Asianet Suvarna News Asianet Suvarna News

Urfi Kisses to Orry : ಒರಿಗೆ ಮುತ್ತಿಟ್ಟ ಉರ್ಫಿ, ನೀವಿಬ್ಬರು ಮದ್ವೆಯಾಗಿ ಎಂದರೆ?

ಬಾಲಿವುಡ್ ನಲ್ಲಿ ಮತ್ತೊಂದು ಜೋಡಿ ಚರ್ಚೆಯಲ್ಲಿದೆ. ಹಾಟ್ ಬೆಡಗಿ ಉರ್ಫಿ ಹಾಗೂ ಉರಿ ಕ್ಯಾಮರಾ ಕಣ್ಣಿಗೆ ಮತ್ತೊಮ್ಮೆ ಬಿದ್ದಿದ್ದಾರೆ. ಉರಿಗೆ ಮುತ್ತಿಟ್ಟು ಉರ್ಫಿ ಸುದ್ದಿ ಮಾಡಿದ್ದು, ನೆಟ್ಟಿಗರು ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ. 
 

Urfi Javed Aka Uorfi And Orry Spotted Together They Freacted On Their Wedding roo
Author
First Published Jun 15, 2024, 1:49 PM IST

ಅತಿ ಫ್ಯಾಷನ್ ಗೆ ಇನ್ನೊಂದು ಹೆಸರು ಉರ್ಫಿ ಜಾದವ್. ಕಸದಿಂದ ಹಿಡಿದು ರಸದವರೆಗೆ ಎಲ್ಲವನ್ನೂ ಫ್ಯಾಷನ್ ಗೆ ಬಳಸಿಕೊಳ್ಳುವುದರಲ್ಲಿ ಈ ಸುಂದರಿ ಎತ್ತಿದ ಕೈ. ಮೀಡಿಯಾದ ಒಂದ್ಕಣ್ಣು ಉರ್ಫಿ ಮೇಲಿರುತ್ತೆ ಅಂದ್ರೆ ಸುಳ್ಳಲ್ಲ. ಈಗ ಉರ್ಫಿ ಫ್ಯಾಷನ್ ವಿಷ್ಯಕ್ಕಲ್ಲ ರಿಲೇಶನ್ ವಿಷ್ಯಕ್ಕೆ ಚರ್ಚೆಗೆ ಬರ್ತಿದ್ದಾರೆ. ಉರ್ಫಿ ಸೌಂದರ್ಯ ನೋಡಿ, ಕನಸು ಕಾಣ್ತಿದ್ದ ಹುಡುಗ್ರಿಗೆ ಸ್ವಲ್ಪ ನಿರಾಸೆಯಾದಂತಿದೆ. ಯಾಕೆಂದ್ರೆ ಮಾಧ್ಯಮಗಳ ಮುಂದೆ ಉರ್ಫಿ, ತನ್ನ ಸ್ನೇಹಿತನಿಗೆ ಮುತ್ತಿಟ್ಟಿದ್ದಾರೆ. ಉರ್ಫಿ ಸುದ್ದಿಯಾಗ್ತಿರೋದು ಮತ್ತ್ಯಾರ ಜೊತೆಯೂ ಅಲ್ಲ ಒರಿ ಜೊತೆ. ಡಿನ್ನರ್ ಗೆ ಹೋಗಿದ್ದ ಉರ್ಫಿ ಹಾಗೂ ಉರಿ ಕ್ಯಾಮರಾ ಮುಂದೆ ಮುತ್ತಿಟ್ಟಿದ್ದಲ್ಲದೆ ಇಬ್ಬರು ಪರಸ್ಪರ ಕಾಲೆಳೆದುಕೊಂಡಿದ್ದಾರೆ. 

ಒರಿ (Orry) ಮತ್ತು ಉರ್ಫಿ (Urfi) ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ವಿಶಿಷ್ಟ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ನಿನ್ನೆ ರಾತ್ರಿ ಇಬ್ಬರೂ ಡಿನ್ನರ್ ಗೆ ಹೋಗಿದ್ರು. ಪಾಪರಾಜಿ (Paparazzi) ಕ್ಯಾಮರಾ ಮುಂದೆ ಕಾಣಿಸಿಕೊಂಡು ಇಬ್ಬರೂ ಗಮನ ಸೆಳೆದಿದ್ದಾರೆ. ಮದುವೆ ಬಗ್ಗೆ ಮಾತನಾಡಿ, ತಮ್ಮ ಸಂಬಂಧದ ಬಗ್ಗೆ ಮತ್ತಷ್ಟು ಅನುಮಾನ ಹುಟ್ಟಿಸಿದ್ದಾರೆ. 

ಅನಂತ್ ರಾಧಿಕಾ ಕ್ರೂಸ್ ಪಾರ್ಟಿ ಫೋಟೋಸ್ ಔಟ್; ರಾಣಿಯಂತೆ ಕಂಗೊಳಿಸಿದ ವಧು

ಮದುವೆ ಬಗ್ಗೆ ಒರಿ ಹೇಳಿದ್ದೇನು? : ಇಬ್ಬರನ್ನು ಒಟ್ಟಿಗೆ ನೋಡಿದ ಪಾಪರಾಜಿಗಳು ಉರ್ಫಿಯನ್ನು ಮದುವೆ ಆಗ್ತೀರಾ ಎಂದು ಕೇಳಿದ್ದಾರೆ. ಉರ್ಫಿ ಮದುವೆಯಾಗೋಕೆ ಓಕೆ ಅಂದ್ರೆ ನನಗೂ ಓಕೆ ಎಂದು ಒರಿ ಹೇಳಿದ್ದಾರೆ.  ಇದಕ್ಕೂ ಮುನ್ನ ಉರ್ಫಿಗೂ ಈ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಉರ್ಫಿ ಗಂಭೀರ ಉತ್ತರ ನೀಡಿಲ್ಲ. ತಮಾಷೆಯಾಗಿಯೇ ಉತ್ತರ ನೀಡಿ, ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ನೀವೆಲ್ಲ ನನ್ನ ಮದುವೆ ಬಗ್ಗೆ ಆತುರದಲ್ಲಿದ್ದೀರಿ ಎಂದು  ಉರ್ಫಿ ಹೇಳೋದನ್ನು ವಿಡಿಯೋದಲ್ಲಿ ಕೇಳ್ಬಹುದು.

ಡಿನ್ನರ್ ಪಾರ್ಟಿಗೆ  ಉರ್ಫಿ ಸಿಂಪಲ್ ಬಟ್ಟೆ ಧರಿಸಿ ಬಂದಿದ್ರು. ಹಸಿರು ಬಣ್ಣದ ಒನ್ ಪೀಸ್ ಡ್ರೆಸ್ ಧರಿಸಿದ್ದ ಉರ್ಫಿ ಹಾಟ್ ಆಗಿ ಕಾಣ್ತಿದ್ರು. ಮರೂನ್ ಟಿ-ಶರ್ಟ್, ಮ್ಯಾಚಿಂಗ್ ಪ್ಯಾಂಟ್ ಮತ್ತು ಸ್ನೀಕರ್ಸ್‌ನಲ್ಲಿ ಕಾಣಿಸಿಕೊಂಡ ಒರಿ, ಹೊಟೇಲ್ ಹೊರಗೆ ಕ್ಯಾಮರಾಕ್ಕೆ ಫೋಸ್ ನೀಡಿದ್ದಾರೆ. ಫೋಸ್ ನೀಡಿದ ನಂತ್ರ ಉರ್ಫಿ, ಉರಿಗೆ ಮುತ್ತಿಟ್ಟರೆ, ಮುಗುಳು ನಗ್ತಾ ಒರಿ, ಉರ್ಫಿಯನ್ನು ತಬ್ಬಿಕೊಂಡಿದ್ದರು. 

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಉರ್ಫಿ ಹಾಗೂ ಒರಿ ಈ ವಿಡಿಯೋ ವೈರಲ್ ಆಗಿದೆ. ಜನರು ಉರ್ಫಿ ಮದುವೆ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ. ಬಹುತೇಕರು ಉರ್ಫಿ ಹಾಗೂ ಒರಿ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ. ದೇವರು ನಿಜವಾಗಿಯೂ ಎಲ್ಲರಿಗೂ ಒಬ್ಬರನ್ನು ಸೃಷ್ಟಿ ಮಾಡಿರ್ತಾರೆ ಎನ್ನುವ ಮಾತು ಸತ್ಯ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇವರಿಬ್ಬರು ಪರ್ಫೆಕ್ಟ್ ಜೋಡಿ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. 

ಒರಿ ಯಾರು? : ಓರ್ಹಾನ್ ಅವತ್ರಾಮಣಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಒರಿ ಎಂದೇ ಖ್ಯಾತರಾಗಿದ್ದಾರೆ. ಸೆಲೆಬ್ರಿಟಿಸ್ ಮಕ್ಕಳ ಸ್ನೇಹಿತ ಒರಿ. ಸಾಮಾನ್ಯವಾಗಿ ಸ್ಟಾರ್ ಮಕ್ಕಳೊಂದಿಗೆ ಪಾರ್ಟಿಯಲ್ಲಿ (Bollywood Star Kids Party) ಅವರು ಕಾಣಿಸಿಕೊಳ್ತಾರೆ. ಇತ್ತೀಚೆಗಷ್ಟೇ ಅನಂತ್ ಅಂಬಾನಿಯವರ ವಿವಾಹಪೂರ್ವ ಸಮಾರಂಭದಲ್ಲಿ (Anant Ambani PreWedding Function) ಪಾಪ್ ಗಾಯಕಿ ರಿಹಾನ್ನಾ ಜೊತೆ ಕಾಣಿಸಿಕೊಂಡಿದ್ದರು.

ಬೆತ್ತಲಾದರೂ ಬರಲ್ಲ ಇಷ್ಟು ಡಿಮಾಂಡ್​! ಆಲಿಯಾ ಫುಲ್​ಡ್ರೆಸ್​ ಡೀಪ್​ಫೇಕ್​ ವಿಡಿಯೋಗೆ 2 ಕೋಟಿ ವೀಕ್ಷಣೆ

ಕೆಲ ದಿನಗಳ ಹಿಂದಷ್ಟೆ ಒರಿ ತಮ್ಮ ಗಳಿಕೆಯ ಗುಟ್ಟನ್ನು ಬಿಚ್ಚಿಟ್ಟಿದ್ದರು. ಪಾರ್ಟಿಯಲ್ಲಿ ಪಾಲ್ಗೊಳ್ಳೋದೆ ಅವರ ಗಳಿಕೆ ಮೂಲ. ಮದುವೆ, ಸಮಾರಂಭಕ್ಕೆ ಹೋಗುವ ಅವರು ಅಲ್ಲಿ ಕುಣಿದು, ಹಾಡಿ ಹಣ ಸಂಪಾದಿಸುತ್ತಾರೆ. ಒಂದು ಈವೆಂಟ್ ಗೆ 15ರಿಂದ 30 ಲಕ್ಷ ಹಣ ಸಂಪಾದಿಸುತ್ತಾರಂತೆ. ವೇಟರ್, ಆಕ್ಟರ್, ಗ್ರಾಫಿಕ್ ಡಿಸೈನರ್ ಸೇರಿದಂತೆ ಎಲ್ಲ ಕೆಲಸ ಮಾಡಿದ್ದ ಒರಿಗೆ ಈಗ ಶ್ರೀಮಂತ ವ್ಯಕ್ತಿ. ಐದು ಮ್ಯಾನೇಜರನ್ನು ಅವರು ಹೊಂದಿದ್ದಾರೆ. 

Latest Videos
Follow Us:
Download App:
  • android
  • ios