ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ 'ನೆನಪಿರಲಿ' ಖ್ಯಾತಿಯ ನಟ ಪ್ರೇಮ್!
ಕಾವೇರಿ ನದಿ ನೀರಿನ ಹಂಚಿಕೆ'ಗೆ ಸಂಬಂಧಪಟ್ಟಂತೆ, ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ದೊಡ್ಡ ಜಟಾಪಟಿಯೇ ನಡೆಯುತ್ತಿದೆ. ಕನ್ನಡ ಚಿತ್ರರಂಗ ಕೂಡ ಈ ಹೋರಾಟದಲ್ಲಿ ಭಾಗಿಯಾಗಿತ್ತು. ಹಲವು ಕನ್ನಡಪರ ಸಂಘಟನೆಗಳು ಸೇರಿದಂತೆ, ಮೊನ್ನೆ ಕರ್ನಾಟಕ ಬಂದ್ ಆಚರಿಸಿ, ಕಾವೇರಿ ನೀರಿಗಾಗಿ ಹೋರಾಟ ಆರಂಭಿಸಿದ್ದಾರೆ.
ಸ್ಯಾಂಡಲ್‌ವುಡ್ ಹ್ಯಾಂಡ್‌ಸಮ್ ನಟ 'ನೆನಪಿರಲಿ' ಖ್ಯಾತಿಯ ಪ್ರೇಮ್ ಲೆಟರ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ನಟ ಪ್ರೇಮ್, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ 'ರಕ್ತ (Blood)'ದಲ್ಲಿ ಪತ್ರ ಬರೆದಿದ್ದಾರೆ. "PM of India, Please do justice for our Cauvery and Karnataka.. ಕಾವೇರಿ ನಮ್ಮದು" ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತಾವು ರಕ್ತದಲ್ಲಿ ಪತ್ರ ಬರೆಯುತ್ತಿರುವುದನ್ನು ನಟ ಪ್ರೇಮ್ ವೀಡಿಯೋ ಕೂಡ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಒಟ್ಟಿನಲ್ಲಿ, 'ಕಾವೇರಿ ನದಿ ನೀರಿನ ಹಂಚಿಕೆ'ಗೆ ಸಂಬಂಧಪಟ್ಟಂತೆ, ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ದೊಡ್ಡ ಜಟಾಪಟಿಯೇ ನಡೆಯುತ್ತಿದೆ. ಕನ್ನಡ ಚಿತ್ರರಂಗ ಕೂಡ ಈ ಹೋರಾಟದಲ್ಲಿ ಭಾಗಿಯಾಗಿತ್ತು. ಹಲವು ಕನ್ನಡಪರ ಸಂಘಟನೆಗಳು ಸೇರಿದಂತೆ, ಮೊನ್ನೆ ಕರ್ನಾಟಕ ಬಂದ್ ಆಚರಿಸಿ, ಕಾವೇರಿ ನೀರಿಗಾಗಿ ಹೋರಾಟ ಆರಂಭಿಸಿದ್ದಾರೆ. ಸದ್ಯ ಈ ವಿವಾದವು ಸುಪ್ರಿಂ ಕೋರ್ಟ್ ಅಂಗಳದಲ್ಲಿದ್ದು, ಮುಂದೆ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.
ಆದರೆ, ನೆನಪಿರಲಿ ಪ್ರೇಮ್ ಮಾಡಿರುವ ಈ ಪೋಸ್ಟ್‌ಗೆ ಪೊಸೆಟಿವ್ ಗಿಂತ ಹೆಚ್ಚು ನೆಗೆಟಿವ್ ಕಾಮೆಂಟ್‌ಗಳು ಬಂದಿವೆ. ಕಾರಣ, "ಕಾವೇರಿ ನೀರು ಸಮಸ್ಯೆ' ಸದ್ಯ ಸುಪ್ರಿಂ ಕೋರ್ಟ್' ಅಂಗಳದಲ್ಲಿ ವಿಚಾರಣೆ ಹಂತದಲ್ಲಿದೆ. ಎರಡು ರಾಜ್ಯಗಳ ವಿಷಯದಲ್ಲಿ ಕೇಂದ್ರ ಸರ್ಕಾರ ಸುಮ್ಮನೇ ಹಸ್ತಕ್ಷೇಪ ಮಾಡಲು ಬರುವುದಿಲ್ಲ. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಕಾನೂನಾತ್ಮಕವಾಗಿ ಪ್ರಧಾನಿ ಬಳಿಗೆ ಹೋದರೆ, ಮಧ್ಯಸ್ಥಿಕೆ ವಹಿಸಲು ಅವಕಾಶ ಇದೆಯೇ ಹೊರತೂ, ರಾಜ್ಯಗಳ ವಿಷಯದಲ್ಲಿ ಕೇಂದ್ರ ಸುಮ್ಮನೇ ಹಸ್ತಕ್ಷೇಪ ಮಾಡಲು ಆಗದು" ಎಂದು ಕೆಲವರು ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.
ಪ್ರೇಮ್ ಪೋಸ್ಟ್‌ಗೆ ಇನ್‌ಸ್ಟಾಗ್ರಾಂ'ನಲ್ಲಿ 'ಶ್ರೀರಂಗ ಪುರಾಣಿಕ್' ಎನ್ನವವರು "ಪ್ರೇಮ ಅವರೇ... ನೀವು ಸಂವಿಧಾನ , ಕಾನೂನು ತಿಳದಿಕೊಂಡಿರುವಿರ..? ದ್ವಿ ಸರ್ಕಾರ ಪದ್ದತಿ ನಮ್ಮಲ್ಲಿ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ವ್ಯವಸ್ಥೆ ಇದೆ. ಎರಡು ರಾಜ್ಯಗಳ ನಡುವಿನ ವ್ಯಾಜ್ಯದಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಬರುತ್ತದೆಯೇ? ನಮ್ಮ ಕಾನೂನಿನಲ್ಲಿ ಆ ಅವಕಾಶವಿಲ್ಲ. ಎರಡು ರಾಜ್ಯದ ಮುಖ್ಯಮಂತ್ರಿಗಳು ಕೇಂದ್ರ ಬಳಿಹೋದಾಗ ಅವರನ್ನು ಸಮಾಧಾನ ಮಾಡಬಹುದೇ ವಿನಹ ಅವರ ಆಡಳಿತದಲ್ಲಿ ಹಸ್ತಕ್ಷೇಪ ಬರೋಲ್ಲ. ಕೇವಲ ಭದ್ರತಾ ವಿಷಯದಲ್ಲಿ ಮಾತ್ರ ಕೇಂದ್ರ ಸರ್ಕಾರದ ನಿರ್ಧಾರ ತೆಗೆದುಕೊಳ್ಳುವ ಅವಕಾಶ ಸಂವಿಧಾನ ಕಲ್ಪಿಸಿದೆ.
ಇಂಜೆಕ್ಷನ್ ತಗೊಳ್ತಿರೋದು ಸಿಹಿ; ನೋವು ಅನುಭವಿಸ್ತಿರೋದು ರಾಮ!
ರಾಜ್ಯದಲ್ಲಿ ಅಸ್ಥಿರತೆ , ಅಜಾಗರೂಕತೆ ಉಂಟಾಗಿ ರಾಷ್ಟಪತಿ ಆಡಳಿತ ಉಂಟಾದರೆ ಕೇಂದ್ರ ಆಡಳಿತ ಇರುತ್ತದೆ. ಸದ್ಯ ಕಾವೇರಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿದೆ. ನ್ಯಾಯಾಂಗ ಸ್ವತಂತ್ರ ಅದರಲ್ಲಿ ಶಾಸನಕಾಂಗ ಕಾರ್ಯಾಂಗ ಹಸ್ತಕ್ಷೇಪ ಮಾಡಲು ಬರೋಲ್ಲ. ಕಾವೇರಿ ವಿವಾದಲ್ಲಿ ತ್ರಿಬ್ಯುನಲ್ ರಚನೆಯಾಗಿದೆ. ಯಾವುದೇ ರಾಜ್ಯದ ತಕರಾರು, ಸಮಸ್ಯೆ ಇದ್ದರು (ಕೇರಳ, ತಮಿಳುನಾಡು ಮತ್ತು ಕರ್ನಾಟಕದ) ಆಯಾ ರಾಜ್ಯ ಸರ್ಕಾರಗಳು ತಮ್ಮ ಸಮಸ್ಯೆಯಹಳನ್ನು ತ್ರಿಬ್ಯುನಲ್ ಮುಂದೆ ಮುಂದಡಬೇಕು. ಪ್ರಸ್ತುತ ಸಿದ್ದರಾಮಯ್ಯ ಸರ್ಕಾರ ಸಮಸ್ಯೆಯನ್ನು ಸಮರ್ಪಕವಾಗಿ ಮಂಡಿಸಿದೇ.. ? ಇಲ್ಲವಲ್ಲ. ಅವರು ಸೂಚಿಸು ಮೊದಲೇ ನೀರು ಬಿಟ್ಟಿದೆ ಅದು ಅವರು ಕೋರ್ಟ್ ಹೇಳುವುದಕ್ಕಿಂತ ಹೆಚ್ಚಾಗಿ. ಮೇಲಾಗಿ ಕಾಂಗ್ರೆಸ್ ಪಕ್ಷದ ಮಿತ್ರಪಕ್ಷವಾದ ಡಿಎಮ್ ಕೆ ಯೇ ತಮಿಳುನಾಡಿನಲ್ಲಿ ಇದೆ ಯಾಕೆ ಆ ರಾಜ್ಯದ ಮುಖ್ಯಮಂತ್ರಿಗಳೊಡನೆ ಚರ್ಚೆ ಮಾಡಿ ಕರ್ನಾಟಕ ಪರಿಸ್ಥಿತಿ ವಿವರಿಸಬಾರದು.
ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಚೇತರಿಕೆ ಕಂಡ ವಿವೇಕ್ ಅಗ್ನಿಹೋತ್ರಿ 'ದಿ ವ್ಯಾಕ್ಸಿನ್ ವಾರ್'
ಹೀಗು ಮಾಡಬಹುದು ತ್ರಿಬ್ಯುನಲ್ ಸೂಚಿಸದರು ನೀರು ಬಿಡದೆ ಸುಪ್ರೀಂ ಕೋರ್ಟ್ ನಲ್ಲಿ ಹೋಗಿ ಕರ್ನಾಟಕ ಪರಿಸ್ಥಿತಿ ವಿವರಿಸಿಬೇಕಾಗಿತ್ತು. ಅದ್ಯಾವದನ್ನು ರಾಜ್ಯ ಸರ್ಕಾರ ಮಾಡಿಲ್ಲ. ಎಲ್ಲವೂ ಕೇಂದ್ರ ಸರ್ಕಾರ ಮಾಡಬೇಕಂದರೆ ರಾಜ್ಯ ಸರ್ಕಾರ ನಮಗೆ ಏತಕ್ಕೆ ಬೇಕು , ಯಾಕಿರಬೇಕು? ರಾಜ್ಯದ ಹೊಣೆ ಕೇಂದ್ರ ಸರ್ಕಾರದ್ದೋ ರಾಜ್ಯ ಸರ್ಕಾರದ್ದೋ? ಕಾವೇರಿ ನೀರಿನ ವಿಷಯ ನಡೆಯುವುತ್ತಿರುವ ರಾಜಕೀಯ ಅದರಲ್ಲಿ ನಿಮ್ಮಂತಹ ಕಲಾವಿದರು ಭಾಗಿಯಾಗುತ್ತಿರುವುದು ನಿಜಕ್ಕೂ ಬೇಸರ ವಿಷಯ..ರಾಜ್ಯ ಸರ್ಕಾರ ಕೇಳಬೇಕಾದ ಪ್ರಶ್ನೆ ಕೇಂದ್ರ ಸರ್ಕಾರಕ್ಕೆ ಕೇಳುತ್ತಿದ್ದೀರಿ. ಕಾವೇರಿ ಒಂದೆಯಲ್ಲ ಉತ್ತರ ಕರ್ನಾಟಕ ನೀರನ ವ್ಯಾಜ್ಯಗಳು ಬಹಳ ಇವೆ.." ಎಂದು ಕಾಮೆಂಟ್ ಮಾಡಿದ್ದಾರೆ.