದುವೆಯಾಗದೇ ಕುವರಿಯಾಗಿಯೇ ಉಳಿದುಕೊಂಡಿದ್ದಾರೆ ಎಂಬುವುದು ಸಿನಿ ಅಂಗಳದ ಮಾತು. ಅಮಿತಾಬ್ ಬಚ್ಚನ್ ಮತ್ತು ರೇಖಾ ನಡುವೆ ಪ್ರೇಮಾಂಕುರವಾಗಿತ್ತು. ಆದರೆ ಮದುವೆಗೆ ಅಮಿತಾಬ್ ಒಪ್ಪದ ಕಾರಣ ರೇಖಾ ಒಂಟಿಯಾಗಿದ್ದಾರೆ ಎಂದು ಹೇಳಲಾಗುತ್ತದೆ. 1979ರಲ್ಲಿ ಘಟನೆಯೊಂದರ ಬಗ್ಗೆ ಪ್ರಕಟವಾದ ಲೇಖನದಲ್ಲಿ ನಟಿ ರೇಖಾ ಚೆನ್ನೈನ ಹೋಟೆಲ್‌ನಲ್ಲಿ ಖ್ಯಾತ ನಟನೊಂದಿಗೆ ಇದ್ದಾಗಲೇ ಆತನ ಪತ್ನಿಯ ಕೈಗೆ ಸಿಕ್ಕಿ ಹಾಕಿಕೊಂಡಿದ್ರಂತೆ.
1981ರಲ್ಲಿ ಬಿಡುಗಡೆಯಾದ ತಮಿಳಿನ ಮಿಂಡಮ್ ಸಿನಿಮಾದಲ್ಲಿ ಕಮಲ್ ಹಾಸನ್, ಶ್ರೀದೇವಿ ಮತ್ತು ರೇಖಾ ನಟಿಸೋದು ಖಚಿತವಾಗಿತ್ತು. ಆದ್ರೆ ಕೊನೆ ಕ್ಷಣದಲ್ಲಿ ರೇಖಾ ಸ್ಥಾನಕ್ಕೆ ನಟಿ ದೀಪಾ ಅವರನ್ನು ಕರೆದುಕೊಂಡು ಬರಲಾಯ್ತು. ಕೊನೆ ಕ್ಷಣದಲ್ಲಿ ರೇಖಾ ಅವರನ್ನು ಸಿನಿಮಾದಿಂದ ಕೈ ಬಿಟ್ಟಿದ್ಯಾಕೆ ಎಂಬುದರ ಬಗ್ಗೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇಂದಿಗೂ ಈ ಸಿನಿಮಾದ ಕುರಿತ ಅಂತೆ-ಕಂತೆ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ .
ಇದನ್ನೂ ಓದಿ: ಎರಡೇ ಗಂಟೆಯಲ್ಲಿ ನಡೆದಿತ್ತು ನಟನ ಮದುವೆ; ಹನಿಮೂನ್‌ನಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಮನೆಗೆ ಓಡೋಡಿ ಬಂದ
1979 ವರ್ಷದ ಕೊನೆ ದಿನಗಳಲ್ಲಿ ನಾನು ಚೆನ್ನೈನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿಗೆ ಬಂದ ಮಹಿಳೆ ಕಮಲ್ ಮತ್ತು ರೇಖಾ ಕೋಣೆಯಲ್ಲಿ ಇದ್ದಾರಾ ಎಂದು ಸಿಬ್ಬಂದಿ ಬಳಿ ಕೇಳಿದರು. ನಂತರ ಕಮಲ್ ಹಾಸನ್ ಮತ್ತು ರೇಖಾ ಜೊತೆಯಲ್ಲಿದ್ದಾಗಲೇ ಇಬ್ಬರನ್ನು ಹಿಡಿದು ಎಲ್ಲರ ಮುಂದೆ ಅವಮಾನಿಸಿದ್ದರು. ಅಂದು ಹೋಟೆಲ್‌ಗೆ ಬಂದಿದ್ದ ಮಹಿಳೆ ಕಮಲ್ ಹಾಸನ್ ಪತ್ನಿ ವಾಣಿ ಆಗಿದ್ದರು ಎಂದು ಲೇಖನದಲ್ಲಿ ಬರೆಯಲಾಗಿತ್ತು.
ಈ ಘಟನೆಯ ಬಳಿಕ ದಿಢೀರ್ ಅಂತ ಯಾವುದೇ ಕಾರಣ ಇಲ್ಲದೇ ರೇಖಾ ಅವರನ್ನು ಚಿತ್ರದಿಂದ ಕೈ ಬಿಡಲಾಯ್ತು. ಆದ್ರೆ ಈ ಘಟನೆ ಮತ್ತು ಲೇಖನದ ಬಗ್ಗೆ ರೇಖಾ ಮತ್ತು ಕಮಲ್ ಹಾಸನ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ರೇಖಾ ಅವರೇ ಚಿತ್ರದಿಂದ ಹೊರಗುಳಿದ ಕಾರಣ ಆ ಸ್ಥಾನಕ್ಕೆ ದೀಪಾ ಬಂದರು ಎಂದು ನಿರ್ದೇಶಕರು ಹೇಳಿದ್ದರು. ಕಮಲ್ ಹಾಸನ್ ಕನ್ನಡದ ಪುಷ್ಪಕ ವಿಮಾನ, ರಾಮ ಶ್ಯಾಮ, ಭಾಮಾ ಸಿನಿಮಾದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಯಾವ ತಾಯಿಗೂ ಇಂಥಾ ಕಷ್ಟ ಬರದಿರಲಿ; ದೇವರಿಗೆ ಕೈ ಮುಗಿದ ಕೆಜಿಎಫ್ ನಟಿ ಶಾಂಭವಿ ಫ್ಯಾನ್ಸ್