ನಟ ಸಂಜಯ್ ಅಂದರೆ ಈಕಗೆ ಹುಚ್ಚು ಪ್ರೀತಿ. ಹೃದಯದಲ್ಲಿ ಬಿಚ್ಚಿಟ್ಟ ಪ್ರೀತಿ ಸಂಜಯ್ ದತ್‌ಗೆ ತಿಳಿಯಲಿಲ್ಲ, ಒಮ್ಮೆಯೂ ಸಂಜಯ್ ದತ್ ಭೇಟಿಯಾಗಲಿಲ್ಲ. ಆದರೆ ಪ್ರೀತಿ ಮಾತ್ರ ಗಗನ ಚುಂಬಿ ಕಟ್ಟಡಕ್ಕೂ ಮಿಗಿಲಾಗಿತ್ತು. ಕೊನೆಗೆ ಈ ಮಹಿಳಾ ಅಭಿಮಾನಿ ತನ್ನ 72 ಕೋಟಿ ರೂಪಾಯಿ ಆಸ್ತಿಯನ್ನು ಸಂಜಯ್ ದತ್ ಹೆಸರಿಗೆ ಬರೆದು ದುರಂತ ಅಂತ್ಯ ಕಂಡಿದ್ದಾಳೆ. ಏನಿದು ಘಟನೆ?
ಮುಂಬೈ(ಫೆ.09) 90ರ ದಶಕದಲ್ಲಿ ಸಂಜಯ್ ದತ್ ಬಾಲಿವುಡ್ ಮಾತ್ರವಲ್ಲಾ ದೇಶಾದ್ಯಂತ ಸದ್ದು ಮಾಡಿದ್ದರು. ಮಹಿಳಾ ಅಭಿಮಾನಿಗಳ ಸಂಖ್ಯೆಗೆ ಲೆಕ್ಕವೇ ಇಲ್ಲ. ಈಗಲೂ ಸಂಜಯ್ ದತ್ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. 135ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿರುವ ಸಂಜಯ್ ದತ್ ಫ್ಯಾನ್ ಫಾಲೋವಿಂಗ್ ಅದ್ಯಾವ ಮಟ್ಟಿಗೆ ಇದೆ ಎಂದರೆ ನಟನಿಗಾಗಿ ತಮ್ಮ ಜೀವನವನ್ನೇ ಸವೆಸಿದವರಿದ್ದಾರೆ. ಹೀಗೆ ಮಹಿಳಾ ಅಭಿಮಾನಿಯೊಬ್ಬಳ ದುರಂತ ಹಾಗೂ ಅಚ್ಚರಿಯ ಕತೆ ತೆರೆದುಕೊಂಡಿದೆ. ಈಕೆಗೆ ಸಂಜಯ್ ದತ್ ಎಂದರೆ ಪಂಚಪ್ರಾಣ. ತಾನು ಮದುವೆಯಾಗುವುದಾದರೆ ಸಂಜಯ್ ದತ್‌ನನ್ನೇ ಮದುವೆಯಾಗುತ್ತೇನೆ ಎಂಬ ಹಠ. ಆದರೆ ಈಕೆಯ ಬಿಚ್ಚಿಟ್ಟ ಪ್ರೀತಿ ಸಂಜಯ್ ದತ್‌ಗೆ ತಿಳಿಯಲೇ ಇಲ್ಲ. ಕೊನೆಗೆ ಈ ಮಹಿಳಾ ಅಭಿಮಾನಿ ತನ್ನ ಒಟ್ಟು 72 ಕೋಟಿ ರೂಪಾಯಿ ಆಸ್ತಿಯನ್ನು ಸಂಜಯ್ ದತ್ ಹೆಸರಿಗೆ ಬರದು ದುರಂತ ಅಂತ್ಯ ಕಂಡ ಘಟನೆ ಬಹಿರಂಗವಾಗಿದೆ.
ಈ ಮಹಿಳಾ ಅಭಿಮಾನಿಯ ಹೆಸರು ನಿಶಾ ಪಾಟೀಲ್. ಈಕೆ ಸಂಜಯ್ ದತ್ ಮೊದಲ ಚಿತ್ರದಿಂದ ಎಲ್ಲಾ ಚಿತ್ರಗಳನ್ನು ನೋಡಿ ಅಭಿಮಾನಿಯಾಗಿದ್ದಾಳೆ. ಸಂಜಯ್ ದತ್ ತನ್ನ ಎಲ್ಲಾ ಎಂದುಕೊಂಡೇ ಜೀವನ ಸಾಗಿಸಿದ್ದಾಳೆ. ನಿಶಾ ಪಾಟೀಲ್ ಹೃದಯದಲ್ಲಿ, ಮನಸ್ಸಿನಲ್ಲಿ ಸಂಜಯ್ ದತ್‌ಗೆ ಮಾತ್ರ ಸ್ಥಾನ ನೀಡಲಾಗಿತ್ತು. ಆದರೆ ಈಕೆಯ ಬಚ್ಚಿಟ್ಟ ಪ್ರೀತಿ ಹೊರಗೆ ತಿಳಿಯಲಿಲ್ಲ. ಇತ್ತ ಸಂಜಯ್ ದತ್‌ಗೂ ಗೊತ್ತಾಗಲೇ ಇಲ್ಲ.
308ಕ್ಕೂ ಹೆಚ್ಚು ಯುವತಿಯರ ಜೊತೆ ಆಫೇರ್: ಈ ನಟನ ಬದುಕೇ ಒಂದು ವಿಚಿತ್ರ
ಘಟನೆ ಬಹಿರಂಗವಾಗಿದ್ದು ಹೇಗೆ?
2018ರಲ್ಲಿ ಮುಂಬೈ ಪೊಲೀಸರು ಸಂಜಯ್ ದತ್‌ಗೆ ಕರೆ ಮಾಡಿದ್ದಾರೆ. ಈ ವೇಳೆ ಪೊಲೀಸರ ಮಾತುಗಳನ್ನು ಕೇಳಿ ಸಂಜಯ್ ದತ್ ಅಚ್ಚರಿ ಹಾಗೂ ಆಘಾತಗೊಂಡಿದ್ದಾರೆ. ಕಾರಣ ಪೊಲೀಸರು ಹೇಳಿದ ಮಾತು. ನಿಶಾ ಪಾಟೀಲ್ ಅನ್ನೋ ನಿಮ್ಮ ಅಭಿಮಾನಿ, ತಮ್ಮ ಎಲ್ಲಾ ಆಸ್ತಿಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ ಎಂದಿದ್ದಾರೆ. ನಿಶಾ ಪಾಟೀಲ್ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಏಕಾಂಗಿಯಾಗಿ ಮನೆಯಲ್ಲಿ ವಾಸವಿದ್ದ ನಿಶಾ ಪಾಟೀಲ್ ಮೃತದೇಹ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಇತ್ತ ಮನೆಯನ್ನು ಶೋಧಿಸಿದಾಗ ವಿಲ್ ಸೇರಿದಂತೆ ಹಲವು ದಾಖಲೆಗಳು ಪತ್ತೆಯಾಗಿದೆ.
ಈ ದಾಖಲೆಗಳಲ್ಲಿ ತಮ್ಮ ಆಸ್ತಿ, ಬ್ಯಾಂಕ್ ಖಾತೆಯಲ್ಲಿ ಎಲ್ಲಾ ಹಣವನ್ನೂ ಸಂಜಯ್ ದತ್‌ಗೆ ವರ್ಗಾಯಿಸಲು ಸೂಚಿಸಿದ್ದಳು. ಈ ಕುರಿತು ಎಲ್ಲಾ ದಾಖಲೆ ಪತ್ರಗಳನ್ನು ಪೊಲೀಸರು ವಶಪಪಡಿಸಿಕೊಂಡು ಸಂಜಯ್ ದತ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಪ್ರಾಣಕ್ಕಿಂತ ಹೆಚ್ಚಾಗಿ ಸಂಜಯ್ ದತ್ ಪ್ರೀತಿಸಿ ಕೊನೆಯ ದಿನಗಳಲ್ಲಿ ತನ್ನ ಎಲ್ಲಾ ಆಸ್ತಿಯನ್ನು ಅದು ಬರೋಬ್ಬರಿ 72 ಕೋಟಿ ರೂಪಾಯಿ ಆಸ್ತಿಯನ್ನು ತನ್ನ ಹೆಸರಿಗೆ ಬರೆದ ಅಭಿಮಾನಿ ನಡೆಗೆ ಸಂಜಯ್ ದತ್ ಭಾವುಕರಾಗಿದ್ದಾರೆ.
ಪೊಲೀಸರ ಮಾತುಗಳಿಂದ ಚೇತರಿಸಿಕೊಂಡ ಸಂಜಯ್ ದತ್ ಮಹತ್ವದ ನಿರ್ಧಾರ ಮಾಡಿದ್ದರು. ತಮ್ಮ ವಕೀಲರ ಮೂಲಕ ನೊಟೀಸ್ ಜಾರಿ ಮಾಡಿದ್ದರು. ನಿಶಾ ಪಾಟೀಲ್ ತಮ್ಮ ಅಭಿಮಾನಿ ಎಂದು ತಿಳಿದು ಸಂತೋಷವಾಗಿದೆ. ಆದರೆ ನಿಶಾ ಪಾಟೀಲ್ ಮೃತಪಟ್ಟಿರವುದು ದುಃಖಕರ. ನಿಶಾ ಪಾಟೀಲ್ ಜೊತೆಗೆ ತನಗೆ ಯಾವುದೇ ಸಂಬಂಧ ಇಲ್ಲ. ಭೇಟಿಯಾಗಿಲ್ಲ. ನನಗೆ ಪರಿಚಯ ಇಲ್ಲ. ಹೀಗಾಗಿ ಅವರ ಆಸ್ತಿಯನ್ನು ತಾನು ಸ್ವೀಕರಿಸುವುದಿಲ್ಲ ಎಂದು ವಕೀಲರ ಮೂಲಕ ನೊಟೀಸ್ ನೀಡಲಾಗಿತ್ತು. ಈ ಘಟನೆ ಸಂಜಯ್ ದತ್‌ರನ್ನು ತೀವ್ರ ಆಘಾತಗೊಳ್ಳುವಂತೆ ಮಾಡಿತ್ತು. ಇಷ್ಟೇ ಅಲ್ಲ ಈ ಘಟನೆಯನ್ನು ಯಾರೊಂದಿಗೂ ಚರ್ಚಿಸದೆ ಗೌಪ್ಯವಾಗಿಟ್ಟಿದ್ದರು. ಇದೀಗ ಈ ಮಾಹಿತಿ ಹೊರಬಿದ್ದಿದೆ.
ಕೆಜಿಎಫ್ ಅಧೀರನ ಫ್ಯಾಮಿಲಿ ಫೋಟೊ…. ತನಗಿಂತ 19 ವರ್ಷ ಕಿರಿಯಳನ್ನು ಮದುವೆಯಾಗಿದ್ದೇಕೆ ಸಂಜಯ್ ದತ್
