ಅಮಿತಾಬ್ ಬಚ್ಚನ್ ಜೊತೆ ಲಿಪ್ ಲಾಕ್ ದೃಶ್ಯಕ್ಕಾಗಿ ಎರಡೆರಡು ಬಾರಿ ಬ್ರಶ್ ಮಾಡಿದ್ದ ಈ ನಟಿ!

ಅಮಿತಾಬ್ ಬಚ್ಚನ್ ವಯಸ್ಸು 81. ಆದರೆ ಯಾವುದೇ ಪಾತ್ರಕ್ಕೂ ಜೀವ ತುಂಬುವ ನಟ. ಕಲ್ಕಿ ಚಿತ್ರದ ಅಮಿತಾಬ್ ನಟನೆ ಎಲ್ಲರನ್ನು ಮೋಡಿ ಮಾಡಿದೆ. ಇದೀಗ ಅಮಿತಾಬ್ ಬಚ್ಚನ್ ಜೊತೆಗಿನ ಲಿಪ್ ಲಾಕ್ ದೃಶ್ಯಕ್ಕಾಗಿ ಈ ನಟಿ ಎರೆಡೆರಡು ಬಾರಿ ಬ್ರಶ್ ಮಾಡಿ ರೆಡಿಯಾಗಿದ್ದರು. ಈ ಕುರಿತ ರೋಚಕ ಘಟನೆ ಇಲ್ಲಿದೆ.
 

Rani mukerji brush 2 times before lip lock scene with amitabh bachchan in Black movie ckm

ಮುಂಬೈ(ಜು.19) ಬಾಲಿವುಡ್ ನಟ ಅಮಿತಾಬ್ ಬಚ್ಚನ್‌ ವಯಸ್ಸು 81 ಆದರೂ ಯುವ ನಟರಿಗೂ ತೀವ್ರ ಪೈಪೋಟಿ ನೀಡುತ್ತಿರುವ ಎಕೈಕ ನಟ. ಇತ್ತೀಚೆಗೆ ಬಿಡುಗಡೆಯಾದ ಕಲ್ಕಿ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಚಿತ್ರ ಆಗಾಗಲೇ 1,000 ಕೋಟಿ ರೂಪಾಯಿ ಬಾಚಿಕೊಂಡಿದೆ. ದೈತ್ಯ ಪ್ರತಿಭೆ ಅಮಿತಾಬ್ ಬಚ್ಚನ್ ಮುಂದ ನಟಿಸಲು ಹಲವರು ಹಿಂದೇಟು ಹಾಕುತ್ತಾರೆ. ಹೀಗಿರುವಾಗ ಅಮಿತಾಬ್ ಬಚ್ಚನ್ ಜೊತೆ ಲಿಪ್ ಲಾಕ್ ದೃಶ್ಯ ಸುಲಭದ ಮಾತಲ್ಲ. ಇದಕ್ಕಾಗಿ ಬಾಲಿವುಡ್ ನಟಿ ರಾಣಿ ಮುಖರ್ಜಿ ಎರೆಡರಡು ಬಾರಿ ಬ್ರಶ್ ಮಾಡಿ ರೆಡಿಯಾಗಿದ್ದರು.

2005ರಲ್ಲಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬ್ಲಾಕ್ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಹಾಗೂ ರಾಣಿ ಮುಖರ್ಜಿ ನಡುವಿ ಚುಂಬನ ದೃಶ್ಯವಿದೆ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ವೃದ್ಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ. ಇನ್ನು ರಾಣಿ ಮುಖರ್ಜಿ ದೃಷ್ಠಿ ದೋಷದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಹಾಗೂ ರಾಣಿ ಮುಖರ್ಜಿ ವಯಸ್ಸಿನ ನಡುವೆ ಅಜಗಜಾಂತರ  ವ್ಯತ್ಯಾಸವಿದೆ. ಆದರೆ ಚಿತ್ರದ ಅಂತ್ಯದಲ್ಲಿ ರಾಣಿ ಮುಖರ್ಜಿ ಹಾಗೂ ಅಮಿತಾಬ್ ಬಚ್ಚನ್ ಲಿಪ್ ಲಾಕ್ ದೃಶ್ಯವಿದೆ. 

ರೊಮ್ಯಾಂಟಿಕ್ ಪ್ಲೇಸಲ್ಲೂ ಜಯಾ ಬಚ್ಚನ್ ಮೂಡ್ ಆಫ್, ಎಲ್ಲಿ ಹೋದರೂ ಜಯಾದ್ದು ಬರೀ ಇದೇ ಆಯ್ತೆಂದ ನೆಟ್ಟಿಗರು!

ಈ ಚುಂಬನ ದೃಶ್ಯಕ್ಕಾಗಿ ರಾಣಿ ಮುಖರ್ಜಿ ಎರೆಡೆರಡು ಬಾರಿ ಹಲ್ಲುಜ್ಜಿ ರೆಡಿಯಾಗಿದ್ದಾರೆ. ಒಂದು ಸಣ್ಣ ಸೀನ್‌ಗಾಗಿ ರಾಣಿ ಮುಖರ್ಜಿ ಭಾರಿ ತಯಾರಿ ಮಾಡಿದ್ದಾರೆ. ಹಿರಿಯ ಹಾಗೂ ದೈತ್ಯ ಪ್ರತಿಭೆ ಅಮಿತಾಬ್ ಬಚ್ಚನ್ ಕಿಸ್ ಮಾಡಲು ಒಂದು ಕ್ಷಣ ಭಯಗೊಂಡಿದ್ದರು. ಧೈರ್ಯ ಮಾಡಿಕೊಂಡು ಈ ದೃಶ್ಯದಲ್ಲಿ ಅಮಿತಾಬ್ ಬಚ್ಚನ್ ಅಭಿನಯಿಸಿದ್ದರು. 

ಬ್ಲಾಕ್ ಚಿತ್ರ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು. 53ನೇ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗೆ ಭಾಜನವಾಗಿತ್ತು. ಅತ್ಯುತ್ತಮ ಫೀಚರ್ ಫಿಲ್ಮ್ ಪ್ರಶಸ್ತಿಯನ್ನೂ ಪಡೆದುಕೊಂಡಿತ್ತು. ಇದರ ಜೊತೆ 11 ವಿವಿಧ ಪ್ರಶಸ್ತಿಗೆ ಶಿಫಾರಸುಗೊಂಡಿತ್ತು. ಉತ್ತಮ ನಿರ್ದೇಶಕ, ಉತ್ತಮ ಚಿತ್ರ್, ಉತ್ತಮ ನಟ ಸೇರಿದಂತೆ ಪ್ರಮುಖ ನಾಲ್ಕು ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು.

ಅಮಿತಾಬ್ ಬಚ್ಚನ್ ತಮ್ಮ ಇಳಿ ವಯಸ್ಸಿನಲ್ಲೂ ಭಾರಿ ಮೋಡಿ ಮಾಡುತ್ತಿದ್ದಾರೆ. ಕಲ್ಕಿ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಅಭಿನಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಕಲ್ಕಿ ಬಿಡುಗಡೆಯಾದ ಮೊದಲ ದಿನವೇ 200 ಕೋಟಿ ರೂಪಾಯಿ ಸಂಗ್ರಹ ಮಾಡಿತ್ತು. 3ಡಿಯಲ್ಲಿ ನಿರ್ಮಾಣಗೊಂಡಿರುವ ಚಿತ್ರಕ್ಕೆ 600 ಕೋಟಿ ರು ವೆಚ್ಚವಾಗಿದ್ದು, ಭಾರತದಲ್ಲೇ ಈವರೆಗಿನ ಅತಿದುಬಾರಿ ಬಜೆಟ್‌ನ ಚಿತ್ರ ಎನ್ನಿಸಿಕೊಂಡಿದೆ. ಚಿತ್ರವನ್ನು ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಇಂಗ್ಲೀಷ್‌ ಸೇರಿದಂತೆ ಒಟ್ಟು 6 ಭಾಷೆಯಲ್ಲಿ ಬಿಡುಗಡೆ ಮಾಡಲಾಗಿದೆ. ನಾಗ್ ಅಶ್ವಿನ್‌ ಸಿನಿಮಾ ನಿರ್ದೇಶಿಸಿದ್ದಾರೆ.

ಅಂಬಾನಿ ಪುತ್ರನ ಮದ್ವೆಯಲ್ಲಿ ಬಯಲಾಗೋಯ್ತು ಅಮಿತಾಭ್​ ಫ್ಯಾಮಿಲಿ ಬಿಗ್​ ಸೀಕ್ರೆಟ್​: ಫ್ಯಾನ್ಸ್​ ಶಾಕ್​!
 

Latest Videos
Follow Us:
Download App:
  • android
  • ios