ರಾಮ್ ಚರಣ್ ಜತೆ 'ರಮಿಸಲು' ರೆಡಿಯಾದ ರವೀನಾ ಟಂಡನ್ ಮಗಳು ರಾಶಾ ತಡಾನಿ
ಬಾಲಿವುಡ್ ಮೂಲದ ನಟಿ ರವೀನಾ ಟಂಡನ್, 1991ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಬಾಲಿವುಡ್ ಸೇರಿದಂತೆ ಸಾಕಷ್ಟು ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ರವೀನಾ, ಕನ್ನಡದಲ್ಲಿ ಉಪೇಂದ್ರ ಜತೆ 'ಉಪೇಂದ್ರ' ಹಾಗೂ ಯಶ್ ನಾಯಕತ್ವದ 'ಕೆಜಿಎಫ್' ಚಿತ್ರದಲ್ಲಿ ನಟಿಸಿದ್ದಾರೆ.
ಟಾಲಿವುಡ್ ಚಿತ್ರರಂಗದಿಂದ ಹೊಸ ಸುದ್ದಿಯೊಂದು ಸ್ಫೋಟವಾಗಿದೆ. ಬಾಲಿವುಡ್ ನಟಿ ರವೀನಾ ಟಂಡನ್ ಮಗಳು ಸೌತ್ ಇಂಡಸ್ಟ್ರಿ ಮೂಲಕ ಸಿನಿಮಾರಂಗಕ್ಕೆ ಕಾಲಿಡಲಿದ್ದಾಳೆ. ಅದು ನಟ ರಾಮ್ ಚರಣ್ ಜೋಡಿಯಾಗಿ. ರವೀನಾ ಟಂಡನ್ ಹಾಗೂ ಅನಿಲ್ ತಡಾನಿ ಮಗಳು ರಾಶಾ ತಡಾನಿ ಸದ್ಯದಲ್ಲೇ ಬಣ್ಣದಲೋಕಕ್ಕೆ ಕಾಲಿಡಲಿದ್ದು, ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ರವೀನಾ ಮಗಳು ರಾಶಾ ತಡಾನಿ ನಟ ರಾಮ್ ಚರಣ್ ಜೋಡಿಯಾಗಿ ನಟಿಸಲಿದ್ದಾರೆ. ರಾಶಾಗೆ ಈಗ 18 ವರ್ಷ ಎನ್ನಲಾಗಿದೆ.
ಬಾಲಿವುಡ್ ಮೂಲದ ನಟಿ ರವೀನಾ ಟಂಡನ್, 1991ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಬಾಲಿವುಡ್ ಸೇರಿದಂತೆ ಸಾಕಷ್ಟು ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ರವೀನಾ, ಕನ್ನಡದಲ್ಲಿ ಉಪೇಂದ್ರ ಜತೆ 'ಉಪೇಂದ್ರ' ಹಾಗೂ ಯಶ್ ನಾಯಕತ್ವದ 'ಕೆಜಿಎಫ್' ಚಿತ್ರದಲ್ಲಿ ನಟಿಸಿದ್ದಾರೆ. ರವೀನಾ ಗಂಡ ಅನಿಲ್ ತಡಾನಿ ಬಿಸಿನೆಸ್ ಮ್ಯಾನ್. ಇದೀಗ ರವೀನಾ ಮಗಳು ರಾಶಾ ತಡಾನಿ ಸಿನಿಉದ್ಯಮದ ಕಡೆ ಮುಖ ಮಾಡುವುದರಲ್ಲಿದ್ದಾಳೆ.
ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ 'ನೆನಪಿರಲಿ' ಖ್ಯಾತಿಯ ನಟ ಪ್ರೇಮ್!
'18 ವರ್ಷದ ರಾಶಾ ತಮಗಿಂತ ಡಬ್ಬಲ್ ವಯಸ್ಸು ಮೀರಿರುವ ರಾಮ್ ಚರಣ್ ಜತೆ ನಾಯಕಿಯಾಗಿ ನಟಿಸುತ್ತಾರೆಯೇ' ಎಂಬುದು ಹಲವರ ಪ್ರಶ್ನೆ ಆಗಿರಬಹುದು. ಇದಕ್ಕೆ ಉತ್ತರ ಸರಳ.. ರಾಮ್ ಚರಣ್ ಉಪ್ಪೇನ ಸಿನಿಮಾದಲ್ಲಿ ನಟಿಸಿದಾಗ ನಟಿ ಕೃತಿ ಶೆಟ್ಟಿಗೆ 17 ವರ್ಷ ವಯಸ್ಸಾಗಿತ್ತು ಅಷ್ಟೇ. ಆದರೆ ನಿರ್ದೇಶಕ ಬುಚ್ಚಿ ಬಾಬು ಕೃತಿ ಪಾತ್ರವನ್ನು ತುಂಬಾ ಚೆನ್ನಾಗಿ ಕಟ್ಟಿ ಕೊಟ್ಟಿದ್ದರು. ಹೀಗಾಗಿ, ಅದೇ ನಿರ್ದೇಶಕರ ಚಿತ್ರವಾದ್ದರಿಂದ, ರವೀನಾ ತಮ್ಮ ಮಗಳನ್ನು ಬುಚ್ಚಿ ಬಾಬು ಚಿತ್ರದ ಮೂಲಕ ಪರಿಚಯಿಸಲು ಸಿದ್ಧರಾಗಿದ್ದಾರೆ ಎನ್ನುತ್ತಿವೆ ಮೂಲಗಳು.
ಬಾಲ್ಯದ ನೆನಪನ್ನು ಸ್ವತಃ ಅನುಭವಿಸಲು ಆಸ್ಟ್ರಿಯಾಗೆ ಹೋದ ಸಮಂತಾ!
ಒಟ್ಟಿನಲ್ಲಿ, ನಟಿ ರವೀನಾ ಮಗಳು ಸೌತ್ ಚಿತ್ರರಂಗದ ಮೂಲಕ ಸಿನಿಮಾ ವೃತ್ತಿ ಪ್ರಾರಂಭಿಸಲಿದ್ದಾಳೆ ಎನ್ನಲಾಗುತ್ತಿದೆ. ರಾಶಾಳನ್ನು ಸ್ವಾಗತಿಸಲು ಚಿತ್ರರಂಗ ರೆಡಿಯಾಗುತ್ತಿದೆ ಎನ್ನಬಹುದೇ?