ಈ ನಟ 350 ಮಹಿಳೆಯರೊಂದಿಗೆ ಮಲಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಡ್ರಗ್ ವ್ಯಸನಿಯಾಗಿದ್ದ ಅವರು, ಪುನರ್ವಸತಿ ಕೇಂದ್ರಕ್ಕೆ ಸೇರಿದ್ದರು. ಅವರ ಜೀವನದಲ್ಲಿನ ಪ್ರಮುಖ ಪ್ರೇಮ ಸಂಬಂಧಗಳ ಬಗ್ಗೆಯೂ ಇಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರು: ಬಣ್ಣದ ಲೋಕದ ಕೆಲವು ಕಲಾವಿದರ ಬದುಕು ವರ್ಣರಂಜಿತವಾಗಿರುತ್ತದೆ. ಸಿನಿಮಾಗಳಿಗಿಂತಲೂ ಇವರ ಖಾಸಗಿ ಬದುಕು ಹೆಚ್ಚು ಚರ್ಚೆಯಲ್ಲಿರುತ್ತದೆ. ಇಂದು ನಾವು ಹೇಳುತ್ತಿರುವ ಈ ನಟ ತಾನು 350 ಮಹಿಳೆಯರೊಂದಿಗೆ ಹಾಸಿಗೆ ಹಂಚಿಕೊಂಡಿದ್ದೇನೆ ಎಂದು ಪತ್ನಿಯ ಮುಂದೆ ಮಾತ್ರವಲ್ಲ ಇಡೀ ದೇಶದ ಮುಂದೆಯೇ ಒಪ್ಪಿಕೊಂಡಿದ್ದಾನೆ. ಅಷ್ಟು ಮಾತ್ರವಲ್ಲ ಡ್ರಗ್ ವ್ಯಸನಿಯಾಗಿದ್ದ ನಟ, ಸೇವನೆ ಮಾಡದ ಒಂದೇ ಒಂದು ಮಾದಕ ಪದಾರ್ಥ ಉಳಿದಿಲ್ಲ. ಮಗ ಡ್ರಗ್ ಅಡಿಕ್ಟ್ ಆಗಿರೋ ವಿಷಯ ತಿಳಿಯುತ್ತಿದ್ದಂತೆ ಪೋಷಕರು ವಿದೇಶದಲ್ಲಿರುವ ಮಾದಕವಸ್ತು ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದರು. ತಾಯಿ ಸತ್ತಾಗ ಡ್ರಗ್ಸ್ ನಶೆಯಲ್ಲಿ ಈ ನಟ ಮಲಗಿದ್ದನು. ಇದೀಗ ಇದೆಲ್ಲದರಿಂದಲೂ ಹೊರಗೆ ಬಂದಿರುವ ನಟ ಸಿನಿಮಾ ಮತ್ತು ವ್ಯವಹಾರಗಳಲ್ಲಿ ಬ್ಯುಸಿಯಾಗಿದ್ದು, ಸುಖಿ ಸಾಂಸರಿಕ ಜೀವನ ನಡೆಸುತ್ತಿದ್ದಾನೆ.
ಈ ನಟ ಬಾಲಿವುಡ್ ಅಂಗಳದಲ್ಲಿ 'ಬಾಬಾ' ಎಂದೇ ಗುರುತಿಸಿಕೊಂಡಿದ್ದು, ಕನ್ನಡದ ಕೆಜಿಎಫ್ ಸಿನಿಮಾದಲ್ಲಿ ಅಧೀರನಾಗಿ ನಟಿಸಿದ್ದಾರೆ. ಈಗ ನಿಮಗೆ ಗೊತ್ತಾಗಿರುತ್ತೆ ನಾವು ನಟ ಸಂಜಯ್ ದತ್ ಬಗ್ಗೆ ಹೇಳುತ್ತಿದ್ದೇವೆ. ಸಂಜಯ್ ದತ್ ಜೀವನಾಧರಿತ 'ಸಂಜು' ಸಿನಿಮಾದಲ್ಲಿ ತಮ್ಮ ಖಾಸಗಿ ಜೀವನದ ವಿಷಯಗಳನ್ನು ಹೇಳಿಕೊಂಡಿದ್ದಾರೆ. ದೃಶ್ಯವೊಂದರಲ್ಲಿ ಪತ್ರಕರ್ತೆ, ನೀವು ಎಷ್ಟು ಮಹಿಳೆಯರೊಂದಿಗೆ ಮಲಗಿದ್ದೀರಿ ಎಂದು ನೇರವಾಗಿಯೇ ಕೇಳುತ್ತಾರೆ. ಇದಕ್ಕೆ ಸ್ವಲ್ಪವೂ ನಾಚಿಕೊಳ್ಳದ ನಟ, ವೇಶ್ಯೆಯರನ್ನು ಸೇರಿಸಿಯಾ ಎಂದು ಮರು ಪ್ರಶ್ನೆ ಮಾಡುತ್ತಾರೆ. ಅಂದಾಜು 308 ಇರಬಹುದು. ಯಾವುದಕ್ಕೂ ನೀವು 350 ಎಂದು ಬರೆದುಕೊಳ್ಳಿ ಎನ್ನುತ್ತಾರೆ. ಹೀಗೆ ಸಂಜಯ್ ದತ್ ಹೆಸರು ಹಲವು ನಟಿಯರೊಂದಿಗೆ ತಳಕು ಹಾಕಿಕೊಳ್ಳುತ್ತಾ ಬಂದಿತ್ತು. ಆ ನಟಿಯರು ಯಾರು ಎಂಬುದನ್ನು ನೋಡೋಣ ಬನ್ನಿ.
1.ಸಂಜಯ್ ದತ್ ಮತ್ತು ಟಿನಾ ಮುನಿಮ್ (Sanjay Dutt and Tina Munim)
ಸಂಜಯ್ ಮತ್ತು ಟಿನಾ ಬಾಲ್ಯದ ಗೆಳೆಯರು. ಈ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಸಂಜಯ್ ದತ್ ಮೊದಲ ಸಿನಿಮಾ ರಾಕಿಯಲ್ಲಿ ಇಬ್ಬರು ಜೊತೆಯಾಗಿ ನಟಿಸುತ್ತಿರುವಾಗಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆದ್ರೆ ಸಂಜಯ್ ಅತಿಯಾದ ಮದ್ಯ ಸೇವನೆಯಿಂದಾಗಿ ಟಿನಾ ಮುನಿಮ್ ದೂರವಾದರು.
2.ಸಂಜಯ್ ದತ್ ಮತ್ತು ಮಾಧುರಿ ದೀಕ್ಷಿತ್ (Sanjay Dutt and Madhuri Dixit)
90ರ ದಶಕದಲ್ಲಿ ಸಂಜಯ್ ದತ್ ಮತ್ತು ಮಾಧುರಿ ದೀಕ್ಷಿತ್ ಜನಪ್ರಿಯ ಜೋಡಿಯಾಗಿತ್ತು. 1991ರ 'ಸಾಜನ್' ಸಿನಿಮಾದಲ್ಲಿ ಇಬ್ಬರು ಜೋಡಿಯಾಗಿದ್ದರು. 1993ರಲ್ಲಿ ಸಂಜಯ್ ದತ್ TADA ಪ್ರಕರಣದಲ್ಲಿ ಬಂಧನಕ್ಕೊಳಗಾಗುತ್ತಾರೆ. ಈ ಸಂದರ್ಭದಲ್ಲಿ ಸಂಜಯ್ ದತ್ ಅವರಿಂದ ಮಾಧುರಿ ದೀಕ್ಷಿತ್ ಅಂತರ ಕಾಯ್ದುಕೊಂಡು ದೂರವಾದರು.
3.ಸಂಜಯ್ ದತ್ ಮತ್ತು ನಾದಿಯಾ ದುರಾನಿ (Sanjay Dutt and Nadia Durrani)
ಸಂಜಯ್ ದತ್ ಮತ್ತು ನಾದಿಯಾ ದುರಾನಿ ಹೇಗೆ ಭೇಟಿಯಾದ್ರು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಇಬ್ಬರು ಪ್ರೇಮ ಸಂಬಂಧದಲ್ಲಿದ್ದರು ಎಂಬ ಸುದ್ದಿ ಮಾತ್ರ ಪ್ರಕಟವಾಗುತ್ತಿತ್ತು. ವಿದೇಶಲ್ಲಿ ಚಿತ್ರೀಕರಣ ನಡೆಯುತ್ತಿರುವ ವೇಳೆ ನಾದಿಯಾ ಭೇಟಿ ನೀಡುತ್ತಿದ್ದರು. ಆದ್ರೆ ಕಾಲನಂತರ ನಾದಿಯಾ ಸಹ ಸಂಜಯ್ ದತ್‌ನಿಂದ ದೂರವಾದರು.
ಇದನ್ನೂ ಓದಿ: ಜೈಲಿಗೆ ಹೋಗೋ ಮುನ್ನ ಸಂಜಯ್ ದತ್ ಗರ್ಭಿಣಿ ಪತ್ನಿಯ ಜವಾಬ್ದಾರಿ ವಹಿಸಿದ್ಯಾರಿಗೆ?
4.ಸಂಜಯ್ ದತ್ ಮತ್ತು ಲಿಸಾ ರೇ (Sanjay Dutt and Lisa Ray)
ಖಾಸಗಿ ಮತ್ತು ವೃತ್ತಿ ಜೀವನದ ಸಂಕಷ್ಟದ ದಿನಗಳಲ್ಲಿ ಸಂಜಯ್ ದತ್‌ಗೆ ಜೊತೆಯಾಗಿದ್ದು ಲಿಸಾ ರೇ. ಆದ್ರೆ ಇಬ್ಬರ ಸಂಬಂಧ ಹೆಚ್ಚು ಸಮಯ ಇರಲಿಲ್ಲ. ಆದ್ರೆ ಸಂಜತಯ್ ದತ್ ಜೊತೆಗಿನ ಸಂಬಂಧದ ವಿಷಯನ್ನು ಲಿಸಾ ರೇ ತಿರಸ್ಕರಿಸಿದ್ದಾರೆ. ನಾವಿಬ್ಬರು ಒಳ್ಳೆಯ ಫ್ರೆಂಡ್ಸ್ ಎಂದು ಲಿಸಾ ಹೇಳಿಕೊಂಡಿದ್ದಾರೆ.
5.ಸಂಜಯ್ ದತ್ ಮತ್ತು ರೇಖಾ (Sanjay Dutt and Rekha)
ಬಾಲಿವುಡ್ ಹಿರಿಯ ನಟಿ ರೇಖಾ ವಯಸ್ಸಿನಲ್ಲಿ ಸಂಜಯ್ ದತ್‌ಗಿಂತ ಹಿರಿಯರು. ಚಿತ್ರೀಕರಣದ ವೇಳೆ ಭೇಟಿಯಾಗುತ್ತಿದ್ದ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು ಎಂದು ಹೇಳಲಾಗುತ್ತದೆ. ಇಬ್ಬರು ಡೇಟಿಂಗ್ ಮಾಡುತ್ತಿದ್ದು, ಓಡಿ ಹೋಗಿ ಮದುವೆಯಾಗಿದ್ದಾರೆ ಎಂಬ ಸುದ್ದಿಗಳು ಪ್ರಕಟವಾಗಿದ್ದವು. ರೇಖಾ ಅವರ ಜೀವನಚರಿತ್ರೆ Rekha – The Untold Storyಯಲ್ಲಿ ಈ ಸುದ್ದಿಗಳು ಸುಳ್ಳು ಎಂದು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ಸಂಜಯ್ ದತ್ ಮೇಲಿನ ಹುಚ್ಚು ಪ್ರೀತಿಗೆ ₹72 ಕೋಟಿ ಆಸ್ತಿ ಬರೆದಿಟ್ಟು ಅಭಿಮಾನಿ ದುರಂತ ಅಂತ್ಯ

