ನನ್ನ ಸಿನಿಮಾ ಸೋಲಿಗೆ ಸೌತ್ ಸಿನಿಮಾ ಅಬ್ಬರವೇ ಕಾರಣ: ಬೆಚ್ಚಿಬಿದ್ದ ಬಾಲಿವುಡ್!
"ಕೆಲವು ಚಿತ್ರಗಳು ತುಂಬಾ ಒಳ್ಳೆಯ ಚಿತ್ರಗಳೇ ಇದ್ದರೂ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡದ ಕಾರಣ ಜನರಿಗೆ ಚಿತ್ರದ ಬಗ್ಗೆ ಏನೂ ಗೊತ್ತಿರುವುದಿಲ್ಲ. ಆದರೆ, ಕೆಲವು ವರ್ಷಗಳ ಬಳಿಕ ಜನರು ಅದನ್ನು ನೋಡುತ್ತಾರೆ, ಅಂದು ಜನರಿಗೆ ಅದು ತಲುಪುತ್ತದೆ" ಎಂದಿದ್ದಾರೆ ನಟಿ ಪರಿಣೀತಿ ಚೋಪ್ರಾ.

ಕೆಲವರು ಇರುವುದೇ ಹಾಗೆ? ಎಂದೋ ನಡೆದ ಘಟನೆಗೆ ಇಂದು ಕ್ಲಾರಿಫಿಕೇಶನ್ ಕೊಟ್ಟು ಸಡನ್ನಾಗಿ ಸೆನ್ಸೇಷನ್ ಕ್ರಿಯೇಟ್ ಮಾಡಿಬಿಡುತ್ತಾರೆ. ಈಗ ಆಗಿರುವದೋ ಅದೇ ಘಟನೆ. ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಇತ್ತೀಚೆಗೆ ನಡೆದ ರೇಡಿಯಾ ಸಂದರ್ಶನವೊಂದರಲ್ಲಿ 2017ರಲ್ಲಿ ಬಿಡುಗಡೆಯಾದ ತಮ್ಮ ಚಿತ್ರದ ಸೋಲಿಗೆ ಸೌತ್ ಚಿತ್ರ 'ಬಾಹುಬಲಿ' ಕಾರಣ ಎಂಬ ದೋಷಾರೋಪಣೆ ಮಾಡಿದ್ದಾರೆ. ನಟಿಯ ಈ ಹೇಳಿಕೆಗೆ ಬಾಲಿವುಡ್ ಬೆಚ್ಚಿಬಿದ್ದಿದ್ದು ತಮ್ಮ ಸೋಲನ್ನು ಇನ್ನೊಂದು ಚಿತ್ರದ ಗೆಲುವಿಗೆ ಕಟ್ಟಿದ ನಡೆಗೆ ಮುಸಿಮುಸಿ ನಕ್ಕಿದ್ದಾರೆ.
ಹೌದು, 2017ರಲ್ಲಿ ಬಿಡುಗಡೆಯಾದ 'ಮೇರಿ ಪ್ಯಾರಿ ಬಿಂದು' ಚಿತ್ರದಲ್ಲಿ ನಟಿ ಪರಿಣಿತಿ ಚೋಪ್ರಾ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರಕ್ಕೆ ನಾಯಕರಾಗಿ ನಟ 'ಆಯುಷ್ಮಾನ್ ಖುರಾನಾ' ನಟಿಸಿದ್ದರು. ಈ ಚಿತ್ರ ಸೋಲು ಅನುಭವಿಸಿತ್ತು. ಮೇರಿ ಪ್ಯಾರಿ ಬಿಂದು ಚಿತ್ರಕ್ಕೆ ಅಂದು, 2017ರಲ್ಲಿ 22 ಕೋಟಿ ಖರ್ಚಾಗಿತ್ತು. ಆದರೆ, ಚಿತ್ರ ಬಿಡುಗಡೆ ಬಳಿಕ ಗಳಿಸಿದ್ದು ಮಾತ್ರ 10 ಕೋಟಿ ರೂ. ಮಾತ್ರ.
"ಕೆಲವು ಚಿತ್ರಗಳು ತುಂಬಾ ಒಳ್ಳೆಯ ಚಿತ್ರಗಳೇ ಇದ್ದರೂ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡದ ಕಾರಣ ಜನರಿಗೆ ಚಿತ್ರದ ಬಗ್ಗೆ ಏನೂ ಗೊತ್ತಿರುವುದಿಲ್ಲ. ಆದರೆ, ಕೆಲವು ವರ್ಷಗಳ ಬಳಿಕ ಜನರು ಅದನ್ನು ನೋಡುತ್ತಾರೆ, ಅಂದು ಜನರಿಗೆ ಅದು ತಲುಪುತ್ತದೆ. ಆ ಮೂಲಕ ಅದು ಕಲ್ಟ್ ಚಿತ್ರವಾಗುತ್ತದೆ, ಸ್ವಲ್ಪ ಲೇಟ್ ಆಗಿಯಾದರೂ ಪ್ರೇಕ್ಷಕರಿಗೆ ತಲುಪುತ್ತದೆ" ಎಂದು ಪರಿಣಿತಿ ಚೋಪ್ರಾ ಸಂದರ್ಶನದ ಈ ವೇಳೆ ಅಭಿಪ್ರಾಯ ಹರಿಯಬಿಟ್ಟಿದ್ದಾರೆ.
ಕರ್ನಾಟಕ ಫಿಲಂ ಚೇಂಬರ್ ಚುನಾವಣೆ: ಯಾರಿಗೆ ಒಲಿಯಲಿದೆ 'ಅಧ್ಯಕ್ಷ' ಪಟ್ಟ!
ಇದೇ ವೇಳೆ, ರಾಜಮೌಳಿ ನಿರ್ದೇಶನ, ಪ್ರಭಾಸ್ ನಾಯಕತ್ವದ 'ಬಾಹುಬಲಿ' ಚಿತ್ರವು ವಿಶ್ವದಾದ್ಯಂತ 5000 ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆ ಕಂಡಿತ್ತು. ಈ ಚಿತ್ರವು ಸೂಪರ್ ಹಿಟ್ ಆಗಿದ್ದಲ್ಲದೇ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿತ್ತು. ಹೀಗಾಗಿ, ಮೇರಿ ಪ್ಯಾರಿ ಸೇರಿದಂತೆ ಹಲವಾರು ಚಿತ್ರಗಳು ಅಂದು ಸೋತು ಸುಣ್ಣವಾಗಿದ್ದವು. ಅದಕ್ಕೆ ಬಾಹುಬಲಿ ಚಿತ್ರ ಕಾರಣ ಎಂಬುದು ಸತ್ಯ ಸಂಗತಿ ಆದರೂ ಹಾಗೆ ಯಾರೂ ಹೇಳಲು ಅಸಾಧ್ಯ. ಏಕೆಂದರೆ, ಯಾವುದೇ ಚಿತ್ರದ ಸೋಲಿಗೆ ಇನ್ಯಾವುದೇ ಚಿತ್ರದ ಗೆಲುವನ್ನು ಹೊಣೆಗಾರರನ್ನಾಗಿ ಮಾಡುವುದು ಅಪರಾಧ!
ALEXA ಟೀಸರ್ ರಿಲೀಸ್: ಚಿತ್ರಕ್ಕಾಗಿ ಫೈಟ್ ಮಾಡೋ ವೇಳೆ ಕೈ ಮುರಿದುಕೊಂಡ ಅದಿತಿ ಪ್ರಭುದೇವ್!
ಅದೇನೇ ಇರಲಿ, ಇಂದು ನಟಿ ಪರಿಣಿತಿ ಚೋಪ್ರಾ ತಮ್ಮ ಮದುವೆಯ ಹೊಸ್ತಿಲಲ್ಲಿ ನಿಂತಿದ್ದಾರೆ. ನಾಳೆ, ಸೆಪ್ಟೆಂಬರ್ 24ಕ್ಕೆ ಪರಣಿತಿ ಚೋಪ್ರಾ ಮದುವೆ. ಆಮ್ ಆದ್ಮಿ ಪಕ್ಷದ ರಾಘವ ಚಡ್ಡಾ ಜತೆ ನಟಿ ಪರಿಣಿತಿ ಚೋಪ್ರಾ ಸಪ್ತಪದಿ ತುಳಿಯಲಿದ್ದಾರೆ. ಉದಯಪುರದಲ್ಲಿ ಅವರಿಬ್ಬರ ಮದುವೆ ಅದ್ದೂರಿಯಾಗಿ ನಡೆಯಲಿದ್ದು, ಸೆಪ್ಟೆಂಬರ್ 30ರಂದು ಇಬ್ಬರೂ ತಮ್ಮ ಆತ್ಮೀಯರಿಗೆ ಚಂಡೀಘಡದ ತಾಜ್‌ನಲ್ಲಿ 'ಔತಣಕೂಟ'ವನ್ನು ಏರ್ಪಡಿಸಿದ್ದಾರೆ.