Asianet Suvarna News Asianet Suvarna News

ಬಿಗ್‌ಬಾಸ್‌ಗೆ ಸಾವಿರ ಕೋಟಿ ಸಂಬಳ: ಐಟಿ, ಇಡಿ ಗಮನಿಸುತ್ತಿದೆ.. ಇದು ನಿಜವಲ್ಲ ನಿಜವಲ್ಲ ಎಂದ ಸಲ್ಲು

ಹಿಂದಿ ಬಿಗ್‌ಬಾಸ್ ಶೋ ನಡೆಸಿಕೊಡುತ್ತಿರುವ ನಟ ಸಲ್ಮಾನ್‌ ಖಾನ್, ಅವರು ಇದಕ್ಕಾಗಿ 1000 ಕೋಟಿ ರೂಪಾಯಿಯ ವೇತನ ಪಡೆಯುತ್ತಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಈ ಬಗ್ಗೆ ಮಾಧ್ಯಮಗಳು ಸಲ್ಮಾನ್ ಖಾನ್ ಅವರನ್ನು ಕೇಳಿದ್ದು, ಈ ಸುದ್ದಿಯನ್ನು ಅವರು ನಿರಾಕರಿಸಿದ್ದಾರೆ. 

Bollywood actor salman khan refused 1000 crore fee for Hosting bigboss akb
Author
First Published Sep 28, 2022, 7:38 PM IST

ಮುಂಬೈ: ಕನ್ನಡದಂತೆ ಹಿಂದಿಯಲ್ಲೂ ಬಿಗ್‌ಬಾಸ್ ಸೀಸನ್‌ ಆರಂಭವಾಗಿದೆ. ಕನ್ನಡದಲ್ಲಿ ಬಿಗ್‌ಬಾಸ್ ಒಂಭತ್ತನೇ ಆವೃತಿ ಆರಂಭವಾಗಿದ್ದರೆ, ಹಿಂದಿಯಲ್ಲಿ ಬಿಗ್‌ಬಾಸ್ ಸೀಸನ್ 16 ನಿನ್ನೆಯಷ್ಟೇ ಶುರುವಾಗಿದೆ. ಈ ಮಧ್ಯೆ ಈ ಹಿಂದಿ ಬಿಗ್‌ಬಾಸ್ ಶೋ ನಡೆಸಿಕೊಡುತ್ತಿರುವ ನಟ ಸಲ್ಮಾನ್‌ ಖಾನ್, ಅವರು ಇದಕ್ಕಾಗಿ 1000 ಕೋಟಿ ರೂಪಾಯಿಯ ವೇತನ ಪಡೆಯುತ್ತಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಈ ಬಗ್ಗೆ ಮಾಧ್ಯಮಗಳು ಸಲ್ಮಾನ್ ಖಾನ್ ಅವರನ್ನು ಕೇಳಿದ್ದು, ಈ ಸುದ್ದಿಯನ್ನು ಅವರು ನಿರಾಕರಿಸಿದ್ದಾರೆ. 

ಸಾವಿರ ಕೋಟಿಯ ಸ್ಯಾಲರಿ ಗಾಸಿಪ್‌ಗೆ (gossip) ಪ್ರತಿಕ್ರಿಯಿಸಿದ ಸಲ್ಮಾನ್ ಖಾನ್ (Salman Khan), ನನ್ನ ಸಂಬಳದ ಬಗೆಗಿನ ಸುದ್ದಿಗಳು ಯಾವುದೂ ನಿಜವಲ್ಲ. ಒಂದು ವೇಳೆ ನನಗೆ ಅಷ್ಟೊಂದು ಹಣ ಸಿಕ್ಕಿದ್ದೇ ಹೌದಾದರೆ ನಾನು ಜೀವನ ಪೂರ್ತಿ (Life time) ಕೆಲಸ ಮಾಡುವುದನ್ನೇ ನಿಲ್ಲಿಸುತ್ತೇನೆ. ಆದರೆ ಈ ಮೊತ್ತವನ್ನು ನನಗೆ ಪಾವತಿಸುವ ದಿನ ಬರಬಹುದು. ಇಷ್ಟೊಂದು ದೊಡ್ಡ ಮೊತ್ತ ನನಗೆ ಬಂದಲ್ಲಿ ನನಗೆ ಅದಕ್ಕೆ ತಕ್ಕನಾದ ವಕೀಲರು (Lawyer) ಮುಂತಾದ ಇನ್ನಿತರ ವೆಚ್ಚಗಳು ಬರಬಹುದು. ನನ್ನ ವಕೀಲರು ಸಲ್ಮಾನ್‌ ಖಾನ್‌ಗಿಂತ ಕಡಿಮೆ ಏನಿಲ್ಲ. ನನ್ನ ಗಳಿಕೆಯೂ ಅವರ ಗಳಿಕೆಯ ನಾಲ್ಕನೇ ಒಂದು ಭಾಗವೂ ಇಲ್ಲ. ಈ ವರದಿಗಳನ್ನು ಆದಾಯ ತೆರಿಗೆ (Income Tax) ಹಾಗೂ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಕೂಡ ಓದುತ್ತಾರೆ ಎಂದು ಸಲ್ಮಾನ್ ಖಾನ್ ಪ್ರತಿಕ್ರಿಯಿಸಿದರು. 

ಸಲ್ಮಾನ್‌ನಿಂದ ಶಾರುಖ್‌ ಮಗನವರೆಗೆ ಚಂಕಿ ಪಾಂಡೆ ಬರ್ತ್‌ಡೇ ಪಾರ್ಟಿಯಲ್ಲಿ ಸ್ಟಾರ್‌ಗಳು

ಪ್ರತಿ ವರ್ಷವೂ ನಾನು ಬಿಗ್‌ಬಾಸ್ (Bigboss16) ಕಾರ್ಯಕ್ರಮ ನಿರೂಪಣೆಗೆ ಬರುವುದಿಲ್ಲ ಎಂದು ಹೇಳಿರುತ್ತೇನೆ. ಅಲ್ಲಿ ನನಗೆ ಕಿರಿಕಿರಿ ಆಗುವ ಹಲವು ಸಂದರ್ಭಗಳು ಬಂದಿರುತ್ತವೆ, ಆ ಸಂದರ್ಭದಲ್ಲಿ ನಾನು ಈ ಕಾರ್ಯಕ್ರಮವನ್ನು ನಿರೂಪಣೆ ಮಾಡುವುದಿಲ್ಲ ಎಂದು ಚಾನೆಲ್ ಮುಖ್ಯಸ್ಥರಿಗೆ (Channel Head) ಹೇಳುತ್ತೇನೆ. ಆದರೆ ಅವರಿಗೆ ಬೇರೆ ಆಯ್ಕೆಗಳಿಲ್ಲ. ಅವರು ಮತ್ತೆ ನನ್ನ ಬಳಿ ಆಗಮಿಸುತ್ತಾರೆ. ಒಂದು ವೇಳೆ ಅವರಿಗೆ ಬೇರೆ ಯಾರಾದರೂ ಸಿಕ್ಕಿದ್ದರೆ ಈ ಹಿಂದೆಯೇ ಅವರು ಈ ಕಾರ್ಯಕ್ರಮದ ನಿರೂಪಣೆಗೆ ನನ್ನ ಬದಲು ಬೇರೆಯವರನ್ನು ಆಯ್ಕೆ ಮಾಡುತ್ತಿದ್ದರು. ನನ್ನ ಜಾಗಕ್ಕೆ ಬರುವವರು ತುಂಬಾ ಮಂದಿ ಇದ್ದಾರೆ ಎಂದು ಸಲ್ಮಾನ್ ಖಾನ್ ಹೇಳಿದರು. 

ದೊಡ್ಡ ಮೊತ್ತಕ್ಕೆ ಒಟಿಟಿಗೆ ಸೇಲ್ ಆದ ಚಿರಂಜೀವಿ 'ಗಾಡ್ ಫಾದರ್'; ಇದಕ್ಕೆ ಕಾರಣ ಬಾಲಿವುಡ್‌ ಈ ಸ್ಟಾರ್ ನಟ

ಬಿಗ್‌ಬಾಸ್‌ನಲ್ಲಿ ಪ್ರತಿಬಾರಿಯೂ ನಟ ಸಲ್ಮಾನ್ ಖಾನ್, ಸ್ಪರ್ಧಿಗಳ ಕೆಲ ವರ್ತನೆಗೆ ತಾಳ್ಮೆ ಕಳೆದುಕೊಳ್ಳುತ್ತಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಹೌದು ಕೆಲವೊಮ್ಮೆ ನಾನು ಅಲ್ಲಿ ತಾಳ್ಮೆ ಕಳೆದುಕೊಳ್ಳುತ್ತೇನೆ. ಯಾಕೆಂದರೆ ಸ್ಪರ್ಧಿಗಳು ಕೆಲವೊಮ್ಮೆ ಮಿತಿಮೀರಿ ವರ್ತಿಸುತ್ತಾರೆ. ಟಿವಿ ನೋಡುವವರು ಕೇವಲ ಒಂದು ಗಂಟೆ ಮಾತ್ರ ಕಾರ್ಯಕ್ರಮ ವೀಕ್ಷಿಸುತ್ತಾರೆ. ಅದೂ ಎಡಿಟ್ ಆಗಿರುತ್ತದೆ. ಆದರೆ ನಿಜವಾಗಿಯೂ ನಾವು ನೋಡುವ ಕೆಲ ಸೀನ್‌ಗಳನ್ನು ವೀಕ್ಷಕರು ನೋಡಿರುವುದಿಲ್ಲ. ಹೀಗಾಗಿ ನಾನು ಏಕೆ ಅಷ್ಟೊಂದು ಜೋರಾಗಿ ಪ್ರತಿಕ್ರಿಯಿಸುತ್ತೇನೆ ಎಂಬುದು ಅವರಿಗೆ ನಿಜವಾಗಿಯೂ ಅರ್ಥವಾಗುವುದಿಲ್ಲ. ಅವರು ಕೇವಲ ಎಡಿಟ್ ಆಗಿರುವುದನ್ನಷ್ಟೇ ನೋಡಿರುತ್ತಾರೆ. ಅವರು ಅದನ್ನು  ಎಡಿಟ್ ಆಗದೇ ಇರುವ ಸೀನ್‌ಗಳನ್ನು ನೋಡಲು ಕೂಡ ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ವಿಚಿತ್ರ ವರ್ತನೆಯ ಜನ ಬಿಗ್‌ಬಾಸ್ ಮನೆಯೊಳಗಿರುತ್ತಾರೆ. ಒಂದೊಂದು ಸಮಯದಲ್ಲಿ ಅವರ ಈ ಹದ್ದು ಮೀರಿದ ವರ್ತನೆ ತಡೆಯಲಾಗದೇ ನಾನು ಮಧ್ಯ ಪ್ರವೇಶಿಸುತ್ತೇನೆ. ಇದು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ, ನಾನು ಎದುರಿಸಲು ಇತರ ಸಮಸ್ಯೆಗಳಿವೆ ಎಂದು ಸಲ್ಮಾನ್ ಖಾನ್ ಹೇಳಿದರು. 
 

Follow Us:
Download App:
  • android
  • ios