ಎರಡೇ ಗಂಟೆಯಲ್ಲಿ ನಡೆದಿತ್ತು ನಟನ ಮದುವೆ; ಹನಿಮೂನ್‌ನಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಮನೆಗೆ ಓಡೋಡಿ ಬಂದ
ಬಾಲಿವುಡ್ ಜೋಡಿ ಮದುವೆ ಕೇವಲ ಎರಡು ಗಂಟೆಯಲ್ಲಿ ನೆರವೇರಿತ್ತು. ಹನಿಮೂನ್ ವೇಳೆ ಅನಾರೋಗ್ಯದಿಂದಾಗಿ ಪ್ರಪಂಚ ಸುತ್ತುವ ಕನಸು ಅರ್ಧಕ್ಕೆ ನಿಂತಿತು.
ಮುಂಬೈ: ಇವರಿಬ್ಬರು ಬಾಲಿವುಡ್‌ನ ಖ್ಯಾತ ಕಲಾವಿದರು. ಇಂದಿಗೂ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಇವರಿಬ್ಬರು ಎಲ್ಲಾ ಪಾತ್ರಗಳಿಗೆ ಜೀವ ತುಂಬುವ ಸಾಮರ್ಥ್ಯವನ್ನು ಹೊಂದಿದ್ದಾರೆ. ತಮ್ಮ ಮದುವೆಗೆ ಯಾವ ಮಾಧ್ಯಮದ ಸಿಬ್ಬಂದಿ ಬರಬಾರದು ಎಂದು ಎಲ್ಲರಿಗೂ ತಪ್ಪಾದ ವಿಳಾಸ ನೀಡಿದ್ದರು. ಮದುವೆ ಸಹ ಕೇವಲ ಎರಡು ಗಂಟೆಯಲ್ಲಿ ಅತ್ಯಾಪ್ತರ ಸಮ್ಮುಖದಲ್ಲಿ ನಡೆದಿತ್ತು. ಮದುವೆ ಬಳಿಕ ಇಬ್ಬರು ಎರಡು ತಿಂಗಳು ಹನಿಮೂನ್‌ಗೆ ಹೋಗಿದ್ದರು. ಪ್ಲಾನ್ ಪ್ರಕಾರ, ಇಬ್ಬರು ತಿಂಗಳು ಪ್ರಪಂಚದ ಪ್ರಮುಖ ದೇಶಗಳನ್ನು ಸುತ್ತುವ ಕನಸು ಕಂಡಿದ್ದರು. ಆದ್ರೆ ನಟ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಅರ್ಧದಲ್ಲಿಯೇ ಭಾರತಕ್ಕೆ ಹಿಂದಿರುಗಿದ್ದರು. ಈ ವಿಷಯವನ್ನು ಹಲವು ಸಂದರ್ಶನಗಳಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.
ಬಾಲಿವುಡ್‌ನ ಸ್ಟಾರ್ ಜೋಡಿಯಾಗಿರುವ ಅಜಯ್ ದೇವಗನ್ ಮತ್ತು ಕಾಜೋಲ್ ಹನಿಮೂನ್ ಅರ್ಧಕ್ಕೆ ಬಿಟ್ಟು ಬಂದ ದಂಪತಿ. ಮದುವೆ ಬಳಿಕ ಇಡೀ ಪ್ರಪಂಚ ಸುತ್ತಬೇಕು ಎಂದು ಕಾಜೋಲ್ ಕನಸು ಕಂಡಿದ್ದರು. ಇದಕ್ಕಾಗ ಎರಡು ತಿಂಗಳ ಹನಿಮೂನ್ ಪ್ಲಾನ್ ಸಹ ಮಾಡಿಕೊಂಡಿದ್ದರು. ಇದಕ್ಕೆ ಅಜಯ್ ದೇವಗನ್ ಸಹ ಒಪ್ಪಿಕೊಂಡಿದ್ದರು. ಹಾಗೆ ಮದುವೆಗೆ ಮೂರನೇ ವ್ಯಕ್ತಿಗಳು ಇರಬಾರದು ಎಂದು ಪ್ಲಾನ್ ಮಾಡಿ, ವಿಶೇಷವಾಗಿ ಮಾಧ್ಯಮಗಳಿಗೆ ತಪ್ಪಾದ ವಿಳಾಸ ನೀಡಿದ್ದರು. ಒಂದು ವೇಳೆ ನಾವು ವಿಳಾಸ ಹೇಳದಿದ್ದರೆ ಮಾಧ್ಯಮದವರು ಹೇಗಾದ್ರೂ ಪತ್ತೆ ಮಾಡುತ್ತಾರೆ ಅನ್ನೋದು ಗೊತ್ತಿತ್ತು. ನಾವೇ ತಪ್ಪು ವಿಳಾಸ ನೀಡಿದ್ದೇವೆ ಎಂದು ಕಾಜೋಲ್ ಹೇಳಿಕೊಂಡಿದ್ದಾರೆ.
ಅಜಯ್ ದೇವಗನ್ ಹೆಚ್ಚು ಪ್ರಯಾಣ ಮಾಡಲ ಇಷ್ಟಪಡಲ್ಲ. ಆದರೂ ನನ್ನ ಬಲವಂತಕ್ಕೆ ಎರಡು ತಿಂಗಳ ಹನಿಮೂನ್‌ಗೆ ಒಪ್ಪಿಕೊಂಡಿದ್ದರು . ಎರಡು ದೇಶ ಸುತ್ತುವಷ್ಟರಲ್ಲಿ ಅಜಯ್ ದೇವಗನ್ ಹೋಮ್ ಸಿಕ್‌ನಿಂದ ಭಾರತಕ್ಕೆ ಹೋಗೋಣ ಅಂತ ಹೇಳಲು ಆರಂಭಿಸಿದರು. ಅನಿವಾರ್ಯವಾಗಿ ಭಾರತಕ್ಕೆ ಬರಬೇಕಾಯ್ತು ಎಂದು ಕಾಜೋಲ್ ತಮ್ಮ ಹನಿಮೂನ್ ಕಥೆಯನ್ನು ಕಪಿಲ್ ಶರ್ಮಾ ಶೋನಲ್ಲಿ ಹೇಳಿಕೊಂಡಿದ್ದರು.
ಇದನ್ನೂ ಓದಿ: ತಂದೆ ಕ್ರಿಶ್ಚಿಯನ್,ತಾಯಿ ಸಿಖ್, ಸೋದರ ಮುಸ್ಲಿಂ, ಪತ್ನಿ ಹಿಂದೂ; ಸಾಲು ಸಾಲು ಸೂಪರ್‌ಹಿಟ್ ಸಿನಿಮಾ ಕೊಟ್ಟ ನಟನ ಖಾಸಗಿ ಬದುಕು
ಅಜಯ್ ದೇವಗನ್ ಮತ್ತು ಕಾಜೋಲ್ 1999ರಲ್ಲಿ ಮದುವೆ ನಡೆದಿತ್ತು. ದೇಶ ಸುತ್ತಬೇಕು ಎಂಬ ಕಾರಣಕ್ಕೆ ಅವಸರವಾಗಿ ಅಜಯ್ ದೇವಗನ್ ಮತ್ತು ಕಾಜೋಲ್ ಮದುವೆಯಾಗಿದ್ದರು. ಮನೆ ಮೇಲೆ ನಮ್ಮ ಮದುವೆ ನಡೆಯಿತು. ನಾನು ಕೋಣೆಯಿಂದ ಹೊರ ಬರುತ್ತಿದ್ದಂತೆ ಸರಳವಾಗಿ ಮದುವೆ ಆಯ್ತು ಎಂದು ಅಜಯ್ ದೇವಗನ್ ಹೇಳಿದ್ದಾರೆ.
ಇಷ್ಕ್, ದಿಲ್ ಕ್ಯಾ ಕರೇ, ಪ್ಯಾರ್ ತೋ ಹೋನಾ ಹಿ ತಾ, ರಾಜು ಚಾಚಾ, ಗುಂಡೂರಾಜ್, ತಾನ್ಹಾಜೀ ಸಿನಿಮಾಗಳಲ್ಲಿ ಅಜಯ್ ದೇವಗನ್ ಮತ್ತು ಕಾಜೋಲ್ ಜೊತೆಯಾಗಿ ನಟಿಸಿದ್ದಾರೆ. ಮದುವೆಗೂ ಮುನ್ನ ಅಕ್ಷಯ್ ಕುಮಾರ್ ಮೇಲೆ ಕಾಜೋಲ್‌ಗೆ ಕ್ರಶ್ ಎಂಬ ವಿಷಯವನ್ನು ಕರಣ್ ಜೋಹರ್ ಕಾರ್ಯಕ್ರಮದಲ್ಲಿ ರಿವೀಲ್ ಮಾಡಿದರು.
ಇದನ್ನೂ ಓದಿ: ಫ್ಲಾಪ್ ನಟನಾದ ಸೂಪರ್‌ಸ್ಟಾರ್ ಮಗ, 12ನೇ ವಯಸ್ಸಿನಲ್ಲಿಯೇ ಡ್ರಗ್ಸ್ ದಾಸ, ಈಗ ಕನ್ನಡದ ನಟಿ ಜೊತೆ ಸ್ಕ್ರೀನ್ ಶೇರ್