ನರ್ಗಿಸ್ ಫಕ್ರಿ ಬಳ್ಳಿಯಂತೆ ಬಳುಕುವ ಮೈಮಾಟದ ಚೆಲುವೆ. ಈಕೆಯ ಇನ್‌ಸ್ಟಾಗ್ರಾಂ ಅಕೌಂಟ್ ಸದಾ ಬ್ಯುಸಿಯಾಗಿರುತ್ತ. ಅದಕ್ಕೆ ಈಕೆ ಹಾಕುವ ಹಾಟ್ ಹಾಟ್ ಫೋಟೋಗಳೂ ಒಂದು ಕಾರಣ.

ಈಕೆಯ ಲೇಟೆಸ್ಟ್ ಅವತಾರ ಅಂದ್ರೆ ಹೊಳೆಯುವ ಮೆಜೆಂತಾ ಕಲರ್‌ನ ಬಿಕಿನಿ ಧರಿಸಿ, ಬೀಚ್‌ನಲ್ಲಿ ಮೈಗೆ ಮಣ್ಣು ಮೆತ್ತಿಕೊಂಡು, ಬಿಸಿಲಿನಲ್ಲಿ ಮಡ್ ಬಾತ್ ಮಾಡ್ತಾ, ಪೋಸ್ ಕೊಟ್ಟಿದ್ದಾಳೆ. ಈ ಫೋಟೋ ಇನ್‌ಸ್ಟಗ್ರಾಂನಲ್ಲಿ ಅಪ್‌ಲೋಡ್ ಮಾಡಿರುವ ಈಕೆ ಬರೆದಿರುವುದು ಹೀಗೆ- 'ಆಗಾಗ ದೇಹವನ್ನು ಡಿಟಾಕ್ಸ್ ಮಾಡೋದು ಒಳ್ಳೆಯದು. ಅದಕ್ಕೆ ಮಡ್‌ಬಾತ್ ಬೆಸ್ಟ್. ಬಿಸಿಲಿನಿಂದಾಗಿ ಬಾಡಿಗೆ ವಿಟಮಿನ್ ಡಿ ಕೂಡ ಸಿಗುತ್ತೆ. 'ಕೊರೊನಾ ಕಾಲದಲ್ಲಿ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ವಿಟಮಿನ್ ಡಿ ಗಳಿಸುವ ಬಗ್ಗೆ ನರ್ಗಿಸ್ ಬರೆದಿರುವುದು ಚೆನ್ನಾಗಿದೆ.

ತಮ್ಮ ಫೋಟೋಗಳಿಗೆ ಅರ್ಥಪೂರ್ಣ ವಿವರಣೆ ಹಾಕುವುದು ನರ್ಗಿಸ್ ಅಭ್ಯಾಸ. ಇದಕ್ಕೂ ಹಿಂದಿನ ಫೋಟೋದಲ್ಲಿ ಈಕೆ ಬಿಸಿಲಿಗೆ ಬೀಚ್‌ನ ಬಂಡೆಗಳ  ಮೈ ಒಡ್ಡಿ ಹೀಗೆ ಬರೆದಿದ್ದಾಳೆ- ಒತ್ತಡ ಮಾಡಿಕೊಂಡು ಹಾಳ ಮಾಡಿಕೊಳ್ಳಯವಷ್ಟು ಬದುಕು ದೀರ್ಘವಾಗಿ ಇಲ್ಲ. ಕೆಲವೊಮ್ಮೆ ನಮ್ಮ ಚಿಂತೆ, ಯೋಜನೆಗಳನ್ನೆಲ್ಲ ಎಲ್ಲವನ್ನೂ ಬದಿಗಿಟ್ಟು ರಿಲ್ಯಾಕ್ಸ್ ಮಾಡುವುದು, ಹಾಯಾಗಿರುವುದು ಇಂಪಾರ್ಟೆಂಟು ಆಗಿರುತ್ತೆ.

ಇನ್ನೊಂದು ಫೋಟೋದಲ್ಲಿ ಹೀಗೆ ಬರೆದಿದಾಳೆ- ವಸಂತ ಬಂದಾಗ ಕತ್ತಲೆ ಕರಾಳತೆ ಎಲ್ಲ ಮಾಯವಾಗುತ್ತೆ. ಬಾಳಿನಲ್ಲೂ ಹಾಗೇನೇ. ನಿರಾಶೆ ಹತಾಶೆ ಎಲ್ಲ ಮಾಯವಾಗಿ ಹೊಸ ಬೆಳಕು ಮೂಡುತ್ತೆ.

 

 

ನರ್ಗಿಸ್ ಇತ್ತೀಚೆಗೆ ತನ್ನ ಕೈಯ ಮೇಲೆ ಹಾಕಿಸಿಕೊಂಡಿದ್ದ ಬಾಯ್‌ಫ್ರೆಂಡ್‌ನ ಮಚ್ಚೆಯನ್ನು ತೆಗೆಸಿಹಾಕಿದ್ದಾಳೆ. ಅಂದರೆ ಬಹುಶಃ ಆಕೆಯ ಬದುಕಿನಲ್ಲಿ ಈಗ ಬಾಯ್‌ಫ್ರೆಂಡ್ ಇಲ್ಲ. ಈತನ ಹೆಸರು ಮ್ಯಾಟ್ ಅಲೊಂಜೋ. ಕಳೆದೆರಡು ವರ್ಷಗಳಿಂದ ಇವನ ಜೊತೆ ಈಕೆ ಡೇಟಿಂಗ್ ನಡೆಸುತ್ತಿದ್ದಳು.

ನರ್ಗಿಸ್ ನಟಿಸಿದ್ದು ಹಿಂದಿ ಫಿಲಂಗಳಲ್ಲಾದರೂ ಆಕೆ ವಾಸಿಸುತ್ತಿರುವುದು ಅಮೆರಿಕದಲ್ಲಿ. ಅವಳು ಹುಟ್ಟಿ ಬೆಳೆದದ್ದು ಅಮೆರಿಕದಲ್ಲಿ. ಇತ್ತೀಚೆಗೆ ಕರಿಯನೊಬ್ಬನನ್ನು ಪೊಲೀಸ್ ಕಾಲೊತ್ತಿ ಕೊಂದ ಘಟನೆಯಿಂದ ದೇಶಾದ್ಯಂತ ಹಬ್ಬಿದ ಪ್ರತಿಭಟನೆಗಳಲ್ಲಿ ನರ್ಗಿಸ್ ಕೂಡ ಭಾಗವಹಿಸಿದ್ದಳು. 

ಥ್ರೋಬ್ಯಾಕ್: ಕೋಸ್ಟಾರ್ಸ್ ಜೊತೆ ನರ್ಗಿಸ್ ಫಖ್ರಿಯ ಲಿಂಕ್‌ಅಪ್ಸ್! 

ನರ್ಗಿಸ್ ಈಗ ತಾನೇ ಒಂದು ಸೀರಿಯಸ್ ಆರೋಗ್ಯದ ತೊಂದರೆಯಿಂದ ಚೇತರಿಸಿಕೊಂಡಿದ್ದಾಳೆ. ಕಳೆದ ಕೆಲವು ತಿಂಗಳಿನಿಂದ ಈಕೆ ನಟನೆಯಲ್ಲಿ ಸಕ್ರಿಯವಾಗಿರಲಿಲ್ಲ. ಆರೋಗ್ಯ ಸಮಸ್ಯೆ ಇದ್ದುದು ನಿಜ. ಆದರೆ ಅದರಿಂದ ಚೇತರಿಸಿಕೊಂಡಿದ್ದೀನಿ. ಅದರ ಬಗ್ಗೆ ಮಾತಾಡಲು ಇಷ್ಟಪಡೋಲ್ಲ ಎಂದು ಆಕೆ ಹೇಳಿಕೊಂಡಿದಾಳೆ.ನರ್ಗಿಸ್ ಫಕ್ರಿ ಮಾದಕತೆಗೆ ಇನ್ನೊಂದು ಹೆಸರು. ಹಲವು ಬಾರಿ ಬಿಕಿನಿಯಲ್ಲಿ, ಟಾಪ್‌ಲೆಸ್ ಆಗಿ ಕಾಣಿಸಿಕೊಂಡಿರುವ ನರ್ಗಿಸ್‌ಳ ತಂದೆ ಪಾಕಿಸ್ತಾನಿ, ತಾಯಿ ಝೆಕ್. ಇವಳು ಅಮೆರಿಕನ್. ಹೀಗಾಗಿ ತನ್ನನ್ನು ಗ್ಲೋಬಲ್ ಸಿಟಿಜನ್ ಎಂದು ಕರೆದುಕೊಳ್ತಾಳೆ.

ಕೋಟಿ ಕೋಟಿ ಕೊಡ್ತೀನಿ ಅಂದ್ರೂ ಬೆತ್ತಲಾಗೋಕೆ ನೋ ಎಂದ ನಟಿ 

ಈಕೆ ಮೂಲತಃ ಮಾಡೆಲ್. ಮಲ್ಯರ ಕಿಂಗ್‌ಫಿಶರ್ ಕ್ಯಾಲೆಂಡರ್‌ನಲ್ಲಿ ನಿರ್ಭಿಡೆಯಿಂದ ಕಾಣಿಸಿಕೊಂಡ ಈಕೆಗೆ ಹಿಂದಿಯಲ್ಲಿ ರಾಕ್‌ಸ್ಟಾರ್ ಚಿತ್ರದ ಹೀರೋಯಿನ್ ಆಫರ್ ಬಂತು. ಅಲ್ಲಿಂದ ಈಕೆಯ ಸಿಬಿಮಾ ಜಿಂದಗಿ ಶುರುವಾಯಿತು. ಲೇಟೆಸ್ಟ್ ಆಗಿ ಸಂಜಯ್ ದತ್ ಜೊತೆಗೆ ತೋರಾಬಾಜ್ ಚಿತ್ರದಲ್ಲಿ ನಟಿಸಿದ್ದಾಳೆ. 

ಅಬ್ಬಾ..! ಈ ಸುದ್ದಿ ಕೇಳಿ ಅಮೀರ್ ಖಾನ್ ಅಭಿಮಾನಿಗಳು ನಿರಾಳ..! ...