Asianet Suvarna News Asianet Suvarna News

ಕರ್ನಾಟಕ ಫಿಲಂ ಚೇಂಬರ್ ಚುನಾವಣೆ: ಯಾರಿಗೆ ಒಲಿಯಲಿದೆ 'ಅಧ್ಯಕ್ಷ' ಪಟ್ಟ!

ಇಂದು (23 September 2023) ಕರ್ನಾಟಕ ಚಲನಚಿತ್ರ ವಾಣಿಜ್ಯ (Karnataka Film Chamber) ಮಂಡಳಿ ಎಲೆಕ್ಷನ್ ನಡೆಯಲಿದೆ. ಅಭ್ಯರ್ಥಿ NM ಸುರೇಶ್ ಅವರಿಗೆ ಸಾ ರಾ ಗೋವಿಂದ್ ಹಾಗೂ ಉಮೇಶ್ ಬಣಕಾರ್ ಬೆಂಬಲ ವ್ಯಕ್ತಪಡಿಸಿದ್ದರೆ, ಶಿಲ್ಪಾ ಶ್ರೀನಿವಾಸ್ ಗೆ ಭಾ ಮಾ ಹರೀಶ್ ಬೆಂಬಲವಿದೆ ಎನ್ನಲಾಗಿದೆ. 
 

Karnataka film chamber election on 23rd September 2023
Author
First Published Sep 23, 2023, 3:30 PM IST

ಇಂದು (23 September 2023) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber)  ಎಲೆಕ್ಷನ್ (Election) ನಡೆಯಲಿದ್ದು ಭಾರೀ ಕುತೂಹಲ ಕೆರಳಿಸಿದೆ. ಇಂದಿನ ಫಿಲಂ ಚೇಂಬರ್ ಚುನಾವಣೆ ಮತದಾನವು ರೇಸ್ ಕೋರ್ಸ್ ಬಳಿ ಇರುವ 'ಗುರುರಾಜ ಕಲ್ಯಾಣ ಮಂಟ'ದಲ್ಲಿ ನಡೆಯಲಿದೆ.  ಮತದಾನ ಪ್ರಕ್ರಿಯೆ ಮಧ್ಯಾಹ್ನ 2 ರಿಂದ 6ರವರೆಗೂ ನಡೆಯಲಿದೆ. ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರು ಮೂರು ವಲಯಗಳಿಂದ ಮತದಾನ ನಡೆಯಲಿದ್ದು, ಅಧ್ಯಕ್ಷ ಪಟ್ಟಕ್ಕೆ ಸೂಕ್ತ ವ್ಯಕ್ತಿಯ ಆಯ್ಕೆಗಾಗಿ ಚಿತ್ರರಂಗ ಸಿದ್ಧವಾಗಿ ನಿಂತಿದೆ. 

ಇಂದು (23 ಸೆಪ್ಟೆಂಬರ್ 2023) ರಂದು ಸಂಜೆ 6.30ಕ್ಕೆ ಮತದಾನ ಪ್ರಕ್ರಿಯೆ ಮುಕ್ತಾಯವಾಗಲಿದ್ದು, ರಾತ್ರಿ 8ಕ್ಕೆ ಫಿಲಂ ಚೇಂಬರ್ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.  ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟಿದ್ದು, ಸ್ಪರ್ಧಾ ಕಣದಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿರುವ ನಿರ್ಮಾಪಕರಾದ NM ಸುರೇಶ್, ಶಿಲ್ಪಾ ಶ್ರೀನಿವಾಸ್, ಮಾರ್ಸ್ ಸುರೇಶ್, ಎ ಗಣೇಶ್ ಇದ್ದಾರೆ. 

ಅಭ್ಯರ್ಥಿ NM ಸುರೇಶ್ ಅವರಿಗೆ ಸಾ ರಾ ಗೋವಿಂದ್ ಹಾಗೂ ಉಮೇಶ್ ಬಣಕಾರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಶಿಲ್ಪಾ ಶ್ರೀನಿವಾಸ್ ಅವರಿಗೆ ಭಾ ಮಾ ಹರೀಶ್ ಬೆಂಬಲವಿದೆ ಎನ್ನಲಾಗಿದ್ದು ಚುನಾವಣೆ ತೀವ್ರ ಕೂತೂಹಲಕ್ಕೆ ಕಾರಣವಾಗಿದೆ. ಫಿಲಂ ಚೇಂಬರ್ ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷ ಸ್ಥಾನ ಹಾಗೂ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಇಂದು ಹಣಾಹಣಿ ನಡೆಯಲಿದೆ. 

ಕನ್ನಡದ ಈ ನಟಿಗೆ ಹಿಗ್ಗಾಮುಗ್ಗಾ ಬೈದು, ಬೆದರಿಕೆ ಹಾಕಿದ್ರಂತೆ ಸೂಪರ್‌ಸ್ಟಾರ್‌ ರಜನಿಕಾಂತ್‌!

ಮತ ಚಲಾವಣೆಯಲ್ಲಿ 1600 ಸದಸ್ಯರು ಭಾಗವಹಿಸಲಿದ್ದಾರೆ. EVMನಲ್ಲಿ ಪದಾಧಿಕಾರಿಗಳಿಗೆ ಮೆಂಬರುಗಳು ಮತದಾನ ಮಾಡಲಿದ್ದು, ಎರಡು ಪ್ರಕ್ರಿಯೆಯಲ್ಲಿ ವೋಟಿಂಗ್ ನಡೆಯಲಿದೆ. ಬ್ಯಾಲೇಟ್ ಪೇಪರ್ ಮೂಲಕ ಕಾರ್ಯಕಾರಿ ಸಮತಿ ಹಾಗೂ ವಲಯ ಸಮಿತಿಗೆ ಸದಸ್ಯರ ವೋಟಿಂಗ್ ಕೂಡ ನಡೆಯಲಿದೆಯಂತೆ. ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರು ಮೂರು ವಲಯಗಳಿಂದ ಮತದಾನ ನಡೆಯಲಿದೆ.

ನ್ಯಾಷನಲ್ ಕ್ರಷ್ ಹೊಸ ಪೋಸ್ಟರ್: ಏನಿದು ಅವತಾರ ಎಂದಿದ್ಯಾಕೆ ನೆಟ್ಟಿಗರು? 

ಒಟ್ಟಿನಲ್ಲಿ, ಕರ್ನಾಟಕ ಚಲನಚಿತ್ರ ಮಂಡಳಿಯ ಮಂದಿನ ಅಧ್ಯಕ್ಷರು ಯಾರು ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಇಂದು ರಾತ್ರಿ 8 ಗಂಟೆಗೆ ಫಲಿತಾಂಶ ಬರಲಿದ್ದು, ಹೆಚ್ಚಿನ ಕಾಯುವಿಕೆಗೆ ಅವಕಾಶವೇನೂ ಇಲ್ಲ, ಫಟಾಫಟ್ ಎಂಬಂತೆ ಎಲ್ಲವೂ ನಿರ್ಧಾರವಾಗಲಿದೆ. 

Follow Us:
Download App:
  • android
  • ios