2011 ರಲ್ಲಿ ತೆರೆ ಕಂಡ 'ರಾಕ್‌ಸ್ಟಾರ್' ಸಿನಿಮಾ ಮೂಲಕ ರಣಬೀರ್ ಜೊತೆ  ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟವರು ನರ್ಗೀಸ್ ಫಕ್ರಿ.  ಆ ಚಿತ್ರದ ಸಕ್ಸಸ್ ನಂತರ ಮದ್ರಾಸ್ ಕೆಫೆ, ಮೇ ತೆರಾ ಹೀರೋ, ಅಜರ್, ಹೌಸ್‌ಫುಲ್ 3, ಬಂಜೋ ಸಿನಿಮಾ ಮಾಡುತ್ತಾರೆ.  ಬಾಲಿವುಡ್‌ನಲ್ಲಿ ಒಂದು ಮಟ್ಟಕ್ಕೆ ಹೆಸರು ಮಾಡಿದ ನಟಿ. 

'ತಲೈವಿ'ಯಲ್ಲಿ ಕಾಂಟ್ರೋವರ್ಸಿ ಹುಟ್ಟು ಹಾಕಲಿದ್ದಾರಾ ವಿಜಯ ದೇವರಕೊಂಡ?

ನರ್ಗೀಸ್ ಫಕ್ರಿ ಚಾನಲ್‌ವೊಂದರಲ್ಲಿ ಮಾತನಾಡುತ್ತಾ, ತಾವು ಅನುಭವಿಸಿದ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಮಾಡೆಲಿಂಗ್ ದಿನಗಳಲ್ಲಿ ಪ್ಲೇಬಾಯ್ ಮ್ಯಾಗಜಿನ್‌ವೊಂದಕ್ಕೆ ಬೆತ್ತಲೆ ಪೋಸ್ ಕೊಡುವಂತೆ ನನಗೊಂದು ಆಫರ್ ಬಂದಿತ್ತು. ಆದರೆ ನಾನು ಇದನ್ನು ನಿರಾಕರಿಸಿದೆ ಎಂದು ಹೇಳಿದ್ದಾರೆ. 

'ನಾನು ಮಾಡೆಲಿಂಗ್ ಮಾಡುತ್ತಿದ್ದಾಗ ಕಾಲೇಜಿನಲ್ಲಿ ಪ್ಲೇಬಾಯ್ ಎನ್ನುವ ಮ್ಯಾಗಜಿನ್‌ವೊಂದಿತ್ತು. ಅದಕ್ಕೆ ಬೆತ್ತಲೆ ಪೋಸ್‌ ಕೊಡುವಂತೆ ನನ್ನನ್ನು ಕೇಳಿದರು. ಜೊತೆಗೆ ಒಳ್ಳೆಯ ಆಫರನ್ನು ಕೊಟ್ಟರು. ಆದರೆ ನಾನು ಇದಕ್ಕೆ ಒಪ್ಪಲಿಲ್ಲ' ಎಂದು ಹೇಳಿದರು. 

ಜಾಕೆಟ್ ಬಿಚ್ಚಿ ಎದೆ ಸೀಳು ತೋರಿಸಿದ 'ಗಂಡ-ಹೆಂಡತಿ' ನಟಿ!

ಬಾಲಿವುಡ್‌ನಲ್ಲಿ ಕೆಲಸ ಮಾಡಿರುವ ಬಗ್ಗೆ ಖುಷಿಯಿದೆ. ಅಲ್ಲಿ ಸೆಕ್ಸ್ ಸೀನ್‌ಗಳಿರಲಿಲ್ಲ. ನಾನು ಕ್ಯಾಮೆರಾ ಮುಂದೆ ನಗ್ನಳಾಗಲಿಲ್ಲ. ನನ್ನಿಂದ ಇದು ಸಾಧ್ಯವೂ ಇಲ್ಲ' ಎಂದಿದ್ದಾರೆ.  

ಡಿಸೆಂಬರ್ 5ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: