ಚಿತ್ರೀಕರಣ ವೇಳೆ ಗಾಯಗೊಂಡ ನಟ ಸಿದ್ಧಾರ್ಥ್ ಮಲ್ಹೋತ್ರಾ; ಕ್ರೇಜಿ ಆಕ್ಷನ್ ಸೀನ್ ಎಂದ ನಟ

ಆಕ್ಷನ್ ಸೀಕ್ವನ್ಸ್ ಚಿತ್ರೀಕರಣ ವೇಳೆ ಸಿದ್ಧಾರ್ಥ್ ಕೈಗೆ ಗಾಯವಾಗಿದೆ. ನಿರ್ದೇಶಕ ರೋಹಿತ್ ಶೆಟ್ಟಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ವೆಬ್ ಸೀರಿಸ್ ಇಂಡಿಯನ್ ಪೋಲೀಸ್ ಫೋರ್ಸ್ ನಲ್ಲಿ ಸಿದ್ದಾರ್ಥ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೆಬ್ ಸೀರಿಸ್ ನ ಚಿತ್ರೀಕರಣ ಸದ್ಯ ಗೋವಾದಲ್ಲಿ ನಡೆಯುತ್ತಿದೆ. ಚಿತ್ರದ ಹೈ ವೋಲ್ಟೇಜ್ ಆಕ್ಷನ್ ದೃಶ್ಯವನ್ನು ಸೆರೆಹಿಡಿಯಲಾಗುತ್ತಿದೆ. ಈ ಸೀರಿಸ್ ನ ಚಿತ್ರೀಕರಣ ವೇಳೆ ಕೈಗೆ ಗಾಯವಾಗಿದೆ. ಈ ಬಗ್ಗೆ ಸಿದ್ದಾರ್ಥ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Bollywood Actor Sidharth Malhotra gets injured in shooting for his next with Rohit sgk

ಬಾಲಿವುಡ್ ಖ್ಯಾತ ನಟ ಸಿದ್ಧಾರ್ಥ್ ಮಲ್ಹೋತ್ರಾ(Sidharth Malhotra) ಕಳೆದ ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ನಟಿ ಕಿಯಾರಾ ಜೊತೆ ಪ್ರೀತಿಯಲ್ಲಿದ್ದ ಸಿದ್ಧಾರ್ಥ್ ಈಗ ದೂರ ದೂರ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಬಾಲಿವುಡ್ ನ ಸ್ಟಾರ್ ಜೋಡಿ ನಡುವೆ ಬ್ರೇಕಪ್ ಆಗಿದೆ ಎಂದು ಗುಲ್ಲಾಗಿತ್ತು. ಆದರೆ ಈ ಬಗ್ಗೆ ಸಿದ್ಧಾರ್ಥ್ ಆಗಲಿ ಅಥವಾ ಕಿಯಾರಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಸುದ್ದಿ ವೈರಲ್ ಆದ ಬೆನ್ನಲ್ಲೇ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಮತ್ತೆ ಅಚ್ಚರಿ ಮೂಡಿಸಿದ್ದರು. ಈ ಸುದ್ದಿ ಬೆನ್ನಲ್ಲೇ ನಟ ಸಿದ್ಧಾರ್ಥ್ ಮಲ್ಹೋತ್ರ ಚಿತ್ರೀಕರಣ ವೇಳೆ ಗಾಯಗೊಂಡಿದ್ದಾರೆ. ಸಿದ್ಧಾರ್ಥ್ ಕೈಯಲ್ಲಿ ಗಾಯವಾಗಿ ರಕ್ತ ಸುರಿಯುತ್ತಿದೆ.

ಆಕ್ಷನ್ ಸೀಕ್ವನ್ಸ್ ಚಿತ್ರೀಕರಣ ವೇಳೆ ಸಿದ್ಧಾರ್ಥ್ ಕೈಗೆ ಗಾಯವಾಗಿದೆ. ನಿರ್ದೇಶಕ ರೋಹಿತ್ ಶೆಟ್ಟಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ವೆಬ್ ಸೀರಿಸ್ ಇಂಡಿಯನ್ ಪೋಲೀಸ್ ಫೋರ್ಸ್ ನಲ್ಲಿ ಸಿದ್ದಾರ್ಥ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೆಬ್ ಸೀರಿಸ್ ನ ಚಿತ್ರೀಕರಣ ಸದ್ಯ ಗೋವಾದಲ್ಲಿ ನಡೆಯುತ್ತಿದೆ. ಚಿತ್ರದ ಹೈ ವೋಲ್ಟೇಜ್ ಆಕ್ಷನ್ ದೃಶ್ಯವನ್ನು ಸೆರೆಹಿಡಿಯಲಾಗುತ್ತಿದೆ. ಈ ಸೀರಿಸ್ ನ ಚಿತ್ರೀಕರಣ ವೇಳೆ ಕೈಗೆ ಗಾಯವಾಗಿದೆ. ಈ ಬಗ್ಗೆ ಸಿದ್ದಾರ್ಥ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಗಾಯಗೊಂಡಿರುವ ಫೋಟೋ ಮತ್ತು ವಿಡಿಯೋವನ್ನು ಶೇರ್ ಮಾಡಿ ಸಿದ್ಧಾರ್ಥ್ ಆಕ್ಷನ್ ಹೀರೋ ನಿಜವಾದ ಬೆವರು ಮತ್ತು ರಕ್ತಕ್ಕೆ ಸಮ ಎಂದು ಬರೆದುಕೊಂಡಿದ್ದಾರೆ. ಕ್ರೇಜಿ ಆಕ್ಷನ್ ದೃಶ್ಯವನ್ನು ಗೋವಾದಲ್ಲಿ ಸೆರೆಹಿಡಿಯಲಾಗುತ್ತಿದೆ ಎಂದು ಬರೆುಕೊಂಡಿದ್ದಾರೆ. ಸಿದ್ಧಾರ್ಥ್ ಪೋಸ್ಟ್ಗೆ ಅಭಿಮಾನಿಗಳು ವಿಶ್ರಾಂತಿ ಪಡೆಯಿರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ ಈ ಸರಣಿ ಮೂಲಕ ಸಿದ್ಧಾರ್ಥ್ ಒಟಿಟಿಗೆ ಎಂಟ್ರಿ ಕೊಡುತ್ತಿದ್ದಾರೆ.

ಬ್ರೇಕಪ್ ವದಂತಿ ನಡುವೆಯೂ ಒಟ್ಟಿಗೆ ಕಾಣಿಸಿಕೊಂಡ ಕಿಯಾರಾ - ಸಿದ್ಧಾರ್ಥ್; ವಿಡಿಯೋ ವೈರಲ್

ಈ ಸರಣಿ ಜೊತೆಗೆ ಸಿದ್ಧಾರ್ಥ್ ಯೋಧ ಮತ್ತು ಮಿಶನ್ ಮಜ್ನು, ಥ್ಯಾಂಕ್ ಗಾಡ್ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಸಿದ್ಧಾರ್ಥ್ ಕೊನೆಯದಾಗಿ ಶೇರ್ಷಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ನೈಜ ಘಟನೆ ಆಧಾರಿತ ಶೇರ್ಷಾ ಸಿನಿಮಾ ದೊಡ್ಡದ ಸಕ್ಸಸ್ ತಂದುಕೊಟ್ಟಿತ್ತು. ಈ ಸಿನಿಮಾದಲ್ಲಿ ಸಿದ್ಧಾರ್ಥ್ ಗೆ ಜೋಡಿಯಾಗಿ ಕಿಯಾರಾ ಕಾಣಿಸಿಕೊಂಡಿದ್ದರು. ಇಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಕೂಡ ಅಭಿಮಾನಿಗಳ ಮೆಚ್ಚಿಗೆ ಪಾತ್ರವಾಗಿತ್ತು. ನಿಜ ಜೀವನದಲ್ಲೂ ಇಬ್ಬರೂ ಒಂದಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದರು.

ಬ್ರೇಕಪ್ ವದಂತಿ

ಬಾಲಿವುಡ್ ಪ್ರಣಯ ಪಕ್ಷಿಗಳು ಎಂದೇ ಗುರುತಿಸಿಕೊಂಡಿದ್ದ ಕಿಯಾರಾ ಮತ್ತು ಸಿದ್ಧಾರ್ಥ್ ಮಲ್ಹೋತ್ರ ದೂರ ದೂರ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇಬ್ಬರು ಕಳೆದ ಮೂರು ವರ್ಷಗಳಿಂದ ಪ್ರೀತಿಯಲ್ಲಿದ್ದರು ಎನ್ನುವ ಮಾತು ಕೇಳಿಬರುತ್ತಿತ್ತು. ಆಗಾಗ ವಿದೇಶಿ ಪ್ರಯಾಣ, ಸಮಾರಂಭಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಅಲ್ಲದೇ ಶೇರ್ಷಾ(Shershaah) ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ನೆಚ್ಚಿನ ಜೋಡಿಯಾಗಿದ್ದರು. ಈ ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಅಭಿಮಾನಿಗಳ ಹೃದಯ ಗೆದ್ದಿತ್ತು. ಇಬ್ಬರು ಆದಷ್ಟು ಬೇಗ ಮದುವೆಯಾಗಿ ಎಂದು ಅಭಿಮಾನಿಗಳು ಹಾರೈಸಿದ್ದರು. ಇದೆಲ್ಲದರ ನಡುವೆಯೂ ಇಬ್ಬರೂ ಬ್ರೇಕಪ್(breakup) ಮಾಡಿಕೊಂಡು ದೂರ ಆಗಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿತ್ತು. ಆದರೆ ಮತ್ತೆ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ವದಂತಿಗೆ ಬ್ರೇಕ್ ಹಾಕಿದ್ದಾರೆ.

Latest Videos
Follow Us:
Download App:
  • android
  • ios