Asianet Suvarna News Asianet Suvarna News

ಪ್ರಭಾಸ್ ಲವ್ ಲೈಫ್ ಬಗ್ಗೆ ಸುಳಿವು ನೀಡಿದ ನಟ ವರುಣ್; ಬಾಹುಬಲಿ ಸ್ಟಾರ್ ಹೃದಯ ಕದ್ದ ಚೋರಿ ಯಾರು?

ಬಾಹುಬಲಿ  ಸ್ಟಾರ್ ಪ್ರಭಾಸ್ ಪ್ರೀತಿ ವಿಚಾರವನ್ನು ಬಾಲಿವುಡ್ ಸ್ಟಾರ್ ವರುಣ್ ಧವನ್ ರಿವೀಲ್ ಮಾಡಿದ್ದಾರೆ. 

bollywood Actor Varun Dhawan hint on Prabhas love life sgk
Author
First Published Nov 26, 2022, 11:22 AM IST

ಟಾಲಿವುಡ್ ಸ್ಟಾರ್ ಪ್ರಭಾಸ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸದಾ ಸಿನಿಮಾ, ಶೂಟಿಂಗ್ ಅಂತ ಬ್ಯುಸಿ ಇರುವ ಪ್ರಭಾಸ್ ಲವ್ ಲೈಫ್ ಕೂಡ ಆಗಾಗ ಸದ್ದು ಮಾಡುತ್ತಿರುತ್ತದೆ. ಪ್ರಭಾಸ್ ಮದುವೆ ಯಾವಾಗ, ಯಾರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಆಗಾಗ ಚರ್ಚೆಯಾಗುತ್ತಿರುತ್ತದೆ. ಇತ್ತೀಚಿಗಷ್ಟೆ ಪ್ರಭಾಸ್ ಹೆಸರು ಬಾಲಿವುಡ್ ಸ್ಟಾರ್ ನಟಿಯೊಬ್ಬರ ಜೊತೆ ಕೇಳಿ ಬಂದಿತ್ತು. ಪ್ರಭಾಸ್ ಪ್ರೀತಿಯಲ್ಲಿ ಬಿದ್ದಿದ್ದಾರೆ, ಸದ್ಯದಲ್ಲೇ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಟಾಲಿವುಡ್ ಸ್ಟಾರ್ ಡೇಟಿಂಗ್ ಮಾಡುತ್ತಿರುವ ಚೆಲುವೆ ಮತ್ಯಾರು ಅಲ್ಲ ಬಾಲಿವುಡ್ ಖ್ಯಾತ ನಟಿ ಪರಮ ಸುಂದರಿ ಕೃತಿ ಸನೊನ್. ಹೌದು ಪ್ರಭಾಸ್ ಮತ್ತು ಕೃತಿ ನಡುವೆ ಸಂಥಿಂಗ್ ಸಂಥಿಂಗ್ ಇದೆ ಎನ್ನುವ ಸುದ್ದಿ ಇತ್ತೀಚಿಗಷ್ಟೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಈ ನಡುವೆ ಬಾಲಿವುಡ್ ನಟ ವರುಣ್ ಧವನ್ ಪ್ರಭಾಸ್ ಲವ್ ಲೈಫ್ ಬಗ್ಗೆ ಸುಳಿವು ನೀಡಿದ್ದಾರೆ. 

ವರುಣ್ ಧವನ್ ಮತ್ತು ಕೃತಿ ಸನೊನ್ ಇತ್ತೀಚಿಗಷ್ಟೆ ಬೇಡಿಯಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದ ಪ್ರಚಾರದ ವೇಳೆ ವರುಣ್ ಧವನ್, ಪ್ರಭಾಸ್ ಬಗ್ಗೆ ಮಾತನಾಡಿದ್ದಾರೆ. 'ಪ್ರಭಾಸ್ ಜೀವನದಲ್ಲಿ ಒಬ್ಬಳು ಡಾರ್ಲಿಂಗ್ ಇದ್ದಾಳೆ' ಎಂದು ಹೇಳಿದ್ದಾರೆ. ಜೊತೆಗೆ ಆದಿಪುರುಷ್ ಸಿನಿಮಾದಲ್ಲಿ ಪ್ರಭಾಸ್ ಮತ್ತು ಕೃತಿ ಇಬ್ಬರದ್ದು ಉತ್ತಮ ಜೋಡಿ ಎಂದು ಹೇಳಿದ್ದಾರೆ. ವರುಣ್ ಧವನ್ ಹೇಳಿಕೆ ಅಭಿಮಾನಿಗಳಿಗೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಪ್ರಭಾಸ್ ಜೀವನದ ಡಾರ್ಲಿಂಗ್ ಯಾರು ಎಂದು ಈಗಾಗಲೇ ಹುಡುಕುತ್ತಿದ್ದಾರೆ. ಪ್ರಭಾಸ್ ಪ್ರೀತಿಸುತ್ತಿರುವುದು ಬಾಲಿವುಡ್ ಸ್ಟಾರ್ ಕೃತಿ ಸನೊನ್ ಇರಬಹುದಾ ಎನ್ನುವ ಅನುಮಾನ ಕೂಡ ಬಲವಾಗಿದೆ. ಒಟ್ನಲ್ಲಿ ಪ್ರಭಾಸ್ ಪ್ರೀತಿಯಲ್ಲಿ ಬಿದ್ದಿರುವುದು ನಿಜ ಎನ್ನುವುದು ವರುಣ್ ಧವನ್ ಮಾತುಗಳಿಂದ ಬಹಿರಂಗವಾಗಿದೆ. 

ಪ್ರಭಾಸ್ 'ಸಲಾರ್' ಸಿನಿಮಾದಲ್ಲಿ ಬ್ಲಾಕ್‌ಬಸ್ಟರ್ ಹಿಟ್ 'ಕಾಂತಾರ' ನಟ; ಯಾರು?

ಪ್ರಭಾಸ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಹುಬಲಿ ಸಿನಿಮಾ ಬಳಿಕ ಪ್ರಭಾಸ್ ಸಿನಿಮಾಗಳು ಸಕ್ಸಸ್ ಕಂಡಿಲ್ಲ. ಸಾಹೋ ಮತ್ತು ರಾಧೆ ಶ್ಯಾಮ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದರು. ಆದರೆ ಈ ಸಿನಿಮಾಗಳು ಸಹ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ವಿಫಲವಾಯಿತು. ಹಾಗಾಗಿ ಪ್ರಭಾಸ್ ಮುಂದಿನ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಅಲ್ಲದೆ ಪ್ರಭಾಸ್ ಅವರಿಗೂ ದೊಡ್ಡ ಗಲುವು ಪ್ರಮುಖವಾಗಿದೆ. 

'ಹನುಮಾನ್' ನೋಡಿ ಕಲಿಯಿರಿ; ಪ್ರಭಾಸ್ 'ಆದಿಪುರುಷ್' ತಂಡಕ್ಕೆ ತಿವಿದ ನೆಟ್ಟಿಗರು

ಸದ್ಯ ಪ್ರಭಾಸ್ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಲಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಲಾರ್ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ 50ರಷ್ಟು ಚಿತ್ರೀಕರಣ ಮುಗಿದಿದೆ. ಈ ಸಿನಿಮಾದಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ. ಮೊದಲ ಬಾರಿಗೆ ಶ್ರುತಿ ಮತ್ತು ಪ್ರಭಾಸ್ ಇಬ್ಬರೂ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಆದಿಪುರುಷ್ ಸಿನಿಮಾವನ್ನು ಮುಗಿಸಿದ್ದಾರೆ. ಆದಿಪುರುಷ್ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದೆ.  ಇನ್ನೂ ನಾಗ್ ಅಶ್ವಿನ್ ಅವರ ಜೊತೆಯೂ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ವಿಶೇಷ ಎಂದರೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡ ನಟಿಸುತ್ತಿದ್ದಾರೆ. 


 

Follow Us:
Download App:
  • android
  • ios