ಅಸೂಯೆ ಕಾರಣದಿಂದ ಹೃತಿಕ್‌ರನ್ನು ದೂರ ಇಟ್ಟ ಶಾರುಖ್ ಖಾನ್!
First Published Dec 16, 2020, 6:11 PM IST
ಬಾಲಿವುಡ್‌ನ ಸೂಪರ್ ಹಿಟ್ ಸಿನಿಮಾ ಕಭಿ ಖುಷಿ ಕಭಿ ಗಮ್ ಸಿನಿಮಾ 19 ವರ್ಷಗಳನ್ನು ಪೂರೈಸಿದೆ. ಡಿಸೆಂಬರ್ 14, 2001ರಂದು ಬಿಡುಗಡೆಯಾದ ಈ ಚಿತ್ರ ಕುಚ್ ಕುಚ್ ಹೋತಾ ಹೈ ನಂತರ ಕರಣ್ ಜೋಹರ್ ನಿರ್ದೇಶಿಸಿದ ಎರಡನೇ ಚಿತ್ರ. 2001ರಲ್ಲಿ ಅತಿ ಹೆಚ್ಚು ಸಂಪಾದಿಸಿದ ಚಿತ್ರ ಎಂಬ ಕೀರ್ತಿಯನ್ನು ಪಡೆದಿದೆ. ಅಂದ ಹಾಗೆ, ಈ ಸಿನಿಮಾಕ್ಕೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್ ವಿಷಯಗಳು ಕರಣ್ ಅವರ ಆನ್ ಅನ್‌ಸ್ಯೂಟಬಲ್ ಬಾಯ್ ಎಂಬ ಪುಸ್ತಕದಲ್ಲಿ ಹೇಳಿದ್ದಾರೆ.

ಕಭಿ ಖುಷಿ ಕಭಿ ಗಮ್ ಚಿತ್ರದ ಸೆಟ್‌ಗಳಲ್ಲಿ ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಜಯ ಬಚ್ಚನ್ ಮತ್ತು ಕಾಜೋಲ್ ಅವರು ಹೃತಿಕ್ ರೋಷನ್ ಅವರಿಂದ ದೂರ ಇರುತ್ತಿದ್ದರು. ಅದು ಅವರಿಗೆ ಬೇಸರ ತರುತ್ತಿತ್ತು, ಎಂದು ನಿರ್ದೇಶಕ ಕರಣ್ ಜೋಹರ್ ತಮ್ಮ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ. ಸೆಟ್‌ನಲ್ಲಿನ ಈ ದ್ವೇಷಕ್ಕೆ ಕಾರಣ ಕಹೋ ನಾ ಪ್ಯಾರ್ ಹೈ ಚಿತ್ರದ ಯಶಸ್ಸು ಎಂದು ಹೇಳಿದ್ದಾರೆ.

'ಕಹೋ ನಾ ಪ್ಯಾರ್ ಹೈ' ಯಶಸ್ಸಿನ ನಂತರ, ಹೃತಿಕ್ ಉದ್ಯಮದಲ್ಲಿ ಬಹಳ ಜನಪ್ರಿಯರಾದರು ಮತ್ತು ಅವರನ್ನು ಶಾರುಖ್‌ಗೆ ಹೋಲಿಸಲಾಯಿತು. 'ಹೃತಿಕ್ ತುಂಬಾ ಜೂನಿಯರ್ ಮತ್ತು ಶಾರುಖ್ ಆಗಲೇ ದೊಡ್ಡ ಸ್ಟಾರ್, ಆದರೆ ಆ ಸಮಯದಲ್ಲಿ ಶಾರುಖ್ ಅವರ ಒಂದು ಅಥವಾ ಎರಡು ಸಿನಿಮಾಗಳು ಫ್ಲಾಪ್ ಆಗಿದ್ದವು,' ಎಂದು ಕರಣ್ ನೆನಪಿಸಿಕೊಂಡಿದ್ದಾರೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?