ಬಾಹುಬಲಿ ಚಿತ್ರದ ನಂತರ, ಇದೀಗ ಪೌರಾಣಿಕ ಚಿತ್ರಕ್ಕೆ ಸಹಿ ಮಾಡಿದ ಪ್ರಭಾಸ್, ಬೆಳ್ಳಂಬೆಳಗ್ಗೆ ಪೋಸ್ಟರ್ ರಿಲೀಸ್ ಮಾಡಿದ್ದು ಯಾಕೆ?

ಟಾಲಿವುಡ್‌ ಚಿತ್ರರಂಗದ ಬಹುಬೇಡಿಕೆಯ ನಟ ಪ್ರಭಾಸ್‌ ತಮ್ಮ ಮುಂದಿನ ಚಿತ್ರದ ಬಗ್ಗೆ ಅಪ್ಡೇಟ್‌ ನೀಡಿದ್ದಾರೆ. ರೆಬೆಲ್ ಸ್ಟಾರ್ ಪ್ರಭಾಸ್‌ 22ನೇ ಚಿತ್ರದ ಬಗ್ಗೆ ಮಾಹಿತಿ ಪಡೆದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹರ್ಷ ವ್ಯಕ್ತ ಪಡಿಸುತ್ತಿದ್ದಾರೆ. 

ಸ್ಟಾರ್ ನಿರ್ದೇಶಕ ಓಂ ರಾವತ್ ಇಂದು ಬೆಳಗ್ಗೆ 7.11ಕ್ಕೆ ಚಿತ್ರದ ಟೈಟಲ್‌ ಹಾಗೂ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಬಾಹುಬಲಿ ಚಿತ್ರದ ನಂತರ ಮತ್ತೊಮ್ಮೆ ಪ್ರಭಾಸ್ ಅವರನ್ನು ಪೌರಾಣಿಕ ಪಾತ್ರದಲ್ಲಿ ಕಾಣಲು ಅಭಿಮಾನಿಗಳು ಕಾಯುತ್ತಿದ್ದರು. ಪೋಸ್ಟರ್‌ನಲ್ಲಿ ಅಂಜನೇಯ, ಬಿಲ್ಲು ಹಿಡಿದು ನಿಂತಿರುವ ರಾಮ ಹಾಗೂ 10 ತಲೆ ರಾವಣನನ್ನೂ ನೋಡಬಹುದು. 

'ರಾಧೆ ಶ್ಯಾಮ' ಚಿತ್ರಕ್ಕೆ ರೆಹೆಮಾನ್ ಸಂಗೀತ; ವಿದೇಶದಲ್ಲಿ ಮೌನಿ ರಾಯ್!

ಬಾಲಿವುಡ್‌ ನಿರ್ದೇಶಕ ತರಣ್ ಆದರ್ಶ್‌ ಕೂಡ ಈ ಚಿತ್ರಕ್ಕೆ ಕೈ ಜೋಡಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾರಣ ಸಿನಿಮಾ ಮೊದಲು ತೆಲುಗು ಹಾಗೂ ಹಿಂದಿಯಲ್ಲಿ ನಿರ್ಮಾಣವಾಗುತ್ತದೆ. ಆನಂತರ ತಮಿಳು, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿಯೂ ಡಬ್‌ ಆಗಲಿದೆ ಎಂದು ಹೇಳಲಾಗುತ್ತಿದೆ. ಯೂವಿ ಕ್ರಿಯೇಷನ್ಸ್‌ ಹಾಗೂ ಟಿ-ಸೀರಿಸ್‌ ಸಹಭಾಗತ್ವದಲ್ಲಿ ನಿರ್ಮಾಣವಾಗುತ್ತಿರುವ ಆದಿಪುರುಷ್ ಸಿನಿಮಾ 2021ರಲ್ಲಿ ಸೆಟ್‌ ಏರಲಿದ್ದು 2022ರಲ್ಲಿ ತೆರೆಕಾಣುವ ನಿರೀಕ್ಷೆ ಇದೆ.