ಸಲ್ಮಾನ್‌ನಿಂದ ಶಾರುಖ್ ಮಗನವರೆಗೆ ಚಂಕಿ ಪಾಂಡೆ ಬರ್ತ್‌ಡೇ ಪಾರ್ಟಿಯಲ್ಲಿ ಸ್ಟಾರ್‌ಗಳು
ಬಾಲಿವುಡ್ ನಟ ಚಂಕಿ ಪಾಂಡೆ (Chunky Panday) ಸೆಪ್ಟೆಂಬರ್ 26 ರಂದು 60 ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಇದಕ್ಕೂ ಮುನ್ನ ವಿಜೃಂಭಣೆಯಿಂದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 1962 ರಲ್ಲಿ ಮುಂಬೈನಲ್ಲಿ ಜನಿಸಿದ ಚಂಕಿ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ ನಂತರವೂ ತನ್ನ ಛಾಪು ಮೂಡಿಸಲು ಸಾಧ್ಯವಾಗಲಿಲ್ಲ. ಅವರು ಬಹುತೇಕ ಚಿತ್ರಗಳಲ್ಲಿ ನೆಗೆಟಿವ್ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಪ್ರಸ್ತುತ, ಚಂಕಿ ಬಾಲಿವುಡ್ ಜೊತೆಗೆ ದಕ್ಷಿಣ ಮತ್ತು ಇತರ ಭಾಷೆಗಳ ಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಅವರ ಪಾರ್ಟಿಯಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್, ಸೋನಾಲಿ ಬೇಂದ್ರೆ, ಅನನ್ಯ ಪಾಂಡೆ, ನವ್ಯಾ ನವೇಲಿ ನಂದಾ ಯಶ್ ಬಿರ್ಲಾ ಕಾಣಿಸಿಕೊಂಡರು. ಚಂಕಿ ಪಾಂಡೆ ಪಾರ್ಟಿಗೆ ಆಗಮಿಸಿದ ಸೆಲೆಬ್ರಿಟಿಗಳ ಫೋಟೋಗಳು ಸಖತ್ ವೈರಲ್ ಆಗಿವೆ.
ಚಂಕಿ ಪಾಂಡೆ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪತಿ ಸಂಜಯ್ ಕಪೂರ್ ಜೊತೆ ಆಗಮಿಸಿದ ಮಹೀಪ್ ಕಪೂರ್ ಎಲ್ಲರ ಗಮನ ಸೆಳೆದರು. ಈ ಸಂದರ್ಭದಲ್ಲಿ ಅವರು ಬಿಳಿ ಬಣ್ಣದ ಶಾರ್ಟ್ ಮತ್ತು ಶರ್ಟ್ ಧರಿಸಿದ್ದರು ಮತ್ತು ಅವರು ತನ್ನ ಪತಿಯೊಂದಿಗೆ ಪೋಸ್ ನೀಡಿದ್ದರು.
ಪತಿ ಗೋಲ್ಡಿ ಬೆಹ್ಲ್ ಜೊತೆ ಸೋನಾಲಿ ಬೇಂದ್ರೆ ಕೂಡ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಸೋನಾಲಿ ಹಳದಿ ಬಣ್ಣದ ಡ್ರೆಸ್ ಧರಿಸಿದ್ದು, ಅದರಲ್ಲಿ ಸುಂದರವಾಗಿ ಕಾಣುತ್ತಿದ್ದರು.
ಅಂಗದ್ ಬೇಡಿ ಅವರು ಪತ್ನಿ ನೇಹಾ ಧೂಪಿಯಾ ಅವರೊಂದಿಗೆ ಹುಟ್ಟುಹಬ್ಬದ ಪಾರ್ಟಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಛಾಯಾಗ್ರಾಹಕರಿಗೆ ದಂಪತಿಗಳು ಪೋಸ್ ಕೂಡ ನೀಡಿದ್ದಾರೆ.
ಪಾರ್ಟಿಯಲ್ಲಿ ಕರಣ್ ಜೋಹರ್ ತಮ್ಮದೇ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಚಂಕಿ ಪಾಂಡೆ ಅವರ ಸೋದರನ ಮಗ ತಮ್ಮ ಚಿಕ್ಕಪ್ಪನಿಗೆ ಹುಟ್ಟುಹಬ್ಬದ ಶುಭಾಶಯ ಕೋರಲು ಬಂದಿದ್ದರು.
ಈ ಸಂದರ್ಭದಲ್ಲಿ ಆಯುಷ್ ಶರ್ಮಾ ಕೂಡ ಕಾಣಿಸಿಕೊಂಡರು. ಆಯುಷ್ ಅವರೇ ಕಾರನ್ನು ಡ್ರೈವ್ ಮಾಡಿಕೊಂಡು ಪಾರ್ಟಿಗೆ ಬಂದರು. ಇತ್ತೀಚೆಗೆ, ಅವರ Transformation ಫೋಟೋ ವೈರಲ್ ಆಗಿತ್ತು.
ಗೆಳೆಯ ಚಂಕಿ ಪಾಂಡೆಯ ಹುಟ್ಟುಹಬ್ಬಕ್ಕೆ ಸಲ್ಮಾನ್ ಖಾನ್ ಕೂಡ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಲ್ಮಾನ್ ಯಾವುದೋ ಯೋಚನೆಯಲ್ಲಿ ಇದ್ದರು. ಕ್ಯಾಮರಾಮನ್ ಬಗ್ಗೆಯೂ ಅಷ್ಟಾಗಿ ಗಮನ ಕೊಡಲಿಲ್ಲ.
ಅನನ್ಯಾ ಪಾಂಡೆ ತನ್ನ ವಿಶೇಷ ಸ್ನೇಹಿತೆ ನವ್ಯಾ ನವೇಲಿ ನಂದಾ ಅವರೊಂದಿಗೆ ತಂದೆ ಚಂಕಿಯ ಹುಟ್ಟುಹಬ್ಬದ ಶುಭಾಶಯ ಕೋರಲು ಆಗಮಿಸಿದ್ದರು. ಈ ಸಂದರ್ಭದಲ್ಲಿ ಅನನ್ಯಾ ಖುಷಿಯಾಗಿ ಕಾಣುತ್ತಿದ್ದರು.
ಜಾಯೆದ್ ಖಾನ್ ಬಹಳ ಸಮಯದ ನಂತರ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ, ಅವರು ಪತ್ನಿ ಮಲೈಕಾ ಪರೇಖ್ ಅವರೊಂದಿಗೆ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಮಲೈಕಾ ಕಪ್ಪು ಬಣ್ಣದ ಪಾರದರ್ಶಕ ಉಡುಪನ್ನು ಧರಿಸಿದ್ದರು.
ಈ ಸಂದರ್ಭದಲ್ಲಿ ಜಾಕಿ ಶ್ರಾಫ್ ಕೂಡ ಕಾಣಿಸಿಕೊಂಡಿದ್ದರು. ಅವರು ತಮ್ಮ ಹಳೆಯ ಕಾರಿನಲ್ಲಿ ಪಾರ್ಟಿಗೆ ಬಂದಿದ್ದರು. ಕಾರಿನಲ್ಲಿ ಕುಳಿತು ಛಾಯಾಗ್ರಾಹಕರಿಗೆ ವಿಶ್ ಮಾಡಿದರು.