ಬಾಲಿವುಡ್ ಜೋಡಿ ಅಮೀರ್-ಕಿರಣ್ ವಿಚ್ಛೇದನೆ ಬಗ್ಗೆ ಬಿಜೆಪಿ ಸಂಸದ ಟೀಕೆ ಅಜ್ಜನಾಗೋ ವಯಸ್ಸಲ್ಲಿ ಅಮೀರ್‌ಗೆ 3ನೇ ಹೆಂಡ್ತಿ ಆಸೆ ಎಂದ ಸುಧೀರ್ ಗುಪ್ತಾ

ಮಧ್ಯಪ್ರದೇಶದ ಮಾಂಡ್‌ಸೌರ್‌ನ ಬಿಜೆಪಿ ಸಂಸದ ಸುಧೀರ್ ಗುಪ್ತಾ ಅವರು ದೇಶದ ಜನಸಂಖ್ಯೆಯ ಅಸಮತೋಲನಕ್ಕೆ ಬಾಲಿವುಡ್ ನಟ ಅಮೀರ್ ಖಾನ್ನನ್ನು ದೂಷಿಸುವ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ವಿಶ್ವ ಜನಸಂಖ್ಯಾ ದಿನಾಚರಣೆಯ ಸಂದರ್ಭದಲ್ಲಿ, ಸುಧೀರ್ ಅವರು ಅಜ್ಜರಾಗುವ ವಯಸ್ಸಿನಲ್ಲಿ, ಅಮೀರ್ ಖಾನ್ ಮೂರನೇ ಹೆಂಡತಿಯನ್ನು ಹುಡುಕುತ್ತಿದ್ದಾರೆ ಎಂದು ಹೇಳಿದ್ದಾರೆ.

ಭಿನ್ನ ಮತಗಳ ಮದುವೆಯಲ್ಲಿ ಮಕ್ಕಳು ಮುಸ್ಲಿಂಗಳಾಗೋದ್ಯಾಕೆ ? ಕಂಗನಾ ಪ್ರಶ್ನೆ

ಅಮೀರ್ ಖಾನ್ ತನ್ನ ಮೊದಲ ಪತ್ನಿ ರೀನಾ ದತ್ತಾಳನ್ನು ಇಬ್ಬರು ಮಕ್ಕಳೊಂದಿಗೆ, ಕಿರಣ್ ರಾವ್‌ನನ್ನು ಒಂದು ಮಗುವಿನೊಂದಿಗೆ ತೊರೆದರು ಮತ್ತು ಈಗ, ಅಜ್ಜನಾಗುವ ವಯಸ್ಸಿನಲ್ಲಿ ಅವರು ಮೂರನೇ ಹೆಂಡತಿಯನ್ನು ಹುಡುಕುತ್ತಿದ್ದಾರೆ ಎಂದಿದ್ದಾರೆ. ಖಾನ್ ನಂತಹ ಜನರಿಗೆ ಮೊಟ್ಟೆಗಳನ್ನು ಮಾರಾಟ ಮಾಡುವುದನ್ನು ಬಿಟ್ಟು ಬೇರೆ ಮಿದುಳುಗಳಿಲ್ಲ ಎಂದು ಹೇಳುವವರು ಸರಿಯಾಗಿ ಹೇಳಿದ್ದಾರೆ ಎಂದಿದ್ದಾರೆ.

ಅಮೀರ್ ಖಾನ್ ಮತ್ತು ಅವರ ಪತ್ನಿ ಚಲನಚಿತ್ರ ನಿರ್ದೇಶಕಿ ಕಿರಣ್ ರಾವ್ ಇತ್ತೀಚೆಗೆ ತಮ್ಮ ವಿಚ್ಛೇದನೆ ಘೋಷಿಸಿದ್ದಾರೆ. ಈ 15 ಸುಂದರ ವರ್ಷಗಳಲ್ಲಿ ನಾವು ಒಟ್ಟಿಗೆ ಅನುಭವಗಳು, ಸಂತೋಷ ಮತ್ತು ನಗೆಯನ್ನು ಹಂಚಿಕೊಂಡಿದ್ದೇವೆ. ಈಗ ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಬಯಸುತ್ತೇವೆ - ಇನ್ನು ಮುಂದೆ ಗಂಡ ಮತ್ತು ಹೆಂಡತಿಯಾಗಿರದೆ, ಒಬ್ಬರಿಗೊಬ್ಬರು ಸಹ-ಪೋಷಕರು ಮತ್ತು ಕುಟುಂಬವಾಗಿ ಇರಲಿದ್ದೇವೆ ಎಂದಿದ್ದರು.