Bollywood Cinema: ತೆಲುಗಿನ ಸಿನಿಮಾ ಹಿಂದಿಗ ರಿಮೇಕ್ ಆಗಿ ಭರ್ಜರಿ ಯಶಸ್ಸು ಕಂಡಿದೆ. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 379 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ತೆಲುಗಿನ ಈ ಸಿನಿಮಾ ಕೇವಲ 5 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ಮುಂಬೈ: ಕೆಲವೊಂದು ಸಿನಿಮಾಗಳು ಪದೇ ಪದೇ ನೋಡಿದ್ರೆ ಬೇಸರವಾಗಲ್ಲ. ಮುಂದಿನ ಕಥೆ ಏನು ಅನ್ನೋದು ಗೊತ್ತಿದ್ರೂ ಅದನ್ನು ನೋಡಲು ಕುತೂಹಲದಿಂದ ಕಾಯುತ್ತೇವೆ. ಇಂದು ನಾವು ನಿಮಗೆ ಸೌಥ್ ಅಂಗಳದ ಸಿನಿಮಾವೊಂದು ಹಿಂದಿಗೆ ರಿಮೇಕ್ ಆಗಿ ಹಾಕಿದ ಬಂಡವಾಳಕ್ಕಿಂತ 6ಪಟ್ಟು ಗಳಿಸೋದರ ಜೊತೆಗೆ ಸಾಲು ಸಾಲು ಸೋಲುಗಳನ್ನು ಕಂಡಿದ್ದ ನಟನಿಗೆ ಒಂದು ದೊಡ್ಡ ಗೆಲುವು ನೀಡಿದೆ. ಇನ್ನೇನು ಈ ನಟನ ಸಿನಿಮಾ ಕೆರಿಯೇರ್ ಮುಗಿತು ಅಂದ್ಕೊಂಡವರಿಗೆ ಸೂಪರ್ ಹಿಟ್‌ನೊಂದಿಗೆ ಮತ್ತೊಮ್ಮೆ ಸ್ಟಾರ್ ಪಟ್ಟ ಉಳಿಸಿಕೊಳ್ಳುವಲ್ಲಿ ಈ ನಟ ಯಶಸ್ವಿಯಾಗಿದ್ದರು. 2017ರ ತೆಲುಗಿನ ಸಿನಿಮಾ ಇದಾಗಿದ್ದು, 2019ರಲ್ಲಿ ಹಿಂದಿ ಭಾಷೆಗೆ ರಿಮೇಕ್ ಆಗಿತ್ತು. ಬಹುತೇಕರು ತೆಲುಗಿನ ಸಿನಿಮಾ ನೋಡಿದ್ರೂ, ಹಿಂದಿಯಲ್ಲಿ ಹೇಗೆ ಬಂದಿದ್ದೆ ಎಂದು ನೋಡಲು ಚಿತ್ರಮಂದಿರಕ್ಕೆ ತೆರಳಿದ್ದರು. ಚಿತ್ರದ ವಿಶೇಷ ಕಥೆಯೊಂದಿಗೆ ಇಂಪಾದ ಸಂಗೀತದ ಮೂಲಕ ಸೂಪರ್ ಹಿಟ್ ಸಿನಿಮಾ ಆಯ್ತು. ಅರ್ಜಿತ್ ಸಿಂಗ್ ಧ್ವನಿಯಲ್ಲಿ ಬಂದ ಹಾಡುಗಳ ಪೈಕಿ ಈ ಚಿತ್ರದ ಸಾಂಗ್ಸ್ ವಿಶೇಷವಾಗುತ್ತದೆ.
ನಟ ವಿಜಯ್ ದೇವಕೊಂಡ ನಟನೆಯ ಅರ್ಜುನ್ ರೆಡ್ಡಿ ಸಿನಿಮಾ ಯುವ ಸಮುದಾಯದ ಮೆಚ್ಚುಗೆಗೆ ಪಾತ್ರವಾಗಿತ್ತು. ಟೀನೇಜರ್ಸ್ ನಡುವೆ ಈ ರೀತಿಯೂ ಪ್ರೀತಿ ಆಗುತ್ತೆ ಎಂಬ ವಿಶೇಷ ಕಥೆತಯನ್ನು ನಿರ್ದೇಶಕ ಸಂದೀಪ್ ವಂಗಾ ರೆಡ್ಡಿ ತೆರೆಯ ಮೇಲೆ ತಂದಿದ್ದರು. ಇದೇ ಸಿನಿಮಾವನ್ನು ಕಬೀರ್ ಸಿಂಗ್ ಹೆಸರಿನಲ್ಲಿ ಸಂದೀಪ್ ವಂಗಾ ರೆಡ್ಡಿ ಎರಡನೇ ಬಾರಿ ತೆರೆ ಮೇಲೆ ತಂದು ಯುಶಸ್ವಿಯಾಗಿದ್ದಾರೆ. ಅರ್ಜುನ್ ರೆಡ್ಡಿಯಲ್ಲಿ ವಿಜಯ್ ದೇವರಕೊಂಡ ಮತ್ತು ಶಾಲಿನಿ ಪಾಂಡೆ ನಟಿಸಿದ್ರೆ, ಕಬೀರ್ ಸಿಂಗ್‌ನಲ್ಲಿ ಶಾಹಿದ್ ಕಪೂರ್ ಮತ್ತು ಕಿಯಾರಾ ಅದ್ವಾನಿ ನಟಿಸಿದ್ದರು.
ಶಾಹಿದ್ ಕಪೂರ್ ಬಾಲಿವುಡ್ ಅಂಗಳದಲ್ಲಿ 6ಕ್ಕೇರದ ಮತ್ತು 3ಕ್ಕಿಳಿಯದ ನಟ ಅಂತಾನೇ ಹೇಳುತ್ತಾರೆ. ಪದ್ಮಾವತ್ ಬಳಿಕ ಸೋಲುಗಳ ಸುಳಿಯಲ್ಲಿ ಸಿಲುಕಿದ್ದ ಶಾಹಿದ್ ಕಪೂರ್‌ಗೆ 'ಕಬೀರ್ ಸಿಂಗ್' ಬಿಗ್ ಹಿಟ್ ನೀಡಿತು. ಕಬೀರ್ ಸಿಂಗ್ ಓರ್ವ ಉದ್ಯಮಿಯ ಜಾಣ ಪುತ್ರನಾಗಿರುತ್ತಾನೆ. ಮೆಡಿಕಲ್ ವಿದ್ಯಾರ್ಥಿಯಾಗಿರುವ ಕಬೀರ್‌ಗೆ ತನ್ನ ಜ್ಯೂನಿಯರ್ ವಿದ್ಯಾರ್ಥಿನಿ ಪ್ರೀತಿ ಮೇಲೆ ಲವ್ ಆಗುತ್ತದೆ. ಪ್ರೀತಿಗೂ ಸಹ ಕಬೀರ್ ಮೇಲೆ ಲವ್ ಆಗುತ್ತದೆ. ವಿಶೇಷ ಅಂದ್ರೆ ಪ್ರೀತಿಗೆ ಪಾಠ ಹೇಳಿಕೊಡುತ್ತಲೇ ಆಕೆಯನ್ನು ಪ್ರೀತಿ ಮಾಡುತ್ತಿರುತ್ತಾನೆ. ಆಕೆಯನ್ನು ಒಂದು ಕ್ಷಣವೂ ಬಿಟ್ಟಿಲಾರದ ರೀತಿಯಲ್ಲಿ ಹುಚ್ಚನಾಗಿ ಪ್ರೀತಿ ಮಾಡುತ್ತಿರುತ್ತಾನೆ.
ಇದನ್ನೂ ಓದಿ: ನೋಡುಗರ ಮನಸ್ಸನ್ನು ಬೆಚ್ಚಿಬೀಳಿಸುವ 7.2 ರೇಟಿಂಗ್ ಮಲಯಾಳಂ ಸಿನಿಮಾ 8 ತಿಂಗಳ ನಂತರ ಹಿಂದಿಯಲ್ಲಿ ರಿಲೀಸ್
ಸಿನಿಮಾದ ರೊಮ್ಯಾಂಟಿಕ್ ಸೀನ್, ಕಬೀರ್ ಸಿಂಗ್‌ನ ಆಂಗರ್ ಮತ್ತು ಪ್ರೀತಿಯ ಮುಗ್ಧತೆ ನೋಡುಗರಿಗೆ ಇಷ್ಟವಾಗುತ್ತದೆ. ಅತಿಯಾದ ಮದ್ಯಪಾನ ಮತ್ತು ಕೋಪ ಹೇಗೆ ಇಬ್ಬರ ಪ್ರೀತಿಯನ್ನು ದೂರ ಮಾಡುತ್ತೆ ಎಂಬುದನ್ನು ಸಂದೀಪ್ ವಂಗಾ ರೆಡ್ಡಿ ತೆರೆಯ ಮೇಲೆ ಅದ್ಭುತವಾಗಿ ತೋರಿಸಿದ್ದಾರೆ. 2 ಗಂಟೆ 52 ನಿಮಿಷದ ಸಿನಿಮಾ ವಿಶೇಷವಾಗಿ ಯುವ ಸಮುದಾಯದ ವೀಕ್ಷಕರಿಗೆ ಅತಿ ಹೆಚ್ಚು ಇಷ್ಟವಾಗುತ್ತದೆ. ಸುಂದರವಾದ ಪ್ರೀತಿಯನ್ನು ಅತ್ಯಂತ ಕ್ರೂರವಾಗಿ ತೋರಿಸಲಾಗಿದೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಟೀಕೆಗಳ ನಡುವೆಯೂ ಸಿನಿಮಾ 300 ಕೋಟಿಯ ಕ್ಲಬ್ ಸೇರಿತು. 60 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಕಬೀರ್ ಸಿಂಗ್ ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿ 379 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

2017ರಲ್ಲಿ ಬಿಡುಗಡೆಯಾಗಿದ್ದ ಅರ್ಜುನ್ ರೆಡ್ಡಿ ಸಿನಿಮಾ ಕೇವಲ 5 ಕೋಟಿಯಲ್ಲಿ ನಿರ್ಮಾಣ ಮಾಡಿತ್ತು. 5 ಕೋಟಿಯ ಚಿತ್ರಣ ಸೌಥ್ ಸಿನಿಮಾ ಅಂಗಳದಲ್ಲಿ ಸಂಚಲನ ಸೃಷ್ಟಿಸಿ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ವಿಜಯ್ ದೇವರಕೊಂಡ ಮತ್ತು ಶಾಲಿನಿ ಪಾಂಡೆ ಸಿನಿಮಾ ಅಂಗಳದಲ್ಲಿ ಭದ್ರ ನೆಲೆಯೂರುವಂತೆ ಮಾಡಿತು. ಸಿಂಪಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಶಾಲಿನಿ ಪಾಂಡೆ ಬಹುತೇಕ ಹುಡುಗರ ಕ್ರಶ್ ಆಗಿದ್ದರು.
ಇದನ್ನೂ ಓದಿ: ಈ ಸಿನಿಮಾದಲ್ಲಿ ಪ್ರತಿಕ್ಷಣಕ್ಕೂ ಸಸ್ಪೆನ್ಸ್; ನೋಡ್ತಾ ನೋಡ್ತಾ 2 ಗಂಟೆ 27 ನಿಮಿಷ ಸಮಯ ಹೋಗಿದ್ದೆ ಗೊತ್ತಾಗಲ್ಲ!

