ಓಂ ರಾವತ್ ನಿರ್ದೇಶನದ ಆದಿಪುರುಷ್ ಸಿನಿಮಾದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಕೂಡಾ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದೂ ಪ್ರಭಾಸ್‌ಗೆದುರಾಗಿ. ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಅಭಿನಯದ ಆದಿಪರುಷ್ ಈಗಾಗಲೇ ಭಾರೀ ಕುತೂಹಲ ಮೂಡಿಸಿದೆ. ಇದೀಗ ಈ ತಂಡಕ್ಕೆ ಬಾಲಿವುಡ್ ಟಾಪ್ ನಟ ಸೇರಿಕೊಂಡಿದ್ದಾರೆ.

ಪ್ರಭಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಆದಿಪುರುಷ್‌ನಲ್ಲಿ ಸೈಫ್ ಪ್ರಭಾಸ್ ವಿರೋಧಿ ಲಂಕೇಶ್ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಇದು ಎರಡನೇ ಬಾರಿಗೆ ಸೈಫ್ ಓಂ ಜೊತೆ ಕೆಲಸ ಮಾಡಲಿದ್ದಾರೆ. ಸೈಫ್ ಥಾನಾಜಿ-ಅನ್‌ಸಂಗ್ ವಾರಿಯರ್‌ ಸಿನಿಮಾದಲ್ಲಿ ಓಂ ಜೊತೆ ಕೆಲಸ ಮಾಡಿದ್ದರು.

ಪೌರಾಣಿಕ ಪಾತ್ರದಲ್ಲಿ ಪ್ರಭಾಸ್‌; 'ಆದಿಪುರುಷ್‌' ಪೋಸ್ಟರ್ ವೈರಲ್!

ಆದಿಪುರುಷ್ ಸಿನಿಮಾದಲ್ಲಿ 7000 ವರ್ಷದ ಹಿಂದೆ ಇದ್ದ ಜಗತ್ತಿನ ಅತೀ ಬುದ್ಧಿವಂತ ರಾಕ್ಷಸನ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ನಟ ಸೈಫ್ ಪ್ರತಿಕ್ರಿಯಿಸಿದ್ದಾರೆ. ಓಂ ದಾದಾ ಜೊತೆ ಮತ್ತೊಮ್ಮೆ ಕೆಲಸ ಮಾಡೋದಕ್ಕೆ ಥ್ರಿಲ್ ಎನಿಸುತ್ತಿದೆ ಎಂದಿದ್ದಾರೆ.

ಅವರಿಗೆ  ಅದ್ಭುತ ಕಲ್ಪನೆ ಮತ್ತು ಅದನ್ನು ನಿಜವಾಗಿಯೂ ತೋರಿಸುವಷ್ಟು ತಾಂತ್ರಿಕ ಜ್ಞಾನವಿದೆ. ಅವರು ತನ್ಹಾಜಿ ಸಿನಿಮಾ ಚಿತ್ರೀಕರಿಸಿ ನಮ್ಮ ಸಿನೆಮಾಗಳ ಅತ್ಯಾಧುನಿಕತೆಯನ್ನೂ ಮೀರಿ ನನ್ನನ್ನು ಕರೆದೊಯ್ದಿದ್ದಾರೆ. ಈ ಬಾರಿ ಅವರು ನಮ್ಮೆಲ್ಲರನ್ನೂ ಇನ್ನೂ ಮುಂದೆ ಕರೆದೊಯ್ಯುತ್ತಿದ್ದಾರೆ! ಇದು ಅದ್ಭುತವಾದ ಯೋಜನೆಯಾಗಿದೆ ಮತ್ತು ಅದರ ಭಾಗವಾಗಲು ನಾನು ಉತ್ಸುಕನಾಗಿದ್ದೇನೆ ಎಂದಿದ್ದಾರೆ.

ಆತ್ಮಚರಿತ್ರೆ ಬರೀತಾರಂತೆ ಬಾಲಿವುಡ್ ನಟ ಸೈಫ್..!

ಓಂ ರಾವತ್ ಕೂಡಾ ಈ ಬಗ್ಗೆ ಟ್ವೀಟ್ ಮಾಡಿದ್ದು, ಪುರಾಣದ ಬಲಿಷ್ಠ ರಾಕ್ಷಸನ ಪಾತ್ರವನ್ನು ಮಾಡಲು ನಮಗೆ ಬ್ರಲಿಯೆಂಟ್ ನಟನ ಅಗತ್ಯವಿದೆ. ಇದನ್ನು ಸೈಫ್ ಅಲಿ ಖಾನ್‌ಗಿಂತ ಚೆನ್ನಾಗಿ ಇನ್ಯಾರು ಮಾಡಬಲ್ಲರು..? ಅವರ ಜೊತೆಗಿನ ಪ್ರತಿದಿನದ ಕೆಲಸವನ್ನೂ ನಾನು ಎಂಜಾಯ್ ಮಾಡಿದ್ದೇನೆ. ಮತ್ತೊಮ್ಮೆ ಅವರೊಂದಿಗಿನ ಪಯಣದ ಬಗ್ಗೆ ಇನ್ನಷ್ಟು ಉತ್ಸುಕನಾಗಿದ್ದೇನೆ ಎಂದಿದ್ದಾರೆ.

ಕೆಟ್ಟದರ ವಿರುದ್ಧ ಒಳ್ಳೆಯತನ ಗೆಲ್ಲುವ ಸಿನಿಮಾ ಇದಾಗಿದೆ. ಸಿನಿಮಾ ಬಗ್ಗೆ ಈ ಹಿಂದೆ ಮಾತನಾಡಿದ ನಿರ್ದೇಶಕ ಓಂ, ಇದು ಪ್ರಭು ರಾಮನ ಕಥೆ. ಪುರಾಣವನ್ನು ತೆರೆ ಮೇಲೆ ತರಲಿದ್ದೇವೆ ಎಂದಿದ್ದಾರೆ. ಇನ್ನು ಸೈಫ್ ಅಲಿ ಖಾನ್ ಬೂತ್ ಪೊಲೀಸ್ & ಬಂಟಿ ಔರ್ ಬಬ್ಲಿ2ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೊನೆಯದಾಗಿ ಅವರು ಸುಶಾಂತ್ ಸಿಂಗ್ ರಜಪೂತ್ ನಟನೆಯ ದಿಲ್ ಬೆಚಾರದಲ್ಲಿ ಕಾಣಿಸಿಕೊಂಡಿದ್ದರು.

ಸೈಫ್‌ಗೆ 50th ಹ್ಯಾಪಿ ಬರ್ತ್‌ಡೇ..! ಯು ಆರ್ ಮೈ ಸನ್‌ಶೈನ್ ಅಂದ್ಲು ಮಗಳು ಸಾರಾ..!

ಆದಿಪುರುಷ್ ಸಿನಿಮಾ ಹಿಂದಿ ಮತ್ತು ತೆಲುಗಿನಲ್ಲಿ ನಿರ್ಮಾಣವಾಗಲಿದ್ದು ತಮಿಳು, ಮಲಯಾಳಂ ಹಾಗೂ ಕನ್ನಡದಲ್ಲೂ ರಿಲೀಸ್ ಆಗಿಲಿದೆ. ಸಿನಿಮಾ 2022ರಲ್ಲಿ ರಿಲೀಸ್ ಆಗಲಿದೆ ಎನ್ನಲಾಗಿದೆ.