Asianet Suvarna News Asianet Suvarna News

ಬಾಲ್ಯದ ನೆನಪನ್ನು ಸ್ವತಃ ಅನುಭವಿಸಲು ಆಸ್ಟ್ರಿಯಾಗೆ ಹೋದ ಸಮಂತಾ!

ಹಾಲಿವುಡ್‌ನ 'ದಿ ಸೌಂಡ್ ಆಫ್ ಮ್ಯೂಸಿಕ್' ಸಿನಿಮಾದ ಶೂಟಿಂಗ್ ನಡೆದಿದ್ದುಇದೇ ಜಾಗದಲ್ಲಿ. ಇದು ನಟಿ ಸಮಂತಾರ ಬಾಲ್ಯದ ಫೇವರೆಟ್ ಎಸ್ಕೇಪ್ ಮೂವಿಯಾಗಿತ್ತು. ಸಮಂತಾಗೆ ಖುಷಿ ಅಥವಾ ದುಃಖವಾದಾಗ ಆ ಸಿನಿಮಾ ನೋಡುತ್ತಿದ್ದರಂತೆ.

Actress Samantha enjoying Vacations in Austria
Author
First Published Oct 1, 2023, 4:20 PM IST

ಆಲ್ ಇಂಡಿಯಾ ಖ್ಯಾತಿಯ ನಟಿ ಸಮಂತಾ ಇದೀಗ ತಮ್ಮ ಫೇವರೆಟ್ ಪ್ಲೇಸ್ ಆಸ್ಟ್ರಿಯಾಗೆ ತೆರಳಿದ್ದಾರೆ. ನಟಿ ಸಮಂತಾ ಸದ್ಯ ತಮ್ಮ ವೃತ್ತಿ ಜೀವನಕ್ಕೆ ಬ್ರೇಕ್ ತೆಗೆದುಕೊಂಡಿದ್ದು ಹೆಚ್ಚಿನ ಜನರಿಗೆ ಗೊತ್ತಿದೆ. ತಮ್ಮ ಮೇಯೋಸಿಟಿಸ್ ಖಾಯಲೆ ಟ್ರೀಟ್‌ಮೆಂಟ್‌ಗೆ ಅಮೆರಿಕಾಕ್ಕೆ ತೆರಳಿದ್ದ ನಟಿ ಸಮಂತಾ, ಅಲ್ಲಿಂದ ಇದೀಗ ಆಸ್ಟ್ರಿಯಾಗೆ ಹಾರಿದ್ದಾರೆ. ಅಲ್ಲಿ ತಮ್ಮ ಬಾಲ್ಯದ ನೆನಪನ್ನು ಜ್ಞಾಪಿಸುವ ಜಾಗ 'ಸಲ್ಜಬುರ್ಗ್'ನಲ್ಲಿ ಸಮಂತಾ ರಜೆಯ ಮಜಾ ಅನುಭವಿಸುತ್ತಿದ್ದಾರೆ. 

ಹೌದು, ನಟಿ ಸಮಂತಾ ಬಿಡುಗಡೆಯಾದ ಇತ್ತೀಚಿನ ಸಿನಿಮಾಗಳ ಬಳಿಕ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಕಾರಣಗಳು ಹಲವು ಇರಬಹುದು. ಮುಖ್ಯವಾಗಿ, ಸಮಂತಾ ಅನಾರೋಗ್ಯಕ್ಕೆ ಟ್ರೀಟ್ಮೆಂಟ್ ತೆಗೆದುಕೊಳ್ಳಬೇಕಾಗಿದೆ. ಜತೆಗೆ, ನಟಿಗೆ ಸ್ವಲ್ಪ ರೆಸ್ಟ್ ಬೇಕಾಗಿದೆ. ಹೀಗಾಗಿ ಶೂಟಿಂಗ್‌ನಿಂದ ಬ್ರೇಕ್ ತೆಗೆದುಕೊಂಡಿರುವ ನಟಿ ಸಮಂತಾ, ಇದೀಗ ಆಸ್ಟ್ರಿಯಾದ ಸುಂದರ ಪರಿಸರಗಳಲ್ಲಿ ಕುಳಿತು ತಮ್ಮ ಬಾಲ್ಯದ ನೆನಪುಗಳಿಗೆ ಜಾರಿದ್ದಾರೆ. 

ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ 'ನೆನಪಿರಲಿ' ಖ್ಯಾತಿಯ ನಟ ಪ್ರೇಮ್!

ಹಾಲಿವುಡ್‌ನ 'ದಿ ಸೌಂಡ್ ಆಫ್ ಮ್ಯೂಸಿಕ್' ಸಿನಿಮಾದ ಶೂಟಿಂಗ್ ನಡೆದಿದ್ದುಇದೇ ಜಾಗದಲ್ಲಿ. ಇದು ನಟಿ ಸಮಂತಾರ ಬಾಲ್ಯದ ಫೇವರೆಟ್ ಎಸ್ಕೇಪ್ ಮೂವಿಯಾಗಿತ್ತು. ಸಮಂತಾಗೆ ಖುಷಿ ಅಥವಾ ದುಃಖವಾದಾಗ ಆ ಸಿನಿಮಾ ನೋಡುತ್ತಿದ್ದರಂತೆ. 'ಈ ಚಿತ್ರ ನನ್ನನ್ನು ಯಾವುದೇ ವಾಸ್ತವದಿಂದ ಮಾಯಾ ಲೋಕಕ್ಕೆ ಕರೆದುಕೊಂಡು ಹೋಗಿ ಸಖತ್ ಖುಷಿ ಕೊಡುತ್ತಿತ್ತು' ಎಂದಿದ್ದಾರೆ ನಟಿ ಸಮಂತಾ. 

ಸ್ಯಾಂಡಲ್‌ವುಡ್‌ ನಟ ನಾಗಭೂಷಣ್‌ ಕಾರು ಅಪಘಾತ: ಮಹಿಳೆ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

ಅಂದಹಾಗೆ, ನಟಿ ಸಮಂತಾ ಹಾಗೂ ನಟ ವಿಜಯ್ ದೇವರಕೊಂಡ ಜೋಡಿಯ ಇತ್ತೀಚೆಗೆ ತೆರೆಕಂಡಿದ್ದ 'ಖುಷಿ' ಸಿನಿಮಾ, ಇದೀಗ ಓಟಿಟಿಯಲ್ಲಿಯೂ ನೋಡಲು ಲಭ್ಯವಿದೆ. ಈ ಮೂಲಕ ಅವರಿಬ್ಬರ ಅಥವಾ ಈ ಜೋಡಿಯ ಫ್ಯಾನ್ಸ್ ಅದನ್ನು ಮತ್ತೆ ಬೇಕಾದರೆ ನೋಡಬಹುದು. ಒಟ್ಟನಲ್ಲಿ ನಟಿ ಸಮಂತಾ ಇದೀಗ ಹಾಯಾಗಿ ವಿದೇಶಗಳಲ್ಲಿ ದಿನಕಳೆಯುತ್ತಿದ್ದಾರೆ. 

Follow Us:
Download App:
  • android
  • ios