ಈ ಬಾಲಿವುಡ್ ಚಿತ್ರದಲ್ಲಿದೆ ಬರೋಬ್ಬರಿ 30 ಲಿಪ್ ಕಿಸ್, ಇಮ್ರಾನ್ ಹಶ್ಮಿ ಮೀರಿಸಿದ ನಾಯಕ ಈತ!
ಲಿಪ್ ಕಿಸ್ ಹೀರೋ ಎಂದ ತಕ್ಷಣ ಇಮ್ರಾನ್ ಹಶ್ಮಿ ನೆನಪಾಗುತ್ತಾರೆ. ಆದರೆ ಇಮ್ರಾನ್ ಮೀರಿಸಿದ ನಾಯಕನಿದ್ದಾನೆ. ಒಂದೇ ಒಂದು ಚಿತ್ರದಲ್ಲಿ ಬರೋಬ್ಬರಿ 30 ಲಿಪ್ ಕಿಸ್ ಸೀನ್ ದೃಶ್ಯಗಳಿವೆ. ಈ ಬಾಲಿವುಡ್ ಚಿತ್ರ ಹಾಗೂ ಈ ಕಿಸ್ಸಿಂಗ್ ನಾಯಕ ಯಾರು?
ಬಾಲಿವುಡ್‌ನಲ್ಲಿ ಕಿಸ್ಸಿಂಗ್ ದೃಶ್ಯಗಳಿಲ್ಲದ ಚಿತ್ರ ಬಹುತೇಕ ಇಲ್ಲವೇ ಇಲ್ಲ. ಒಂದು ಚಿತ್ರದಲ್ಲಿ ಇಷ್ಟೇ ಕಿಸ್ಸಿಂಗ್ ಸೀನ್ ಇರಬೇಕು ಅನ್ನೋ ನಿಯಮವೇನು ಇಲ್ಲ. ಆದರೆ ಚುಂಬನ, ರೊಮ್ಯಾನ್ಸ್ ದೃಶ್ಯಗಳು ಸಾಮಾನ್ಯವಾಗಿದೆ. ಕೆಲ ಚಿತ್ರದಲ್ಲಿ ಇದು ದಾಖಲೆ ಪ್ರಮಾಣದಲ್ಲೂ ಇದೆ. ಬಾಲಿವುಡ್‌ನ ಲಿಪ್ ಕಿಸ್ ಕಿಂಗ್ ಎಂದೇ ಇಮ್ರಾನ್ ಹಶ್ಮಿ ಖ್ಯಾತರಾಗಿದ್ದಾರೆ. ಇಮ್ರಾನ್ ಹಶ್ಮಿಯ ಮರ್ಡರ್ ಚಿತ್ರದಲ್ಲಿ ಲಿಪ್ ಕಿಸ್ ದೃಶ್ಯಗಳ ಸುರಿಮಳೆಯಾಗಿದೆ. ಆದರೆ ಇದನ್ನು ಮೀರಿಸಿದ ಚಿತ್ರ ಒಂದು ಬಾಲಿವುಡ್‌ನಲ್ಲಿದೆ. ಹೌದು 3ಜಿ ಅನ್ನೋ ಹಾರರ್ ಥ್ರಿಲ್ಲರ್ಚಿತ್ರದಲ್ಲಿ ಬರೋಬ್ಬರಿ 30 ಲಿಪ್ ಕಿಸ್ ಇದೆ. ಈ ಚಿತ್ರದ ನಾಯ ನೀಲ್ ನಿತಿನ್ ಮುಕೇಶ್.
2013ರಲ್ಲಿ ಬಾಲಿವುಡ್‌ನಲ್ಲಿ 3ಜಿ ಚಿತ್ರ ತೆರೆಕಂಡಿತ್ತು. ನೀಲ್ ನಿತಿನ್ ಮುಕೇಶ್ ಹಾಗೂ ಸೋನಾಲ್ ಚೌಹಾನ್ ಈ ಚಿತ್ರದಲ್ಲಿ ಬರೋಬ್ಬರಿ 30 ಬಾರಿ ಲಿಪ್ ಕಿಸ್ ಮಾಡಿದ್ದಾರೆ. ಕಿಸ್ಸಿಂಗ್‌ನಲ್ಲಿ ಈವರೆಗೆ ಬಾಲಿವುಡ್‌ನಲ್ಲಿ ಬಿಡುಗಡೆಯಾಗಿರುವ ಎಲ್ಲಾ ದಾಖಲೆಯನ್ನು 3ಜಿ ಚಿತ್ರ ಮುರಿದಿದೆ. ಇಮ್ರಾನ್ ಹಶ್ಮಿ ಹಾಗೂ ಮಲ್ಲಿಕಾ ಶೆರಾವತ್ ಅಭಿನಯದ ಅತ್ಯಂತ ಜನಪ್ರಿಯ ಮರ್ಡರ್ ಚಿತ್ರದಲ್ಲಿರುವುದು 20 ಕಿಸ್ಸಿಂಗ್ ದೃಶ್ಯ ಮಾತ್ರ.
ಅಮಿತಾಬ್ ಬಚ್ಚನ್ ಜೊತೆ ಲಿಪ್ ಲಾಕ್ ದೃಶ್ಯಕ್ಕಾಗಿ ಎರಡೆರಡು ಬಾರಿ ಬ್ರಶ್ ಮಾಡಿದ್ದ ಈ ನಟಿ!
ಚುಂಬನ ಹಾಗೂ ರೊಮ್ಯಾನ್ಸ್ ಮೂಲಕವೇ ಸದ್ದು ಮಾಡಿದ ಈ 3ಜಿ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಈ ಚಿತ್ರ ಫ್ಲಾಪ್ ಆಗಿತ್ತು. ಇದೊಂದು ಕಳಪೆ ಚಿತ್ರ ಅನ್ನೋ ಹಣೆಪಟ್ಟಿಯನ್ನು ವಿಮರ್ಶಕರು, ವಿಶ್ಲೇಷಕರು ನೀಡಿದ್ದರು. ಐಎಂಡಿ ಕೂಡ ಕೇವಲ 3.6 ರೇಟಿಂಗ್ ನೀಡಿತ್ತು. ಚಿತ್ರದಲ್ಲಿ ಲಿಪ್ ಕಿಸ್ಸಿಂಗ್ ದೃಶ್ಯದ ಕಾರಣ ಒಂದಷ್ಟು ದಿನ ಚಿತ್ರಮಂದಿರದಲ್ಲಿ ಈ ಚಿತ್ರ ಓಡಿತ್ತು. ಆದರೆ ಹಾಕಿದ ಬಂಡವಾಳ ಕೂಡ ಬರಲಿಲ್ಲ. ಈ ಚಿತ್ರ ಒಟ್ಟು 5.9 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
3ಜಿ ಚಿತ್ರದ ಕಿಸ್ಸಿಂಗ್ ದೃಶ್ಯ ಬ್ರೇಕ್ ಮಾಡಲು ಬಾಲಿವುಡ್‌ನಲ್ಲಿ ಕೆಲ ಪ್ರಯತ್ನಗಳು ನಡೆದಿದೆ. ಆದರೆ ಸಾಧ್ಯವಾಗಿಲ್ಲ. 3ಜಿ ಚಿತ್ರಕ್ಕೆ ಪೈಪೋಟಿ ನೀಡಲು ಶುಧ್ ದೇಸಿ ರೊಮ್ಯಾನ್ಸ್ ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ 27 ಕಿಸ್ಸಿಂಗ್ ದೃಶ್ಯಗಳಿವೆ. ಹೀಗಾಗಿ 3ಜಿ ದಾಖಲೆ ಮುರಿಯಲು ಸಾಧ್ಯವಾಗಿಲ್ಲ. ಇನ್ನು ರಣವೀರ್ ಸಿಂಗ್ ಹಾಗೂ ವಾಣಿ ಕಪೂರ್ ಅಭಿನಯದ ಬಿಫಿಕರೆ ಚಿತ್ರದಲ್ಲಿ 25 ಕಿಸ್ಸಿಂಗ್ ದೃಶ್ಯಗಳಿವೆ. ಇನ್ನು 10 ರಿಂದ 10 ಕಿಸ್ಸಿಂಗ್ ದೃಶ್ಯಗಳು ಬಾಲಿವುಡ್ ಸಿನಿಮಾದಲ್ಲಿ ಸಾಮಾನ್ಯವಾಗಿದೆ.
ನಟಿಯರಿಗೆ ತೆರೆ ಮೇಲೆ ಅತಿ ಹೆಚ್ಚು ಕಿಸ್ ಕೊಟ್ಟ ಇಮ್ರಾನ್; ಹೆಂಡತಿ ಸಿಟ್ಟು ಕಮ್ಮಿ ಅಗೋದೆ ಕೈಗೆ ಈ ಗಿಫ್ಟ್ ಕೊಟ್ಮೇಲೆ!
2000ನೇ ಇಸವಿಯಲ್ಲಿ ಬಾಲಿವುಡ್‌ನಲ್ಲಿ ಹೊಸ ಟ್ರೆಂಡ್ ಹುಟ್ಟಿಕೊಂಡಿತ್ತು. ಕಿಸ್ಸಿಂಗ್, ರೊಮ್ಯಾನ್ಸ್ ಮತ್ತೊಂದು ಹಂತಕ್ಕೆ ತಲುಪಿತ್ತು. ಮರ್ಡರ್, ಖ್ವಾಹಿಶ್ ಸೇರಿದಂತೆ ಕೆಲ ಚಿತ್ರಗಳಲೂ ಅಂದು ಹೊಸ ಅಧ್ಯಾಯ ಆರಂಭಿಸಿತ್ತು.