ಪಾಂಡ್ಯ ಜೊತೆ ಕಾಣಿಸಿಕೊಂಡ ಬೆನ್ನಲ್ಲೇ ಅನನ್ಯ ಪಾಂಡೆ ಕಾರಿನ ನಂಬರ್ ಪ್ಲೇಟ್ ಸೀಕ್ರೆಟ್ ಬಹಿರಂಗ!

ಬಾಲಿವುಡ್ ನಟಿ ಅನನ್ಯ ಪಾಂಡೆ ಹೆಸರು ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದೆ. ಇದೀಗ ಅನನ್ಯ ಹೊಸ ಕಾರು ಖರೀದಿಸಿದ್ದಾರೆ. ರೇಂಜ್ ರೋವರ್ ಕಾರಿನ ರಿಜಿಸ್ಟ್ರೇಶನ್ ನಂಬರ್ XX XX 3000. ಈ ಸೀಕ್ರೆಟ್ ಏನು ಅನ್ನೋದು ಬಹಿರಂಗವಾಗಿದೆ.
 

Bollywood actress Ananya Pande New car registration number reveals secrete ckm

ಮುಂಬೈ(ಜು.22) ಬಾಲಿವುಡ್ ನಟಿ ಅನನ್ಯ ಪಾಂಡೆ ಹೆಸರು ಇತ್ತೀಚೆಗೆ ಕ್ರಿಕೆಟಿಗ ಹಾರ್ಧಿಕ್ ಪಾಂಡ್ಯ ಜೊತೆ ಥಳುಕು ಹಾಕಿದೆ. ಅಂಬಾನಿ ಮದುವೆಯಲ್ಲಿ ಜೊತೆಯಾಗಿ ಕಾಣಿಸಿಕೊಂಡ ಪಾಂಡ್ಯ ಹಾಗೂ ಅನನ್ಯ, ಇನ್‌ಸ್ಟಾಗ್ರಾಂನಲ್ಲೂ ಪರಸ್ವರ ಫಾಲೋ ಮಾಡುತ್ತಿದ್ದಾರೆ. ಈ ಬೆಳವಣಿಗೆ ನಡುವೆ ಅನನ್ಯ ಪಾಂಡೆ ಖರೀದಿಸಿದ ಹೊಸ ರೇಂಜ್ ರೋವರ್ ಕಾರಿನ XX XX 3000 ರಿಜಿಸ್ಟ್ರೇಶನ್ ನಂಬರ್ ಸೀಕ್ರೆಟ್ ಬಹಿರಂಗವಾಗಿದೆ. 

ಅನನ್ಯ ಪಾಂಡೆ ಹೊಸ ರೇಂಜ್ ರೋವರ್ ಕಾರಿನ ನಂಬರ್ XX XX 3000. ಈ ಕಾರಿನ ನಂಬರ್ ಪ್ಲೇಟ್‌ಗೂ ಹಾರ್ದಿಕ್ ಪಾಂಡ್ಯ ಜೊತೆ ಕಾಣಿಸಿಕೊಂಡಿದ್ದಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಮತ್ತೊಂದು ಸೀಕ್ರೆಟ್ ಈ ನಂಬರ್‌ನಲ್ಲಿ ಅಡಗಿದೆ. ಹೌದು, ಅನನ್ಯ ಪಾಂಡೆ ಹುಟ್ಟಿದ ದಿನ ಅಕ್ಟೋಬರ್ 30.  ತನ್ನ ಬರ್ತ್‌ಡೇ ದಿನಾಂಕವನ್ನೇ ಕಾರನ ನಂಬರ್ ಪ್ಲೇಟ್ ಆಗಿ ಪಡೆದುಕೊಂಡಿದ್ದಾರೆ. 

ನತಾಶಾ ಔಟ್, ಬಾಲಿವುಡ್ ಹಾಟ್ ಬೆಡಗಿ ಇನ್: ಹೊಸ ಸಂಬಂಧ ಬೆಳೆಸಲು ರೆಡಿಯಾದ್ರಾ ಹಾರ್ದಿಕ್ ಪಾಂಡ್ಯ..!

ಅನನ್ಯ ಪಾಂಡೆ ಬಿಳಿ ಬಣ್ಣದ ರೇಂಜ್ ರೋವರ್ ಕಾರು ಖರೀದಿಸಿದ್ದಾರೆ. ಈ ಕಾರಿಗೆ ತಮ್ಮ ಹುಟ್ಟು ಹಬ್ಬದ ಡೇಟ್ ನಂಬರ್ ಆಗಿ ಇಟ್ಟಿದ್ದಾರೆ. ಬಾಲಿವುಡ್ ಸೆಲೆಬ್ರೆಟಿಗಗಳು, ಉದ್ಯಮಿಗಳು ಸೇರಿದಂತೆ ಹಲವರು ತಮ್ಮ ಕಾರುಗಳಿಗೆ ನೆಚ್ಚಿನ ನಂಬರ್, ಅದೃಷ್ಟದ ನಂಬರ್ ಖರೀದಿಸುತ್ತಾರೆ.ಒಂದೇ ರೀತಿ ಸೀರಿಸನ್ ನಂಬರ್ ಸೇರಿದಂತೆ ಹಲವು ಫ್ಯಾನ್ಸಿ ನಂಬರ್‌ನ್ನು ಲಕ್ಷ ಲಕ್ಷ ರೂಪಾಯಿ  ನೀಡಿ ಖರೀದಿಸುತ್ತಾರೆ.

ಅನನ್ಯ ಪಾಂಡೆ ಇತ್ತೀಚೆಗೆ ಅನಂತ್ ಅಂಬಾನಿ ಮದುವೆಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಜೊತೆ ಕಾಣಿಸಿಕೊಂಡಿದ್ದರು. ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ್ದರು.ಹಾರ್ದಿಕ್ ಪಾಂಡ್ಯ ಹಾಗೂ ನತಾಶ ಸ್ಟಾಂಕೋವಿಚ್ ವಿಚ್ಚೇದನ ಖಚಿತಪಡಿಸಿದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ, ನಟಿ ಅನನ್ಯ ಜೊತೆ ಕಾಣಿಸಿಕೊಂಡಿದ್ದರು. ಹೀಗಾಗಿ ಹಾರ್ದಿಕ್ ಹಾಗೂ ಅನನ್ಯ ಹೆಸರು ಭಾರಿ ಸದ್ದು ಮಾಡಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

 

 
 
 
 
 
 
 
 
 
 
 
 
 
 
 

A post shared by yogen shah (@yogenshah_s)

 

ಅನನ್ಯ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವುದು ಇದೇ ಮೊದಲಲ್ಲ. ಹಲವು ಬಾರಿ ಟ್ರೋಲ್ ಆಗಿದ್ದಾರೆ. ನೆಪೋಕಿಡ್ ಆರೋಪ ಪದೇ ಪದೇ ಅನನ್ಯ ಪಾಂಡೆ ಎದುರಿಸಿದ್ದಾರೆ. ಬಾಲಿವುಡ್ ನಟ ಚುಂಕಿ ಪಾಂಡೆ ಪುತ್ರಿ ಅನನ್ಯ ಪಾಂಡೆ ಪ್ರತಿಭೆಗಿಂತ ಸೆಲೆಬ್ರೆಟಿ ಕಿಡ್ ಕಾರಣ ಅವಕಾಶ ಪಡೆಯುತ್ತಿದ್ದಾಳೆ ಅನ್ನೋ ಆರೋಪಗಳು ಸೋಶಿಯಲ್ ಮೀಡಿಯಾದಲ್ಲಿ ಪದೇ ಪದೇ ಕೇಳಿಬಂದಿದೆ.

Urfi Kisses to Orry : ಒರಿಗೆ ಮುತ್ತಿಟ್ಟ ಉರ್ಫಿ, ನೀವಿಬ್ಬರು ಮದ್ವೆಯಾಗಿ ಎಂದರೆ?
 

Latest Videos
Follow Us:
Download App:
  • android
  • ios