Asianet Suvarna News Asianet Suvarna News

ಬರೋಬ್ಬರಿ ನಾಲ್ಕು ಬಾರಿ ರಜನಿಕಾಂತ್ ಸಿನಿಮಾ ಆಫರ್ ತಿರಸ್ಕರಿಸಿದ ಸ್ಟಾರ್ ನಟಿ; ಐದನೆಯದು ಓಕೆ ಅಂದ್ರಾ?

ರಜನಿಕಾಂತ್ ಅಭಿನಯದ 1999ರಲ್ಲಿ ಬಿಡುಗಡೆಯಾದ 'ಪಡೆಯಪ್ಪ' ಚಿತ್ರದ ಆಫರ್ ಮೊದಲು ಬಂದಿದ್ದು ಈ ಸ್ಟಾರ್ ನಟಿಗೆ. ಆದರೆ ಆಕೆ ಅದನ್ನು ಒಪ್ಪಿಕೊಳ್ಳಲಿಲ್ಲ. ಬಳಿಕ ಆ ಚಿತ್ರದಲ್ಲಿ ನಟಿ ಸೌಂದರ್ಯ ಹಾಗೂ ರಮ್ಯಕೃಷ್ಣ ಕಾಣಿಸಿಕೊಂಡರು. ಚಿತ್ರ ಸೂಪರ್ ಹಿಟ್ ಆಯ್ತು.

Bollywood Actress Aishwarya rai rejected 4 times rajinikanth film before enthiran srb
Author
First Published Nov 29, 2023, 6:25 PM IST

ಭಾರತದ ಸೂಪರ್ ಸ್ಟಾರ್‌ಗಳಲ್ಲಿ ಒಬ್ಬರಾದ ನಟ ರಜನಿಕಾಂತ್ ಅವರ ಜತೆ ನಟಿಸಲು ಯಾವ ಹೀರೋಯಿನ್ ಆದರೂ ತುದಿಗಾಲಲ್ಲಿ ನಿಂತಿರುತ್ತಾರೆ ಎಂಬುದು ಹಲವರ ಅನಿಸಿಕೆ. ಅದು ಸಾಕಷ್ಟು ನಿಜವಾದ ಸಂಗತಿಯೂ ಹೌದು. ಆದರೆ, ಭಾರತದ ಸ್ಟಾರ್ ಹಿರೋಯಿನ್‌ ಒಬ್ಬರು ಮಾತ್ರ ಬರೋಬ್ಬರಿ ನಾಲ್ಕು ಬಾರಿ ನಟ ರಜನಿಕಾಂತ್ ಜತೆ ನಟಿಸುವ ಆಫರ್ ತಿರಸ್ಕರಿಸಿದ್ದರು ಎನ್ನಲಾಗಿದೆ. ಅದೂ ಕೂಡ ರಜಿನಿಕಾಂತ್ ಬಹುದೊಡ್ಡ ಸ್ಟಾರ್ ಆದ ಮೇಲೆಯೇ ಎಂಬುದು ವಿಶೇಷ. ಹೌದು, ಮಂಗಳೂರು ಮೂಲದ ಈ ನಟಿ ಹುಟ್ಟಿದ್ದು ಬೆಳೆದಿದ್ದು ಎಲ್ಲವೂ ಮುಂಬೈನಲ್ಲಿ ಎಂಬುದು ಕೂಡ ವಿಶೇಷ. ಜತೆಗೆ, ಆಕೆಯ ಸಿನಿಮಾ ಜರ್ನಿ ಹಚ್ಚಾಗಿ ನಡೆದಿದ್ದು ಕೂಡ ಬಾಲಿವುಡ್ ಚಿತ್ರಗಳ ಮೂಲಕವೇ. 

ರಜನಿಕಾಂತ್ ಅಭಿನಯದ 1999ರಲ್ಲಿ ಬಿಡುಗಡೆಯಾದ 'ಪಡೆಯಪ್ಪ' ಚಿತ್ರದ ಆಫರ್ ಮೊದಲು ಬಂದಿದ್ದು ಈ ಸ್ಟಾರ್ ನಟಿಗೆ. ಆದರೆ ಆಕೆ ಅದನ್ನು ಒಪ್ಪಿಕೊಳ್ಳಲಿಲ್ಲ. ಬಳಿಕ ಆ ಚಿತ್ರದಲ್ಲಿ ನಟಿ ಸೌಂದರ್ಯ ಹಾಗೂ ರಮ್ಯಕೃಷ್ಣ ಕಾಣಿಸಿಕೊಂಡರು. ಚಿತ್ರ ಸೂಪರ್ ಹಿಟ್ ಆಯ್ತು. ಬಳಿಕ, ರಜನಿಕಾಂತ್ ಅಭಿನಯದ 'ಬಾಬಾ' ಸಿನಿಮಾಗೆ ಇದೇ ನಟಿಯ ಕಾಲ್ ಶೀಟ್ ಕೇಳಲಾಯ್ತು. ಆದರೆ, ಅದನ್ನೂ ಈ ಜಗತ್‌ ಸುಂದರಿ ಒಪ್ಪಿಕೊಳ್ಳಲಿಲ್ಲ. 

ಆ ಚಿತ್ರದಲ್ಲಿ ನಟಿ ಮನಿಶಾ ಕೊಯಿರಾಲಾ ನಟಿಸಿದರು. ಬಳಿಕ, ರಜನಿ ಅಭಿನಯದ  ಸೂಪರ್ ಹಿಟ್ ಚಿತ್ರ 'ಚಂದ್ರಮುಖಿ'ಗೆ ಕೂಡ ಇದೇ ಸುಂದರಿಯನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು, ಆದರೆ ಆಕೆ ಈ ಆಫರ್ ಕೂಡ ನಿರಾಕರಿಸಿಬಿಟ್ಟರು. ಚಂದ್ರಮುಖಿಯಲ್ಲಿ ನಟಿ ಜ್ಯೋತಿಕಾ ಕಾಣಿಸಿಕೊಂಡರು. ಈ ಚಿತ್ರ ಕೂಡ ಸೂಪರ್ ಹಿಟ್ ದಾಖಲಿಸಿತು. ಬಳಿಕ ಬಂದಿದ್ದು ರಜನಿಕಾಂತ್ ಮತ್ತು ಶ್ರೀಯಾ ಶರಣ್ ಜೋಡಿಯ 'ಶಿವಾಜಿ' ಚಿತ್ರ. ಆದರೆ, ಈ ಚಿತ್ರದಲ್ಲೂ ಈ ಬಾಲಿವುಡ್ ಸುಂದರಿ ನಟಿಸಬೇಕಿತ್ತು. ಆದರೆ, ಆಕೆ ನಿರಾಕರಿಸಿದ ಕಾರಣಕ್ಕೇ ನಟಿ ಶ್ರೀಯಾ ಶರಣ್ ಈ ಚಿತ್ರದಲ್ಲಿ ಕಾಣಿಸಿಕೊಂಡರು. 

ನಾನು ತುಂಬಾ ಕೆಟ್ಟ ಸ್ಟೂಡೆಂಟ್ ಆಗಿದ್ದೆ, ಲಾಸ್ಟ್‌ ಬೆಂಚ್‌ನಲ್ಲಿ ಕುಳಿತುಕೊಳ್ಳುತ್ತಿದ್ದೆ; ನಟ ಅಲ್ಲು ಅರ್ಜುನ್

ಹೀಗೆ ನಾಲ್ಕು ರಜಿನಿ ಚಿತ್ರಗಳನ್ನು ನಿರಾಕರಿಸಿದ್ದ ನಟಿ ಐಶ್ವರ್ಯಾ ರೈ, ಈಗಿನ ಐಶ್ವರ್ಯಾ ರೈ ಬಚ್ಚನ್. ನಿರ್ದೇಶಕ ಶಂಕರ್ ಅವರ 'ಎಂಧಿರನ್ (ರೋಬೋಟ್) ಚಿತ್ರದಲ್ಲಿ ನಟಿ ಐಶ್ವರ್ಯಾ ರೈ ಅವರು ಮೊದಲ ಬಾರಿಗೆ ನಟ ರಜನಿಕಾಂತ್ ಅವರೊಂದಿಗೆ ನಟಿಸಿದರು. ಚಿತ್ರ ಸೂಪರ್ ಹಿಟ್ ಆಯ್ತು. ಆ ಬಳಿಕ ನಟಿ ಐಶ್ವರ್ಯಾ ರೈ ಸೌತ್ ಇಂಡಸ್ಟ್ರಿಯ ಹಲವು ಖ್ಯಾತ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. 

ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ, ಮಂಬೈ ಪೊಲೀಸರಿಂದ ವೈ ಪ್ಲಸ್ ಭದ್ರತೆ

ಒಟ್ಟಿನಲ್ಲಿ, ಭಾರತದ ಯಾವುದೇ ನಟಿಯಾದರೂ ನಟ ರಜನಿಕಾಂತ್ ಅವರೊಂದಿಗೆ ನಟಿಸಲು ಹಿಂದೇಟು ಹಾಕುವುದಿಲ್ಲ ಎನ್ನವ ಕಾಲದಲ್ಲಿ ನಟಿ ಐಶ್ವರ್ಯಾ ರೈ ಹೀಗೆ ಮಾಡಿದ್ದರು. ರಜನಿಕಾಂತ್ ಜತೆ ನಟಿಸುವುದು ಹಲವು ನಟಿಯರ ಕನಸು. ಆದರೆ, ನಟಿ, ವಿಶ್ವ ಸುಂದರಿ ಐಶ್ವರ್ಯಾ ರೈ ಮಾತ್ರ ಅದ್ಯಾಕೋ ಹಾಗೆ ಕನಸು ಕಂಡಿರಲೇ ಇಲ್ಲ ಎನ್ನಬಹುದು. ಆದರೂ ಎಂಥಿರನ್ ಚಿತ್ರದ ಮೂಲಕ ನಟ ರಜನಿಕಾಂತ್ ಜತೆ ನಟಿಸುವ ಮೂಲಕ ರಜನಿಕಾಂತ್ ಅಭಿಮಾನಿಗಳ ಕೋಪದಿಂದ ನಟಿ ಐಶ್ವರ್ಯಾ ರೈ ಪಾರಾದರು ಎನ್ನಬಹುದು. 

ಆಸೆ ಶೂಟಿಂಗ್‌ ವೇಳೆ ಅವಘಡ, ಹಿರಿಯ ನಟ ಮಂಡ್ಯ ರಮೇಶ್‌ಗೆ ತೀವ್ರ ಗಾಯ

Follow Us:
Download App:
  • android
  • ios