South India Suspense Cinema: ಸೌಥ್ ಸಿನಿಮಾವು ಓಟಿಟಿಯಲ್ಲಿ ಬಿಡುಗಡೆಯಾದ ಬಳಿಕ ಜನಪ್ರಿಯತೆ ಗಳಿಸಿದೆ. ಈ ಸಿನಿಮಾವು ಸಸ್ಪೆನ್ಸ್ ಮತ್ತು ಅಡ್ವೆಂಚರ್ ಕಥಾಹಂದರವನ್ನು ಹೊಂದಿದೆ, ಇದರಲ್ಲಿ ಅಘೋರಿಯೊಬ್ಬನ ವಿಚಿತ್ರ ಕಾಯಿಲೆ ಮತ್ತು ಹಿಮಾಲಯದಲ್ಲಿನ ಪಯಣದ ಸಸ್ಪೆನ್ಸ್ ಕಥೆಯಿದೆ.
ಓಟಿಟಿ ಪ್ಲಾಟ್‌ಫಾರಂನಲ್ಲಿರವ ಕೆಲವು ಸಿನಿಮಾಗಳು ನಿಮ್ಮನ್ನು ಸಮ್ಮೋಹನ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇಂದಿನ ವೀಕ್ಷಕರು ಸಸ್ಪೆನ್ಸ್ ಸಿನಿಮಾಗಳನ್ನು ಹೆಚ್ಚಾಗಿ ನೋಡಲು ಇಷ್ಟಪಡುತ್ತಾರೆ. ಕೆಲ ಸಿನಿನಮಾಗಳು ಥಿಯೇಟರ್‌ನಲ್ಲಿ ವಿಫಲವಾದ್ರು, ಓಟಿಟಿ ಭರ್ಜರಿ ಮೆಚ್ಚುಗೆ ಪಡೆದುಕೊಳ್ಳುತ್ತವೆ. ಇಂದು ಥಿಯೇಟರ್‌ಗಿಂತ ಓಟಿಟಿಯಲ್ಲಿ ಬಿಡುಗಡೆಯಾಗುವ ಸಿನಿಮಾಗಳ ಬಗ್ಗೆ ಹೆಚ್ಚು ಕಾತುರರಾಗಿರುತ್ತಾರೆ. ಓಟಿಟಿಯಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ಸೋಶಿಯಲ್ ಮೀಡಿಯಾದಲ್ಲಿಯೂ ಬರೆದುಕೊಳ್ಳುತ್ತಾರೆ. ಇದರಿಂದ ಸಿನಿಮಾದ ಜನಪ್ರಿಯತೆ ಹೆಚ್ಚಾಗುತ್ತದೆ.
2024ರಲ್ಲಿ ಬಿಡುಗಡೆಯಾದ ಸಸ್ಪೆನ್ಸ್ ಸಿನಿಮಾವೊಂದು ಚಿತ್ರಮಂದಿರದಲ್ಲಿ ಅಷ್ಟೇನು ಯಶಸ್ವಿಯಾಗಿರಲಿಲ್ಲ. ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾದ ಬಳಿಕ ಸಿನಿಮಾ ಹೆಚ್ಚು ಜನಪ್ರಿಯವಾಯ್ತು. ಈ ಚಿತ್ರದ ಪ್ರತಿಯೊಂದು ನಿಮಿಷಕ್ಕೂ ನಿಮಗೆ ಸಸ್ಪೆನ್ಸ್ ಎದುರಾಗುತ್ತದೆ. 2 ಗಂಟೆ 27 ನಿಮಿಷದ ಸಿನಿಮಾ ಹೇಗೆ ಮುಗಿತು ಅನ್ನೋದೇ ನಿಮಗೆ ಗೊತ್ತಾಗಲ್ಲ. ಈ ಸೂಪರ್ ಹಿಟ್ ಚಿತ್ರದ ಹೆಸರು ಗಾಮಿ (Gaami). ಈ ಸಿನಿಮಾ ತೆಲುಗು ಭಾಷೆಯಲ್ಲಿ ಮಾಡಲಾಗಿತ್ತು.
ಸಿನಿಮಾದ ಕಥೆ ಏನು?
ಗಾಮಿ ಸಿನಿಮಾದಲ್ಲಿ ದಕ್ಷಿಣ ಭಾರತದ ನಟ ವಿಶ್ವಾಕ್ ಸೇನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರ. ಇದರ ಜೊತೆ ನಟಿ ರಮ್ಯಾ ಅವರ ಅದ್ಭುತ ನಟನೆ ಚಿತ್ರದ ಪ್ಲಸ್ ಪಾಯಿಂಟ್. ಗಾಮಿ ಅಡ್ವೆಂಚರ್ ಕಥಾಹಂದರವುಳ್ಳ ಸಿನಿಮಾ ಆಗಿದೆ. ಗಾಮಿ ಸಿನಿಮಾದ ಶಂಕರ್ ಹೆಸರಿನ ಅಘೋರಿಯಾಗಿ ವಿಶ್ವಾಕ್ ಸೇನ್ ನಟಿಸಿದ್ದಾರೆ, ಅಘೋರಿ ಶಂಕರ್‌ಗೆ ವಿಚಿತ್ರ ಕಾಯಿಲೆ ಹೊಂದಿದ್ದು, ಮಾನವ ಸ್ಪರ್ಶವನ್ನು ತಡೆದುಕೊಳ್ಳುವ ಸಹನೆ ಇರಲ್ಲ. ಈ ಹಿಮಾಲಯದಲ್ಲಿರುವ ದ್ರೋಣಗಿರಿ ಹೆಸರಿನ ಬೆಟ್ಟದಲ್ಲಿ ಈ ಸಮಸ್ಯೆ ನಿವಾರಿಸುವ ಹಸಿರು ಎಲೆಗಳು ಸಿಗುತ್ತೆ ಎಂಬ ವಿಷಯ ತಿಳಿಯುತ್ತದೆ. ಈ ಹಸಿರು 36 ವರ್ಷಕ್ಕೊಮ್ಮೆ ಪಾತ್ರ ರಚನೆಯಾಗುತ್ತಿರುತ್ತದೆ. ಶಂಕರ್ ಈ ವಿಶೇಷ ಎಲೆಗಳನ್ನು ತನ್ನದಾಗಿಸಿಕೊಳ್ಳಲು ಹಿಮಾಲಯದತ್ತ ತೆರಳುತ್ತಾನೆ. ಹಿಮಾಲಯಕ್ಕೆ ತೆರಳುವ ಮಾರ್ಗದಲ್ಲಿ ಶಂಕರ್ ಎದುರಿಸುವ ಅಡ್ಡಿ ಆತಂಕಗಳೇ ಚಿತ್ರದ ಸಸ್ಪೆನ್ಸ್ ಆಗಿದೆ.
ಇದನ್ನೂ ಓದಿ: ಒಂದು ಷರತ್ತಿನ ಮೇಲೆ ಮಣಿರತ್ನಂ ಜೊತೆ ಮದುವೆಯಾಗಲು ಒಪ್ಪಿದ್ರು ಸುಹಾಸಿನಿ
ಎಷ್ಟು ಕಲೆಕ್ಷನ್?
IMDB ವರದಿ ಪ್ರಕಾರ, ಗಾಮಿ ಸಿನಿಮಾ 15 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಥಿಯೇಟರ್‌ನಲ್ಲಿ ರಿಲೀಸ್ ಬಳಿಕ ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿ 22.80 ಕೋಟಿ ರೂ. ಕಲೆಕ್ಷನ್ ಮಾಡಿದೆ. ಸಿನಿಮಾದ ವಿಷುಯಲ್ ಎಫೆಕ್ಟ್ ಮತ್ತು ವಿಎಫ್‌ಎಕ್ಸ್ ಅದ್ಭುತವಾಗಿ ಮೂಡಿ ಬಂದಿದೆ. ಹಾಲಿವುಡ್‌ಗೆ ಟಕ್ಕರ್ ಕೊಡುವ ರೀತಿಯಲ್ಲಿ ಸಿನಿಮಾವನ್ನು ತೆರೆ ಮೇಲೆ ತರಲಾಗಿದೆ. ಪ್ರೈಮ್ ವಿಡಿಯೋದಲ್ಲಿ ಈ ಸಿನಿಮಾವನ್ನು ವೀಕ್ಷಿಸಬಹುದು.
ಇದನ್ನೂ ಓದಿ: ನೋಡುಗರ ಮನಸ್ಸನ್ನು ಬೆಚ್ಚಿಬೀಳಿಸುವ 7.2 ರೇಟಿಂಗ್ ಮಲಯಾಳಂ ಸಿನಿಮಾ 8 ತಿಂಗಳ ನಂತರ ಹಿಂದಿಯಲ್ಲಿ ರಿಲೀಸ್
