'ಸಲಾರ್' ಟ್ರೇಲರ್ ಪಂಚ್‌ಗೆ ಅಭಿಮಾನಿಗಳು ಫುಲ್ ಫಿದಾ: ಪ್ರಭಾಸ್ ಸಕ್ಸಸ್‌ಗೆ ಬ್ರೇಕ್ ಹಾಕಲಿದೆಯಾ ಶಾರುಖ್ 'ಡಂಕಿ'
ಸಿನಿಮಾ ಜಗತ್ತಲ್ಲಿ ಈಗ ಎಲ್ಲಲ್ಲೂ ಡಾರ್ಲಿಂಗ್ ಪ್ರಭಾಸ್ ಮೇನಿಯಾ ಶುರುವಾಗಿದೆ. ಡಿಸೆಂಬರ್ 22ಕ್ಕೆ ವರ್ಲ್ಡ್ ವೈಡ್ ಪ್ರಭಾಸ್ ಸಲಾರ್ ಹಿಡುದು ಬರ್ತಾರೆ. ಆದ್ರೆ ಈ ಸಲಾರ್ಗೆ ಭಾರತದಲ್ಲಿ ಬೇಡಿಕೆ ಹೇಗಿದೆ. ಉತ್ತರ ಭಾರತದ ಹಿಂದಿ ಬೆಲ್ಟ್ನಲ್ಲಿ ಶಾರುಖ್ ಖಾನ್ರ ಡಂಕಿ ದರ್ಬಾರ್ ಮಾಡುತ್ತಾ.?
ಸಿನಿಮಾ ಜಗತ್ತಲ್ಲಿ ಈಗ ಎಲ್ಲಲ್ಲೂ ಡಾರ್ಲಿಂಗ್ ಪ್ರಭಾಸ್ ಮೇನಿಯಾ ಶುರುವಾಗಿದೆ. ಡಿಸೆಂಬರ್ 22ಕ್ಕೆ ವರ್ಲ್ಡ್ ವೈಡ್ ಪ್ರಭಾಸ್ ಸಲಾರ್ ಹಿಡುದು ಬರ್ತಾರೆ. ಆದ್ರೆ ಈ ಸಲಾರ್ಗೆ ಭಾರತದಲ್ಲಿ ಬೇಡಿಕೆ ಹೇಗಿದೆ. ಉತ್ತರ ಭಾರತದ ಹಿಂದಿ ಬೆಲ್ಟ್ನಲ್ಲಿ ಶಾರುಖ್ ಖಾನ್ರ ಡಂಕಿ ದರ್ಬಾರ್ ಮಾಡುತ್ತಾ.? ಸೌತ್ನಲ್ಲಿ ಪ್ರೌಭಾಸ್ ಪ್ರಭಾವ ಬೀರ್ತಾರಾ..? ಡಂಗಿ ಸಲಾರ್ರನಲ್ಲಿ ಯಾರು ಬೆಸ್ಟ್ ಆಗ್ತಾರೆ ಅಂತ ಕೆಲವೊಂದು ಸ್ಟ್ಯಾಟಿಟಿಕ್ಸ್ಗಳು ಹೊರ ಬಂದಿವೆ. ರಿಲೀಸ್ಗೂ ಮುನ್ನವೇ ಸಖತ್ ಸೌಂಡ್ ಮಾಡ್ತಿರೋ ಸಿನಿಮಾ ಸಲಾರ್. ಅದರಲ್ಲೂ ಟ್ರೇಲರ್-2ನ ಜಬರ್ದಸ್ತ್ ಪಂಚ್ಗೆ ಅಭಿಮಾನಿಗಳು ಫಿದಾ ಆಗ್ಹೋಗಿದ್ದಾರೆ. ಸಲಾರ್ ಟ್ರೇಲರ್-2 ರಿಲೀಸ್ ಆಗಿದ್ದು, ಐದೇ ಐದು ಗಂಟೆಯಲ್ಲಿ ಹಿಂದಿ ಭಾಷೆಯ ಟ್ರೈಲರ್ ಕೋಟಿ 1 ಕೋಟಿ 80ಲಕ್ಷಕ್ಕೂ ಹೆಚ್ಚು ವೀವ್ಸ್ಗಳನ್ನ ಪಡೆದಿದೆ.
ಇನ್ನೂ ತೆಲುಗಿನ ಟ್ರೈಲರ್ 90 ಲಕ್ಷ, ತಮಿಳು, 32 ಲಕ್ಷ, ಮಲೆಯಾಳಂ 33 ಹಾಗೂ ಕನ್ನಡದಲ್ಲಿ 28 ಲಕ್ಷ ವೀವ್ಸ್ಗಳನ್ನ ಪಡೆದು ದಾಖಲೆಯನ್ನ ನಿರ್ಮಿಸಿದೆ. ಕೇವಲ ಟ್ರೇಲರ್ರೇ ಈ ಮಟ್ಟಿಗೆ ಧೂಳೆಬ್ಬಿಸಿದೆ, ಇನ್ನೂ ಸಿನಿಮಾ ಫೀವರ್ ಯಾವ ಮಟ್ಟಿಗೆ ಇರಲಿದೆ ಅಂತ ಸಿನಿ ವಿಮರ್ಷಕರು ಲೆಕ್ಕಾಚಾರ ಹಾಕ್ತಿದ್ದಾರೆ. ಸಲಾರ್ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಉತ್ತರ ಭಾರತದಲ್ಲೂ ಧೂಳೆಬ್ಬಿಸಬಹುದಾ ಹೇಗೆ ಅನ್ನೊದು ಸದ್ಯಕ್ಕೆ ಎಲ್ಲರಿಗೂ ಕಾಡ್ತಿರುವ ಕುತೂಹಲ. ಇದೇ ಸಲಾರ್ ಜೊತೆ ಜೊತೆಗೆನೇ ಬಾಲಿವುಡ್ ಬಾದ್ಶಾಹ್ ಶಾರುಖ್ ಅಭಿನಯದ ಡಂಕಿ ಕೂಡ ರಿಲೀಸ್ ಆಗಲಿದೆ. ಹಾಗಾದ್ರೆ ಸಲಾರ್ ಸಕ್ಸಸ್ಗೆ ಡಂಕಿ ಬ್ರೇಕ್ ಹಾಕುತ್ತಾ ಹೇಗೆ..?
ಸಾಮಾನ್ಯವಾಗಿ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದಾಗ ಎಲ್ಲ ಭಾಷೆಯ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುವ ತಂತ್ರಗಾರಿಕೆ ನಡೆಯುತ್ತೆ. ಉತ್ತರ ಭಾರತದ ಪ್ರೇಕ್ಷಕರನ್ನು ಸೆಳೆಯಲು ಬಾಲಿವುಡ್ ನಟ-ನಟಿಯರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಲ್ಲಿ ರವೀನಾ ಟಂಡನ್, ಸಂಜಯ್ ದತ್ ನಟಿಸಿದ್ದರು. ‘ಆರ್ಆರ್ಆರ್’ ಸಿನಿಮಾದಲ್ಲಿ ಅಜಯ್ ದೇವಗನ್, ಆಲಿಯಾ ಭಟ್ ಅಭಿನಯಿಸಿದ್ದರು. ‘ಸಲಾರ್’ನಲ್ಲಿ ಟಿನು ಆನಂದ್ ಹೊರತು ಪಡಿಸಿ ಬಾಲಿವುಡ್ನ ಬೇರೆ ಯಾವುದೇ ಕಲಾವಿದರು ನಟಿಸಿಲ್ಲ. ಅಲ್ಲದೇ ಉತ್ತರಭಾರತದಲ್ಲಿ ಡಂಕಿ ನಿದೇರ್ಶಕ ರಾಜ್ಕುಮಾರ ಹಿರಾನಿ ಸಿನಿಮಾ ಬಗ್ಗೆ ಕ್ರೇಜ್ ಇದ್ದೇ ಇದೆ.
ಕಥೆ ಜೊತೆಗೆ ಉತ್ತಮ ಸಂದೇಶ ಕೂಡ ಇರುತ್ತೆ. ಅಲ್ಲದೇ ಸಲಾರ್ ನಿರ್ದೇಶಕ ಕೆಜಿಎಫ್ ಬಿಟ್ಟು ಇನ್ಯಾವುದೇ ಸಿನಿಮಾವನ್ನ ಉತ್ತರ ಭಾರತದವರು ವೀಕ್ಷಿಸಿಲ್ಲ. ಹಾಗಾಗಿ ಸಲಾರ್ ದಕ್ಷಿಣ ಭಾರತದಲ್ಲಿ ಮಾತ್ರ ಸೌಂಡ್ ಮಾಡಲಿದ್ದು, ಉತ್ತರಭಾರತದಲ್ಲಿ ಸೈಲೆಂಟ್ ಆಗೋ ಸಾಧ್ಯತೆ ಹೆಚ್ಚು ಅಂತಾರೆ ಸಿನಿಪ್ರೇಕ್ಷಕರು. ಇನ್ನು ‘ಸಲಾರ್’ ಕನ್ನಡ ವರ್ಷನ್ ಕೇವಲ 10 ಶೋಗಳಷ್ಟೆ ಈವರೆಗೆ ಬೆಂಗಳೂರಿನಲ್ಲಿ ರಿಲೀಸ್ ಆಗಲಿದೆ. ನರ್ತಕಿ ಚಿತ್ರಮಂದಿರದಲ್ಲಿ ಮಾತ್ರವೇ ಎಲ್ಲ ನಾಲ್ಕು ಶೋಗಳಲ್ಲಿ ಕನ್ನಡ ಡಬ್ಬಿಂಗ್ ಪ್ರದರ್ಶನವಾಗಲಿದ್ದು, ಅದರ ಹೊರತಾಗಿ ಇನ್ನುಳಿದ 6 ಶೋಗಳು, 6ಭಿನ್ನ ಭಿನ್ನ ಚಿತ್ರಮಂದಿರದಲ್ಲಿ ತಲಾ ಒಂದೊಂದರಂತೆ ಪ್ರದರ್ಶಿತವಾಗುತ್ತಿದೆ.
ವಿಚ್ಛೇದನ ವದಂತಿಗೆ ಬ್ರೇಕ್ ಹಾಕಿದ ಅಭಿ-ಐಶ್: ‘ಕುಛ ನಾ ಕಹೋ’ ಅಂತ ಹೇಳಿದ ಬಾಲಿವುಡ್ ಕಪಲ್!
ಈ ಮಾಹಿತಿ ಡಿಸೆಂಬರ್ 17ರಂದು, ದಿನಗಳು ಕಳೆದಂತೆ ಇನ್ನೂ ಕನ್ನಡದ ಶೋಗಳ ಸಂಖ್ಯೆ ಹೆಚ್ಚಬಹುದಾದರೂ ಒಟ್ಟು ಶೋಗಳ ಸಂಖ್ಯೆ 15 ದಾಟುವುದು ಅನುಮಾನ. ಕನ್ನಡ ಭಾಷೆಯಲ್ಲೂ ಸಲಾರ್ ತೆರೆ ಕಾಣಲಿರುವುದರಿಂದ ಸಹಜವಾಗಿ ಕನ್ನಡಿಗರು, ಕನ್ನಡ ಭಾಷೆಯಲ್ಲೇ ನೋಡಲು ಆಸಕ್ತರಾಗಿದ್ದಾರೆ. ಆದರೆ ಶೋಗಳೇ ಕಡಿಮೆ ಸಂಖ್ಯೆಯಲ್ಲಿ ಇರುವುದರಿಂದ ಬೇರೆ ಭಾಷೆ ನೋಡುವುದು ಅನಿವಾರ್ಯವಾಗುತ್ತೆ. ಹಾಗಾಗಿ ಕನ್ನಡ ಭಾಷೆಯಲ್ಲಿ ಬರುವ ಸಲಾರ್ಗೆ ಅಂದುಕೊಂಡ ಪ್ರಮಾಣದಲ್ಲಿ ಸಕ್ಸಸ್ ನಿಗುವುದು ಡೌಟ್.