ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ ಆತ್ಮ ಚರಿತ್ರೆ ಬರೆಯುತ್ತಾರಂತೆ. ಈಗಾಗಲೇ ಸಿನಿಮಾ ಇಂಡಸ್ಟ್ರಿಯಲ್ಲಿ 25 ವರ್ಷಕ್ಕೂ ಅಧಿಕ ಕೆಲಸ ಮಾಡಿದ ನಟ ತಮ್ಮ ಸಿನಿ ಜರ್ನಿಯನ್ನು ಪುಸ್ತಕದಲ್ಲಿ ತೆರೆದಿಡಲಿದ್ದಾರೆ.

ಇನ್ನು ಹೆಸರಿಡದ ಆತ್ಮಚರಿತ್ರೆ ಕೆಲಸ ನಡೆಯುತ್ತಿದೆ. ಮುಂದಿನ ವರ್ಷ ಬಿಡುಗಡೆಯಾಗಲಿದೆ ಎಂದು ಸೈಫ್ ತಿಳಿಸಿದ್ದಾರೆ. ನನ್ನ ಜೀವನದ ಘಟನೆಗಳನ್ನು ಬರಿಯುವುದು ಸ್ವಾರ್ಥ ಎನಿಸುತ್ತದೆ. ಆದರೆ ಓದುಗರು ಇಷ್ಟಪಡುತ್ತಾರೆ ಎಂದಿದ್ದಾರೆ.

ಸೈಫ್‌ಗೆ 50th ಹ್ಯಾಪಿ ಬರ್ತ್‌ಡೇ..! ಯು ಆರ್ ಮೈ ಸನ್‌ಶೈನ್ ಅಂದ್ಲು ಮಗಳು ಸಾರಾ..!

ಹಲವಾರು ಸಂಗತಿಗಳು ಬದಲಾಗುತ್ತಿರುತ್ತವೆ. ನಾವದನ್ನು ದಾಖಲಿಸಿಕೊಳ್ಳದಿದ್ದರೆ ಅವುಗಳ ಸಮಯದ ಜೊತೆಗೇ ಕಳೆದು ಹೋಗುತ್ತವೆ. ಹಿಂದಿರುಗಿ ನೋಡುವುದೊಂದು ಖುಷಿ, ನೆನಪಿಸುವುದಕ್ಕೆ ಮತ್ತು ಬರೆಯುವುದಕ್ಕೆ. ಇದು ತುಂಬಾ ಫನ್ನಿಯಾಗಿದೆ.ಸ್ವಲ್ಪ ಸೆಲ್ಫಿಷ್. ಆದರೆ ಜನ ಮೆಚ್ಚುತ್ತಾರೆ ಎಂದಿದ್ದಾರೆ.

ವಾರಗಳ ಹಿಂದಷ್ಟೇ ಸೈಫ್ ಪತ್ನಿ ಜೊತೆಗೆ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಹೇಳಿಕೆ ನೀಡಿದ್ದರು. ಈಗಾಗಲೇ ಸೈಫ್ ಹಾಗೂ ಕರೀನಾಗೆ ಮಗ ತೈಮೂರ್ ಇದ್ದು, ಡಿಸೆಂಬರ್‌ಗೆ ತೈಮೂರ್‌ಗೆ 4 ವರ್ಷ ಆಗಲಿದೆ.

ಸೈಫೀನಾಗೆ ಲಾಕ್‌ಡೌನ್ ಬೇಬಿ: ಅಣ್ಣನಾಗ್ತಿದ್ದಾನೆ ತೈಮೂರ್

ಸೈಫ್‌ಗೆ ಇದು ನಾಲ್ಕನೇ ಮಗುವಾಗಿದ್ದು, ಮೊದಲ ಪತ್ನಿ ಅಮೃತಾ ಸಿಂಗ್ ಜೊತೆ ಇಬ್ರಾಹಿಂ ಹಾಗು ಸಾರಾ ಇದ್ದಾರೆ. ಈ ವರ್ಷ ಥಾನಾಜಿ ಹಾಗು ಜವಾನಿ ಜಾನೆಮನ್ ಸಿನಿಮಾ ಮಾಡಿದ್ದರು.