ಬ್ರೇಕಪ್ ವದಂತಿ ನಡುವೆಯೂ ಒಟ್ಟಿಗೆ ಕಾಣಿಸಿಕೊಂಡ ಕಿಯಾರಾ - ಸಿದ್ಧಾರ್ಥ್; ವಿಡಿಯೋ ವೈರಲ್
ಬ್ರೇಕಪ್ ವದಂತಿ ನಡುವೆಯೂ ಈ ಜೋಡಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಂದಹಾಗೆ ಇಬ್ಬರು ಮತ್ತೆ ಒಟ್ಟಿಗೆ ಕಾರಣವಾಗಿದ್ದು ಈದ್ ಹಬ್ಬದ ಪಾರ್ಟಿ. ಹೌದು, ಇತ್ತೀಚೆಗೆ ಈದ್ ಹಬ್ಬದ ಪ್ರಯುಕ್ತ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಈದ್ ಔತಣ ಕೂಟವನ್ನ ಆಯೋಜಿಸಿದ್ದರು. ಈ ವೇಳೆ ಬಾಲಿವುಡ್ ನ ಬಹುತೇಕರು ಈದ್ ಔತಣ ಕೂಟದಲ್ಲಿ ಭಾಗಿಯಾಗಿದ್ದರು.
ಬಾಲಿವುಡ್ ಪ್ರಣಯ ಪಕ್ಷಿಗಳು ಎಂದೇ ಗುರುತಿಸಿಕೊಂಡಿದ್ದ ಕಿಯಾರಾ ಮತ್ತು ಸಿದ್ಧಾರ್ಥ್ ಮಲ್ಹೋತ್ರ(Sidharth Malhotra and Kiara Advani) ದೂರ ದೂರ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇಬ್ಬರು ಕಳೆದ ಮೂರು ವರ್ಷಗಳಿಂದ ಪ್ರೀತಿಯಲ್ಲಿದ್ದರು ಎನ್ನುವ ಮಾತು ಕೇಳಿಬರುತ್ತಿತ್ತು. ಆಗಾಗ ವಿದೇಶಿ ಪ್ರಯಾಣ, ಸಮಾರಂಭಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಅಲ್ಲದೇ ಶೇರ್ಷಾ(Shershaah) ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ನೆಚ್ಚಿನ ಜೋಡಿಯಾಗಿದ್ದರು. ಈ ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಅಭಿಮಾನಿಗಳ ಹೃದಯ ಗೆದ್ದಿತ್ತು. ಇಬ್ಬರು ಆದಷ್ಟು ಬೇಗ ಮದುವೆಯಾಗಿ ಎಂದು ಅಭಿಮಾನಿಗಳು ಹಾರೈಸಿದ್ದರು. ಇದೆಲ್ಲದರ ನಡುವೆಯೂ ಇಬ್ಬರೂ ಬ್ರೇಕಪ್(breakup) ಮಾಡಿಕೊಂಡು ದೂರ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು.
ಬ್ರೇಕಪ್ ವದಂತಿ ನಡುವೆಯೂ ಈ ಜೋಡಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಂದಹಾಗೆ ಇಬ್ಬರು ಮತ್ತೆ ಒಟ್ಟಿಗೆ ಕಾರಣವಾಗಿದ್ದು ಈದ್ ಹಬ್ಬದ ಪಾರ್ಟಿ. ಹೌದು, ಇತ್ತೀಚೆಗೆ ಈದ್ ಹಬ್ಬದ ಪ್ರಯುಕ್ತ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಈದ್ ಔತಣ ಕೂಟವನ್ನ ಆಯೋಜಿಸಿದ್ದರು. ಈ ವೇಳೆ ಬಾಲಿವುಡ್ ನ ಬಹುತೇಕರು ಈದ್ ಔತಣ ಕೂಟದಲ್ಲಿ ಭಾಗಿಯಾಗಿದ್ದರು. ಜತೆಗೆ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಕೂಡ ಕಾಣಿಸಿಕೊಂಡಿದ್ದರು. ನಟಿ ಕರಿಷ್ಮಾ ಕಪೂರ್ ಮತ್ತು ಫ್ಯಾಷನ್ ಡಿಸೈನರ್ ಮನೀಷ್ ಜತೆಗಿನ ಫೋಟೋದಲ್ಲಿ ಶೇರ್‌ಷಾ ಜೋಡಿನೂ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ ಸಿದ್ದಾರ್ಥ್ ಮತ್ತು ಕಿಯಾರಾ ಒಟ್ಟಿಗೆ ಜತೆಯಾಗಿ ಖುಷಿಯಿಂದ ಔತಣ ಕೂಟಕ್ಕೆ ಹೋಗ್ತಿರೋ ವಿಡಿಯೋ ಸಖತ್ ವೈರಲ್ ಆಗಿದೆ.
ಹೈ-ಸ್ಲಿಟ್ ಮೆಟಾಲಿಕ್ ಸಿಲ್ವರ್ ಡ್ರೆಸ್‌ನಲ್ಲಿ Kiara Advani!
ಈ ವಿಡಿಯೋ ನೋಡಿ ಅಭಿಮಾನಿಗಳು ಫುಲ್ ಆಗಿದ್ದಾರೆ. ಸ್ಟಾರ್ ಜೋಡಿ ಮತ್ತೆ ಒಂದಾಗಿದೆ ಎಂದು ಹಾರ್ಟ್ ಇಮೋಜಿ ಹಾಕಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಸಿದ್ಧಾರ್ಥ್ ಖುಷಿಯಾಗಿಲ್ಲ. ಕ್ಯಾಮರಾ ಮುಂದೆ ಅಷ್ಟೆ ಇಬ್ಬರು ಒಂದಾಗಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ನಿಜಕ್ಕೂ ಈ ಜೋಡಿ ಒಂದಾಗಿದೆಯಾ ಅಥವಾ ಅಭಿಮಾನಿಗಳ ಮುಂದೆ ಏನು ನಡೆದೇ ಇಲ್ಲ ಎನ್ನವ ಹಾಗೆ ತೋರಿಸಿಕೊಳ್ಳುತ್ತಿದ್ದಾರಾ ಎನ್ನುವ ಅನುಮಾನ ಮೂಡಿಸಿದೆ. ಆದರೆ ಇಬ್ಬರು ಮತ್ತೆ ಒಟ್ಟಿಗೆ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಬ್ರೇಕಪ್ ವದಂತಿ ಬೆನ್ನಲ್ಲೇ ಸಿದ್ಧಾರ್ಥ್-ಕಿಯಾರಾ ಹೊಸ ಪೋಸ್ಟ್ ವೈರಲ್
ಸಿದ್ಧಾರ್ಥ್ ಮತ್ತು ಕಿಯಾರಾ ಇಬ್ಬರು ತಮ್ಮ ಪ್ರೀತಿ ವಿಚಾರವನ್ನು ಯಾವತ್ತು ಬಹಿರಂಗವಾಗಿ ಹೇಳಿಕೊಂಡವರಲ್ಲ, ಅಲ್ಲದೆ ನಿರಾಕರಿಸಿಯೂ ಇಲ್ಲ. ಶೇರ್ಷಾ ಸಿನಿಮಾ ಬಿಡುಗಡೆ ಬಳಿಕ ಈ ಜೋಡಿ ಮತ್ತಷ್ಟು ಫೇಮಸ್ ಆಗಿತ್ತು. ಸದಾ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಇತ್ತೀಚಿಗೆ ಒಬ್ಬರಿಗೊಬ್ಬರು ಭೇಟಿ ಮಾಡುವುದನ್ನೆ ಬಿಟ್ಟಿದ್ದಾರಂತೆ. ಈ ಬಗ್ಗೆ ಆಂಗ್ಲ ಮಾಧ್ಯಮಗಳು ವರದಿ ಮಾಡಿದ್ದು ಕಿಯಾರಾ ಮತ್ತು ಸಿದ್ಧಾರ್ಥ್ ಬೇರೆ ಆಗಿದ್ದಾರೆ. ಇಬ್ಬರೂ ಒಬ್ಬರಿಗೊಬ್ಬರು ಭೇಟಿ ಮಾಡುವುದನ್ನೇ ನಿಲ್ಲಿಸಿದ್ದಾರೆ. ಇಬ್ಬರು ತಮ್ಮ ರಿಲೇಶನ್ ಶಿಪ್ ಕೊನೆಗೊಳಿಸಿದ್ದಾರೆ. ಆದರೆ ಇಬ್ಬರು ಬೇರೆ ಆಗಲು ಇನ್ನು ಕಾರಣ ತಿಳಿದಿಲ್ಲ. ಆದರೆ ಇಬ್ಬರು ಬೇರೆ ಆಗಿರುವುದಂದು ನಿಜ ಎಂದು ವರದಿ ಮಾಡಿತ್ತು. ಆದರೀಗ ಮತ್ತೆ ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.